ಪಾವನ ಚರಿತ ಸಂಜೀವನ ಗಿರಿಧರ / Pavana charita sanjeevana

ಪಾವನ ಚರಿತ ಸಂಜೀವನ ಗಿರಿಧರ
ಪಾವಮಾಣಿ ಕರುಣಾವಲೋಕನದಿ
ನೀ ಒಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ‌ ಕರುಣಿಸು

ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ ||2||
ಕಾವೋದು ಭಾವಿ ಪರಮೇಷ್ಠಿ ||ದೇವಾ||

ವಾನರ ಕುಲನಾಯಕ ಜಾನಕಿ ಶೋಕ
ಕಾನನ ತ್ರಣ ಪಾವಕಾ…ಆ…
ಹೀನ ಕೌರವ ನಾಶಕ
ಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ…
ಕ್ಷೋಣಿಯೊಳಗೆ ಎಣೆ ಕಾಣೆ ,ನಿನಗೆ ಎನ್ನ
ಮಾನದೆ ಅನುದಿನ ಪಾಣಿ ಪಿಡಿದು ಪೊರೆ
ಸ್ತಾನು ಜನಕ ಗೀರ್ವಾಣ ವಿನುತ
ಜಗತ್ ಪ್ರಾಣ ರಮಣ ಕಲ್ಯಾಣಮೂರುತಿ  ||ದೇವಾ||

ಮರುತ ನಂದನ ಹನುಮ ಪುರಹರ ರೋಮ
ಪರಮ ಪುರುಷ ಶ್ರೀಭೀಮಾ
ಕರುಣಾಸಾಗರ ಜಿತ ಕಾಮ ,ಸದ್ಗುಣ ಭೌಮ
ಪರವಾದಿ ಮತವ ನಿರ್ನಾಮಾ…
ಗಿರಿಸುತ ಪಾಲಕ ,ಝರಿಜ ವಿನಾಶಕ
ಹರಿಮತ ಸ್ಥಾಪಕ,ದುರಿತ ವಿಮೋಚಕ
ಶರಣು ಜನರ ಸುರ, ತರು ಭಾರತಿ ವರ
ಮರೆಯದೆ ಪಾಲಿಸು ನಿರುಪಮ ಚರಿತ     ||ದೇವಾ||

ದಿಟ್ಟ ಶ್ರೀ ಶ್ಯಾಮಸುಂದರ
ವಿಠ್ಠಲ
ಕುವರ ,ದುಷ್ಟ‌ ರಾವಣ ಮದಹರಾ…
ಜಿಷ್ಣು ಪೂರ್ವಜ ವ್ರಿಕೋದರಾ
ರಣರಂಗ ಶೂರ ಶಿಷ್ಠ ಜನರ ಉಧ್ಧಾರಾ..
ನಿಷ್ಠೆಯಿಂದಲಿ  ಮನ ಮುಟ್ಟಿ ನಿನ್ನಪದ
ತಠ್ಠನೆ ಪಾಡುವ ಶ್ರೇಷ್ಟ‌ ಸುಜನರೊಳು
ಇಟ್ಟು ಸಲಹೊ ಸದಾ ಸ್ರಷ್ಟಿ  ಮಂಡಲದಿ
ಪುಟ್ಟ ಗ್ರಾಮ ಬಲ್ಲಟಗಿಯ ವಾಸ      ||ದೇವಾ||

Lyrics in English

Pavana charita sanjeevana giridhara
pavamana karunavalokanadi
nee oliyutali sadavakala tava
tavare padayuga seveya karunisu ||

Deva hanuma shettiraya jagajatti |
kavodu bhavi parameshti || deva ||

Vanara kulanayaka Janaki shoka
kanana trana pavakaa ….
heena kourava nashaka
sanmouni tilaka Ananda teerthanamaka …
kshoniyolage ene Kane, ninage Enna
manade anudina pani pididu pore
stanu janaka girvana vinuta
jagat prana Ramana kalyanamooruti || deva ||

Maruta nandana hanuma purandara roma
parama purusha shreebhima
karunasagara jitakama, sadguna bhouma
paravadi matava nirnama …..
girisuta palaka, jhurija vinashaka
harimata stapaka, durita vimochaka
sharaṇu janara sura, taru bharati vara
mareyade palisu nirupama charita || deva ||

Ditta Shree shyamasundara
vittala
kuvara dushta ravana madahara
jhishnu poorvaja vrikodhara
ranaranga shoora shishya janara uddhara …
nishteyindali mana mutti ninnapada
tattane paduva shreshta sujanaroluittu
salaho Sada srushti mandaladi
putta Grama ballatagiya vasa || deva ||


ಸಂಜೀವನ ಗಿರಿಧರ ಪಾಹಿಮಾಂ / Sanjivana giridhara pahimam

ಸಂಜೀವನ ಗಿರಿಧರ ಪಾಹಿಮಾಂ ||

ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶ
ವಕ್ರಾನನ ಮೂರುತಿ ಪಾಹಿಮಾಂ ||

ಮಂತ್ರ ಮೂಲ ಸ್ಥಿತ ಕಂಕುಪಿತನ
ದೂತಯಂತ್ರೋದ್ಧಾರಕ ಪಾಹಿಮಾಂ ||

ಮೋಹನ ವಿಠ್ಠಲ ದಾಸ ಪೋಷಕ
ಮಾಯಾಮೋಹಕ ಭಂಜಕ ಪಾಹಿಮಾಂ ||

Lyrics in English

Sanjivana giridhara pahimam || pa ||

Chakratirthanivasa sakradyamaradhisa |
Vakrasana muruti pahimam || 1 ||

Mamtra mulasthita kantu pitana duta |
Yamtroddharaka pahimam || 2 ||

Mohanaviththaladasa poshaka |
Maya mohaka Banjana pahimam || 3 ||

ಮುದ್ದು ರಾಮರ ಬಂಟ ಬುಧ್ಧಿಯುಳ್ಳ / Muddu ramara banta buddhiyulla

ಮುದ್ದು ರಾಮರ ಬಂಟ
ಬುದ್ಧಿಯುಳ್ಳ ಹನುಮಂತ
ಹದ್ದಾಗಿ ಹಾರಿದನೆ ಆಕಾಶಕೆ || pa ||

ನಿದ್ರೆಗೈವ ಸಮಯದಿ ಎದ್ದು ಬಾರೆಂದರೆ ಅ-
ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ || a.pa ||

ದಾರಿ ದೂರವೆಂದು ದಾರಿಯನೆ ನಿರ್ಮಿಸಿದ
ಧೀರ, ರಾಮರ ಬಂಟ ಹನುಮಂತನೆ | ನೋಡಿ-
ಬಾರೆಂದರೆ ಪೋಗಿ ಲಂಕೆಯ ಸುಟ್ಟು
ಬೇಗದಲಿ ಮರವನೇರಿ ಕುಳಿತಾತನೆ || 1 ||

ಅಶೋಕ ವನದಲ್ಲಿ ಸೀತೆಯನು ನೋಡಿದ
ಶ್ರೀರಾಮರ ಬಂಟ ಹನುಮಂತನೆ |
ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿ
ತಿಳಿಸಿದ ರಘುವೀರ ದೂತ ಜಾಣ ನಿವನೆ || 2 ||

ಆತನ ಮಾತಿಗೆ ಸೇತುವೆನೆ ಕಟ್ಟಿಸಿದ
ಸೀತಾರಾಮರ ಬಂಟ ಹನುಮಂತನೆ |
ಸೀತಾದೇವಿ ಅಮ್ಮನಿಗೆ ಪ್ರೀತಿಯ ಬಂಟನಾದ
ಮುಖ್ಯಪ್ರಾಣ ಹಯವದನನ ದೂತನೆ || 3 ||

Lyrics in English

Muddu ramara banta buddhiyulla hanumanta
haddagi haridane akasake || pa ||

Nidre gaiva samayadi eddu barendare
allidda rakkasaranella gelidatane || a pa ||

Dari duravendu dariyane nirmisida
dhira, ramara banta hanumantane |
nodi- barendare pogi lankeya suttu
begadali maravaneri kulitatane || 1 ||

Ashoka vanadalli siteyanu nodida
sriramara banta hanumantane |
mateyanu matadisi kshema suddi tilisida
raghuvira duta jana nivane || 2 ||

Atana matige setuvene kattisida
sitaramara banta hanumantane |
sitadevi ammanige pritiya bantanada
mukhyaprana hayavadanana dutane || 3 ||

ಕರುಣದಿ ಕಾಯಬೇಕಿನ್ನು ಪ್ರಾಣೇಶ / Karunadi kayabekinnu pranesha

ಕರುಣದಿ ಕಾಯಬೇಕಿನ್ನು ಪ್ರಾಣೇಶ
ಅರಿಯೆನೊ ಅನ್ಯರ ಜಗದ್ವಾಸ ||ಪ||

ಪರಿಪರಿ ಬವಣೆಯ ಪರಿಹಾರಗೈಸುತ
ತ್ವರಿತದಿ ಸಲಹೊ ಭಾರತಿಗೀಶ ||ಅ.ಪ.||

ಅನ್ನವಸನಗಳಿಗೆ ಅಲ್ಪರ ತೆರದೊಳು
ಬನ್ನಬಡುತಲಿರಲು
ನಿನ್ನ ಪಾದವ ನಂಬಿ ನೀ ಗತಿ ಎನುತಿರೆ
ಮನ್ನಿಸಿದ ಮಹಿಮ ನಿಸ್ಸೀಮ ||1||

ಮನದಿ ಬಹುನೊಂದು ನಿನ್ನ ಘನತೇನೆಂದು
ಅನುದಿನ ಕಾಯೊ ಎಂದು
ಎನುತಿರೆ ಸ್ವಪ್ನದಿ ಹನುಮ ನಿನ್ನಭಯ ಹಸ್ತ
ವನೆ ಶಿರದಿ ಇಟ್ಟೆ ಶ್ರೇಷ್ಠನೆ ||2||

ಉಭಯ ಹಸ್ತವು ಎನ್ನ ಶಿರದ ಮ್ಯಾಲಿಡುತಲಿ
ಅಭಯ ಕೊಡುತಲಿರಲು
ನಿರ್ಭಯದಿಂದ ನಾ ನಿನ್ನ ಭಜಿಪೆನಯ್ಯ
ಶುಭಗುಣನಿಲಯ ಜೀಯಾ ||3||

ಹನುಮ ಭೀಮಾನಂದ ಮುನಿಯಾಗಿ
ಜಗದಲಿ ಹನನಗೈಯುತ ದನುಜರ
ವನಜಾಕ್ಷ ಹರಿಯನು ಘನವಾಗಿ ಸೇವಿಸಿ
ಅನುದಿನದಲಿ ಕಾಯ್ವೆ ಸುಜನರ ||4||

ಶ್ವಾಸಜಪವ ಮಾಡಿ ರಾಶಿ ಜೀವರ ಕಾಯ್ವೆ
ಶ್ವಾಸ ನಿಯಾಮಕನೆ
ಶ್ರೀಶ ಶ್ರೀ ಗೋಪಾಲಕೃಷ್ಣವಿಠ್ಠಲನಿಗೆ
ಕೂಸು ಎಂದೆನಿಸಿರುವೆ ನೀ ಕಾವೆ ||5||

Lyrics in English

Karunadi kayabekinnu pranesha
ariyano anyara jagadwasa || pa ||

Paripari bavaneya pariharagaisuta |
twaritadi salaho bharatigesha || a.pa ||

Annavasanagalige alpara teradolu
bannabadutaliralu
Ninna padava nambi nee gati enutire
mannisida Mahima nissima || 1 ||

Manadi bahunondu Ninna ghanatenendu
anudina kayo endu
entire swaantadi januma ninnabhaya hastavane
shigradi itte shreshtana || 2 ||

Ubhaya hastavu Enna shirada myalidutali
abhaya kodutaliralu
nirbhayadinda naa Ninna bhajipenayya
shubhguna nilayana jeeya || 3 ||

Hanuma bhimananda muniyagi
jagadali hananagaiyuta danujara
vanajaksha hariyanu ghanavagi sevisi
anudinadali kayve sujanara || 4 ||

Shwasajapava Madi rashi jeevara kayve
shwasa niyamakane
shreesha Shree gopalakrishna vittalanige
koosu endenisiruve nee kaave || 5 ||

ಜೋ ಜೋ ಜೋ ಮುಖ್ಯಪ್ರಾಣ ಜೋಜೋ ಮಲೆವರ / Jo Jo mukhyaprana Jo Jo malevara

ಜೋ ಜೋ ಜೋ ಮುಖ್ಯಪ್ರಾಣ
ಜೋಜೋ ಮಲೆವರ  ಗಂಟಲಗಾಣ ||ಪ||

ಜೋಜೋ ರಾಕ್ಷಸ ಶಿಕ್ಷ ಕಲ್ಯಾಣ
ಜೋಜೋ  ಸಕಲ ವಿದ್ಯಾ ಪ್ರವೀಣ ಜೋ ಜೋ ||ಅ. ಪ||

ಆ ಜಗದಲಿ ನೀ ಬಾಲಬ್ರಹ್ಮಚಾರಿ
ಸೋಜಿಗದಲಿ  ಕಪಿ ರಾಜ್ಯವನಾಳಿ
ತೇಜಮುತ್ತಿನ  ಕವಚಕುಂಡಲಧಾರಿ
ಪೂಜಿಪರ ಪಾಲಿಪೇ  ಸುಜನರುಪಕಾರಿ ||1||

ಭೂಮಿ ಭಾರವನಿಳಿಸಿದ  ಭೀಮ
ಕಾಮಿ ಕೀಚಕನ ಕುಟ್ಟಿ ರಣಧಾಮ
ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ
ಕಾಮಿತಾರ್ಥವನೀವ  ಕಲ್ಪತರು ಭೀಮ ||2||

ಸೌಂದರ್ಯರೂಪದ  ಶ್ರೀಮದಾನಂದ
ತಂದೆ ಹಯವದನನ  ಮೋಹದಕಂದ
ಬಂದು ಉಡುಪಿಯಲಿ  ನೆಲೆಯಾಗಿ ನಿಂದ
ವಂದಿಸುವೆ ನಿದ್ರೆಗೈ  ಹರಿಧ್ಯಾನದಿಂದ ||3||

Lyrics in english

Jo Jo Jo mukhyaprana
Jo Jo malevara gantalagana ||pa||

Jo Jo rakshana shiksha kalyana
Jo Jo sakala vidya pravina Jo Jo ||

Aa jagadali nee balabrahmachari
sojigadali kapi rajyavanali
tejamuttina kavacha kundaladhari
poojipara palipane sujanarupakari ||1||

Bhumi bharavanilisida bhima
kami keechakana kutti ranadhama
bhamini droupadi kashta nirdhuma
kamitarthavaneeva kalpataru bhima ||2||

Soundaryaroopada srimadananda
tandeya hayavadana modakakanda
bandu udupiyali neleyagi ninda
vandisuve nidregai haridhyanadinda ||3||

ಯಂತ್ರೋದ್ಧಾರಕ ಹನೂಮತ್ ಸ್ತೋತ್ರಮ್

Yantroddharaka Stotra

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್
ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ ||೧||

ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್
ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ ||೨||

ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ
ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ ||೩||

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ
ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ ||೪||

ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್
ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ ||೫||

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ
ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು ||೬||

ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ
ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ ||೭||

ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ
ಯಃಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್|| ೮||

|| ಇತಿ ಶ್ರೀವ್ಯಾಸರಾಜಯತಿಕೃತ ಯಂತ್ರೋದ್ಧಾರಕ ಹನೂಮತ್ ಸ್ತೋತ್ರಮ್ ||

ಮಂಗಳವೆನ್ನಿ ಮಾರುತಿಗೆ ಬಾಲ ಬ್ರಹ್ಮಚಾರಿಗೆ / Mangalavenni marutige bala brahmacharige

ಮಂಗಳವೆನ್ನಿ ಮಾರುತಿಗೆ ಬಾಲ ಬ್ರಹ್ಮಚಾರಿಗೆ
ಕಪಿಗಳೊಳಗಿನ ಶೂರಗೆ ಲಂಕಾ ಜಿಗಿದ ಧೀರಗೆ ||1||

ಸೂರ್ಯನು ಉದಯಿಸುವಾಗಲೇ ಕೆಂಪಗೆ ಕಾಣಿಸುವಾಗಲೇ
ತಿನ್ನಲು ಬಯಸಿದನಾಗಲೇ ಬಾಲಕ ತಾನಿರುವಾಗಲೇ ||2||

ದುಷ್ಟನಾದ ರಾವಣನು ಕದ್ದು ಸೀತೆಯನೊಯ್ದನು
ಅಶೋಕ ವನದಲಿ ಇಟ್ಟನು ಮದುವೆಯಾಗಲು ಬಯಸಿದನು ||3||

ರಾಮನು ಉಂಗುರ ನೀಡಿದನು ಚೂಡಾ ಪಡಕೊಂಡು ಹೊರಟನು
ಬಂದ ಗುಟ್ಟು ತಿಳಿಸಿದನು ರಾಮಗೆ ಭೆಟ್ಟಿ ಕೊಟ್ಟನು ||4||

ಶೂರನಾದ ಹನುಮನು ಲಂಕೆಯನ್ನು ಸುಟ್ಟನು
ರಾವಣನನ್ನು ಗುದ್ದಿದನು ಸೀತೆಯ ಕರಕೊಂಡು ಬಂದನು ||5||

ಪ್ರಥಮ ಹನುಮಾವತಾರಗೆ ದ್ವಿತೀಯ ಭೀಮಾವತಾರಗೆ
ತೃತೀಯ ಮಧ್ವಾವತಾರಗೆ ಚತುರ್ಥ ಪುರಂದರ ವಿಠ್ಠಲಗೆ ||6||

Lyrics in English

Mangalavenni marutige bala brahmacharige
kapigalolagina shoorage Lanka jigida dheerage || 1 ||

Suryanu udayisuvagale kempage kanisuvagale
tinnalu bayasidanagale balaka taniruvagale || 2 ||

Dushtanada ravananu kaddu seeteyanoydanu
Ashoka vanadali ittanu maduveyagalu bayasidanu || 3 ||

Ramanu ungura needidanu chooda padakondu horatanu
Banda guttu tilisidanu ramage bhetti kottanu || 4 ||

Shooranada hanumanu lankeyannu suttanu
ravananannu guddidanu seeteya karakondu bandanu || 5 ||

Prathama hanumavatarage dwitiya bhimavatarage
tratiya madhwavatarage chaturtha Purandara vittalage || 6 ||


ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ / Nambide Ninna paada guru mukhyaprana

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ||ನಂಬಿದೆ ||
ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ ||ನಂಬಿದೆ ನಿನ್ನ||
ದಿಂಭದೊಳಗೆ ಹರಿಯ ಬಿಂಬ
ಪೊಳೆ ವಂತೆ ಮಾಡೋ ||ನಂಬಿದೆ ||

ಅಂತರಂಗದ ಉಸುರ ಹೊರಗೆ ನೂಕಿ
ಅಂತರಂಗಕ್ಕೆ ಸೇರುವ  ||ಅಂತರಂಗ||
ಪಂತದಾಳು ನೀನೇ ಕಂತು ಜನಕನಲ್ಲಿ   ||ಪಂತದಾಳು||
ಮಂತ್ರೀಯೆನಿಸಿ ಸರ್ವಾಂತರ್ಯಾಮಿಯಾಗಿ
ನಿಂತು ನಾನಾ ಬಗೆ ತಂತು ನಡೆಸುವ
ಹಂತಕಾರಿ ಗುಣವಂತ ಬಲಾಢ್ಯ  ||ನಂಬಿದೆ||

ಇಪ್ಪತ್ತು ಒಂದು ಸಾವಿರ ಐದೊಂದು ನೂರು
ಅಪ್ರತಿಮ ಹಂಸ ಮಂತರ ||ಇಪತ್ತು||
ತಪ್ಪದೆ ದಿನ ದಿನ ಒಪ್ಪದಿಂದಲಿ  ಜಪಿಸಿ ||೨||
ತಪ್ಪಿಸಿ ಭವದ ಸಮೀಪದ ಜೀವರಿಗೆ
ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸೋ
ಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸೋ ||ನಂಬಿದೆ||

ಹತ್ತೇಳು ಎರಡಾಯಿತು ನಾಡಿಯೊಳು
ಸುತ್ತಿ ಸುತ್ತುವ ಮಾರುತ ||ಹತ್ತೇಳು||
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ ||೨||
ನೆತ್ತಿಯ ದ್ವಾರದಿಂದ ಎತ್ತ ಪೋಗಳಿಸದೆ
ತಟ್ಟುವರೊಳು ಜೀವೋತ್ತಮನೆ
ಸಮ ಚಿತ್ತ  ಎನಗೆ ಕೊಡುತ್ತರ ಲಾಲಿಸೊ     ||ನಂಬಿದೆ||

ಯೋಗಾಸನದೊಳಿಪ್ಪಾ
ಯಂತ್ರೋದ್ಧಾರಕ ಭಾಗವತ ಜನರಪ್ಪ ||ಯೋಗಾಸನ||
ಯೋಗಿಗಳಿಗೀಶ ವ್ಯಾಸ
ಯೋಗಿಗೊಲಿದ ನ್ಯಾಸ. ||ಯೋಗಿ||
ಶ್ರೀತುಂಗಭದ್ರ ನಿವಾಸ ಬಾಗುವೆ ಕೊಡು ಲೇಸ
ಶ್ರೀಗುರುವಿಜಯವಿಠ್ಠಲನ  ಪಾದಕೆ
ಬಾಗಿದ ಭವದೂರ ಜಾಗರ ಮೂರುತಿ ||ನಂಬಿದೆ||

Lyrics in English

Nambide ninna paada guru mukhyaprana ||
nambide ninna paada dambhava tolagisi ||
dimbhadolage hariya bimba
polevante maado || nambide ||

Antarangada usura horage nooki
antarangakke seruva ||
pantadalu Neene kanti janakanalli ||
mantriyenisi sarvantaryamiyagi
nintu naana bage tantrum nadesuva
hantakaari gunavanta balaadhya || nambide ||

Ipattu ondu Savira idondu nooru
apratima hamsa mantra ||
tappade Dina Dina oppadindali japisi
tappisa bhavada sameepada jeevarige
appanandadi punya bappante karuniso
kappu varnana kudoppisi paliso || nambide ||

Hattelu eradiyitu nadiyolu
sutti suttuva maruta ||
uttara lalisi utkramanadalli |
nettiya dwaradinda etta pogalisade
tattuvarolu jeevottamane
sama chitta enage koduttara lalisi || nambide ||

Yogaasanadolippa
yantroddharaka bhagavata janarappa ||
yogigaligeesha vyasa
yogigolida Nyasa ||
Shree tungabhadra nivasa baguve kodu lesa
Shree guru vijayavittalana padake
baagida bhavadoora japagala muruti || nambide ||

ಸೇವಕ ತನದ ರುಚಿ ಏನಳೆದೆಯೊ ದೇವ / Sevaka tanada ruchi enaledeyo deva

ಸೇವಕ ತನದ ರುಚಿ ಏನಳೆದೆಯೊ ದೇವ
ಹನುಮರಾಯ ವೈರಾಗ್ಯ ಬೇಡಿ||ಸೇವಕ||
ಹನುಮಾ…….

ಉದದಿಯ ದಾಟಿ ಸೀತೆಯ ಕಂಡು ಬಂದಾಗ
ಮದುವೆಯ ಮಾಡೆನ್ನ ಎನಬಾರದಿತ್ತೆ |
ಪಾದದಿ ಪಾಷಾಣ ಹೆಣ್ಣ ಮಾಡಿದವನಿಗೆ||2||
ಇದು ಏನಾಶ್ಚರ್ಯವೊ ನೀ
ಬಯಸಲೊಲ್ಲದೆ ಹೋದೆ||ಇದು|| ||ಸೇವಕ||

ಕ್ಷಣದೊಳು ಸಂಜೀವನ ಗಿರಿ ತಂದಾಗ
ಹಣ ಹೊಣ್ಣು ಬೇಡಲು ಕೊಡದಿದ್ದನೇ||
ವಿನಯದ ವಿಭೀಷನಗೆ ರಾಜ್ಯವಿತ್ತಾ…||2||
ಇದು ಏನಶ್ಚಾರ್ಯ ಹನುಮಾ
ನೀನೊಳ್ಳದೇ ಹೋದೆ   ||ಸೇವಕ||

ಸಾರ್ವಭೌಮನು‌ ತಾನೆ ಮೆಚ್ಚಿ ಬಂದಾಗಲೇ
ಪೂರ್ವಿಯ ಬೇಡಲು ಕೊಡದಿದ್ದನೇ||
ಸರ್ವವು ತೊರೆದು ಶ್ರೀ ಪುರಂದರವಿಠ್ಠಲನಾ
ಪುರಂದರವಿಠ್ಠಲಾನಾ…ವಿಠ್ಠಲ ನಾ….ಆ….
ಸರ್ವವ ತೊರೆದು ಶ್ರೀ ಪುರಂದರವಿಠ್ಠಲನಾ
ನಿರ್ವ್ಯಾಜ್ಯ ಭಕುತಿಯಾ ಬೇಡಿಕೊಂಡ್ಯಲ್ಲದೆ||2||   ||ಸೇವಕ||

Lyrics in English

Sevaka tanada ruchi enaledeyo deva
hanumaraya vairagya bēḍi || sevaka ||
hanuma …….

Udadiya dating seeteya kandu bandaga
maduveya madenna enabaraditte ||
padadi pashana henna madidavanige
idu enashcharyavo nee
bayasalollade hode ||sevaka ||

Kshanadolu sanjeevana giri tandaga
Hana honnu bedalendu kodadiddane |
vinayada vibhishanage rajyavitta |
idu enashcharya hanuma
neenollade hode || sevaka ||

Sarvabhoumanu tane mecchi bandagale
poorviya bedalendu kodadiddane |
sarvavu to reduce Sree purandaravittalana
purandaravittalana ….. vittala naa … aa ….
sarvava to reduce Sree Purandara vittalana
nirvyajya bhakutiya bedikondyallade || sevaka ||


ನಂಬಿ ಬಂದೆ ಮುಖ್ಯಪ್ರಾಣ ತುಂಬಿ / Nambi bande mukhyaprana tumbi

ನಂಬಿ ಬಂದೆ ಮುಖ್ಯಪ್ರಾಣ
ತುಂಬಿ ಕೊಂಡೆ ರಾಮಧ್ಯಾನ
ಶಂಭುಶಿವನ ಅಂಶ ದೇವ
ಇಂಬು ನೀಡಿ ಕಾಯೋ ತಂದೆ ||ನಂಬಿ||.

ಮಧುರಭಾಷೆ ಆಂಜನೇಯ
ಮದವಿನಾಶಿ ವಜ್ರಕಾಯ||ಮಧುರ||
ರಾಮಚರಣ ಶರಣ ನಿನ್ನಾ
ನಾಮ ಭಜಿಪೆ ಕಾಯೋ ಎನ್ನಾ ||ನಂಬಿ||

ಅಂಬುಧಿ ಜಿಗಿದ ಅಮಿತ ತ್ರಾಣ
ಶುಭವ ನೀಡೋ ಮುಖ್ಯಪ್ರಾಣ  ||ಅಂಬುಧಿ||
ಸ್ವಾಮಿ ಭಕ್ತ ವಾಯುಜಾತ
ಪ್ರೇಮದಿಂದ ಸಲಹೋ ದೇವ     ||ನಂಬಿ||

ಅಗಜಗೊಲಿದ ಕದನವೀರ
ಜಗದಿ ಮೆರೆದ ನಿಜ ಉಧ್ಧಾರ   ||ಅಗಜ||
ಅಷ್ಠಸಿಧ್ಧಿಯಿಂದ ನಲಿದ
ಇಷ್ಟದೇವಾ ನೆನೆವೆ ನಿನ್ನ ||ನಂಬಿ||

ನುಡಿಸು ನಡೆಸು ಮುಖ್ಯಪ್ರಾಣ
ಒಡಿಯೂರೊಡೆಯ ಶರಣು ಬಂದೆ  ||ನುಡಿಸು||
ಮ್ರಢನ ರೂಪ ಜ್ಞಾನದೀಪ
ಗುಡಿಯ ಬೆಳಗು ಬಾಗಿನಿಂದೆ ||ನಂಬಿ||

Lyrics in English

Nambi bande mukhyaprna
tumbisi konde ramadhaya
shambhushivana amsha deva
imbu needi kayo tande || nambi ||

Madhurabhashe anjaneya
madavinashi vajrakaya ||
ramacharana sharana ninna
nama bhajipe kayo Enna || nambi ||

Ambudhi jigida Amita trana
shubhava needo mukhyaprana ||
swami Bhakta vayujata
premadinda salaho deva || nambi ||

Agajagolida kadanaveera
jagadi mereda ninja uddhara ||
ashtasiddhiyinda nalida
ishtadeva neneve Ninna || nambi ||

Nudisu nadedu mukhyaprana
odiyurodeya sharaṇu bande ||
mrudana roopadi jnanadeepa
gudiya belagu bagininde || nambi ||

**********************************************************