ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು / Shri Rangavittala a Shree makutake sharanu

ಇದು ಪ್ರಸಿದ್ಧವಾದ ಶ್ರೀಪಾದರಾಜರ ದೇವನಾಮವಾಗಿದೆ. ‘ರಂಗವಿಠಲ’ ಎಂಬುದು ಅವರ ಅಂಕಿತನಾಮ. ಭಗವಾನ್ ಶ್ರೀಹರಿಯ ದಿವ್ಯ ಸ್ವರೂಪದ ಪ್ರತಿಯೊಂದು ಅಂಗಾಂಗವನ್ನು ವರ್ಣಿಸುತ್ತಾ, ಅವನಿಗೆ ಶರಣಾಗತಿಯನ್ನು ಕೋರುವ ಸುಂದರವಾದ ಭಕ್ತಿಗೀತೆ ಇದಾಗಿದೆ.

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||

ಶಿರದಲ್ಲೊಪ್ಪುವ ನೀಲಕುಂತಳಕೆ ಶರಣು |
ಸಿರಿಸಹೋದರನರ್ಧದವಳಿಗೆ ಶರಣು ||ಅ.ಪ||

ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು |
ಸಂಪಿಗೆಯ ಕುಸುಮ ಸಮನಾಸಿಕಕೆ ಶರಣು ||
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು |
ಇಂಪುದರ್ಪಣನಿಭ ಕಪೋಲಗಳಿಗೆ ಶರಣು ||೧||

ಕುಂದಕುಟ್ಮಲ ಪೋಲ್ವ ದಂತಪಂಕ್ತಿಗೆ ಶರಣು |
ಅಂದವಾಗಿರುವ ಬಿಂಬೋಷ್ಠಕೆ ಶರಣು ||
ಚಂದ್ರಿಕಾನಿಭ ಮುದ್ದುಮಂದಹಾಸಕೆ ಶರಣು |
ನಂದಗೋಪನ ಮುದ್ದು ಕಂದನಿಗೆ ಶರಣು ||೨||

ಅಬ್ಜನಾಭನ ದಿವ್ಯ ಕಂಬುಕಂಠಕೆ ಶರಣು |
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು ||
ಕುಬ್ಜೆಯನು ಡೊಂಕ ತಿದ್ದಿದ ಭುಜಗಳಿಗೆ ಶರಣು |
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||

ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು‌ |
ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು ||
ಪುನ್ನಾಗಕರಗೆತ್ತ ದ್ವಯನಿತಂಬಕೆ ಶರಣು |
ಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು ||೪||

ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು |
ತುಂಗ ಕುಚಗಳ ಪಿಡಿದ ಕರಗಳಿಗೆ ಶರಣು ||
ಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು |
ರಂಗವಿಠಲನ ಸರ್ವಾಂಗಕೆ ಶರಣು ||೫||

Lyrics in English

Shreerangavithalana shree makutake sharanu ||Pa||

Shiradalloppuva neelakuntalake sharanu |
Sirisahodaranardhadavalige sharanu ||A.Pa||

Sompu notada cheluva sogegannige sharanu |
Sampigeya kusuma samanāsikake sharanu ||
Gumpuratnada karnakundalagalige sharanu |
Impudarpananibha kapolagalige sharanu ||1||

Kundakutmala polva dantapanktige sharanu |
Andavagiruva bimboshthake sharanu ||
Chandrikanibha muddumandahasake sharanu |
Nandagopana muddu kandanige sharanu ||2||

Abjanabhana divya kambukanthake sharanu |
Abjamukhiyiruva vakshasthalake sharanu ||
Kubjeyanu donka tiddida bhujagalige sharanu |
Abjajasanana petta nabhige sharanu ||3||

Rannagantegaliruva ninna katige sharanu |
Ponna kadali polva todegalige sharanu ||
Punnagakaragetta dvayanitambake sharanu |
Chennagi kuniva samajanuvige sharanu ||4||

Mangala vaibhogangala anghridvayake sharanu |
Tunga kuchagala pidida karagalige sharanu ||
Pongolalanooduva anguligalige sharanu |
Rangavithalana sarvangake sharanu ||5||

ವಾಸುದೇವ ನಿನ್ನ ಮರ್ಮಕರ್ಮಂಗಳ ದೇಶದೇಶದಲ್ಲಿ / Vasudeva Ninna marmakarmangala

ಈ ಕೀರ್ತನೆಯಲ್ಲಿ ದಾಸರು ಗೋಪಾಲ ಕೃಷ್ಣನ ಬಾಲಲೀಲೆಗಳನ್ನು “ಮರ್ಮಕರ್ಮ” ಎಂದು ಪ್ರೀತಿಯಿಂದ ಪ್ರಶ್ನಿಸುತ್ತಾ, ಕೊನೆಯಲ್ಲಿ ಆತನೇ ದಯಾಳು ರಂಗವಿಠಲ ಎಂದು ಕೊಂಡಾಡುತ್ತಾರೆ.

ವಾಸುದೇವ ನಿನ್ನ ಮರ್ಮಕರ್ಮಂಗಳ |
ದೇಶದೇಶದಲ್ಲಿ ಪ್ರಕಟಿಸಲೊ ||
ಬೇಸರದೆ ಎನ್ನ ಹೃದಯಕಮಲದಲ್ಲಿ |
ವಾಸವಾಗಿ ಸುಮ್ಮನಿದ್ದೀಯೊ ||ಪ||

ತರಳತನದಲಿದ್ದು ದುರುಳನಾಗಿ ಬಂದು |
ಒರಳಿಗೆ ಕಟ್ಟಿಸಿಕೊಂಡುದನು ||
ತುರುವ ಕಾಯಲಿ ಹೋಗಿ ಕಲ್ಲಿಯೋ |
ಗರವನುಗೊಲ್ಲರ ಕೂಡೆ ನೀ ಉಂಡುದನು ||
ನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯ |
ಅರಿಯದಂತೆ ಕದ್ದು ಮೆದ್ದುದನು ||
ಕೆರಳಿಸಿದೆಯಾದರೆ ಒದರುವೆ ಎಲೊ ನರ |
ಹರಿ ಎನ್ನ ಬಾಯಿಗೆ ಬಂದುದನು ||೧||

ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿ |
ಬೆಟ್ಟವ ಪೊತ್ತದ್ದು ಹೇಳಲೊ ||
ಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿ |
ಹೊಟ್ಟೆಯ ಹೊರೆದದ್ದು ಹೇಳಲೊ ||
ದುಷ್ಟ ಹಾವಿನ ಹೆಡೆಯನು ತುಳಿದಾಡಿದ |
ದುಷ್ಟತನವನು ಹೇಳಲೊ ||
ನೆಟ್ಟನೆ ಅಂಬರಕೆತ್ತಿದನ ಹೊಯ್ದು |
ಹಿಟ್ಟುಕಟ್ಟಿಟ್ಟುದ ಹೇಳಲೊ ||೨||

ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟ |
ಬೆಡಗತನವನಿಲ್ಲಿ ಹೇಳಲೊ ||
ಹಿಡಿಯ ಬಂದ ಕಾಲಯವನಿಗಂಜಿ ಕಲ್ಲ |
ಪಡೆಯ ಹೊದ್ದುದ ಹೇಳಲೊ ||
ಮಡಿದ ಮಗನ ಗುರುವಿಗೆ ಕೊಡಬೇಕೆಂಬ |
ಸಡಗರತನವಿಲ್ಲಿ ಹೇಳೆಲೊ ||
ಮಡದಿ ಮಾತಿಗೆ ಪೋಗಿ ನೀ ಪಾರಿಜಾತವ |
ತಡೆಯದೆ ತಂದದ್ದು ಹೇಳಲೊ ||೩||

ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲ |
ಮಾನವ ಕೊಂಡದ್ದು ಹೇಳಲೊ ||
ತಾನಾಗಿ ಮೊಲೆಯನೂಡಿಸ ಬಂದವಳನ್ನು |
ಪ್ರಾಣವ ಕೊಂಡದ್ದು ಹೇಳಲೊ ||
ಕಾನನದೊಳು ತುರುವಿಂಡುಗಳನು ಕಾಯ್ದ |
ಹೀನತನವನಿಲ್ಲಿ ಹೇಳಲೊ ||
ಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯ |
ಹಾನಿಯ ಮಾಡಿದ್ದು ಹೇಳಲೊ ||೪||

ಧರಣಿಮಗನ ಕೊಂದು ತರುಣಿಯರನು |
ದುರುಳತನವನಿಲ್ಲಿ ಹೇಳಲೊ ||
ಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿ |
ಶರಧಿಯ ಪೊಕ್ಕದ್ದು ಹೇಳಲೊ ||
ಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿ |
ಸ್ಥಿರವಾಗಿ ನಿಂತದ್ದು ಹೇಳಲೊ ||
ಶರಣಾಗತರ ಕಾವ ರಂಗವಿಠಲನ್ನ |
ಪರಮ ದಯಾಳೆಂದು ಹೇಳಲೊ ||೫||

ಕೃತಿಕಾರರು : ಶ್ರೀ ಶ್ರೀಪಾದರಾಜರು

Lyrics in English

Vasudeva ninna marmakarmangala |
deshadeshadalli prakatisalo ||
besarade enna hrudayakamaladalli |
vasavagi summaniddiyo ||P||

Taralatanadaliddu durulanagi bandu |
oralige kattisikonddudanu ||
turuva kayali hogi kalliyo |
garavanugollara koode nee undudanu ||
neremane horamanegala pokku benneya |
ariyadante kaddu meddhudanu ||
keralisideyadare odaruve elo nara |
hari enna bayige bandudanu ||1||

Katti kareva elu dinada malege pogi |
bettava pottaddu helalo ||
attisikolluta yagashalege pogi |
hotteya horedaddu helalo ||
dushta havina hedeyanu tulidadida |
dushtatanavanu helalo ||
nettane ambarakettidana hoydu |
hittukattittuda helalo ||2||

Pidiyavalige mecci sampadavanu kotta |
bedagatanavanilli helalo ||
hidiya banda kalayavaniganji kalla |
padeya hodduda helalo ||
madida magana guruvige kodabekemba |
sadagaratanavilli helelo ||
madadi matige pogi nee parijatava |
tadeyade tandaddu helalo ||3||

Maunagauriya noda banda hengalannella |
manava kondaddu helalo ||
tanagi moleyanoodisa banda valannu |
pranava kondaddu helalo ||
kananadolu turuvindugalanu kayda |
heenatanavanilli helalo ||
maniniyara manegala pokku benneya |
haniya madiddu helalo ||4||

Dharanimagana kondu taruniyaranu |
durulatanavanilli helalo ||
jareya maganiganji purava bittu hogi |
sharadhiya pokkaddu helalo ||
dhareyoladhika srirangapattanadalli |
sthiravagi nintaddu helalo ||
sharanagatara kava rangavithalanna |
parama dayalendu helalo ||5||


ಮುತ್ತು ಬಂದಿದೆ ಕೇರಿಗೆ / Muttu bandide kerige

ಮುತ್ತು ಬಂದಿದೆ ಕೇರಿಗೆ
ಜನರೆಲ್ಲ ಕೇಳಿ ಮುತ್ತು ಬಂದಿದೆ ಕೇರಿಗೆ ||ಮುತ್ತು||

ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ
ಸೆರಗಿನಲ್ಲಿ ||ಮುತ್ತು||

ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತು
ಕಲುಷ ಪರ್ವತಕ್ಕಿದು ಕುಲಿಶವಾಗಿಪ್ಪ ಮುತ್ತು ||
ಹಲಧರಾನುಜನೆಂಬ ಪವಿತ್ರ ನಾಮದ ಮುತ್ತು |
ಒಲಿದು ಭಜಿಪರ ಭವ ತರಿದು ಕಾಯುವ ಮುತ್ತು ||ಮುತ್ತು||

ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತು
ಭಂಜಿಸಿದ ಇತರ ಭಯವ ತೋರುವ ಮುತ್ತು ||
ಸಂಜೀವರಾಯರ ಹೃದಯದೊಳಗಿನ ಮುತ್ತು |
ಕಂಜಭವಾದಿಗಳು ಶಿರಸಾವಹಿಸುವ ಮುತ್ತು ||ಮುತ್ತು||

ಜ್ಞಾನವೆಂಬೊ ದಾರದಲ್ಲಿ ಪೋಣಿಸುವ ಮುತ್ತು
ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು ||
ಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತು |
ಶ್ರೀನಿಧಿ ಆದಿಕೇಶವನೆಂಬೋ ಆಣಿ ಮುತ್ತು ||ಮುತ್ತು||

Muttu bandide kerige
Janarella keli muttu bandide kerige ||Muttu||

Bhaktiyullavarella kattikolli
Seraginalli ||Muttu||

Thalathalisuva muttu kamala netrada muttu
Kalusha parvatakkidu kulishavaagippa muttu ||
Haladharaanujanemba pavitra naamada muttu |
Olidu bhajipara bhava taridu kaayuva muttu ||Muttu||

Anjadiddavarige anjike toruva muttu
Bhanjisida itara bhayava toruva muttu ||
Sanjeevarayara hrudayadolagina muttu |
Kanjabhavaadigalu shirasavahisuva muttu ||Muttu||

Jnaanavembo daaradalli ponisuva muttu
Jnaanigala manadalli mereva muttu ||
Aananda Teerthara manadalloppuva muttu |
Sreenidhi Aadikesavanembo aani muttu ||Muttu||

ಬಾರಯ್ಯ ಗೋವಿಂದ ಬಂಧಕವ ಬಿಡಿಸೋ / Barayya Govinda bandhakava bidiso

ಬಾರಯ್ಯ ಗೋವಿಂದ ಬಂಧಕವ ಬಿಡಿಸೋ||2||
ದೇಹವೆಂಬುವ ಬಂಡಿ ಎಳೆದು
ಬಳಲಿದೆನೋ…     ||ಬಾರಯ್ಯ||
ಬಾರಯ್ಯ ಗೋವಿಂದ ಬಂಧಕವ ಬಿಡಿಸೋ…..

ಮಲಮೂತ್ರ  ದುರ್ಮಾಂಸ 
ಕರುಳ ಒಳ ದುರ್ಗಂಧ
ಎಲುಬು ಗುಂಡಿಗೆ ಧ್ರತವು ,ಹೊದಿಕೆ ಚರ್ಮ ||
ಇದರೊಳಗೆ ಸಿಕ್ಕಿದೆನು
ಇನ್ನಾರು ಗತಿ ಎನಗೆ ||
ಬಿಡಿಸಯ್ಯಾ ಭವಬಂಧ
ಎನ್ನೊಡೆಯ ಗೋವಿಂದ ||ಬಾರಯ್ಯ||

ಇನ್ನು ಜನ್ಮವು ಸಾಕು ,ಇದನ್ನು ವರ್ಜಿಸಬೇಕು
ಮನ್ಮಥನ ಠಾಣ್ಯವಿದು , ಮರುಳು ಮಾಡಿ ||
ಅಂತಕನ ಪಟ್ಟನಕ್ಕೆ ಹಾದಿ ನೋಡುತ್ತಲಿದೆ||2||
ದಯವಿಟ್ಟು ಸಲಹೋ ವೈಕುಂಠ ವಿಠ್ಠಲನೆ  ||ಬಾರಯ್ಯ||

ಅತಿಮೂರ್ಖ ನಾನಯ್ಯ ,ಅಜ್ಞಾನ ಬಿಡಿಸಯ್ಯಾ
ನಿಜವಲ್ಲ ಇ ಕಾಯ , ನಂಬಲಾರೆನಯ್ಯ ||
ಭಯಪಟ್ಟು ನಿಮ್ಮಪಾದ
ಭಜಿಸಿದೆನು ನಾನಯ್ಯ||ಭಯ||
ಶ್ರೀ ಚೆಲುವ ರಂಗಯ್ಯ ಸಲಹಬೇಕಯ್ಯ  ||ಬಾರಯ್ಯ||

ಕನಕದಾಸರ ಮನೆಯ
ಕಸ ಗುಡಿಸೋ ಬಡ ದಾಸ
ಪುರಂದರದಾಸರಿಗೆ ಮಣಿ ಮಾಡೋ ದಾಸ ||
ನಿನ್ನ ನಂಬಿದ ದಾಸ
ಎನ್ನ ಬಿಡುವುದು ಮೋಸ ||
ಕೈವಾರದ ಪುರವಾಸ,ಅಮರನಾರಯಣೇಶ ||ಬಾರಯ್ಯ||

Lyrics in English

Baarayya Govinda bandhakava bidiso ||2||
Dehavembuva bandi eLedhu
BaLalideno… ||Baarayya||
Baarayya Govinda bandhakava bidiso…..

Malamoothra durmaamsa
Karula oLaga durgandha
Elubu guNDige dhrutavu, hodike charma ||
Idarolage sikkidenu
Innaaru gati enage ||
Bidisayyaa bhava bandha
Ennodayya Govinda ||Baarayya||

Innu janmavu saaku, idannu varjisabeku
Manmathana thaanyavidu, maruLu maadi ||
Anthakana paTTanakke haadi nooduttalide ||2||
Dayavittu salaho Vaikuntha Vitthalane ||Baarayya||

Athimoorkha naanayya, ajnaana bidisayyaa
Nijavalla ee kaaya, nambalaarenayya ||
Bhayapattu nimma paada
Bhajisidenu naanayya ||Bhaya||
Shri Cheluva Rangayya salahabekayya ||Baarayya||

Kanakadaasara maneya
Kasa gudiso bada daasa
Purandaradaasarige maNi maado daasa ||
Ninna nambida daasa
Enna biduvudu mosa ||
Kaivaarada puravaasa, Amara Narayanesha ||Baarayya||

ಏಕೆ ಚಿಂತಿಸುತಿರುವೆ ಕೋತಿಮನವೆ / Eke Chintisutiruve Kotimanave

ಏಕೆ ಚಿಂತಿಸುತಿರುವೆ ಕೋತಿಮನವೆ |
ಶ್ರೀ ಕೃಷ್ಣರಾಯನನು ಸ್ತುತಿಸಲೊಲ್ಲದಲೆ ||ಪ||

ಹುಟ್ಟಿದಾಗುತ್ಪತ್ತಿಗಾರು ಚಿಂತಿಸಿದವರು |
ಕಟ್ಟಕಡೆಯಲಿ ಲಯಕೆ ಏನು ಚಿಂತೆ ||
ನಟ್ಟನಡುವಿನ ಬದುಕಿಗೇಕೆ ಚಿಂತಿಸುತಿರುವೆ |
ಕಟ್ಟಕಡೆಯಲಿ ಮೂರು ಬಟ್ಟೆ ತಾನಲ್ಲವೆ ||೧||

ನವಿಲಿಂಗೆ ಚಿತ್ರಪತ್ರವನಾರು ಬರೆದವರು |
ಪವಳಜಾತಿಗೆ ಕೆಂಪನಾರಿತ್ತರು ||
ಸವಿಮಾತಿನರಗಿಳಿಗೆ ಹಸಿರಾರು ಬರೆದವರು |
ಇವ ಮಾಡಿದವ ಕೃಷ್ಣ ನಮ್ಮ ಮರೆದಿಹನೆ ||೨||

ಬಸಿರೊಳಗೆ ಇದ್ದಾಗ ಶಿಶುವ ಹೊರೆದವರಾರು |
ವಸುಧೆಯನು ಬಸಿರೊಳಗೆ ಹೆತ್ತರಾರು ||
ವಸುದೇವಸುತ ನಮ್ಮ ಪುರಂದರವಿಠಲನ |
ಪೆಸರ ಬಸಿರೊಳಗಿಟ್ಟು ಸ್ತುತಿಸುತಿರು ಮನವೆ ||೩||

ಕೃತಿಕಾರರು : ಶ್ರೀ ಪುರಂದದಾಸರು

Lyrics in English

Eke Chintisutiruve Kotimanave

Eke chintisutiruve kotimanave |
Shri Krishnarayananu stutisalolladale ||

Huttidagutpattigaru chintisidavaru |
Kattakadeyali layake enu chinte ||
Nattanaduvina badukigeke chintisutiruve |
Kattakadeyali muru batte tanallave ||

Navilinge chitrapatravanaru baredavaru |
Pavalajatige kempanarittaru ||
Savimatinaragilige hasiraru baredavaru |
Iva madidava Krishna namma maredihane ||

Basirolage iddaga shishuva horedavararu |
Vasudheyanu basirolage hettararu ||
Vasudevasuta namma Purandaravithalana |
Pesara basirolagittu stutisutiru manave ||

ಎಂದು ಕಾಂಬೆನೊ ಎನ್ನ ಸಲಹುವ ತಂದೆ / Endu kambeno enna salahuva

ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನಾ|
ಮಂದಹಾಸ ಪ್ರವಿಣನಾ ಇಂದಿರಾ ಭೂರಮಣನಾ||

ದೇವಕಿಯ ಜಠರದಲಿ ಬಂದನ ಆವ ಪಳ್ಳಿಲಿ ನಿಂದನಾ|
ಮಾವ ಕಂಸನ ಕೊಂದನಾ ಕಾವನಯ್ಯ ಮುಕುಂದನಾ||೧||

ಕಢಲ ದಡದೋಳೆಸೆವ ರಂಗನ ಕಡಗೋಲ್ನೆಣನ ಪಿಡಿದನಾ|
ಮೃಡ ಪುರಂದರ ರೊಡೆಯನಾ ಈರಡಿಗಳಲಿ ಶಿರವಿಡುವೆನಾ||೨||

ಪೂರ್ಣಪ್ರಜ್ಞರಿಗೊಲಿದು ದ್ವೊರಕೆ ಮಣ್ಣಿನೊಳಪ್ರಕಟಿಸಿದನಾ|
ಭವಾಣಕೆಪ್ಲವನಾದನಾ ಪ್ರಸನ್ನವೆಂಕಟ ಕೃಷ್ಣನಾ||೩||

Lyrics in English

Endu kambeno enna salahuva tande udupiya janana|
mandahasa pravinana indira buramanana||

Devakiya jatharadali bandana ava pallili nindana|
mava kamsana kondana kavanayya mukundana ||1||

Kadhala dadadoleseva rangana kadagolnenana pididana |
mruda purandara rodeyana iradigalali shiraviduvena ||2||

Purnaprajnarigolidu dvorake manninolaprakatisidana |
Bavanakeplavanadana prasannavenkata krishnana ||3||

ಇವನ ಹಿಡಿದುಕೊಂಡು ಹೊಗೆಲೋ ಜೋಗಿ / Ivana hididukondu hogelo jogi

ಇವನ ಹಿಡಿದುಕೊಂಡು ಹೊಗೆಲೋ ಜೋಗಿ                    ।।ಪ।।

ಇವ ನಮ್ಮ ಮಾತ ಕೇಳದೆ ಪುಂಡನಾದ                       ।।ಅ.ಪ।।

ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ                   ।।೧।।

ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ
ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ
ಬಿಲ್ಲು ಹಿಡಿದು ರಾಕ್ಷಸರನು ಸವರಿದ
ಬಲ್ಲಿದ ಮಾವನ ಶಿರವನ್ನು ತರಿದ                                  ।।೨।।

ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಛಲದಿಂದ
ಭಕ್ತವತ್ಸಲ ಸಿರಿ ಪುರಂದರವಿಠಲ
ಎತ್ತಲಾದರೂ ಕೊಂಡು ಹೋಗೆಲೊ ಜೋಗಿ                    ।।೩।।

Lyrics in English

Ivana hididukondu hogelo jogi ||pa||

Iva namma mata kelade pundanada ||a.pa||

Adutaduta hogi nirolu mulugida
Bedavendare betta bennalli hotta
Dadeya mele ta dharini negahida
Hidiya hodare baya teredu anjisida ||1||

Hullali viprana kanna tivida buddhi
Illemdare kaili kodaliya pidida
Billu hididu rakshasaranu savarida
Ballida mavana Shiravannu tarida ||2||

Battale kudureya hattabedendare
Hattidano iva chaladinda
Baktavatsala siri purandaravithala
Ettaladaru kondu hogelo jogi ||3||


ನ್ಯಾಯವೆ ನಿನಗೆ ಎನಗೆ ಸಿರಿಕೃಷ್ಣ / Nyayave ninage enage sirikrishna

ಕೃತಿಕಾರರು : ಶ್ರೀ ವ್ಯಾಸರಾಯರು

ನ್ಯಾಯವೆ ನಿನಗೆ ಎನಗೆ ಸಿರಿಕೃಷ್ಣ ||ಪ||

ಬಾಯಾಡಬಹುದೆ ಕೈಯೊಳಿತ್ತ ಹಣಗಳ ||ಅ.ಪ||

ಆರು ಅರಿಯದ್ಹಾಂಗೆ ಒಂಭತ್ತು ಕೊಡುವಾಗ |
ತೋರಿಯಾಡಿದೆ ಒಮ್ಮೆ ನಿನ್ನ ಹೆಸರ ||
ಗಾರುಮಾಡದೆ ಬಡ್ಡಿ ತೆತ್ತು ಬರುವೆನೆಂದು |
ಹಾರೈಸಿ ಕೊಡದೆ ಚುಂಗುಡಿಯ ನಿಲಿಸುವರೆ ||೧||

ಸಾಲವ ಬೇಡಿದರೆ ಕೋಪವೇ ಕಮಲಾಕ್ಷ |
ಕಾಲಿಗೆ ಎನ್ನ ಕೊರಳ ಕಟ್ಟಿಕೊಂಬೆ ||
ಆಲಯದವರ ಕೇಳದೆ ನಿನಗೊಳಗಾದೆ |
ಭೋಳೆಯತನದಲ್ಲಿ ನಿನ್ನ ನಂಬಿದೆ ಹರಿ ||೨||

ಅಸಲು ನಿನಗೆ ಸಮರ್ಪಣೆಯಾಯಿತೆಲೊ ದೇವ |
ಮೀಸಲು ಪೊಂಬೆಸರು ನಿರುತ ನಡೆಯಲಿ ||
ಶಶಿಧರ ಬ್ರಹ್ಮಾದಿ ವಂದ್ಯ ಸತ್ಯವೆಂಬ |
ಮೀಸಲುಳುಹಿ ಎನ್ನ ಸಲಹೊ ಶ್ರೀಕೃಷ್ಣ ||೩||

Lyrics in English

Nyayave ninage enage sirikrishna || pa ||

Bayadabahude kaiyolitta hanagala ||a.pa||

Aaru ariyadahnge ombattu koduvaga |
toriyadide omme Ninna hesaru ||
garumadade baddi tettu baruvenendu |
haraisi kodade chungudiya nilisuvare || 1 ||

Salava bedidaru kopave kamalaksha |
kalige Enna korala kattikombe ||
aalayadavara kelade ninagolagade |
bholeyatanadali Ninna nambide Hari || 2 ||

Asalu ninage samarpaneyayitelo deva |
misalu pombesaru niruta nadeyali ||
shashidhara brahmadi vandya satyavemba |
misaluluhi Enna salaho shreekrushna || 3||

*************************************************************

ಉತ್ತಮರ ಸಂಗ ಎನಗಿತ್ತು ಸಲಹೊ / Uttamara sanga enagittu salaho

ಉತ್ತಮರ ಸಂಗ ಎನಗಿತ್ತು ಸಲಹೊ ||ಪ||
ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ||

ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ
ಪರಿಪರಿಯ ಪಾಪಗಳ ಮಾಡಲಾರೆ
ಮರಣಜನನಗಳೆರಡು ಪರಿಹರವ ಮಾಡಯ್ಯ
ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧||

ಏನ ಪೇಳಲಿ ದೇವ ನಾ ಮಾಡಿದ ಕರ್ಮ
ನಾನಾ ವಿಚಿತ್ರವೈ ಶ್ರೀನಿವಾಸ
ಹೀನಜನರೊಳಗಾಟ ಶ್ವಾನಾದಿಗಳ ಕೂಟ
ಜ್ಞಾನವಂತನ ಮಾಡೊ ಜಾನಕೀರಮಣ ||೨||

ನಿನ್ನ ನಂಬಿದ ಮ್ಯಾಲೆ ಭಯವ್ಯಾತಕೆ
ಪನ್ನಗಾಧಿಪಶಯನ ಮನ್ನಿಸಯ್ಯ
ಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದ
ಎನ್ನೊಡೆಯ ರಂಗವಿಠಲ ಎನ್ನ ದೊರೆಯೆ ||೩||

Lyrics in English

Uttamara sanga enagittu salaho || pa ||

chittaja janaka sarvottama shree mukunda || a. Pa ||

Tiru tirugi puttalaare parara baadhisalaare |
pari pariya paapagala maadalaare ||
janana maranagaleradu pariharava maadayya |
karunaa samudra muravairi shreekrushna || 1 ||

Enapelalo deva naamaadida karma |
naanaa vicitravai shreenivaasa ||
heena janarolagaata shwaanaadigala koota |
jnaanavantana maado jaanakiya ramana || 2 ||

Ninna nambida mele innu bhayavekenage |
pannangashayanane mannisayya ||
munna bhakutaranella chennaagi paalisida |
unnata rangaviththala enna doreye || 3 ||

ಎಲೆ ಮನವೇ ಕೇಳು ಕೇಶವನ ನಾಮವ / Ele Manave kelu keshavana namava

ಎಲೆ ಮನವೇ ಕೇಳು ಕೇಶವನ ನಾಮವ ನುಡಿಸು |
ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |
ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |
ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ ||1||

ಎಲೆ ನೇತ್ರಗಳಿರ ಶ್ರೀ ಕೃಷ್ಣಮೂರ್ತಿಯ ನೋಡಿ |
ಎಲೆ ಪಾದಗಳಿರ ಹರಿಯಾತ್ರೆಯನು ಮಾಡಿ ||
ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |
ತುಳಸೀ ಪರಿಮಳವನಾಘ್ರಾಣಿಸನುದಿನವು ||2||

ಎಲೆ ಶಿರವೆ ನೀನಧೋಕ್ಷಜನ ಶ್ರೀ ಚರಣದ |
ಜಲರುಹದೊಳಗಳಿಯುಂಟೆ ಲೋಲಾಡು |
ಎಲೆ ತನುವೆ ನೀನು ಶ್ರೀ ಪುರಂದರವಿಠಲನ |
ಸಲೆ ಭಕುತ ಜನರಂಗ ಸಂಗತಿಯಲಿ ಬಾಳು ||3||

Lyrics in English

Ele manave kelu keshavana namava nudisu |
Ele Manave muravairiyanghrigala bhajisi |
elele karagalira shridharana seveya Madi |
ele karnagalira achyutana kathe keli ||

Ele netragalira Shree krishnamurthiya nodi |
ele padagalira hariyatreyanu Madi |
ele nasikave mukundana charanakarpisida |
tulasi parimalavanaghranisanudinavu ||2 ||

Ele shirava neenadhokshjana Shree charanada |
jalaruhadolagaliyunte loladu |
ele tanuva neenu Shree purandaravittalana |
sale bhakuta janaranga sangatiyali balu || 3 ||