ಏನು ಕರುಣಾ ಹೃದಯನೂ ಏಕದಂತನೇ / Enu Karuna hrudayano ekadantane

ಏನು ಕರುಣಾ ಹೃದಯನೂ
ಏಕದಂತನೇ
ಸಾಟಿ ಇಲ್ಲವು ನಿನ್ನ ಪ್ರೀತಿಗೆ
ಲಂಬೋದರನೇ    ||ಏನು||

ಪುಟ್ಟ ಇಲಿಯನು ನಿನ್ನ ವಾಹನ
ಮಾಡಿಕೊಂಡೆ ಬೆನಕನೇ
ಅದರ ಮೇಲೆ ನಿನ್ನ ಕರುಣೆ
ಮಳೆಯ ಕರೆದೆ ಗಣಪನೆ ||
ಒಂದು ಹುಲ್ಲು ಗರಿಕೆ
ನಿನಗೆ ಅರ್ಪಿಸಿದರೆ ಸಾಕು ||ಒಂದು||
ಮಂಜಿನಂತೆ ಕಷ್ಟ ಕರಗಿ
ಬಾಳು ಬೆಳಗಲೆ ಬೇಕು ||ಏನು||

ತಂದೆ ತಾಯಲಿ ಮೂರು ಲೋಕವ
ಕಂಡ ಪರಮ ಜ್ಞಾನಿಯೇ  ||ತಂದೆ||
ಜ್ಞಾನ ಫಲವನು ಪಡೆದ ಬಾಲನೇ
ಜ್ಞಾನವಾರಿದಿಯೆ       ||ಜ್ಞಾನ||
ಕಡಲೆ ಬೆಲ್ಲವ ಅರ್ಪಿಸಿದರು
ತೃಪ್ತಿ ಅದರಲೆ ಪಡುವೆ ನೀ ||ಕಡಲೆ||
ಮಂತ್ರ ತಂತ್ರವ ಅರಿಯದಿದ್ದರೂ
ಶುದ್ಧ ಮನಸಿಗೆ ಒಲಿವೆ ನೀ    ||ಏನು||

ಬಾಳು ಎನುವ ನೌಕೆಗೆ
ನೀನೇ ಎಂದು ಅಂಬಿಗ ||ಬಾಳು||
ಯಾವುದೇ ಬಿರುಗಾಳಿ ಬಂದರು
ತೀರ ಸೇರಿಸೋ ನಾವಿಕ ||ಯಾವುದೇ||
ತುಂಬಿದೆ ಈ ನನ್ನ ಮನದೆ
ಅಜ್ಞಾನದ ಕತ್ತಲೆ   ||ತುಂಬಿದೆ||
ಜ್ಞಾನ ಜ್ಯೋತಿ ಬೆಳಗಿ
ದಾರಿ ತೋರಿಸೋ ವಿನಾಯಕ  ||ಏನು||

Lyrics in English

Enu Karuna hrudayano
ekadantane
sati illavu Ninna preetige
lambodarane || Enu ||

Putta iliyanu Ninna vahana
madikonde benakane
adhara mele Ninna karune
maleya karedu ganapane ||
ondu gullu garike
ninage arpisidare saku |
manjinante kashta karagi
balu belagale beku ||

Tande tayali mooru lokava
kanda parama jnaniye |
jnana phalavanu padeda balane
jnanavaridhiye ||
kadale bellava arpisidaru
truptiyu adorable paduve nee
mantra tantrava ariyadiddaru
shuddha manassige olive nee ||

Balu ennuva noukege
Neene endu ambiga |
yavude birugali bandaru
teera seriso navika |
tumbide e nanna manade
ajanada kattale |
jnana Jyoti belagi
Dari toriso vinayaka || Enu ||

ಎಷ್ಟು ಬಾರಿ  ಮೊರೆ ಇಡಲಿ ಶಂಭೋ / Eshtu bari more idali shambha shankara

ಎಷ್ಟು ಬಾರಿ  ಮೊರೆ ಇಡಲಿ
ಶಂಭೋ ಶಂಕರಾ
ಕಷ್ಟಗಳ ನೀಗಿಸು ಬಾ ಹೇ ಮಹೇಶ್ವರ  ||ಎಷ್ಟು ||

ಅಜ್ಞಾನದ ಅಂಧಕಾರ ಮನಕೆ ಸುತ್ತಿದೆ
ಮುಂದೆ  ದಾರಿ ಕಾಣದಿದೆ
ಭಯವು ಮುತ್ತಿದೆ
ಪಾಪಗಳ ಹೊರೆಯನ್ನು ಹೊರಲಾರದೇ
ಭವಬಂಧದ ಜಾಲದಿಂದ ಬರಲಾರದೆ
ತತ್ತರಿಸಿದೆ ನೊಂದು ಬೆಂದು ನಿಂದಿರುವೆನು
ನಿನ್ನೊಲವಿನ ಸುದೆ ಹರಿಸಿ
ಕಾಪಾಡು ಬಂದೂ      ||ಎಷ್ಟು ||

ಪಶ್ಚಾತ್ತಾಪ ಎಂಬ ಬೆಂಕಿ ಸುಡುತಿದೆ ನನ್ನಾ
ಮಲಿನ ಕಳೆದು ಆಗಲಿ
ಮನ ಪುಟವಿಟ್ಟ ಚಿನ್ನ
ಕಂಬನಿಯಲಿ ಪಾದ ತೊಳೆವ
ಆಸೆ ಆಗಿದೆ
ನಿಂತಿರುವೆ ಮೌನದಲ್ಲಿ ಮಾತು ಬಾರದೆ
ಕರುಣಿಸಿ ಪ್ರಭು ನೀ
ಮನ ನೆಮ್ಮದಿ ತಾರಾಾ
ಕೈ ಹಿಡಿದು ನಡೆಸೆನ್ನಾ ಹೇ ದೀನ ಬಂಧು    ||ಎಷ್ಟು ||

ಆತ್ಮವೆಂಬ ಪ್ರಣವದಿಂದ ಆರಾಧಿಸುವೆ
ವಿಶ್ವಾಸದಿ ನಿಶ್ವಾಸದಿ ಕೀರ್ತಿ ಹಾಡುವೆ
ಪ್ರಾಣ ಜ್ಯೋತಿ  ದೀಪದಿಂದ ಆರತಿ ಗೈವೆ
ಭಕ್ತಿ  ಕುಸುಮ ತವ ಪಾದಕೆ ಅರ್ಚನೆಗೈವೆ
ಮುಕ್ತಿದಾರಿ ತೋರೋ
ಹೇ ಕರುಣಾಮಯನೆ
ತವ ಪಾದ ಪೂಜೆ ನೀಡು ಪಾವನಾಂಗನೇ    ||ಎಷ್ಟು ||

Lyrics in English

Eshtu bari more idali
shambha shankara
kashtagala neegisu baa he maheshwara ||Eshtu ||

Ajnanada andhakara manake suttide
munde daari kaanadide bhayavu muttide
papagala horeyannu horalarade
bhavabandhana jaladinda baralarade
ninnolavina sude harisi kapadu bandu || eshtu bari ||

Paahchattapa emba benki sudutide nanna
malina kaledu agali mana putavitta chinna ||
kambaniyali pada toleva aase agide ||
nintiruve mounadalli maatu barade karunisi
prabhu nee mana nemmadi taara kai hididu
nadesenna he deena bandhu || eshtu baari ||

Aatmavemba pranavadinda aradhisuve
vishwasadi nishwasadi keerti haduve
prana jyoti deepadinda aarati gaive
bhakti kusuma tava padake archane gaive
muktidari toro he karunamayane
tava pada pooje needu pavanangane || eshtu baari ||

ನೂರೆಂಟು ನಾಮದ ಗಣಪತಿರಾಯ / Noorentu namada ganapatiraya

ನೂರೆಂಟು ನಾಮದ ಗಣಪತಿರಾಯ
ನೂರಾರು ಭಕುತರ
ನೂರೆಂಟು ನಮನಗಳು ||ನೂರೆಂಟು||

ಶಾಲೆಯ ಮಕ್ಕಳ
ಬಾಲ ಬಾಲೆಯರ  ||ಶಾಲೆಯ ||
ಲೀಲೆಯ ಗುಂಜಿಗಳು
ಗುಂಗಿಯ ನಮನಗಳು      ||ನೂರೆಂಟು||

ಸಿಧ್ಧರು ಸಾಧ್ಯರು ವಿದ್ಯಾಧರರು
ಸಿದ್ಧಿವಿನಾಯಕ  ಬಧ್ಧರು ನಿನಗೆ      ||ಸಿಧ್ಧರು||
ಶುಭಕಾರ್ಯಗಳನು ಮಾಡುವ ಮೊದಲೆ     ||
ವಿಭವದ ನಿನ್ನಯ  ಪೂಜೆಯು ಗಜಮುಖನೆ     ||ನೂರೆಂಟು ||

ಅವರಿವರೇತಕೆ  ಅಮರಾಧಿಪನೆ
ದಿವಾಕರ ನಿನ್ನನು ಪೂಜಿಸಿ ಮೆರೆದ ||ಅವರಿವರೇತಕೆ ||
ನಿನ್ನನೆ ನಂಬಿದ ಧನಿಕರ ಬಡವರ||೨||
ಬಿನ್ನಪ ಲಾಲಿಸೋ ಪನ್ನಗ ಭೂಷಣನೆ ||ನೂರೆಂಟು ||

Lyrics in English

Noorentu namada ganapatiraya
nooraru bhakutara
noorentu namanagalu || noorentu nama ||

Shaleya makkala bala baleyara |
leeleya gunjigalu gungiya namanagalu || noorentu ||

Siddharu sadhyaru vidyadhararu
siddhivinayaka baddharu ninage |
shubhakaryagalanu maduva nodale
vibhavada ninnaya poojeyo gajamukhane || noorentu ||

Avarivaretake amaradhipane
divakara ninnane poojisi mereda ||
ninnane nambida dhanikara badavara
binnapa lalisi pannaga bhushanane || noorentu ||

ಶರಣು ಶರಣು ದೇವಾದಿಗಳೊಂದಿತ ಅಹುದು / Sharanu sharaṇu devadigalondita ahudu

ಶರಣು ಶರಣು ದೇವಾದಿಗಳೊಂದಿತ
ಅಹುದು ಸ್ವಾಮಿ ಶರಣು ಗಣನಾಥ  ||ಶರಣು||

ಅಖಿಲ ಭುವನದೊಳು ಪೂಜಿತ
ಭಕುತ ಜನಕೆ ನೀ ಸಾಕ್ಷಾತ್
ಸಕಲ ವಿದ್ಯಾವರದಾತ
ಶಕುತನಹುದಯ್ಯಾ ಪ್ರಖ್ಯಾತ
ಶರಣೂ ಶರಣೂ   ||ಶರಣು||

ಶುಧ್ಧ ಬುಧ್ಧರ ಸಹಕಾರ
ಬುಧ್ಧಿ ನೀಡುವ ಘನಉಧ್ಧಾರ |
ಸಿಧ್ಧಿಗಾಗಿಹೆ ನೀ ಆದಾರ |
ಸಿಧ್ಧಿದಾಯಕ ವಿಘ್ನಹರ |
ಶರಣೂ ಶರಣೂ        ||ಶರಣು||

ಜನಕೆ ಮಾಡುವೆ ದೋಷನಾಶ
ಅನುದಿನವು ಮತಿ ಪ್ರಕಾಶ |
ದೀನಮಹೀಪತಿ ಮನೋಭಾವ ಪೂರಿತ |
ಗಣಾಧೀಶ ಶರಣು |
ಶರಣೂ ಶರಣೂ   ||ಶರಣು||

Lyrics in English

Sharaṇu sharaṇu devadigalondita
ahudu swami sharaṇu gananatha || Sharanu ||

Akhila bhuvanadolu poojita
bhakuta janaka nee sakshat
sakala vidyavaradata
shakutanahudayya prakyata
sharanu sharaṇu || Sharanu ||

Shuddha buddhara sahakara
Buddhist needuva Ghana uddhara
siddhigagihe nee adhara
siddhidayaka vighnahara
sharaṇu sharaṇu || Sharanu ||

Janaka maduve doshanasha
anudinavu mati prakashadi
deena mahipati manobhava poorita
ganadhisha sharanu
sharaṇu sharaṇu ||