ಅಂತಕನ ದೂತರಿಗೆ ಕಿಂಚಿತ್ತು /Antakana dutarige

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ||

ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸ ಬೇಡ
ಅವನ ಕೊಂದಿವನ ಕೊಂದರ್ಥವನು ಗಳಿಸುವರೆ
ಜವನ ದೂತರು ಬರುವ ಹೊತ್ತ ನೀನರಿಯೆ ||

ಮೊನ್ನೆ ಮದುವೆಯಾದೆನೈ ಕರೆವುದೊಂದೆರಡೆಮ್ಮೆ
ನಿನ್ನೆ ಕೊಂಡೆನು ಕ್ಷೇತ್ರ ಫಲವು ಬಹುದು
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು
ಬೆನ್ನ ಬಿಡುವಳೆ ಮೃತ್ಯು ವ್ಯರ್ಥ ಜೀವಾತ್ಮ ||

ಹೊಸ ಮನೆಯ ಕಟ್ಟಿದೆನು ಗೃಹ ಶಾಂತಿ ಮನೆಯೊಳಗೆ
ಬಸಿರಿ ಹೆಂಡತಿ ಮಗನ ಮದುವೆ ನಾಳೆ
ಹಸನಾಗಿ ಇದೆ ಬದುಕು ಸಾಯಲಾರೆನು ಎನಲು
ಕುಸುರಿದರಿಯದೆ ಬಿಡರು ಯಮನವರು ಆಗ ||

ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡತಲೆಯಲ್ಲಿ ನಗುತಿರ್ಪುದರಿಯೆ ||

ಅಟ್ಟಡಿಗೆಯುಣಲಿಲ್ಲ ಇಷ್ಟ ದರುಶನವಿಲ್ಲ
ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ
ಕಟ್ಲೆ ತುಂಬಿದ ಮೇಲೆ ಕ್ಷಣಮಾತ್ರ ಇರಲಿಲ್ಲ
ಅಷ್ಟರೊಳು ಪುರಂದರ ವಿಠಲನೆನು ಮನವೆ ||

Lyrics in English

Antakana dutarige kinchittu dayavilla chinteyanu bittu shri hariya nene manave ||antakana||

Diva ratri yennade vishaya lampatanagi savi yutagala nundu bhramisa beda antakanaavana kondivana kondarttavanu galisuvare javana dutaru baruva hotta ninariye ||antakana||

Monne maduvyadenai karevudondherademme ninna kondenu kshetra phalavu bahudu
honnu hanavuntenage sayalarenu enalu benna biduvale mrityu vyartta jivatma|| antakana||

Hosa maneya kattidenu gruha shantimaneyolge basiri hendati magana maduve nale
hasanagi ide baduku sayalarenu enalu kusuridariyade bidaru yamanavaru aga ||antakana||

Putra huttida divasa halinutada habba mattobba magana upanayana nale
artiyagide baduku sayalarenu enalu mrityu hedataleyalli nagudirpalayya ||antakana||

Atta dugeyu nalilla ishta darushanavilla kotta sAlava kelva hotta nariye
katle tumbida mele kshana matra  iralilla ashtarolu purandara vittala nenu manave||antakana||


You can listen to the song here : https://youtu.be/Zs-TmN4aJ2Q by Bellur sisters

Leave a Reply