ತೋಳು ತೋಳು ತೋಳು ರಂಗ / Tolu tolu tolu ranga

ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ |ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||

ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ |ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ |ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ |ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||

ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ| ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ |ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ |ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||

ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ |ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ |ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ |ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ ||

ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ |ಅರ್ಜುನ ರಥಕೆ ಸಾರಥ್ಯ ಮಾಡಿದ ತೋಳನ್ನಾಡೈ |ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ |ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||

ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ |ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ |ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ |ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||

Lyrics in English

Tolu tolu tolu ranga tolannadai swami nilavarnada balakrishnane tolannadai ||pa||

Huliyuguraralele magayigala nitta tolannadai svami khalirembanduge gejjeli nalivutta tolannadai ||1||

Neluvige nilukade orala tanditta tolannadai svami chaluva makkala muddu manikave tolannadai ||2||

Putaniyembavalasuvane hirida tolannadai svami mateya pitana anugala maduhida tolannadai ||3||

Matige shishupAlana shira tarida tolannadai svami shri tulasiya priya nityavinodi tolanadai||4||

Dattadiyidutale benneya meluva tolannadai svami kattida karadiya karuvendeleda tolannadai||5||

Battala hala ollendu kadida tolannadai svami battalolunavise naguvadane tolannadai||6||

Sajjana satyake dharmava nadesida tolannadai svamiarjunaradake sarathya madida tolannadai||7||

Lajjegitada draupadi kaida tolannadai svami vajra panjara pandava priya tolannadai||8||

Nakhadinda hiranyakanudara bagida tolannadai svami sukhadindali prahladana kaida tolannadai||9||

Vikhalitagedisida gopa striyara tolannadai svami sukhatirttara pati purandara vittala tolannadai||10||


Youtube link :

2 thoughts on “ತೋಳು ತೋಳು ತೋಳು ರಂಗ / Tolu tolu tolu ranga

Leave a Reply