ಹರಿ ಕುಣಿದ ನಮ್ಮ ಹರಿ / Hari kunida namma hari

‘ಹರಿ ಕುಣಿದ ನಮ್ಮ ಹರಿ ಕುಣಿದ’ ಎನ್ನುವುದು ದಾಸಶ್ರೇಷ್ಠ ಶ್ರೀ ಪುರಂದರದಾಸರು ರಚಿಸಿದ ಅತ್ಯಂತ ಪ್ರಸಿದ್ಧವಾದ ದಾಸರ ಕೀರ್ತನೆ ಆಗಿದೆ. [1]

ಶ್ರೀಹರಿಯ ಲೀಲೆಗಳು ಮತ್ತು ಭಕ್ತರ ಪರವಾಗಿ ಅವನು ಆಡಿದ, ಕುಣಿದು ಕರತಲಾಘಾತ ಮಾಡಿದ ಆನಂದದಾಯಕರೂಪವನ್ನು ಈ ಕೀರ್ತನೆಯಲ್ಲಿ ವರ್ಣಿಸಲಾಗಿದೆ.

ರಚನೆ: ಪುರಂದರದಾಸರು
ರಾಗ: ಬೇಹಾಗ್
ತಾಳ: ಆದಿ

ಹರಿ ಕುಣಿದಾ ನಮ್ಮ ಹರಿ ಕುಣಿದಾ
ಹರಿ ಕುಣಿದಾ ನಮ್ಮ ಹರಿ ಕುಣಿದಾ ||ಹರಿ||
ಅಕಳಂಕಚರಿತ ಮಕರಕುಂಡಲಧರ||2||
ಸಕಲರ ಪಾಲಿಪ ಹರಿ ಕುಣಿದಾ||2|| ||ಹರಿ ಕುಣಿದ||

ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ||2||
ತರಳೆಯರೊಡಗೂಡಿ ಹರಿ ಕುಣಿದಾ ||2|| ||ಹರಿ ಕುಣಿದ||

ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ||2||
ಚೆಂದದಿ ನಲಿಯುತ್ತ ಹರಿ ಕುಣಿದಾ ||2|| ||ಹರಿ ಕುಣಿದ||

ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ||2||
ದಿಟ್ಟ ಮಲ್ಲರ ಗಂಡ ಹರಿ ಕುಣಿದಾ ||2|| ||ಹರಿ ಕುಣಿದ||

ಪರಮಭಾಗವತರ ಕೇರಿಯೊಳಾಡುವ||2||
ಪುರಂದರವಿಠಲ ಹರಿ ಕುಣಿದಾ ||2|| ||ಹರಿ ಕುಣಿದ||

Lyrics in English

Composer : Sri Purandara dasaru

Hari kunida namma hari kunida

Akalanka charita makara kundaladhara
sakalara palipa hari kunida || 1 ||

Aralele magayi korala muttina sara
taraleyaroda gudi hari kunida ||2||

Anduge aralela bindulli bapuri
chendadi nalivutta hari kunida ||3||

Utta patteya datti itta kanchiya dama
ditta mallana ganda hari kunida||4||

Parama bhagavatara keriyoladuva
purandara vittala hari kunida ||5||

Click the link to listen the song

Leave a Reply