Home

ಗಣೇಶ ದ್ವಾದಶನಾಮ ಸ್ತೋತ್ರಂ / Ganesha dwadashanama stotram

ಗಣೇಶ ದ್ವಾದಶನಾಮ ಸ್ತೋತ್ರಂ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇಃ ॥ 1 ॥ ಅಭೀಪ್ಸಿತಾರ್ಥ ಸಿಧ್ಯರ್ಥಂ ಪೂಜಿತೋ ಯಃ ಸುರಾಸುರೈಃ ।ಸರ್ವವಿಘ್ನಹರಸ್ ತಸ್ಮೈ ಗಣಾಧಿಪತಯೇ ನಮಃ ॥ 2 ॥ ಗಣಾನಾಮಧಿಪಶ್ಚಂಡೋ ಗಜವಕ್ತ್ರಸ್ತ್ರಿಲೋಚನಃ ।ಪ್ರಸನ್ನೋ ಭವ ಮೇ ನಿತ್ಯಂ ವರದಾತರ್ವಿನಾಯಕ ॥ 3 ॥ ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ ।ಲಂಬೋದರಶ್ಚ ವಿಕಟೋ ವಿಘ್ನನಾಶೋ ವಿನಾಯಕಃ ॥ 4 ॥ ಧೂಮ್ರಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ ।ದ್ವಾದಶೈತಾನಿ ನಾಮಾನಿ ಗಣೇಶಸ್ಯ ತು ಯಃ ಪಠೇತ್ ॥…

ವಿನಾಯಕ ಅಷ್ಟೋತ್ತರ ಶತ ನಾಮಾವಳಿ / Sri Vinayaka ashtottara shata namavali

ವಿನಾಯಕ ಅಷ್ಟೋತ್ತರ ಶತ ನಾಮಾವಳಿ ಓಂ ವಿನಾಯಕಾಯ ನಮಃ ।ಓಂ ವಿಘ್ನರಾಜಾಯ ನಮಃ ।ಓಂ ಗೌರೀಪುತ್ರಾಯ ನಮಃ ।ಓಂ ಗಣೇಶ್ವರಾಯ ನಮಃ ।ಓಂ ಸ್ಕಂದಾಗ್ರಜಾಯ ನಮಃ ।ಓಂ ಅವ್ಯಯಾಯ ನಮಃ ।ಓಂ ಪೂತಾಯ ನಮಃ ।ಓಂ ದಕ್ಷಾಯ ನಮಃ ।ಓಂ ಅಧ್ಯಕ್ಷಾಯ ನಮಃ ।ಓಂ ದ್ವಿಜಪ್ರಿಯಾಯ ನಮಃ । 10 । ಓಂ ಅಗ್ನಿಗರ್ವಚ್ಛಿದೇ ನಮಃ ।ಓಂ ಇಂದ್ರಶ್ರೀಪ್ರದಾಯ ನಮಃ ।ಓಂ ವಾಣೀಪ್ರದಾಯಕಾಯ ನಮಃ ।ಓಂ ಸರ್ವಸಿದ್ಧಿಪ್ರದಾಯ ನಮಃ ।ಓಂ ಶರ್ವತನಯಾಯ ನಮಃ ।ಓಂ ಶರ್ವರೀಪ್ರಿಯಾಯ ನಮಃ…

ಬೆಳಗಾಗಿ ಮೊದಲು ಪ್ರಾರ್ಥಿಸು ಮನವೆ / Belagagi modalu prarthisuve manave

ಬೆಳಗಾಗಿ ಮೊದಲು ಪ್ರಾರ್ಥಿಸು ಮನವೆ ಆದಿ ದೈವ ಗಣೇಶನಗೋಕರ್ಣದಲಿ ಮಹಿಮೆ ತೋರಿದ ಉರಗ ವಿಭೂಷಣ ಗಣೇಶನ ||ಬೆಳಗಾಗಿ|| ಆತ್ಮಲಿಂಗವ ಶಿವನಿಂದ ಪಡೆದು ಬರುತಿರೆ ಲಂಕೇಶ ರಾವಣನುತನ್ನನು ಪೂಜೆಯ ಮಾಡದವನಿಗೆ ಬುಧ್ಧಿಯ ಕಲಿಸಿದ ಗಣೇಶನು  ||ಆತ್ಮಲಿಂಗವ||ವಟುವಿನ ರೂಪದಿ ರಾವಣನೆದುರು ಬಂದನು ಸಂಜೆಗೆ ಗಣೇಶನು||ವಟುವಿನ||ಸಂಧ್ಯಾ ವಂದನೆ ಮುಗಿಸಿ ಬರುವೆನೆಂದು ಲಿಂಗವ ಇತ್ತನು ರಾವಣನು||ಸಂಧ್ಯಾ||   ||ಬೆಳಗಾಗಿ|| ಆತ್ಮಲಿಂಗವು ಅಸುರಗೆ ಸೇರಲು ಹಾನಿ ಎಂದರಿತ ಗಣೇಶನುಭೂಮಿಗೆ ಲಿಂಗವ ಇಡಲು ಒಡನೆ ದುಃಖಿತನಾದನು ರಾವಣನು   ||ಆತ್ಮಲಿಂಗವು||ಅಂದಿನಿಂದ ಅದು ಗೋಕರ್ಣವೆನಿಸಿ ಭೂಕೈಲಾಸವು ಆಗಿಹುದು||ಅಂದಿನಿಂದ||ಗಣಪತಿ ಶಕ್ತಿಯ ಚಿಹ್ನೆ…

ಏನು ಕರುಣಾ ಹೃದಯನೂ ಏಕದಂತನೇ / Enu Karuna hrudayano ekadantane

ಏನು ಕರುಣಾ ಹೃದಯನೂಏಕದಂತನೇಸಾಟಿ ಇಲ್ಲವು ನಿನ್ನ ಪ್ರೀತಿಗೆ ಲಂಬೋದರನೇ    ||ಏನು|| ಪುಟ್ಟ ಇಲಿಯನು ನಿನ್ನ ವಾಹನ ಮಾಡಿಕೊಂಡೆ ಬೆನಕನೇಅದರ ಮೇಲೆ ನಿನ್ನ ಕರುಣೆ ಮಳೆಯ ಕರೆದೆ ಗಣಪನೆ ||ಒಂದು ಹುಲ್ಲು ಗರಿಕೆ ನಿನಗೆ ಅರ್ಪಿಸಿದರೆ ಸಾಕು ||ಒಂದು||ಮಂಜಿನಂತೆ ಕಷ್ಟ ಕರಗಿ ಬಾಳು ಬೆಳಗಲೆ ಬೇಕು ||ಏನು|| ತಂದೆ ತಾಯಲಿ ಮೂರು ಲೋಕವ ಕಂಡ ಪರಮ ಜ್ಞಾನಿಯೇ  ||ತಂದೆ||ಜ್ಞಾನ ಫಲವನು ಪಡೆದ ಬಾಲನೇ ಜ್ಞಾನವಾರಿದಿಯೆ       ||ಜ್ಞಾನ||ಕಡಲೆ ಬೆಲ್ಲವ ಅರ್ಪಿಸಿದರು ತೃಪ್ತಿ ಅದರಲೆ ಪಡುವೆ ನೀ ||ಕಡಲೆ||ಮಂತ್ರ ತಂತ್ರವ ಅರಿಯದಿದ್ದರೂ…

ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ / Shree swarna gowri ashtottara

ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ ‌   ‌      ‌                                ‌    ‌          ‌                                                                    ಓಂ ಶಿವಾಯೈ  ನಮಃ ।ಓಂ ಶ್ರೀಮಹಾವಿದ್ಯಾಯೈ ನಮಃ ।ಓಂ ಶ್ರೀಮನ್ಮಕುಟಮಂಡಿತಾಯೈ  ನಮಃ ।ಓಂ ಕಲ್ಯಾಣ್ಯೈ ನಮಃ ।ಓಂ ಕರುಣಾರಸಸಾಗರಾಯೈ  ನಮಃ ।ಓಂ ಕಮಲಾರಾಧ್ಯಾಯೈ  ನಮಃ ।ಓಂ ಕಲಿಪ್ರಭೃತಿಸಂಸೇವಾಯೈ  ನಮಃ ।ಓಂ ಕಮಲಾಸನಸಂಸ್ತುತಾಯೈ  ನಮಃ ।ಓಂ ಅಂಬಿಕಾಯೈ  ನಮಃ ।ಓಂ ಅನೇಕಸೌಭಾಗ್ಯದಾತ್ರ್ಯೈ  ನಮಃ ।               (೧೦) ಓಂ ಆನಂದವಿಗ್ರಹಾಯೈ  ನಮಃ ।ಓಂ ಈಷಣತ್ರಯನಿರ್ಮುಕ್ತಾಯೈ  ನಮಃ ।ಓಂ ಹೃತ್ಸರೋರುವಾಸಿನ್ಯೈ  ನಮಃ ।ಓಂ ಆದ್ಯಂತರಹಿತಾಯೈ  ನಮಃ…

ಶ್ರೀ ಗೌರೀ ಅಷ್ಟೋತ್ತರ ಶತನಾಮಾವಲಿಃ / Shree gowri ashtottara shatanamavali

ಓಂ ಮಹಾಮನೋನ್ಮಣೀಶಕ್ತ್ಯೈ ನಮಃ ।ಓಂ ಶಿವಶಕ್ತ್ಯೈ ನಮಃ ।ಓಂ ಶಿವಂಕರ್ಯೈ ನಮಃ ।ಓಂ ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಸ್ವರೂಪಿಣ್ಯೈ ನಮಃ ।ಓಂ ಶಾನ್ತ್ಯತೀತ ಕಲಾನನ್ದಾಯೈ ನಮಃ ।ಓಂ ಶಿವಮಾಯಾಯೈ ನಮಃ ।ಓಂ ಶಿವಪ್ರಿಯಾಯೈ ನಮಃ ।ಓಂ ಸರ್ವಜ್ಞಾಯೈ ನಮಃ ।ಓಂ ಸುನ್ದರ್ಯೈ ನಮಃ ।ಓಂ ಸೌಮ್ಯಾಯೈ ನಮಃ । 10 । ಓಂ ಸಚ್ಚಿದಾನನ್ದರೂಪಿಣ್ಯೈ ನಮಃ ।ಓಂ ಪರಾಪರಾಮಯ್ಯೈ ನಮಃ ।ಓಂ ಬಾಲಾಯೈ ನಮಃ ।ಓಂ ತ್ರಿಪುರಾಯೈ ನಮಃ ।ಓಂ ಕುಂಡಲ್ಯೈ ನಮಃ ।ಓಂ ಶಿವಾಯೈ ನಮಃ…

ಎದುರಾರೈ ಗುರುವೆ ನಿಮಗೆ ಸಮನಾರೈ / Edurarai Guruve Nimage Samanarai

ಎದುರಾರೈ ಗುರುವೆ ನಿಮಗೆ ಸಮನಾರೈಮದನ ಗೋಪಾಲನ ಪ್ರಿಯ ಜಯರಾಯ ||ಪ|| ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದವಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋಮಾಯ್ಗಳುಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧|| ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ತ್ವಪ್ರಕಾಶಿಕೆಯೆಂಬಚಟುಲತಾಪದಿಂದ ಖಂಡಿಸಿ ತೆಜೋತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨|| ಅಮಿತ ದ್ವಿಜಾವಳಿ ಕುಮುದಗರಳಿಸಿವಿಮತರ ಮುಖಕಮಲಂಗಳ ಬಾಡಿಸಿಸ್ವಮತರ ಹ್ರತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩|| ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸುಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು ||೪|| ವ್ಯಾಸಸೂತ್ರಗಳೆಂಬ ಮಂದರವನು ವೇದರಾಶಿಯೆಂಬ ವರಾಶಿಯೊಳಿಟ್ಟುಶ್ರೀ…

ಎಲೆ ಮನವೆ ನೀ ತಿಳಿ ಹರಿ ಸರ್ವೋತ್ತಮನೆಂದು / Ele manave nee tili Hari sarvottamanendu

ಎಲೆ ಮನವೆ ನೀ ತಿಳಿ ಹರಿ ಸರ್ವೋತ್ತಮನೆಂದು |ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ||ಪ|| ಇಕ್ಷುದಂಡಗಳಿರಲು ಇಂಧನವ ಮೇಲೇಕೆ |ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |ಪಕ್ಷಿವಾಹನನಿರಲು ಪರದೈವವೇಕೆ ||೧|| ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |ಮುರಹರನ ಪೂಜಿಸದೆ ಮುಂದುಗೆಡಲೇಕೇ ||೨|| ಭಾವಶುದ್ಧಿಗಳಿರಲು ಬಯಲಾಡಂಬರವೇಕೆ |ದೇವತಾ ಸ್ತುತಿಯಿರದ ದೇಹವೇಕೆ ||ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |ದೇವ ಪುರಂದರವಿಠಲನಿರಲು ಭಯವೇಕೆ ||೩|| Lyrics in English Ele manave…

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು / Shri Rangavittala a Shree makutake sharanu

ಇದು ಪ್ರಸಿದ್ಧವಾದ ಶ್ರೀಪಾದರಾಜರ ದೇವನಾಮವಾಗಿದೆ. ‘ರಂಗವಿಠಲ’ ಎಂಬುದು ಅವರ ಅಂಕಿತನಾಮ. ಭಗವಾನ್ ಶ್ರೀಹರಿಯ ದಿವ್ಯ ಸ್ವರೂಪದ ಪ್ರತಿಯೊಂದು ಅಂಗಾಂಗವನ್ನು ವರ್ಣಿಸುತ್ತಾ, ಅವನಿಗೆ ಶರಣಾಗತಿಯನ್ನು ಕೋರುವ ಸುಂದರವಾದ ಭಕ್ತಿಗೀತೆ ಇದಾಗಿದೆ. ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ|| ಶಿರದಲ್ಲೊಪ್ಪುವ ನೀಲಕುಂತಳಕೆ ಶರಣು |ಸಿರಿಸಹೋದರನರ್ಧದವಳಿಗೆ ಶರಣು ||ಅ.ಪ|| ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು |ಸಂಪಿಗೆಯ ಕುಸುಮ ಸಮನಾಸಿಕಕೆ ಶರಣು ||ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು |ಇಂಪುದರ್ಪಣನಿಭ ಕಪೋಲಗಳಿಗೆ ಶರಣು ||೧|| ಕುಂದಕುಟ್ಮಲ ಪೋಲ್ವ ದಂತಪಂಕ್ತಿಗೆ ಶರಣು |ಅಂದವಾಗಿರುವ ಬಿಂಬೋಷ್ಠಕೆ ಶರಣು…

ವಾಸುದೇವ ನಿನ್ನ ಮರ್ಮಕರ್ಮಂಗಳ ದೇಶದೇಶದಲ್ಲಿ / Vasudeva Ninna marmakarmangala

ಈ ಕೀರ್ತನೆಯಲ್ಲಿ ದಾಸರು ಗೋಪಾಲ ಕೃಷ್ಣನ ಬಾಲಲೀಲೆಗಳನ್ನು “ಮರ್ಮಕರ್ಮ” ಎಂದು ಪ್ರೀತಿಯಿಂದ ಪ್ರಶ್ನಿಸುತ್ತಾ, ಕೊನೆಯಲ್ಲಿ ಆತನೇ ದಯಾಳು ರಂಗವಿಠಲ ಎಂದು ಕೊಂಡಾಡುತ್ತಾರೆ. ವಾಸುದೇವ ನಿನ್ನ ಮರ್ಮಕರ್ಮಂಗಳ |ದೇಶದೇಶದಲ್ಲಿ ಪ್ರಕಟಿಸಲೊ ||ಬೇಸರದೆ ಎನ್ನ ಹೃದಯಕಮಲದಲ್ಲಿ |ವಾಸವಾಗಿ ಸುಮ್ಮನಿದ್ದೀಯೊ ||ಪ|| ತರಳತನದಲಿದ್ದು ದುರುಳನಾಗಿ ಬಂದು |ಒರಳಿಗೆ ಕಟ್ಟಿಸಿಕೊಂಡುದನು ||ತುರುವ ಕಾಯಲಿ ಹೋಗಿ ಕಲ್ಲಿಯೋ |ಗರವನುಗೊಲ್ಲರ ಕೂಡೆ ನೀ ಉಂಡುದನು ||ನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯ |ಅರಿಯದಂತೆ ಕದ್ದು ಮೆದ್ದುದನು ||ಕೆರಳಿಸಿದೆಯಾದರೆ ಒದರುವೆ ಎಲೊ ನರ |ಹರಿ ಎನ್ನ ಬಾಯಿಗೆ ಬಂದುದನು…

ಶೂರ್ಪಾಲಿ ನೃಸಿಂಹ ದೇವರು / Shoorpali nrusimha devaru

ಶೂರ್ಪಾಲಿ ನೃಸಿಂಹ ದೇವರುಕಂಜಾಕ್ಷ ಕಾಯಯ್ಯ ಕರುಣಾನಿಧಿಯೆ ಬಲಭಂಜನನನುಜನೆ ನೋಡೆನ್ನ || ಪ || ಅಂಜದೆ ನಾ ನಿನ್ನ ಅಡಿಳಿಗೆರಗುವೆಕುಂಜರವರದನೆ ಕೂಡೆನ್ನ ನೀನೊಲಿದಾಗಲೆ ನಿಖಿಳ ಸಂಪದ ತನ್ನಿಂ-ತಾನೆ ಬಹುದು ತಡವಿಲ್ಲಆ ನಳಿನಭವಾದ್ಯಮರರಿದಕೆ ಸಾಕ್ಷಿಭಾನುಸನ್ನಿಭ ಬಾರೊ ನಲ್ಲ1 ಪುಂಡರೀಕಾಕ್ಷನ ಪೂಜಿಪ ಭಕ್ತರಮಂಡೆಯ[ಹೂವು]ಬಾಡದೆಂದು ಕಂಡೆ ನಾ ರಣದಲ್ಲಿ ಕಲಿಪಾರ್ಥನಿಗೊಲಿದುಬಂಡಿಯ ಬೋವ ನೀನಾದಂದು ವೃಂದಾರಕೇಂದ್ರ ಶ್ರೀ ಹಯವದನ ಮುಕುಂದಮಂದರೋದ್ಧಾರ ಮತ್ತೊಂದರಿಯೆಇಂದಿರೆಯರಸ ಬಾ ಇಂದುವದನ ದೀನ-ಬಂಧುವೆ ಭಕ್ತರ ಸಿರಿಯೆ Meaning in kannada ✨🦁 ಶೂರ್ಪಾಲಿ ನೃಸಿಂಹ ದೇವರು 🦁✨ ಕರುಣಾನಿಧಿಯೇ, ಕಂಜಾಕ್ಷನೇ ನಿನ್ನ…

ಏನೇನ ದಾನವ ಮಾಡಲು ಹರಿಯ / Enena danava madalu hariye

ಏನೇನ ದಾನವ ಮಾಡಲು ಹರಿಯ |ಧ್ಯಾನಕೆ ಸಮವಾದ ದಾನಂಗಳುಂಟೆ ||ಪ|| ದಿನಕೊಂದು ಲಕ್ಷ ಗೋದಾನವ ಮಾಡಲು |ಅನುದಿನ ಉದಕದಾನವ ಮಾಡಲು ||ಮನಶುದ್ಧವಾದ ಭೂದಾನವ ಮಾಡಲು |ವನಜನಾಭನ ಧ್ಯಾನಕೆ ಸಮವುಂಟೆ ||೧|| ಉತ್ತಮವಾದ ವಸ್ತ್ರವ ದಾನಮಾಡಲು |ಮುತ್ತು ಮಾಣಿಕವ ದಾನವ ಮಾಡಲು ||ಅತ್ಯಂತ ವಿದ್ಯಾಪ್ರದಾನವ ಮಾಡಲು |ಚಿತ್ತಜಪಿತನ ಧ್ಯಾನಕೆ ಸಮವುಂಟೆ ||೨|| ಶತಕೋಟಿ ಕನ್ಯಾಪ್ರದಾನವ ಮಾಡಲು |ಶತಶತ ಸುವರ್ಣ ದಾನವ ಮಾಡಲು ||ಮಿತಿಯಿಲ್ಲದೆ ಅನ್ನದಾನವ ಮಾಡಲು |ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ||೩|| ನಾನಾ ತೀರ್ಥದಲಿ ಸ್ನಾನವ ಮಾಡಲು |ಕಾನನದೊಳಗೆ…

ಮುತ್ತು ಬಂದಿದೆ ಕೇರಿಗೆ / Muttu bandide kerige

ಮುತ್ತು ಬಂದಿದೆ ಕೇರಿಗೆ ಜನರೆಲ್ಲ ಕೇಳಿ ಮುತ್ತು ಬಂದಿದೆ ಕೇರಿಗೆ ||ಮುತ್ತು|| ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ||ಮುತ್ತು|| ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತುಕಲುಷ ಪರ್ವತಕ್ಕಿದು ಕುಲಿಶವಾಗಿಪ್ಪ ಮುತ್ತು ||ಹಲಧರಾನುಜನೆಂಬ ಪವಿತ್ರ ನಾಮದ ಮುತ್ತು |ಒಲಿದು ಭಜಿಪರ ಭವ ತರಿದು ಕಾಯುವ ಮುತ್ತು ||ಮುತ್ತು|| ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತುಭಂಜಿಸಿದ ಇತರ ಭಯವ ತೋರುವ ಮುತ್ತು ||ಸಂಜೀವರಾಯರ ಹೃದಯದೊಳಗಿನ ಮುತ್ತು |ಕಂಜಭವಾದಿಗಳು ಶಿರಸಾವಹಿಸುವ ಮುತ್ತು ||ಮುತ್ತು|| ಜ್ಞಾನವೆಂಬೊ ದಾರದಲ್ಲಿ ಪೋಣಿಸುವ ಮುತ್ತುಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು ||ಆನಂದ…

ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರ / Namo namo Shree Raghavendra sadgunasandra

ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರ.      ||ನಮೋ ನಮೋ||ಕಮಲನಾಭನದಾಸ ಕಮಲಾಪ್ತ ಭಾಸ ||ನಮೋ ನಮೋ|| ದೇಶದೇಶಗಳಿಂದ ದೈನ್ಯದಿಂದಲಿ ಬಂದ||೨||ಶೇಷ ಜನರುಗಳನ್ನ ಸಲಿಸುವನೆ ಶ್ರೇಷ್ಠಾನಾ ಸೇರಿದೆನೊ ನಿನ್ನ ನಮಿತಜನರ ಪ್ರಸನ್ನಭಾಸುರಚರಿತ ಭಜಿಸುವೆನು ಅನವರತಾ   ||ನಮೋ ನಮೋ || ಭೇದಾರ್ಥಜಲಜಾರ್ಕ ಭೂರಿಬಲತರತರ್ಕ||೨||ವಾದಿಶೈಲ ಕುಲಿಶ ವರಹಸುತೆವಾಸಬಾಧಿಸುವ ಅಘಜೀರ್ಣ ಮಾಡು ಗುರುವರ ಪೂರ್ಣಬೊಧಮತ ಸಂಭೂತ ಭೂರಿಪ್ರಖ್ಯಾತ    ||ನಮೋ ನಮೋ || ನತಜನಾಶ್ರಯ ಪ್ರೀಯ ನೆರೆನಂಬಿದೆನೊ ಮಾಯಾ   ||ನತಜನ||ಮತಕದಳಿಗಜೇ೦ದ್ರ ವಿಬುಧಾಬ್ಧಿಚಂದ್ರಕ್ರತುಭುಕ್ ಜಗನ್ನಾಥ ವಿಠ್ಠಲನ ನಿಜದೂತ||೨||ಸ್ತುತಿಸಲಾಪೆನೆ ನಿನ್ನ ಯತಿಶಿರೋರನ್ನ  || ನಮೋ ನಮೋ ||…

ಬಲ್ಲವಗಿಲ್ಲಿದೆ ವೈಕುಂಠಾ ವೈಕುಂಠಾ ವೈಕುಂಠಾ / Ballavagillide vaikunta vaikunta

ಬಲ್ಲವಗಿಲ್ಲಿದೆ ವೈಕುಂಠಾ ವೈಕುಂಠಾ ವೈಕುಂಠಾ   ||ಬಲ್ಲವಗಿಲ್ಲಿ||ಬಲ್ಲವಗೆಲ್ಲು ಶ್ರೀಹರಿ ಪೂಜೆಹರಿ ಪೂಜೆ              ||ಬಲ್ಲವಗಿಲ್ಲಿದೆ|| ಶರೀರ ಹರಿಯ ಪಟ್ಟಣ ಹೃದಯ ಸರೋಜ ಆತನ ಅರಮನೆ ||ಶರೀರ||ಸೂರ್ಯಾದಿ ದೇವರು ಚಕ್ಷುರಾಧಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದುಇಪ್ಪರೆಂದೂ           ||ಬಲ್ಲವಗಿಲ್ಲಿದೆ|| ಹರಿಚರಾಚರ  ಸರ್ವಜಗಧ್ಭರಿತ ಮುರಹರನಿದ್ದುದೆ ವೈಕುಂಠ ||ಹರಿ||ನರಹರಿಯಲಿ ನವ ವಿಧ ಭಕುತಿಯೆಸರಿಸಮವೆಂದಿಗೆ ಇಲ್ಲವೆಂದುಇಲ್ಲವೆಂದೂ           ||ಬಲ್ಲವಗಿಲ್ಲಿದೆ|| ಜಾಗರಾಧಿಗಳಲ್ಲಿ ವಿಶ್ವಾಧಿ ಮೂರುತಿ ಯೋಗಿ ಶ್ರೀಕೃಷ್ಣನೆ ವಿಷಯಂಗಳ ||ಭೋಗಿಪನೆಂಬ ಯೋಗಿಗೆ ವಿಹಿತಭೋಗಂಗಳೆಲ್ಲ ಯಾಗಂಗಳೆಂದುಯಾಗಂಗಳೆಂದೂ  ||ಬಲ್ಲವಗಿಲ್ಲಿದೆ|| Lyrics in English Ballavagillide VaikunthaVaikuntha Vaikuntha ||Ballavagilli||Ballavage ellu Srihari poojeHari pooje ||Ballavagillide|| Shareera…

ಬಾರಯ್ಯ ಗೋವಿಂದ ಬಂಧಕವ ಬಿಡಿಸೋ / Barayya Govinda bandhakava bidiso

ಬಾರಯ್ಯ ಗೋವಿಂದ ಬಂಧಕವ ಬಿಡಿಸೋ||2||ದೇಹವೆಂಬುವ ಬಂಡಿ ಎಳೆದು ಬಳಲಿದೆನೋ…     ||ಬಾರಯ್ಯ||ಬಾರಯ್ಯ ಗೋವಿಂದ ಬಂಧಕವ ಬಿಡಿಸೋ….. ಮಲಮೂತ್ರ  ದುರ್ಮಾಂಸ  ಕರುಳ ಒಳ ದುರ್ಗಂಧಎಲುಬು ಗುಂಡಿಗೆ ಧ್ರತವು ,ಹೊದಿಕೆ ಚರ್ಮ ||ಇದರೊಳಗೆ ಸಿಕ್ಕಿದೆನುಇನ್ನಾರು ಗತಿ ಎನಗೆ ||ಬಿಡಿಸಯ್ಯಾ ಭವಬಂಧ ಎನ್ನೊಡೆಯ ಗೋವಿಂದ ||ಬಾರಯ್ಯ|| ಇನ್ನು ಜನ್ಮವು ಸಾಕು ,ಇದನ್ನು ವರ್ಜಿಸಬೇಕುಮನ್ಮಥನ ಠಾಣ್ಯವಿದು , ಮರುಳು ಮಾಡಿ ||ಅಂತಕನ ಪಟ್ಟನಕ್ಕೆ ಹಾದಿ ನೋಡುತ್ತಲಿದೆ||2||ದಯವಿಟ್ಟು ಸಲಹೋ ವೈಕುಂಠ ವಿಠ್ಠಲನೆ  ||ಬಾರಯ್ಯ|| ಅತಿಮೂರ್ಖ ನಾನಯ್ಯ ,ಅಜ್ಞಾನ ಬಿಡಿಸಯ್ಯಾನಿಜವಲ್ಲ ಇ ಕಾಯ , ನಂಬಲಾರೆನಯ್ಯ…

ಉಗಾಭೋಗ / ಕಮಲಜನು ನಿನ್ನ ಪಾದಕಮಲವನು

ಕಮಲಜನು ನಿನ್ನ ಪಾದಕಮಲವನು ತೊಳೆದಿಹನುಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು ಯಮಜ ಮಾಡುವ ರಾಜಸೂಯಾಗದಲ್ಲಿ ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ ? ಮಮಪ್ರಾಣಾ ಹಿ ಪಾಂಡವಾಃ ಎಂಬ ಬಿರುದಿಗಾಗಿ ನಮೋ ನಮೋ ಎಂಬೆ ಪುರಂದರವಿಠಲ ಸಾರಾಂಶ : ಕಮಲಜನು ನಿನ್ನ ಪಾದಕಮಲವನು ತೊಳೆದಿಹನು→ ಕಮಲದಿಂದ ಹುಟ್ಟಿದ ಬ್ರಹ್ಮನು ನಿನ್ನ ಪಾದಕಮಲಗಳನ್ನು ತೊಳೆದಿದ್ದಾನೆ. ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು→ ಉಮಾಪತಿ (ಪಾರ್ವತಿಯ ಪತಿ ಶಿವನು) ನಿನ್ನ ಪಾದತೀರ್ಥವನ್ನು ತನ್ನ ಮೇಲೆ ಧರಿಸಿದ್ದಾನೆ. ಯಮಜ ಮಾಡುವ ರಾಜಸೂಯಾಗದಲ್ಲಿ ಮಮಕರಿಸಿದೆ ಎಂತೊ…

ಶಾರದಾಂಬಿಕೆ ನಿತ್ಯ ಶಾರದಾ ಕೊಡು / Sharadambike Nitya sharadambe kodu

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ |ಸಾರುವೆ ನಾ ನಿನ್ನ ||ಪ|| ಪುಂಡರೀಕ ನಯನೆ ಪುಂಡರೀಕನ ರಾಣಿಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ |ಪುಂಡರೀಕನಾಥನುತೆ ಪುಂಡರೀಕವೆ ನಮಗೆ || 1 || ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ |ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ |ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ || 2 || ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ |ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿ ಕೌಂಶಿಕದವನ ಮಾಡು ||…

ಉಗಾಭೋಗ / ನಾರಾಯಣನ ನಾಮಕೆ ಇತರ ನಾಮಗಳೆಣೆಯುಂಟೆ / ugabhoga / narayanana namake tiara namagaleneyunte

ಉಗಾಭೋಗ ನಾರಾಯಣನ ನಾಮಕೆ ಇತರ ನಾಮಗಳೆಣೆಯುಂಟೆ ತಾರತಮ್ಯದಿ ದೇವತೆಗಳೊಳಗೆ ಹಿರಿತನಕೆ ಸಮವುಂಟೆ ಧಾರುಣಿಯೊಳಗನ್ನದಾನಕೆ ಸಮಾನ ಉಂಟೆ ಧೀರ ವಿಜಯವಿಠಲನ್ನ ದ್ವಾದಶಿ ತಿಥಿಗೆ ಸಮವುಂಟೆ॥ Lyrics in English Narayanana namake tiara namagaleneyuntetaratamyadi devategalolage hiritanake samavuntedharuniyolagannadanake damana untedheera vijayavittalana dwadashi tithige samanunte ||

ಉಗಾಭೋಗ / ಶೇಷನಾಗಿ ಶ್ರೀಶನ ಶಯನಕೆ ದಿವ್ಯ / Ugabhoga – sheshanagi shreeshane shayanake

ಉಗಾಭೋಗ ಶೇಷನಾಗಿ ಶ್ರೀಶನ ಶಯನಕೆ ದಿವ್ಯಮಂಚವಾದೆಶೇಷನಾಗಿ ಅಶೇಷಜೀವರಿಗೆ ಅಭಿಮಾನಿಯಾದೆ ಶೇಷನಾಗಿ ಈ ಸರಸಿಜಜಾಂಡಕ್ಕೆ ಆಧಾರನಾದೆ ಶೇಷನಾಗಿ ರುದ್ರನ ಸರ್ವಾಂಗಕ್ಕೆ ಭೂಷಣನಾದೆಶೇಷನಾಗಿ ಕೃಷ್ಣಗೆ ಹಿರಿಯನಾಗಿ ಮನ್ನಿಸಿಕೊಂಡೆಶೇಷನಾಗಿ ಸಾಸಿರ ಜಿಹ್ವೆ ಯಲಿ ಹರಿಯ ಕೊಂಡಾಡಿದೆವಾಸವಾದ್ಯರ ನಿನ್ನುದರದಲ್ಲಿ ತಾಳಿದೆ ಪ್ರಳಯಕಾಲದಲ್ಲಿ ವಿಶೇಷಮಹಿಮ *ರಘುಪತಿವಿಠಲನ್ನ* ಪ್ರ. ವೇಶಿಸುವೆ ಬೊಮ್ಮನನುಸರಿಸಿ || Lyrics in English Sheshanagi shreeshana shayanake divyamannchavade sheshanagi asheshajeevarige abhimaniyade sheshanagi e sarasijajandakke adharanade sheshanagi rudrana sarvangakke bhushananade sheshanagi krishnage hiriyanagi mannisikonde sheshanagi…

ಶ್ರೀ ಜಗನ್ನಾಥದಾಸಾರ್ಯ ವಿರಚಿತ ಶ್ರೀ ಲಕ್ಷ್ಮೀ ನರಸಿಂಹ ಸುಳಾದಿ

ಶ್ರೀ ಜಗನ್ನಾಥದಾಸಾರ್ಯ ವಿರಚಿತ ಶ್ರೀ ಲಕ್ಷ್ಮೀ ನರಸಿಂಹ ಸುಳಾದಿ. ಧ್ರುವತಾಳ ದುರಿತವನ ಕುಠಾರಿ ದುರ್ಜನ ಕುಲವೈರಿಶರಣಾಗತ ವಜ್ರ ಪಂಜರ ಕುಂಜರ-ವರ ಸಂರಕ್ಷಕ ಜನ್ಮ ಮರಣರಹಿತ ಮಹಿತಪರಮ ಕರುಣಾಸಿಂಧು ಭಕುತ ಬಂಧುಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣಹರಿಯೆ ಕ್ಷರಾಕ್ಷರ ಪುರುಷೋತ್ತಮಉರುಗಾಯ ವೈಕುಂಠವರ ಮಂದಿರ ಚಂದಿರತರಣಿಕೋಟಿ ಸಂಕಾಶ ವಿಮಲಕೇಶಧುರದೊಳಗರ್ಜುನನ ತುರಗ ನಡೆಸಿದ ಸಂ-ಗರ ಭಯಂಕರ ಲೋಕೈಕ ವೀರನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ ಮೊರೆಹೊಕ್ಕ ದಾಸಗೆ ಬಂದ ಭಯವಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ ಸರುವರಂತರ್ಯಾಮಿ ಲೋಕೈಕಸ್ವಾಮಿಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆಅರಿದೆನೊ ನೀನೆಮ್ಮ ಪೊರೆವುದೀಗಸರುವ…

ಇದ ಕೊಳ್ಳಿ ಇದಕೊಳ್ಳಿ ಭವರೋಗಕೌಷಧವನು / Ida kolli idakolli bhavarogakoushadhavanu

ಇದ ಕೊಳ್ಳಿ ಇದಕೊಳ್ಳಿ ಭವರೋಗಕೌಷಧವನು ||ಪ|| ಇಂದ್ರಿಯವಜೈಸುವುದೆ ಇದಕೆ ಇಚ್ಛಾಪಥ್ಯ ||ಅ|| ವಾಸುದೇವನ ನಾಮ ವಾತವಿಧ್ವಂಸಿನಿಜನಾರ್ದನನ ನಾಮ ಜ್ವರಾಂಕುಶಮಾಧವನ ನಾಮವೇ ಮನಗಂಡ ಮಂಡೂರಮಂಗಳಾತ್ಮಕ ನಾಮ ಮಾಲ್ಯವಸಂತ || ಚಿಂತಾಯಕನ ನಾಮ ತ್ರೈಲೋಕ್ಯ ಚಿಂತಾಮಣಿಭುಜಗಶಯನನ ನಾಮ ಭೂಪತಿಮಾತ್ರೆರಾಜೀವಲೋಚನನ ನಾಮ ರಸಕರ್ಪೂರಸೀತಾಪತಿಯ ನಾಮ ದಿವ್ಯ ಸಿಂಧೂರ || ನಾರಾಯಣನ ನಾಮ ದಿವ್ಯ ತಾಮ್ರಭಸ್ಮಲೋಕದೊಡೆಯನ ನಾಮ ಲೋಹಭಸ್ಮವೈಕುಂಠಪತಿಯೆಂಬ ವಂಗಭಸ್ಮವ ಕೊಳ್ಳಿಶ್ರೀನಿವಾಸನ ನಾಮ ಸ್ವರ್ಣಭಸ್ಮ || ರಾಮಚಂದ್ರನೆಂಬ ಪೂರ್ಣಚಂದ್ರೋದಯವುಕೃಷ್ಣಕೃಷ್ಣನೆಂಬ ಶ್ಲೇಷ್ಮಕುಠಾರವಾರಿಜಾಂಬಕನೆಂಬ ವಸಂತಕುಸುಮಾಕರಕಮಲನಾಭನೆಂಬ ಕರ್ಣಚೂರ್ಣವಿದಕೊ || ಇದನು ಕೊಂಡವರ ಪೆಸರನು ಪೇಳುವೆನು ಕೇಳಿಮುದದಿ ಪ್ರಹ್ಲಾದ…

ದೇಶಾಧಿಪತಿ ನರಹರಿಯೆ ನಿನ್ನಯ ಪಾದ ದಾಸರ ದಾಸನೆಂದೆನಿಸ / Deshadhipati narahariya ninnaya pada

ಕೃತಿಕಾರರು : ಶ್ರೀ ಕನಕದಾಸರು ದೇಶಾಧಿಪತಿ ನರಹರಿಯೆ ನಿನ್ನಯ ಪಾದ |ದಾಸರ ದಾಸನೆಂದೆನಿಸಬೇಕೆನ್ನ ||ಪ|| ರಜತಮೋಗುಣ ಪ್ರವರ್ತಕ ಮೂಲಾಂತರದಿಂ |ಯಜಮಾನತನದಹಂಕಾರವನು ಒಲ್ಲೆ ||ಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜ |ರಜ ಭಜಕರ ಭಜಕನೆಂದೆನಿಸೆನ್ನ ||೧|| ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ |ತ್ತುರಿ ತಿಲಕವನಿಡುವುದ ನಾನೊಲ್ಲೆ ||ಸಿರಿ ಊರ್ಧ್ವಪುಂಡ್ರ ದ್ವಾದಶನಾಮವಿಡುವವರ |ಪರಿಚಾರಕರ ಪರಿಚಾರಕನೆನಿಸೆನ್ನ ||೨|| ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನು |ಆದರದ ಅಮೃತಾನ್ನ ಉಣುವುದನೊಲ್ಲೆ |ಬೋಧೆಯನು ಹೇಳುವ ಕೇಳುವ ಹರಿದಾಸರ |ಪಾದತೀರ್ಥ ಪ್ರಸಾದವನುಣಿಸೆನ್ನ ||೩|| ಕಾಲ ಕರ್ಮದೊಳುಪೇಕ್ಷೆಯ…

ಏಕೆ ಚಿಂತಿಸುತಿರುವೆ ಕೋತಿಮನವೆ / Eke Chintisutiruve Kotimanave

ಏಕೆ ಚಿಂತಿಸುತಿರುವೆ ಕೋತಿಮನವೆ |ಶ್ರೀ ಕೃಷ್ಣರಾಯನನು ಸ್ತುತಿಸಲೊಲ್ಲದಲೆ ||ಪ|| ಹುಟ್ಟಿದಾಗುತ್ಪತ್ತಿಗಾರು ಚಿಂತಿಸಿದವರು |ಕಟ್ಟಕಡೆಯಲಿ ಲಯಕೆ ಏನು ಚಿಂತೆ ||ನಟ್ಟನಡುವಿನ ಬದುಕಿಗೇಕೆ ಚಿಂತಿಸುತಿರುವೆ |ಕಟ್ಟಕಡೆಯಲಿ ಮೂರು ಬಟ್ಟೆ ತಾನಲ್ಲವೆ ||೧|| ನವಿಲಿಂಗೆ ಚಿತ್ರಪತ್ರವನಾರು ಬರೆದವರು |ಪವಳಜಾತಿಗೆ ಕೆಂಪನಾರಿತ್ತರು ||ಸವಿಮಾತಿನರಗಿಳಿಗೆ ಹಸಿರಾರು ಬರೆದವರು |ಇವ ಮಾಡಿದವ ಕೃಷ್ಣ ನಮ್ಮ ಮರೆದಿಹನೆ ||೨|| ಬಸಿರೊಳಗೆ ಇದ್ದಾಗ ಶಿಶುವ ಹೊರೆದವರಾರು |ವಸುಧೆಯನು ಬಸಿರೊಳಗೆ ಹೆತ್ತರಾರು ||ವಸುದೇವಸುತ ನಮ್ಮ ಪುರಂದರವಿಠಲನ |ಪೆಸರ ಬಸಿರೊಳಗಿಟ್ಟು ಸ್ತುತಿಸುತಿರು ಮನವೆ ||೩|| ಕೃತಿಕಾರರು : ಶ್ರೀ ಪುರಂದದಾಸರು Lyrics…

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ ||ಪ|| ಆವ ಕಚ್ಚಪ ರೂಪದಿಂದ ಲಂಡೋದಕವಓವಿ ಧರಿಸಿದ ಶೇಷಮೂರುತಿಯನುಆವವನ ಬಳಿವಿಡಿದು ಹರಿಯ ಸುರರೆಯ್ದುವರುಆ ವಾಯು ನಮ್ಮ ಕುಲಗುರುರಾಯನು ||1|| ಆವವನು ದೇಹದೊಳಗಿರಲು ಹರಿ ನೆಲಸಿಹನುಆವವನು ತೊಲಗೆ ಹರಿ ತಾ ತೊಲಗುವಆವವನು ದೇಹದ ಒಳ ಹೊರಗೆ ನಿಯಾಮಕನುಆ ವಾಯು ನಮ್ಮ ಕುಲಗುರುರಾಯನು ||2|| ಕರುಣಾಭಿಮಾನಿ ಸುರರು ದೇಹವ ಬಿಡಲುಕುರುಡ ಕಿವುಡ ಮೂಕನೆಂದೆನಿಸುವಪರಮ ಮುಖ್ಯಪ್ರಾಣ ತೊಲಗಲಾ ದೇಹವನುಅರಿತು ಪೆಣವೆಂದು ಪೇಳುವರು ಬುಧಜನ ||3|| ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆಪರತರನೆನಿಸಿ…

ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ / sheshagiri namma shreenivasàna kande

ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ |ಕಂಡೆ ಶ್ರೀನಿವಾಸನ ॥ಪ॥ ಶ್ರೀನಿವಾಸನ ಕಂಡೆ ಶ್ರೀನಿವಾಸನ ಜ್ಞಾನಗುರುಮಧ್ವ ಮುನಿ ಮಾನುಷ ಹಂಸನ ಕಂಡೆ || ಅ. ಪ || ಗರುಡ ಶೇಷ ಗಿರಿಜಾ ರಮಣ ಸುರರೆಲ್ಲ,ನಿರುತ ಸೇವಿಸುವ ಪಾದಸರಸಿಜ ಯುಗಳವ ಕಂಡೆ ||೧|| ಮಾನಿನಿ ರಮಾದೇವಿ ವರ್ಣಿಸುತಲಿ,ದಾನವಾಂತಕನ ಪಾದಜಾನು ಜಂಘೆಗಳನು ಕಂಡೆ||೨|| ಪರಮಾತ್ಮನ್ನ ಗುಣಗಳನ್ನುವರ್ಣಿಸುತಲೀ,ಸಿರಿದೇವಿ ಇರುವ ವಕ್ಷ ಸ್ಥಳವನ್ನು ಕಣ್ಣಾರೆ ಕಂಡೆ||೩|| ವಾಸವಾಗರ್ಜುನನ ರಥದ ಮುಂದೆ ನಿಲ್ಲುವನ,ಏಸು ಮಮತೆಯಿಂದ ಕುಣಿವಹರಿಯ ಹಸ್ತಂಗಳ ಕಂಡೆ || ೪ || ಮಂದಗಮನ ಗೋಪಿ…

ಇದುವೇ ಪಂಡರಾಪುರ ವಿಠ್ಠಲ ಇದುವೇ / Iduve pandarapura vittala iduve

ಇದುವೇ ಪಂಡರಾಪುರ | ವಿಠ್ಠಲ ಇದುವೇ ಪಂಡರಾಪುರ|| ಇದ ನಾ ಅರಿಯದೆ ಪೊದೆ ಮುಕುತಿಯ ಧಾಮ || ಪಾಪವ ತೊಳೆವ ಪಾವನ ಚಂದ್ರಭಾಗ | ತಾಪವ ಹರಿಸಿ ಶಾಂತಿಯ ನೀವ | ಈ ವರ ಕ್ಷೇತ್ರ ಭೂವೈಕುಂಠ | ಭವ ಭಯ ಪರಿಹಾರ ವಿಠಲ|| ಪುಣ್ಯದ ದಿವಸ ಏಕಾದಶಿಯಿಂದು | ಹಾಡುತ ನಲಿಯುತ ಭಕುತರು ಬಂದು|| ನೋಡುವ ಭಾಗ್ಯ ಎನಗೆ ಇಂದು| ಕರುಣಿಸಿ ವರಗೈವೇ ವಿಠಲ || ಸಂತಾಳಜನಿಯು ಯೋಗಮಿಳನು| ಶ್ರೀ ತುಕರಾಮನು ಜ್ಞಾನೇಶ್ವರನು || ಪುಂಡಲೀಕನು…

ತಾಯಿ ಶಾರದೆ ಲೋಕಪೂಜಿತೆ / Taayi sharade loka poojite

ತಾಯಿ ಶಾರದೆ ಲೋಕ ಪೂಜಿತೆಜ್ಞಾನದಾತೆ ನಮೋಖಸ್ತುತೆ ||ಪ್ರೇಮದಿಂದಲಿ ಸಲಹು ಮಾತೆನೀಡು ಸನ್ಮತಿ ಸೌಖ್ಯದಾತೆ || ತಾಯಿ ಶಾರದೆ || ಅಂಧಕಾರವ ಓಡಿಸುಜ್ಞಾನಜ್ಯೋತಿಯ ಬೆಳಗಿಸು |ಹೃದಯ ಮಂದಿರದಲ್ಲಿ ನೆಲೆಸುಚಿಂತೆಯ ಅಳಿಸು ಶಾಂತಿಯ ಉಳಿಸು || ನಿನ್ನ ಮಡಿಲಿನ ಮಕ್ಕಳಮ್ಮನಿನ್ನ ನಂಬಿದ ಕಂದರಮ್ಮ |ನಿನ್ನ ಕರುಣೆಯ ಬೆಳಕಲೆಮ್ಮಬಾಳನು ಬೆಳಗಮ್ಮ, ನಮ್ಮ ಕೋರಿಕೆ ಆಲಿಸಮ್ಮ || ಒಳ್ಳೆ ಮಾತುಗಳಾಡಿಸುಒಳ್ಳೆ ಕೆಲಸವ ಮಾಡಿಸು |ಒಳ್ಳೆ ದಾರಿಯಲೆಮ್ಮನಡೆಸುವಿದ್ಯೆಯ ಕಲಿಸು, ಆಸೆ ಪೂರೈಸು || Lyrics in English Taayi Sharade Loka Poojite Taayi…

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ / Enthu Ninna pooje Madi mecchisuveno

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ||ಪ|| ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ||ಅ.ಪ|| ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ |ಪಾವನೆಯಾದ ಗಂಗೆ ಪಾದೋದ್ಭವೆ ||ನವಕುಸುಮವ ಸಮರ್ಪಿಸುವೆನೆಂದರೆ ಉದು |ಭವಿಸಿಹನು ಅಜ ನಿನ್ನ ಪೊಕ್ಕುಳ ಹೂವಿನಲಿ ||೧|| ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ |ದ್ವೀಪಂಗಳೆಲ್ಲವನು ಬೆಳೆಗುತಿಹವೋ ||ಆಪೋಶನವನಾದರೀವೆನೆಂತೆಂಬೆನೆ |ಆಪೋಶನವಾಯ್ತು ಏಳು ಅಂಬುಧಿಯು ||೨|| ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆ |ರಾಣಿವಾಸವು ಸಿರಿದೇವಿ ನಿನಗೆ ||ಮಾಣದೆ ಮನದೊಳು ನಿನ್ನ ನಾಮಸ್ಮರಣೆ |ಧ್ಯಾನವನು ದಯೆ ಮಾಡೋ ಪುರಂದರವಿಠಲ ||೩|| ಕೃತಿಕಾರರು…

ಶ್ರೀ ಸೂರ್ಯ ಕವಚ / ಸೂರ್ಯ ಸ್ತೋತ್ರ / ಆದಿತ್ಯ ಹೃದಯಂ

ಶ್ರೀ ಸೂರ್ಯ ಕವಚ – ಶ್ರೀಯಾಜ್ಞವಲ್ಕ್ಯ ಮುನಿ ವಿರಚಿತಂ ಈ ಶ್ಲೋಕವನ್ನು ಪ್ರತಿದಿನ ಪಾರಾಯಣ ಮಾಡಬೇಕು. ಭಾನುವಾರ  ಪಾರಾಯಣ ಅತ್ಯಂತ ವಿಶೇಷ   ಶ್ರೀ ಹರಯೇನಮಃ  ಶ್ರೀ ಯಾಜ್ಞವಲ್ಕ್ಯ  ಉವಾಚ  ಶೃಣುಷ್ವ ಮುನಿ ಶಾರ್ದೂಲ ಸೂರ್ಯಸ್ಯ ಕವಚಂ ಶುಭಂ ಶರೀರಾರೋಗ್ಯದಿಂ ದಿವ್ಯಂ ಸರ್ವ ಸೌಭಾಗ್ಯ ದಾಯಕಮ್ ॥1॥ ದೇದೀಪ್ಯಮಾನಮುಕುಟಂ ಸ್ಫೂರನ್ಮಕರಕುಂಡಲಂ ಧ್ಯಾತ್ವಾ ಸಹಸ್ರ ಕಿರಣಂ ಸ್ತೋತ್ರಮೇತದುದೀರಯೇತ್ ॥2॥ ಶಿರೋ ಮೇ ಭಾಸ್ಕರಃ ಪಾತು ಲಲಾಟಂಮೇ ಮಿತದ್ಯುತಿಃ ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಶ್ವರಃ ॥3॥ ಘ್ರಾಣಂ ಘರ್ಮಘೃಣಿಃ…

ಬಂಧು ತ್ರಿಜಗಕೆ ಶ್ರೀ ಹರಿಯಲ್ಲದೆ ಮಿಕ್ಕ / Bandhu trijagake Shree hariyallade mikka

ಬಂಧು ತ್ರಿಜಗಕೆ ಶ್ರೀ ಹರಿಯಲ್ಲದೆ ಮಿಕ್ಕಬಂಧುಗಳದಾರಿಗಾರಿದ್ದರೇನು                                             ।।ಪ।। ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ ಆನೆಗಳೇನ ಮಾಡುತಿರ್ದವಡವಿಯಲ್ಲಿನಗಜೆಯಾಳ್ದನ ಬ್ರಹ್ಮೇತಿ ಬಂದು ಕಡಲಾಗಿ ರುದ್ರಾದಿಗಳೇನ ಮಾಡುತಿರ್ದರಾ ಶೈಲದೊಳಗೆ                              ।।೧।। ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲುಮಂಡಲಪತಿ ಏನ ಮಾಡುತಿರ್ದನುಮಿಂಡಿ ಪೆಣ್ಣನು ಸಭೆಯಲಿ ಸೀರೆ ಸುಲಿಯಲುಗಂಡರೈವರು ನೋಡಿ ಏನು ಮಾಡುತಿರ್ದರಯ್ಯ                    ।।೨।। ಮೃಗ ಚಕ್ರವರ್ತಿ ಬಹುವರನಾಗಿ ಪೋಗುತ್ತಿರೆಮಿಗೆ ಸತಿಸುತರೇನ ಮಾಡುತಿರ್ದರುಮೃಗ ಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆಮಿಗು ಬಂಧುಗಳದಾರಿಗಾರಿದ್ದರೇನು                                    ।।೩।। Lyrics in English Bandhu trijagake Sri hariyallade mikkabandhugaladarigariddarenu || pa…

ಎಷ್ಟು ಬಾರಿ  ಮೊರೆ ಇಡಲಿ ಶಂಭೋ / Eshtu bari more idali shambha shankara

ಎಷ್ಟು ಬಾರಿ  ಮೊರೆ ಇಡಲಿ ಶಂಭೋ ಶಂಕರಾಕಷ್ಟಗಳ ನೀಗಿಸು ಬಾ ಹೇ ಮಹೇಶ್ವರ  ||ಎಷ್ಟು || ಅಜ್ಞಾನದ ಅಂಧಕಾರ ಮನಕೆ ಸುತ್ತಿದೆಮುಂದೆ  ದಾರಿ ಕಾಣದಿದೆ ಭಯವು ಮುತ್ತಿದೆಪಾಪಗಳ ಹೊರೆಯನ್ನು ಹೊರಲಾರದೇಭವಬಂಧದ ಜಾಲದಿಂದ ಬರಲಾರದೆತತ್ತರಿಸಿದೆ ನೊಂದು ಬೆಂದು ನಿಂದಿರುವೆನುನಿನ್ನೊಲವಿನ ಸುದೆ ಹರಿಸಿ ಕಾಪಾಡು ಬಂದೂ      ||ಎಷ್ಟು || ಪಶ್ಚಾತ್ತಾಪ ಎಂಬ ಬೆಂಕಿ ಸುಡುತಿದೆ ನನ್ನಾಮಲಿನ ಕಳೆದು ಆಗಲಿ ಮನ ಪುಟವಿಟ್ಟ ಚಿನ್ನಕಂಬನಿಯಲಿ ಪಾದ ತೊಳೆವ ಆಸೆ ಆಗಿದೆನಿಂತಿರುವೆ ಮೌನದಲ್ಲಿ ಮಾತು ಬಾರದೆಕರುಣಿಸಿ ಪ್ರಭು ನೀ ಮನ ನೆಮ್ಮದಿ ತಾರಾಾಕೈ…

ಎಂದು ಕಾಂಬೆನೊ ಎನ್ನ ಸಲಹುವ ತಂದೆ / Endu kambeno enna salahuva

ಎಂದು ಕಾಂಬೆನೊ ಎನ್ನ ಸಲಹುವ ತಂದೆ ಉಡುಪಿಯ ಜಾಣನಾ|ಮಂದಹಾಸ ಪ್ರವಿಣನಾ ಇಂದಿರಾ ಭೂರಮಣನಾ|| ದೇವಕಿಯ ಜಠರದಲಿ ಬಂದನ ಆವ ಪಳ್ಳಿಲಿ ನಿಂದನಾ|ಮಾವ ಕಂಸನ ಕೊಂದನಾ ಕಾವನಯ್ಯ ಮುಕುಂದನಾ||೧|| ಕಢಲ ದಡದೋಳೆಸೆವ ರಂಗನ ಕಡಗೋಲ್ನೆಣನ ಪಿಡಿದನಾ|ಮೃಡ ಪುರಂದರ ರೊಡೆಯನಾ ಈರಡಿಗಳಲಿ ಶಿರವಿಡುವೆನಾ||೨|| ಪೂರ್ಣಪ್ರಜ್ಞರಿಗೊಲಿದು ದ್ವೊರಕೆ ಮಣ್ಣಿನೊಳಪ್ರಕಟಿಸಿದನಾ| ಭವಾಣಕೆಪ್ಲವನಾದನಾ ಪ್ರಸನ್ನವೆಂಕಟ ಕೃಷ್ಣನಾ||೩|| Lyrics in English Endu kambeno enna salahuva tande udupiya janana|mandahasa pravinana indira buramanana|| Devakiya jatharadali bandana ava pallili nindana|mava kamsana…

ಪಾವನ ಚರಿತ ಸಂಜೀವನ ಗಿರಿಧರ / Pavana charita sanjeevana

ಪಾವನ ಚರಿತ ಸಂಜೀವನ ಗಿರಿಧರಪಾವಮಾಣಿ ಕರುಣಾವಲೋಕನದಿನೀ ಒಲಿಯುತಲಿ ಸದಾವಕಾಲ ತವತಾವರೆ ಪದಯುಗ ಸೇವೆಯ‌ ಕರುಣಿಸು ದೇವಾ ಹನುಮ ಶೆಟ್ಟಿರಾಯ ಜಗಜಟ್ಟಿ ||2||ಕಾವೋದು ಭಾವಿ ಪರಮೇಷ್ಠಿ ||ದೇವಾ|| ವಾನರ ಕುಲನಾಯಕ ಜಾನಕಿ ಶೋಕಕಾನನ ತ್ರಣ ಪಾವಕಾ…ಆ…ಹೀನ ಕೌರವ ನಾಶಕಸನ್ಮೌನಿ ತಿಲಕ ,ಆನಂದ ತೀರ್ಥನಾಮಕಾ…ಕ್ಷೋಣಿಯೊಳಗೆ ಎಣೆ ಕಾಣೆ ,ನಿನಗೆ ಎನ್ನ ಮಾನದೆ ಅನುದಿನ ಪಾಣಿ ಪಿಡಿದು ಪೊರೆಸ್ತಾನು ಜನಕ ಗೀರ್ವಾಣ ವಿನುತ ಜಗತ್ ಪ್ರಾಣ ರಮಣ ಕಲ್ಯಾಣಮೂರುತಿ  ||ದೇವಾ|| ಮರುತ ನಂದನ ಹನುಮ ಪುರಹರ ರೋಮಪರಮ ಪುರುಷ ಶ್ರೀಭೀಮಾಕರುಣಾಸಾಗರ ಜಿತ…

ಸಂಜೀವನ ಗಿರಿಧರ ಪಾಹಿಮಾಂ / Sanjivana giridhara pahimam

ಸಂಜೀವನ ಗಿರಿಧರ ಪಾಹಿಮಾಂ || ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶವಕ್ರಾನನ ಮೂರುತಿ ಪಾಹಿಮಾಂ || ಮಂತ್ರ ಮೂಲ ಸ್ಥಿತ ಕಂಕುಪಿತನ ದೂತಯಂತ್ರೋದ್ಧಾರಕ ಪಾಹಿಮಾಂ || ಮೋಹನ ವಿಠ್ಠಲ ದಾಸ ಪೋಷಕ ಮಾಯಾಮೋಹಕ ಭಂಜಕ ಪಾಹಿಮಾಂ || Lyrics in EnglishSanjivana giridhara pahimam || pa || Chakratirthanivasa sakradyamaradhisa |Vakrasana muruti pahimam || 1 || Mamtra mulasthita kantu pitana duta |Yamtroddharaka pahimam || 2 || Mohanaviththaladasa poshaka |Maya mohaka…

ಸುಂದರ ಗುರು ರಾಘವೇಂದ್ರರೆಂತೆಂಬೋ ಕರ್ಮಂದಿಗಳರಸನೆ / Sundara guru raghavendrarentembo

ಸುಂದರ ಗುರು ರಾಘವೇಂದ್ರರೆಂತೆಂಬೋ ಕರ್ಮಂದಿಗಳರಸನೆ ವಂದಿಸುವೆ ಬಂಧ ಭಕುತರಘವೃಂದ ಕಳೆವ ಗುಣಸಾಂದ್ರ ಸನ್ನುತ ಮಹಿಮರೆಂದು ನಾ ನಂಬಿದೆ   ||ಸುಂದರ|| ಪರಮ ಕರುಣೀ ನಿಜ ಚರಣ ಭಜಕರನ್ನುದ್ಧರಿಸುತಲನುದಿನ ಪೊರೆವನೆಂದೂ ಕರವ ಮುಗಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ದೈನ್ಯದಿ ಬಾಯಿ ತೆರೆಯುವೆಕರ ಪಿಡಿಯೆಂದು ಕರೆಯುವೆ ಧರೆಯೊಳಗೆ ನಿಮ್ಮಯ ಸರಿ ದೊರೆಗಳ ಕಾಣೆ ಮದ್ಗುರುವೆ ಎನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇ ವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಸಿ ಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿ ಹರುಷದಲಿ ನಿರ್ಜರರ ತರುವೆ…

ಇವನ ಹಿಡಿದುಕೊಂಡು ಹೊಗೆಲೋ ಜೋಗಿ / Ivana hididukondu hogelo jogi

ಇವನ ಹಿಡಿದುಕೊಂಡು ಹೊಗೆಲೋ ಜೋಗಿ                    ।।ಪ।। ಇವ ನಮ್ಮ ಮಾತ ಕೇಳದೆ ಪುಂಡನಾದ                       ।।ಅ.ಪ।। ಆಡುತಾಡುತ ಹೋಗಿ ನೀರೊಳು ಮುಳುಗಿದಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತದಾಡೆಯ ಮೇಲೆ ತಾ ಧಾರಿಣಿ ನೆಗಹಿದಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ                   ।।೧।। ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದಬಿಲ್ಲು ಹಿಡಿದು ರಾಕ್ಷಸರನು ಸವರಿದಬಲ್ಲಿದ ಮಾವನ ಶಿರವನ್ನು ತರಿದ                                  ।।೨।। ಬತ್ತಲೆ ಕುದುರೆಯ ಹತ್ತಬೇಡೆಂದರೆಹತ್ತಿದನೋ ಇವ ಛಲದಿಂದಭಕ್ತವತ್ಸಲ ಸಿರಿ ಪುರಂದರವಿಠಲಎತ್ತಲಾದರೂ ಕೊಂಡು ಹೋಗೆಲೊ ಜೋಗಿ                    ।।೩।। Lyrics in…

ಈ ತನುವು ನಿನ್ನಾ ಗುಡಿ‌ ಪರಶಿವನೆ / Ee tanuvu Ninna gudi parashivane

ಈ ತನುವು ನಿನ್ನಾ ಗುಡಿ‌ಪರಶಿವನೆ ಈ ಮನವು ನಿನ್ನಾ ನೆಲೆ                       ||ಈ ತನುವು|| ನನ್ನುಸಿರ ಕಣಕಣಗಳುಶಿವ ನಿನ್ನ ನಾಮವನೆ ಕಣವರಿಸಿದೆಜಯ ಜಯತು ಜಗಧೀಶ್ವರ ಪಾಹಿಮಾಂಜಯ ಜಯತು ಗಂಗಾಧರ ||ಈ ತನುವು|| ನೀ ಸೂತ್ರಧಾರಿ ನಾ ಪಾತ್ರಧಾರಿನಿನ್ನಿಚ್ಛೆ ನಾ ಅರಿಯೆನುನನ್ನಾತ್ಮ ಜ್ಯೋತಿ ಶಿವ ನೀನೆ ಎಂದುನಿನ್ನನ್ನೆ ನಂಬಿರುವೆನುಹೆತ್ತವಳ ಮನಸ್ಸು ಕಲ್ಲಾಗಿ ಹೋಯಿತೆಶಂಕರಿಯೆ ಹೇಳು ಇದು ನ್ಯಾಯವೆಸಿರಿತನವು ಬೇಡ ದೊರೆತನವು ಬೇಡಸದ್ಗತಿಯು ನನಗಾಗಲಿನನ್ನಾತ್ಮ ಶಿವಲೀಲೆಯನು ಹಾಡಲಿಜಯ ಜಯತು ಜಗಧೀಶ್ವರ ಪಾಹಿಮಾಂಜಯ ಜಯತು ಗಂಗಾಧರ ಶಿವನಿತ್ತ ಜೀವ ಶಿವನಿಗರ್ಪಿಸಿದಧನ್ಯತೆಯು ನನಗಾಗಲಿನನ್ನ ತನುಮನವು…

ನೋಡಿದೆ ಗುರುಗಳ ನೋಡಿದೆ / Nodide gurugala nodide

ನೋಡಿದೆ ಗುರುಗಳ ನೋಡಿದೆ ||ಪ|| ನೋಡಿದೆನು ಗುರುಗಳ ಪಾದಾಬ್ಜವಪಾಡಿದೆನು ಸನ್ಮಹಿಮೆಗಳ ನಾಬೇಡಿದೆನು ಮನದಣಿಯೆ ವರಗಳಈಡು ಇಲ್ಲದೆ ಕೊಡುವ ಪ್ರಭುಗಳ ||ಪ.ಆ|| ಪಂಚಕೃಷ್ಣಾರಣ್ಯ ಕ್ಷೇತ್ರ ಪಿನಾಕಿನಿಯ ತೀರದಲ್ಲಿ ನಿಂತುಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು||ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ||ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ ||೧|| ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ||ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ||ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುವ ಯತಿಮೌಳಿ ರತುನರ ||೨|| ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವಪ್ರೇಮದಲಿ ಬೀರುತ್ತ…

ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ / Olideyatakamma lakumi vasudevage

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ |ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! || ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನುರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು |ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನುನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ || ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನುಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ |ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರುಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ || ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯುಪರುಷರೂಪ ವಾಚ್ಯ ಶಬ್ದ ಅಮಿತ…

ಬಂದ್ಯಾ ವಿಠ್ಠಲ ಬಡವನಲ್ಲಿ ವ್ರಂದಾವನದಲ್ಲಿ / Bandya vittala vrundavanadalli

ಬಂದ್ಯಾ ವಿಠ್ಠಲ ಬಡವನಲ್ಲಿ||2||ವ್ರಂದಾವನದಲ್ಲಿ ಗೋವ್ರಂದಗಳ ಕಾಯ್ದವನೆ  || ಬಂದ್ಯಾ|| ಕೊರಳಲಿ ಸರಿಗೆ ಸರಪಳಿ, ಪಚ್ಚೆ ಪದಕವುಪರಿಪರಿಯ ಹಾರ ಶ್ರೀ ತುಳಸಿಮಾಲೆ || ಕೊರಳಲಿ ||ಸಿರಿಗಂಧ ಲೇಪ ಶ್ರೀವತ್ಸವುರ ಕಿರಿಡೊಳ್ಳು ||2||ವರಕಟಿಗೆ ಘಂಟೆ ಪರಿಪರಿಯಧಾಮವ ಸುತ್ತಿ ||ಬಂದ್ಯಾ|| ಸುಳಿಗುರುಳು ಮೇಲೆ ,ಅರಳೆಲೆಯು ಕಿರೀಟಎಲೆತಳಿರು ಚೂತ ,ಮಳ್ಳಿಗೆಯು ,ಧೂರ್ವೆ  ||ಸುಳಿಗುರುಳು||ತಳತಲಿಪ ಮುಖನಾಸ ನಯನ ಹಣೆಯಲಿ ತಿಲಕ       ||ತಳತಲಿಪ||ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ  ||ಬಂದ್ಯಾ|| ಮುಂಗೈ ಕಡಗ ಸರಪಳಿ ತೋಳ ಬಾಪುರಿಶ್ರಂಗಾರವಾದ ಗದೆ ,ಶಂಖ ,ಚಕ್ರ   ||ಮುಂಗೈ||ಅಂಗೈಯ ಪದುಮ,ಅಂಗುಲಿ ವೇಣು ಮೀಟುತ  …

ಇಂಥಾ ಗುರುಗಳ ಕಾಣೆನಾ ಭೂತಳದೊಳು / Intha gurugaLa kanenayya bhutaladolu

ಇಂಥಾ ಗುರುಗಳ ಕಾಣೆನಾ…ಭೂತಳದೊಳುಇಂಥಾ ಯತಿಗಳ ಕಾಣೆನಾ…  ||ಇಂಥಾ|| ಇಂಥ ಗುರುಗಳ ಕಾಣೆ ಮಂತ್ರ ಮಂದಿರದಲ್ಲಿನಿಂತು ಭಜಕರಿಗೆ  ಚಿಂತೆ ಕಳೆವ ಕರುಣಿ   ||ಇಂಥಾ|| ದೇವಸ್ವಭಾವನೀತನು ಸತತ ಪವನದೇವನಾವೇಶಯುಕ್ತನೂ  ||ದೇವ||ಆವ ಸಂಶಯವ್ಯಾಕೆ ದೇವಾಧಿದೇವ ನರಮೃಗದೇವನೀತನ ಭಕ್ತಿಗೆ ಧಾವಿಸಿ ಬಂದ ಸ್ತಂಭದಿಭಾವ ಭಕ್ತಿಯಲಿ ಸೇವಿಪರಿಗೆ ಭವ ನೋವು ಕಳೆದು ಸುರ ಗೋವಿನ ತೆರ ವರ ವೀವನು ಕರುಣದಿ ಕಾವನು ಪರಮ ಪಾವನ ಚರಿತನು ಕೋವಿದರೊಡೆಯನು                                  ||ಇಂಥಾ|| ವರಹಜ ತಟದಲ್ಲಿರುವ ಭಕ್ತರು ಕೂಗಿಕರೆದಲ್ಲಿಗೋಡಿ ಬರುವ   ||ವರಹಜ||ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯಪರಿಮಳ…

ಪಾಲಿಸೆ ವರ ಮಾಲೆಯ ಭ್ರಾಮರಿ ಚರಣ / Palise vara maleya bhramarige charana

ಪಾಲಿಸೆ ವರ ಮಾಲೆಯ ಭ್ರಾಮರಿ | ಚರಣ ಪಲ್ಲವ ಕುಸುಮವವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆವರ ಪ್ರಸಾದದ ಮಾಲೆಯ ||ಪಾಲಿಸೆ|| ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ|| ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆವರ ಪ್ರಸಾದದ ಮಾಲೆಯ||ಪಾಲಿಸೆ||…

ಕ್ಷೀರಸಾಗರದಲಿ ಜನಿಸಿ ಬಂದಂತ ವರಮಹಲಕ್ಷ್ಮಿ / Ksheerasagaradali janisi bandantha varamahalakshmi

ಕ್ಷೀರಸಾಗರದಲಿ ಜನಿಸಿಬಂದಂತವರಮಹಲಕ್ಷ್ಮಿ ಕರುಣವ ಮಾಡಮ್ಮನಿನ್ನ ಕರುಣೆಯ ತೋರಮ್ಮ ||ಪ|| ಸರ್ವದೇವತೆಗಳ ತ್ವರದಲಿ ನೋಡುತಾಹರಿಸರ್ವೋತ್ತಮನೆಂದು ತಿಳಿದು ನೀಕರವೀರಮಾಲೆಯ ಹಾಕಿದೆಯಮ್ಮ ||ಅ.ಪ.|| ಜನಕರಾಯನ ಕುವರಿ ನಿನ್ನನು ಅನುದಿನ ‌ನೆನೆವನು ಅನುಗ್ರಹಮಾಡಮ್ಮಪಿನಾಕಿಧನುವ ಮುರಿದು ಹಾಕಿದಶ್ರೀರಾಮಚಂದ್ರಗೆ ವರಮಾಲೆ ಹಾಕಿದಜಾನಕಿ ನೀನಮ್ಮ ||೧|| ಅಂದು ರುಕ್ಮಿಯು ಶಿಶುಪಾಲನ ನಿಲ್ಲಿಸಿಮಾಲೆಯ ಹಾಕೆನಲುಹಿಂಡುದೈವದ ಗಂಡ ಪುಂಡರೀಕಾಕ್ಷನೆವರನೆನುತಲಿ ಮಂದಾರಮಾಲೆಯ ಹಾಕಿದ ರುಕ್ಮಿಣಿ ||೨|| ಭೂವೈಕುಂಠದ ಶ್ರೀನಿವಾಸನ ಕೂಡಿಶ್ರಾವಣಮಾಸದ ಭಾರ್ಗವ ದಿನದಲ್ಲಿಶ್ರೀವಿಠಲನ ಸಹಿತದಿ ತವಕದಿ ಬಾರಮ್ಮಸೇವೆಯ ಮಾಡುವ ಅವಕಾಶವ ನೀಡಮ್ಮ||೩|| Lyrics in English Ksheera sagaradalli janisi bandana…

ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲ / Ramanamavembo namava nenedare bhayavilla

ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲ ಮನಕೆಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಾಗಕೆ          ||ರಾಮ||ಶ್ರೀಮನ್ ನಾರಾಯಣ ಜಗಕೆ ||೨ ||  ||ರಾಮ|| ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ ಬೆಟ್ಟವ ಬೆನ್ನಲಿ ಪೊತ್ತ ರಾಮ ಕೂರ್ಮಾವತಾರಕ್ಕೆ      ||ರಾಮ || ಭೂಮಿಯ ಪೊತ್ತು ನೀರೊಳು ಮುಳುಗಿದವರಾಹವತಾರಕ್ಕೆ ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದನ ಸಲಹುದಕೆ  || ರಾಮ|| ಭೂಮಿಯ ದಾನವ ಬೇಡಿದ ರಾಮ ವಾಮನವತಾರಕ್ಕೆ ತಾಯಿಯ ಶಿರವನು ಕಡಿದನು ರಾಮ ಭಾರ್ಗವತಾರಕ್ಕೆ       || ರಾಮ || ವನವಾಸವ ಮಾಡಿದ…

ಜಗದೋಧ್ಧಾರಾ ಬಾಬಾ ಜಗದೋದ್ಧಾರಾ / Jagadoddhara baba jagadoddhara

ಬಾ ಬಾ ಭಕುತರ ಹೃದಯ ಮಂದಿರಬಾ ಬಾ ಜಗದೋದ್ಧಾರ ||pa|| ಬಾ ಬಾ ವೇಂಕಟಾಚಲ ವಿಹಾರಬಾ ಬಾನೇಕಾವತಾರ ಧೀರ-ಶೂರ||a.pa|| ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷಲಕ್ಷ್ಮಣನಗ್ರಜ ಲಕ್ಷ್ಮೀವಕ್ಷಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶಮೋಕ್ಷದಾಯಕ ಪಾಂಡವ ಪಕ್ಷಅಕ್ಷಯವಂತ ಸೂಕ್ಷ್ಮಾಂಬರ ಧರಾ-ಧ್ಯಕ್ಷ ಪ್ರತ್ಯಕ್ಷದ ದೈವಅಕ್ಷತನಾರೇರ ತಕ್ಷಣದಲಿ ತಂದಅಕ್ಷರ ಪುರುಷ ಗೋವಿಂದ ||1|| ಜಾಂಬೂನಾದಾಂಬರ ಸಾಂಬಜನಕ-ನೀಲಾಂಬುದ ವರ್ಣಸುಪೂರ್ಣಸಾಂಬವಿನುತ ಸುಗುಣಾಂಬುಧಿ ನಾನಾ ವಿಡಂಬನ ತೋರಿದ ಮಹಿಮಕಾಂಬುವೆ ನಿನ್ನ ಚರಣಾಂಬುಜ ಮನದೊಳುಜಾಂಬುವಂತನ ಪರಿಪಾಲಾ ವಿ-ಶ್ವಂಭರಂಬರಗ್ಗಣಿಯ ಪಡೆದ ವೃ-ತ್ತುಂಬರೇಶಾಂಬುಧಿ ಶಾಯಿ ||2|| ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿಕಾಳೆ ಹೆಗ್ಗಾಳೆ ತಮ್ಮಟಿ ನಿ-ಸ್ಸಾಳೆ…

ಉಗಾಭೋಗ / ಹತ್ತು ಗೋದಾನಕೆ ಸಮ ಹರಿಗೆ ವೃಷಭ / Ugabhoga / hattu godanake sama harige

ಉಗಾಭೋಗ ಹತ್ತು ಗೋದಾನಕೆ ಸಮ, ಹರಿಗೆ ವೃಷಭ ದಾನಹತ್ತು ವೃಷಭಕೆ ಸಮ, ಹಾರುವ ಕುದುರೆಕಾಣಿರೊಹತ್ತು ಕುದುರೆಗೆ ಸಮ, ಹಸ್ತಿದಾನಕಾಣಿರೊ ಹತ್ತು ಹಸ್ತಿಗೆ ಸಮ, ಒಂದು ಕ್ರತುಹತ್ತು ಕ್ರತುವಿಗೆ ಸಮ, ಹರಿಭಕ್ತರಿಗೆ ಕನ್ಯಾದಾನಕಾಣಿರೊಹತ್ತು ಕನ್ಯಾದಾನಕೆ ಸಮ, ಹಸಿದವಗೆ ಅನ್ನದಾನಕಾಣಿರೊಹತ್ತು ಅನ್ನದಾನಕೆ ಸಮ, ಉದಕದಾನಕಾಣಿರೊ ನಿತ್ಯ ಪುರಂದರವಿಠಲನ ನೆನೆವ ಪುಣ್ಯಕೆಣೆಯಿಲ್ಲ ಎಣೆಯಿಲ್ಲಕಾಣಿರೊ || Lyrics in English Hattu godanake sama, hariye vrushabha danahattu vrushabhakke sama, haruva kudure kanirohattu kudurege sama, hastidana kanirohattu hastige…

ವರಕಂಬವನ್ನು ಒಡೆಯಲು ನರಹರಿಯು / Varakamvannu odeyalu narahariyu

ವರಕಂಬವನ್ನು ಒಡೆಯಲು । ನರಹರಿಯು ।ಉಗ್ರಕೋಪವನ್ನು ತಾಳಿ ॥ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದಪಿಡಿದು ಒತ್ತಿ ।ಕರುಳ ಬಗೆದು ಮಾಲೆ ಹಾಕಿಕಂದ ಭಕ್ತನಪ್ಪಿಕೊಂಡ ॥ ಅಂತರಿಕ್ಷದಲ್ಲಿ ಅಮರರು ।ನೋಡಿ ಆಗ ।ಪುಷ್ಪವೃಷ್ಟಿಯನ್ನೆ ಕರೆಯಲು ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು ।ಅಮರಪತಿಯರೆಲ್ಲ ನೋಡೆ ಅಂಜಬೇಡೆಂದಭಯ ಕೊಟ್ಟ || ಲಕ್ಷ್ಮೀನಾರಸಿಂಹನ ಚರಿತೆಯ । ಉದಯಕಾಲ ।ಪಠಿಸುವಂತ ನರರಿಗೆಲ್ಲ ॥ಪುತ್ರಸಂತಾನಂಗಳಿತ್ತು ಮತ್ತು ಬೇಡದ್ಹಾಂಗೆ ಕೊಟ್ಟು ।ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರೇಯ || Lyrics in English Varakambavannu odeyalu |narahariya…

ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ / Dhareyolage helavanakatteyali nelasi

ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ |ಪರಿಪೂರ್ಣಕಳೆಯಿಂದ ಭಕುತರನು ಒಲಿಸಿ ||ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ |ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ ||೧|| ಹತ್ತು ಅವತಾರದಲಿ ಇದಿರಾಂತವರ ಗೆಲಿದು |ಮತ್ತೆ ಪದವಿಯ ಕೊಟ್ಟುರಕ್ಷಿಸಿ ಕಾಯ್ದೆ ||ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ |ತೆತ್ತೀಸಕೋಟಿ ದೇವರ್ಕಳನು ರಕ್ಷಿಸಿದೆ ||೨|| ಉದಯ ಮದ್ಯಾಹ್ನ ಸಂಜೆಯಲಿ ಪೂಜೆಯನು |ವಿಧವರಿತು ಸೇವೆಯನು ಅನುಸರಿಸಿಕೊಂಬೆ ||ಸಹೃದಯ ಭಕ್ತರನು ಕಾಯ್ದು ಪಾಲಿಸುವೆ |ಮುದದಿಂದ ಹೆಳವನಕಟ್ಟೆಯಲಿ ನೆಲಸಿರುವೆ ||೩|| ಕೃತಿಕಾರರು : ಹೆಳವನಕಟ್ಟೆ ಗಿರಿಯಮ್ಮ Lyrics in English Dhareyolage helavanakatteyali nelasi…

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ / Nimma Bhagya doddado namma bhagya

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ||pa|| ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ||a.pa|| ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟುರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ||1|| ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟುಅಡವಿ ತುಳಸಿಮಾಲೆಗಿನ್ನು ಅರ ಅಂಜಿಕಿಲ್ಲವಯ್ಯ||2|| ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟುಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯ||3|| ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟುಹರಿನಾಮಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯ||4|| ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನುನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು||5||  Nimma bagya doddado namma bagya doddado||pa|| Sammatinda navu nivu sati madi noduva||a.pa|| Hema honnu hanagalige herala bayagaluntuRamanama dravyakinnu yara Bayavillavayya||1|| Kadaga kanthamalegalige kallara anjikeyuntuAdavi tulasimaleginnu ara anjikillavayya||2|| Vyapara udyogakinnu vyakulada bayavuntuGopalada vruttiginnu godave yaradillavayya||3|| Saraku bella tuppa dhanya saveditemba cinteyuntuHarinamamrutake innu yava cinteyillavayya||4|| Nimma bagya lakshmidevi namma bagya…

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ / Nindu Darshana needo aravinda madhyadali

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿಕಂದರ್ಪಜನಕ ದೇವ || ಪ || ನಂದಕಂದನೆ ನಿನ್ನ ಮಂದಮತಿ ನಾನೆಂತುವಂದಿಸಿ ಸ್ತುತಿಪೆನಯ್ಯ | ಜೀಯ || ಅ.ಪ. || ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆಉತ್ತಮ ಪಥವ ತೋರೋನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದಭೃತ್ಯಸಂಗದಲಾಡಿಸೊ | ಸತತ || 1 || ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದವಿಶ್ವೇಶ ದೇಹದೊಳಗೆವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿವಿಶ್ವಮಯ ಜೀವಕೀವೆ | ಕಾವೆ || 2 || ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀಮತ್ತೆಲ್ಲ ಕಾರ್ಯ ಮಾಳ್ಪೆಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿವ್ಯಾಪ್ತನಾಗಿರುವೆ ಜಗದಿ | ಮುದದಿ…

ನ್ಯಾಯವೆ ನಿನಗೆ ಎನಗೆ ಸಿರಿಕೃಷ್ಣ / Nyayave ninage enage sirikrishna

ಕೃತಿಕಾರರು : ಶ್ರೀ ವ್ಯಾಸರಾಯರು ನ್ಯಾಯವೆ ನಿನಗೆ ಎನಗೆ ಸಿರಿಕೃಷ್ಣ ||ಪ|| ಬಾಯಾಡಬಹುದೆ ಕೈಯೊಳಿತ್ತ ಹಣಗಳ ||ಅ.ಪ|| ಆರು ಅರಿಯದ್ಹಾಂಗೆ ಒಂಭತ್ತು ಕೊಡುವಾಗ |ತೋರಿಯಾಡಿದೆ ಒಮ್ಮೆ ನಿನ್ನ ಹೆಸರ ||ಗಾರುಮಾಡದೆ ಬಡ್ಡಿ ತೆತ್ತು ಬರುವೆನೆಂದು |ಹಾರೈಸಿ ಕೊಡದೆ ಚುಂಗುಡಿಯ ನಿಲಿಸುವರೆ ||೧|| ಸಾಲವ ಬೇಡಿದರೆ ಕೋಪವೇ ಕಮಲಾಕ್ಷ |ಕಾಲಿಗೆ ಎನ್ನ ಕೊರಳ ಕಟ್ಟಿಕೊಂಬೆ ||ಆಲಯದವರ ಕೇಳದೆ ನಿನಗೊಳಗಾದೆ |ಭೋಳೆಯತನದಲ್ಲಿ ನಿನ್ನ ನಂಬಿದೆ ಹರಿ ||೨|| ಅಸಲು ನಿನಗೆ ಸಮರ್ಪಣೆಯಾಯಿತೆಲೊ ದೇವ |ಮೀಸಲು ಪೊಂಬೆಸರು ನಿರುತ ನಡೆಯಲಿ ||ಶಶಿಧರ…

ಉತ್ತಮರ ಸಂಗ ಎನಗಿತ್ತು ಸಲಹೊ / Uttamara sanga enagittu salaho

ಉತ್ತಮರ ಸಂಗ ಎನಗಿತ್ತು ಸಲಹೊ ||ಪ||ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ|| ತಿರುಗಿತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆಪರಿಪರಿಯ ಪಾಪಗಳ ಮಾಡಲಾರೆಮರಣಜನನಗಳೆರಡು ಪರಿಹರವ ಮಾಡಯ್ಯಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧|| ಏನ ಪೇಳಲಿ ದೇವ ನಾ ಮಾಡಿದ ಕರ್ಮನಾನಾ ವಿಚಿತ್ರವೈ ಶ್ರೀನಿವಾಸಹೀನಜನರೊಳಗಾಟ ಶ್ವಾನಾದಿಗಳ ಕೂಟಜ್ಞಾನವಂತನ ಮಾಡೊ ಜಾನಕೀರಮಣ ||೨|| ನಿನ್ನ ನಂಬಿದ ಮ್ಯಾಲೆ ಭಯವ್ಯಾತಕೆಪನ್ನಗಾಧಿಪಶಯನ ಮನ್ನಿಸಯ್ಯಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದಎನ್ನೊಡೆಯ ರಂಗವಿಠಲ ಎನ್ನ ದೊರೆಯೆ ||೩|| Lyrics in English Uttamara sanga enagittu salaho || pa || chittaja…