ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ / sheshagiri namma shreenivasàna kande

ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ |
ಕಂಡೆ ಶ್ರೀನಿವಾಸನ ॥ಪ॥

ಶ್ರೀನಿವಾಸನ ಕಂಡೆ ಶ್ರೀನಿವಾಸನ ಜ್ಞಾನಗುರು
ಮಧ್ವ ಮುನಿ ಮಾನುಷ ಹಂಸನ ಕಂಡೆ || ಅ. ಪ ||

ಗರುಡ ಶೇಷ ಗಿರಿಜಾ ರಮಣ ಸುರರೆಲ್ಲ,
ನಿರುತ ಸೇವಿಸುವ ಪಾದ
ಸರಸಿಜ ಯುಗಳವ ಕಂಡೆ ||೧||

ಮಾನಿನಿ ರಮಾದೇವಿ ವರ್ಣಿಸುತಲಿ,
ದಾನವಾಂತಕನ ಪಾದಜಾನು ಜಂಘೆಗಳನು ಕಂಡೆ||೨||

ಪರಮಾತ್ಮನ್ನ ಗುಣಗಳನ್ನುವರ್ಣಿಸುತಲೀ,
ಸಿರಿದೇವಿ ಇರುವ ವಕ್ಷ ಸ್ಥಳವನ್ನು ಕಣ್ಣಾರೆ ಕಂಡೆ||೩||

ವಾಸವಾಗರ್ಜುನನ ರಥದ ಮುಂದೆ ನಿಲ್ಲುವನ,
ಏಸು ಮಮತೆಯಿಂದ ಕುಣಿವ
ಹರಿಯ ಹಸ್ತಂಗಳ ಕಂಡೆ || ೪ ||

ಮಂದಗಮನ ಗೋಪಿ ಕಂದ ಬಾರೆಂದೆನ್ನಲು
ಮಂದಹಾಸದಿಂದ ನಗುವ ಸುಂದರ ವದನನ್ನ್ನ ಕಂಡೆ ||೫||

ಕುಕ್ಷಿಯೊಳಗೀರೇಳು ಜಗವ ರಕ್ಷಿಸುವನ,
ಪಕ್ಷಿಯ ಮೇಲೇರಿ ಬರುವ ಲಕ್ಷ್ಮೀರಮಣನ್ನಾ ಕಂಡೆ ||೬||

ಮಂಡೂಕಾರಿ ಪರ್ವತದಲ್ಲಿ ನೆಲೆಯಾಗಿಪ್ಪವನ,
ಪುಂಡರಿಕಾಕ್ಷ  ಶ್ರೀ ವೆಂಕಟವಿಠಲನ ಕಂಡೆ ||೭||

Lyrics in English

Sheshagiri namma shreenivasàna kande|
kande shreenivasàna||pa||

Shreenivasàna kande shreenivasàna jnanaguru
madhwa muni manusha hamsana kande ||a.pa||

Garuda shesha girija ramaana surarella |
niruta sevisuva pada sarasija yugalava kande||1||

Manini ramadevi varnissutali |
danavantakana padajanu janghegalanu kande ||2||

Paramatmanna gunagalannu varnissutali
siridevi iruva vaksha stalavannu kannare kande||3||

Vasavagarjunana rathada munde nilluvana
esu mamateyinda kuniva hariya hastangala kande ||4||

Mandagamana gopi kanda barendennalu
mandahasadinda naguva sundara vadananna kande  ||5||

Kukshiyolageerelu jagava rakshisuvana
pakshiya meleri baruva lakshmiramananna kande ||6||

Mandukari parvatadalli neleyagippavana
pundarikaaksha sree venkatavittalana kande ||7||

ಇದುವೇ ಪಂಡರಾಪುರ ವಿಠ್ಠಲ ಇದುವೇ / Iduve pandarapura vittala iduve

ಇದುವೇ ಪಂಡರಾಪುರ |
ವಿಠ್ಠಲ ಇದುವೇ ಪಂಡರಾಪುರ||
ಇದ ನಾ ಅರಿಯದೆ ಪೊದೆ ಮುಕುತಿಯ ಧಾಮ ||

ಪಾಪವ ತೊಳೆವ ಪಾವನ ಚಂದ್ರಭಾಗ | ತಾಪವ ಹರಿಸಿ ಶಾಂತಿಯ ನೀವ |
ಈ ವರ ಕ್ಷೇತ್ರ ಭೂವೈಕುಂಠ | ಭವ ಭಯ ಪರಿಹಾರ ವಿಠಲ||

ಪುಣ್ಯದ ದಿವಸ ಏಕಾದಶಿಯಿಂದು | ಹಾಡುತ ನಲಿಯುತ ಭಕುತರು ಬಂದು||
ನೋಡುವ ಭಾಗ್ಯ ಎನಗೆ ಇಂದು| ಕರುಣಿಸಿ ವರಗೈವೇ ವಿಠಲ ||

ಸಂತಾಳಜನಿಯು ಯೋಗಮಿಳನು| ಶ್ರೀ ತುಕರಾಮನು ಜ್ಞಾನೇಶ್ವರನು ||
ಪುಂಡಲೀಕನು ವಾಮದೇವನು | ಮೋಕ್ಷವನೆ ಪಡೆದ ವಿಠಲ ||

Lyrics in English

Iduve Pandharapura

Iduvē Paṇḍharāpura | Viṭhṭhala iduvē Paṇḍharāpura ||
Ida nā ariyade hōde mukutiya dhāma ||

Pāpava toḷeva pāvana Chandrabhāga | Tāpava harisi śhāntiya nīva |
Ī vara kṣhētra bhūvaikuṇṭha | Bhava bhaya parihāra Viṭhala ||

Puṇyada divasa ēkādaśhiyindu | Hāḍuta naliyuta bhakutaru bandu ||
Nōḍuva bhāgya enage indu | Karuṇisi varagaivē Viṭhala ||

Santāḷajaniyu Yōgamiḷanu | Śrī Tukarāmanu Jñānēśvaranu ||
Puṇḍalīkanu Vāmadēvanu | Mōkṣhavane paḍeda Viṭhala ||

ತಾಯಿ ಶಾರದೆ ಲೋಕಪೂಜಿತೆ / Taayi sharade loka poojite

ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಖಸ್ತುತೆ ||
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ || ತಾಯಿ ಶಾರದೆ ||

ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು |
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ಶಾಂತಿಯ ಉಳಿಸು ||

ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ |
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ, ನಮ್ಮ ಕೋರಿಕೆ ಆಲಿಸಮ್ಮ ||

ಒಳ್ಳೆ ಮಾತುಗಳಾಡಿಸು
ಒಳ್ಳೆ ಕೆಲಸವ ಮಾಡಿಸು |
ಒಳ್ಳೆ ದಾರಿಯಲೆಮ್ಮನಡೆಸು
ವಿದ್ಯೆಯ ಕಲಿಸು, ಆಸೆ ಪೂರೈಸು ||

Lyrics in English

Taayi Sharade Loka Poojite

Taayi Sharade loka poojite Jnaanadaate namostute ||
Premadindali salahu maate Needu sanmati soukhyadaate || Taayi Sharade ||

Andhakaarava oadisu Jnaanajyotiya belagisu |
Hridaya mandiradalli nelesu Chinteya alisu shaantiya ulisu ||

Ninna madilina makkalamma Ninna nambida kandaramma |
Ninna karuneya belakalemma Baalanu belagamma, namma korike aalisamma ||

Olle maatugalaadisu Olle kelasava maadisu |
Olle daariyalemmanadesu Vidyeya kalisu, aase pooreisu ||

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ / Enthu Ninna pooje Madi mecchisuveno

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ||ಪ||

ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ||ಅ.ಪ||

ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ |
ಪಾವನೆಯಾದ ಗಂಗೆ ಪಾದೋದ್ಭವೆ ||
ನವಕುಸುಮವ ಸಮರ್ಪಿಸುವೆನೆಂದರೆ ಉದು |
ಭವಿಸಿಹನು ಅಜ ನಿನ್ನ ಪೊಕ್ಕುಳ ಹೂವಿನಲಿ ||೧||

ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ |
ದ್ವೀಪಂಗಳೆಲ್ಲವನು ಬೆಳೆಗುತಿಹವೋ ||
ಆಪೋಶನವನಾದರೀವೆನೆಂತೆಂಬೆನೆ |
ಆಪೋಶನವಾಯ್ತು ಏಳು ಅಂಬುಧಿಯು ||೨||

ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆ |
ರಾಣಿವಾಸವು ಸಿರಿದೇವಿ ನಿನಗೆ ||
ಮಾಣದೆ ಮನದೊಳು ನಿನ್ನ ನಾಮಸ್ಮರಣೆ |
ಧ್ಯಾನವನು ದಯೆ ಮಾಡೋ ಪುರಂದರವಿಠಲ ||೩||

ಕೃತಿಕಾರರು : ಶ್ರೀ ಪುರಂದದಾಸರು

Entu Ninna Pooje Maadi Mecchuveno

Entu ninna pooje maadi mecchuveno || Pa ||

Chintaayatane ninna naama enagondu koti || A.pa ||

Pavitrodakadi paada toleventendare |
Paavaneyaada Gange paadodbhave ||
Navakusumava samarpisuvenendare
udbhavisihanu Aja ninna pokkula hoovinali || 1 ||

Deepavanu belaguvene ninna kangalu sapta |
Dweepangalellavanu belegutihavo ||
Aaposhanavanaadaareeve nentembene |
Aaposhanavaaytu elu ambudhiyu || 2 ||

Kaanikeyittaadaru kai mugivenedare |
Raanivaasavu Siridevi ninage ||
Maanade manadolu ninna naamasmarane |
Dhyaanavanu daye maado Purandara Vithala || 3 ||

ಎಷ್ಟು ಬಾರಿ  ಮೊರೆ ಇಡಲಿ ಶಂಭೋ / Eshtu bari more idali shambha shankara

ಎಷ್ಟು ಬಾರಿ  ಮೊರೆ ಇಡಲಿ
ಶಂಭೋ ಶಂಕರಾ
ಕಷ್ಟಗಳ ನೀಗಿಸು ಬಾ ಹೇ ಮಹೇಶ್ವರ  ||ಎಷ್ಟು ||

ಅಜ್ಞಾನದ ಅಂಧಕಾರ ಮನಕೆ ಸುತ್ತಿದೆ
ಮುಂದೆ  ದಾರಿ ಕಾಣದಿದೆ
ಭಯವು ಮುತ್ತಿದೆ
ಪಾಪಗಳ ಹೊರೆಯನ್ನು ಹೊರಲಾರದೇ
ಭವಬಂಧದ ಜಾಲದಿಂದ ಬರಲಾರದೆ
ತತ್ತರಿಸಿದೆ ನೊಂದು ಬೆಂದು ನಿಂದಿರುವೆನು
ನಿನ್ನೊಲವಿನ ಸುದೆ ಹರಿಸಿ
ಕಾಪಾಡು ಬಂದೂ      ||ಎಷ್ಟು ||

ಪಶ್ಚಾತ್ತಾಪ ಎಂಬ ಬೆಂಕಿ ಸುಡುತಿದೆ ನನ್ನಾ
ಮಲಿನ ಕಳೆದು ಆಗಲಿ
ಮನ ಪುಟವಿಟ್ಟ ಚಿನ್ನ
ಕಂಬನಿಯಲಿ ಪಾದ ತೊಳೆವ
ಆಸೆ ಆಗಿದೆ
ನಿಂತಿರುವೆ ಮೌನದಲ್ಲಿ ಮಾತು ಬಾರದೆ
ಕರುಣಿಸಿ ಪ್ರಭು ನೀ
ಮನ ನೆಮ್ಮದಿ ತಾರಾಾ
ಕೈ ಹಿಡಿದು ನಡೆಸೆನ್ನಾ ಹೇ ದೀನ ಬಂಧು    ||ಎಷ್ಟು ||

ಆತ್ಮವೆಂಬ ಪ್ರಣವದಿಂದ ಆರಾಧಿಸುವೆ
ವಿಶ್ವಾಸದಿ ನಿಶ್ವಾಸದಿ ಕೀರ್ತಿ ಹಾಡುವೆ
ಪ್ರಾಣ ಜ್ಯೋತಿ  ದೀಪದಿಂದ ಆರತಿ ಗೈವೆ
ಭಕ್ತಿ  ಕುಸುಮ ತವ ಪಾದಕೆ ಅರ್ಚನೆಗೈವೆ
ಮುಕ್ತಿದಾರಿ ತೋರೋ
ಹೇ ಕರುಣಾಮಯನೆ
ತವ ಪಾದ ಪೂಜೆ ನೀಡು ಪಾವನಾಂಗನೇ    ||ಎಷ್ಟು ||

Lyrics in English

Eshtu bari more idali
shambha shankara
kashtagala neegisu baa he maheshwara ||Eshtu ||

Ajnanada andhakara manake suttide
munde daari kaanadide bhayavu muttide
papagala horeyannu horalarade
bhavabandhana jaladinda baralarade
ninnolavina sude harisi kapadu bandu || eshtu bari ||

Paahchattapa emba benki sudutide nanna
malina kaledu agali mana putavitta chinna ||
kambaniyali pada toleva aase agide ||
nintiruve mounadalli maatu barade karunisi
prabhu nee mana nemmadi taara kai hididu
nadesenna he deena bandhu || eshtu baari ||

Aatmavemba pranavadinda aradhisuve
vishwasadi nishwasadi keerti haduve
prana jyoti deepadinda aarati gaive
bhakti kusuma tava padake archane gaive
muktidari toro he karunamayane
tava pada pooje needu pavanangane || eshtu baari ||

ಎಂದು ಕಾಂಬೆನೊ ಎನ್ನ ಸಲಹುವ ತಂದೆ / Endu kambeno enna salahuva

ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನಾ|
ಮಂದಹಾಸ ಪ್ರವಿಣನಾ ಇಂದಿರಾ ಭೂರಮಣನಾ||

ದೇವಕಿಯ ಜಠರದಲಿ ಬಂದನ ಆವ ಪಳ್ಳಿಲಿ ನಿಂದನಾ|
ಮಾವ ಕಂಸನ ಕೊಂದನಾ ಕಾವನಯ್ಯ ಮುಕುಂದನಾ||೧||

ಕಢಲ ದಡದೋಳೆಸೆವ ರಂಗನ ಕಡಗೋಲ್ನೆಣನ ಪಿಡಿದನಾ|
ಮೃಡ ಪುರಂದರ ರೊಡೆಯನಾ ಈರಡಿಗಳಲಿ ಶಿರವಿಡುವೆನಾ||೨||

ಪೂರ್ಣಪ್ರಜ್ಞರಿಗೊಲಿದು ದ್ವೊರಕೆ ಮಣ್ಣಿನೊಳಪ್ರಕಟಿಸಿದನಾ|
ಭವಾಣಕೆಪ್ಲವನಾದನಾ ಪ್ರಸನ್ನವೆಂಕಟ ಕೃಷ್ಣನಾ||೩||

Lyrics in English

Endu kambeno enna salahuva tande udupiya janana|
mandahasa pravinana indira buramanana||

Devakiya jatharadali bandana ava pallili nindana|
mava kamsana kondana kavanayya mukundana ||1||

Kadhala dadadoleseva rangana kadagolnenana pididana |
mruda purandara rodeyana iradigalali shiraviduvena ||2||

Purnaprajnarigolidu dvorake manninolaprakatisidana |
Bavanakeplavanadana prasannavenkata krishnana ||3||

ಪಾವನ ಚರಿತ ಸಂಜೀವನ ಗಿರಿಧರ / Pavana charita sanjeevana

ಪಾವನ ಚರಿತ ಸಂಜೀವನ ಗಿರಿಧರ
ಪಾವಮಾಣಿ ಕರುಣಾವಲೋಕನದಿ
ನೀ ಒಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ‌ ಕರುಣಿಸು

ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ ||2||
ಕಾವೋದು ಭಾವಿ ಪರಮೇಷ್ಠಿ ||ದೇವಾ||

ವಾನರ ಕುಲನಾಯಕ ಜಾನಕಿ ಶೋಕ
ಕಾನನ ತ್ರಣ ಪಾವಕಾ…ಆ…
ಹೀನ ಕೌರವ ನಾಶಕ
ಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ…
ಕ್ಷೋಣಿಯೊಳಗೆ ಎಣೆ ಕಾಣೆ ,ನಿನಗೆ ಎನ್ನ
ಮಾನದೆ ಅನುದಿನ ಪಾಣಿ ಪಿಡಿದು ಪೊರೆ
ಸ್ತಾನು ಜನಕ ಗೀರ್ವಾಣ ವಿನುತ
ಜಗತ್ ಪ್ರಾಣ ರಮಣ ಕಲ್ಯಾಣಮೂರುತಿ  ||ದೇವಾ||

ಮರುತ ನಂದನ ಹನುಮ ಪುರಹರ ರೋಮ
ಪರಮ ಪುರುಷ ಶ್ರೀಭೀಮಾ
ಕರುಣಾಸಾಗರ ಜಿತ ಕಾಮ ,ಸದ್ಗುಣ ಭೌಮ
ಪರವಾದಿ ಮತವ ನಿರ್ನಾಮಾ…
ಗಿರಿಸುತ ಪಾಲಕ ,ಝರಿಜ ವಿನಾಶಕ
ಹರಿಮತ ಸ್ಥಾಪಕ,ದುರಿತ ವಿಮೋಚಕ
ಶರಣು ಜನರ ಸುರ, ತರು ಭಾರತಿ ವರ
ಮರೆಯದೆ ಪಾಲಿಸು ನಿರುಪಮ ಚರಿತ     ||ದೇವಾ||

ದಿಟ್ಟ ಶ್ರೀ ಶ್ಯಾಮಸುಂದರ
ವಿಠ್ಠಲ
ಕುವರ ,ದುಷ್ಟ‌ ರಾವಣ ಮದಹರಾ…
ಜಿಷ್ಣು ಪೂರ್ವಜ ವ್ರಿಕೋದರಾ
ರಣರಂಗ ಶೂರ ಶಿಷ್ಠ ಜನರ ಉಧ್ಧಾರಾ..
ನಿಷ್ಠೆಯಿಂದಲಿ  ಮನ ಮುಟ್ಟಿ ನಿನ್ನಪದ
ತಠ್ಠನೆ ಪಾಡುವ ಶ್ರೇಷ್ಟ‌ ಸುಜನರೊಳು
ಇಟ್ಟು ಸಲಹೊ ಸದಾ ಸ್ರಷ್ಟಿ  ಮಂಡಲದಿ
ಪುಟ್ಟ ಗ್ರಾಮ ಬಲ್ಲಟಗಿಯ ವಾಸ      ||ದೇವಾ||

Lyrics in English

Pavana charita sanjeevana giridhara
pavamana karunavalokanadi
nee oliyutali sadavakala tava
tavare padayuga seveya karunisu ||

Deva hanuma shettiraya jagajatti |
kavodu bhavi parameshti || deva ||

Vanara kulanayaka Janaki shoka
kanana trana pavakaa ….
heena kourava nashaka
sanmouni tilaka Ananda teerthanamaka …
kshoniyolage ene Kane, ninage Enna
manade anudina pani pididu pore
stanu janaka girvana vinuta
jagat prana Ramana kalyanamooruti || deva ||

Maruta nandana hanuma purandara roma
parama purusha shreebhima
karunasagara jitakama, sadguna bhouma
paravadi matava nirnama …..
girisuta palaka, jhurija vinashaka
harimata stapaka, durita vimochaka
sharaṇu janara sura, taru bharati vara
mareyade palisu nirupama charita || deva ||

Ditta Shree shyamasundara
vittala
kuvara dushta ravana madahara
jhishnu poorvaja vrikodhara
ranaranga shoora shishya janara uddhara …
nishteyindali mana mutti ninnapada
tattane paduva shreshta sujanaroluittu
salaho Sada srushti mandaladi
putta Grama ballatagiya vasa || deva ||


ಸಂಜೀವನ ಗಿರಿಧರ ಪಾಹಿಮಾಂ / Sanjivana giridhara pahimam

ಸಂಜೀವನ ಗಿರಿಧರ ಪಾಹಿಮಾಂ ||

ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶ
ವಕ್ರಾನನ ಮೂರುತಿ ಪಾಹಿಮಾಂ ||

ಮಂತ್ರ ಮೂಲ ಸ್ಥಿತ ಕಂಕುಪಿತನ
ದೂತಯಂತ್ರೋದ್ಧಾರಕ ಪಾಹಿಮಾಂ ||

ಮೋಹನ ವಿಠ್ಠಲ ದಾಸ ಪೋಷಕ
ಮಾಯಾಮೋಹಕ ಭಂಜಕ ಪಾಹಿಮಾಂ ||

Lyrics in English

Sanjivana giridhara pahimam || pa ||

Chakratirthanivasa sakradyamaradhisa |
Vakrasana muruti pahimam || 1 ||

Mamtra mulasthita kantu pitana duta |
Yamtroddharaka pahimam || 2 ||

Mohanaviththaladasa poshaka |
Maya mohaka Banjana pahimam || 3 ||

ಸುಂದರ ಗುರು ರಾಘವೇಂದ್ರರೆಂತೆಂಬೋ ಕರ್ಮಂದಿಗಳರಸನೆ / Sundara guru raghavendrarentembo


ಸುಂದರ ಗುರು ರಾಘವೇಂದ್ರರೆಂತೆಂಬೋ ಕರ್ಮಂದಿಗಳರಸನೆ
ವಂದಿಸುವೆ ಬಂಧ ಭಕುತರಘವೃಂದ ಕಳೆವ ಗುಣಸಾಂದ್ರ
ಸನ್ನುತ ಮಹಿಮರೆಂದು ನಾ ನಂಬಿದೆ   ||ಸುಂದರ||

ಪರಮ ಕರುಣೀ ನಿಜ ಚರಣ ಭಜಕರನ್ನುದ್ಧರಿಸುತಲನುದಿನ ಪೊರೆವನೆಂದೂ
ಕರವ ಮುಗಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ
ದೈನ್ಯದಿ ಬಾಯಿ ತೆರೆಯುವೆ
ಕರ ಪಿಡಿಯೆಂದು ಕರೆಯುವೆ ಧರೆಯೊಳಗೆ ನಿಮ್ಮಯ ಸರಿ
ದೊರೆಗಳ ಕಾಣೆ ಮದ್ಗುರುವೆ ಎನ್ನಂಥ ಪಾಮರ ನರನ ಕಾಯೋದು
ನಿಮಗಾಶ್ಚರ್ಯವೇ ವರಯೋಗಿವರ್ಯನೆ
ನಿರುತ ಬೃಂದಾವನದಿ ರಾಜಿಸಿ ಮೆರೆವ ಮಂಗಳ ಚರಣ
ತವಪದಸ್ಮರಿಪೆ ಸಂತತ ನೀಡು ತ್ವರಿತದಿ ಹರುಷದಲಿ ನಿರ್ಜರರ ತರುವೆ ||ಸುಂದರ||

ಘೋರಾ ದುರಿತವೆಂಬೊ ವಾರಿಧಿಯೊಳಗೀಸಲಾರೆ
ಎನಿತು ದಯ ಬಾರದೇನೋ ಪೋರನೆನುತಲಿ ತಾತ್ಸಾರ ಮಾಡದೆ
ದಡ ಸೇರಿಸೊ ,ಬಿನ್ನಪವ ವಿಚಾರಿಸೊ ಮನ್ನಿಸಿ ಮಾರ್ಗ ತೋರಿಸೊ
ಮೀರಿರುವ ಕಡು ಕಾಮಾದಿ ಖಳರ ಬೇರುಗಳನಳಿಸೋ
ನಿನ್ನೊಳು ನಿರಂತರ ಸೂರಿ ಭಕುತರ ದಾರಿಯೊಳು ನಿಲಿಸೋ
ಊರು ಪಾಪ ಸಂಚಯ ಕ್ರೂರ ಕುಜನರ
ಕುಠಾರದಿಂದುಳಿಸೊ ಮನ್ಮನದಭೀಷ್ಟೆಯ
ಭೂರಿ ನಮಿಸುವೆ ಚಾರುಕಿಟೀಜಧೀರ ನಿಲಯನೆ
ಸಾರಿದವರನು ಪಾರುಗಾಣಿಪನೆಂದು ಡಂಗುರ
ಸಾರುತಿದೆಯದು ವೀರಸಲಿಸೊ     ||ಸುಂದರ||

ಏಸೇಸು ಜನ್ಮದಿ ಕ್ಲೇಶವನನುಭವಿಸಿ ಘಾಸಿಗೊಳಿಸಿ ಮನ ಬೇಸರದೆ
ಹೇಸಿ ವಿಷಯಂಗಳ ಲೇಸು ತಿಳಿದು ಮರೆ ಮೋಸಾದಿ ,ದುಷ್ಟರ ಸಹವಾಸದಿ
ಚರಿಸಿದೆ ಮಂದಹಾಸಾದಿ ಸಂತೈಸು ರವಿ ಸಂಕಾಶಜನ
ವಿದ್ವಾಂಸ ಸಾಗರದಿ ಕಾಷಾಯವಸನ ವಿಭೂಷಿತಾಂಗ
ವ್ಯಾಸಮುನಿ ಭರದೀ ಗಜರಾಮಪುರದೀಶ ಮುಖರಿಗೆ
ತೋಷ ನೀ ಬೆರೆದಿ ಈ ಸಮಯ ಸ್ತುತಿಸುವೆ
ಅ ಸಮೀರ ಮತಾಬ್ಧಿ ಚಂದಿರ ಶ್ರೀಶ ಗುರು ಇಂದಿರೇಶನಂಘ್ರಿಯ
ದಾಸ ಭವಯರಾಶಿ ತರಿದು ಉದಾಶಿಸದೆ ನೀ ಪೋಷಿಸೆನ್ನನು ||ಸುಂದರ||

Lyrics in English

Sundara guru raghavendrarentembo karmandigalarasane
vandisuve bandha bhakutara vrunda kaleva gunasandra
sannuta mahimarendu naa nambide || sundara ||

Parama karuni ninja Charana bhajakarannuddharisutaladina
porevanendu karyava mugidu twara paripariyali
ninnataporeyuve dainyadibayi tereyuve
Kara pidiyendu kareyuve dhareyolage nimmaya sari
doregalu Kane madgiruve ennantha pamara narana kayodu
nimagashcharyave varayogivaryane
niruta brundavanadi rajisi mereva Mangala charana
tavapadasmaripe santata needu twaritadi harushadali nirjarara taruve || sundara ||

Ghoraa duritavembo varidhiyolagisalare
enitu Daya baradeno poranenutali tatsara madade
dada seriso, binnapava vichariso mannisi marga toriso
meeriruva kadu kamadi khalana berugalanaliso
ninnolu nirantara soorina bhakutara dariyolu niliso
ooru paapa sanchaya kroora kujanara
kutharadinduliso manmanadabhishteya
bhuri namisuva charukitijadhira nilayane
saridavaranu paruganipanendu dangura
sarutideyadu veerasaliso || sundara ||

Eesu janmada kleshavananubhavisi ghasigolisi mana besarade
hesi vishayangala lesu tilidu mare mosadi dushtara sahavasadi
chariside mandahasadi santaisu Ravi sankaashajana
vidwamsa sagaradi kaashayavasana vibhushitaanga
vyasamuni bharati gajaramapuradhisha mukharige
toshana nee beredi ee Samayal stutisuve
aa sameera matambudhi chandirana shreesha guru indireshananghriya
dasa bhavayarashi taridu udashisade nee poshisennanu || sundara ||

ಇವನ ಹಿಡಿದುಕೊಂಡು ಹೊಗೆಲೋ ಜೋಗಿ / Ivana hididukondu hogelo jogi

ಇವನ ಹಿಡಿದುಕೊಂಡು ಹೊಗೆಲೋ ಜೋಗಿ                    ।।ಪ।।

ಇವ ನಮ್ಮ ಮಾತ ಕೇಳದೆ ಪುಂಡನಾದ                       ।।ಅ.ಪ।।

ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ                   ।।೧।।

ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ
ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ
ಬಿಲ್ಲು ಹಿಡಿದು ರಾಕ್ಷಸರನು ಸವರಿದ
ಬಲ್ಲಿದ ಮಾವನ ಶಿರವನ್ನು ತರಿದ                                  ।।೨।।

ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಛಲದಿಂದ
ಭಕ್ತವತ್ಸಲ ಸಿರಿ ಪುರಂದರವಿಠಲ
ಎತ್ತಲಾದರೂ ಕೊಂಡು ಹೋಗೆಲೊ ಜೋಗಿ                    ।।೩।।

Lyrics in English

Ivana hididukondu hogelo jogi ||pa||

Iva namma mata kelade pundanada ||a.pa||

Adutaduta hogi nirolu mulugida
Bedavendare betta bennalli hotta
Dadeya mele ta dharini negahida
Hidiya hodare baya teredu anjisida ||1||

Hullali viprana kanna tivida buddhi
Illemdare kaili kodaliya pidida
Billu hididu rakshasaranu savarida
Ballida mavana Shiravannu tarida ||2||

Battale kudureya hattabedendare
Hattidano iva chaladinda
Baktavatsala siri purandaravithala
Ettaladaru kondu hogelo jogi ||3||