
ವೃಂದಾವನದೊಳು ಆಡುವನ್ಯಾರೇ ಗೋಪಿ
ಚಂದಿರವದನೇ ನೋಡುವ ಬಾರೇ ।
ಅರುಣಪಲ್ಲವ ಪಾದಯುಗಳಲಿ , ದಿವ್ಯ
ಮರಕತ ಮಂಜುಳಭರಣನೇ
ಸಿರಿವರ ಯಧುಕುಲ ಸೋಮನೇ ,ಇಂಥಾ
ಪರಿಪೂರ್ಣ ಕಾಮ ನಿಸ್ಸಿಮನೇ ।।೧।।
ಹಾರ ಹೀರ ಗುಣಧಾಮನೇ ಸರ್ವ
ಸಾರ ಶರೀರ ಶೃಂಗಾರನೇ
ಆರಿಗಾದರೂ ಮನ ತೋರನೇ , ತನ್ನ
ಸೇರಿದವರ ಮಾತಮೀರನೇ ।।೨।।
ಮಕರಕುಂಡಲ ಕಾಂತಿ ಭರಿತನು, ದೇವ
ಅಕಳಂಕ ರೂಪ ಲಾವಣ್ಯನೇ ,ದಿವ್ಯ
ಸಕಲರೊಳಗೆ ದೇವನೀತನೇ ನಮ್ಮ
ಮುಕುಟೀಶ ಪುರಂದರ ವಿಠಲನೇ ।।
Lyrics in English
Brindavanadolu aduvanyaare gopi chandiravadane noduva baare ||
Arunapallava paadayugalali, divya marakata manjulabharanane sirivara yadukula somane, intha paripoorna kaama nissimane ||
Haara heera gunadhamane sarva saara sharira shrungaarane arigaadaru mana torane, tanna seridavara maatameerane ||
Makarakundala kaantibharitanu, deva akalanka roopa laavanyane, divya sakalarolage devaneetane namma mukuteesha purandara vithalane ||
