ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ / sheshagiri namma shreenivasàna kande

ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ |
ಕಂಡೆ ಶ್ರೀನಿವಾಸನ ॥ಪ॥

ಶ್ರೀನಿವಾಸನ ಕಂಡೆ ಶ್ರೀನಿವಾಸನ ಜ್ಞಾನಗುರು
ಮಧ್ವ ಮುನಿ ಮಾನುಷ ಹಂಸನ ಕಂಡೆ || ಅ. ಪ ||

ಗರುಡ ಶೇಷ ಗಿರಿಜಾ ರಮಣ ಸುರರೆಲ್ಲ,
ನಿರುತ ಸೇವಿಸುವ ಪಾದ
ಸರಸಿಜ ಯುಗಳವ ಕಂಡೆ ||೧||

ಮಾನಿನಿ ರಮಾದೇವಿ ವರ್ಣಿಸುತಲಿ,
ದಾನವಾಂತಕನ ಪಾದಜಾನು ಜಂಘೆಗಳನು ಕಂಡೆ||೨||

ಪರಮಾತ್ಮನ್ನ ಗುಣಗಳನ್ನುವರ್ಣಿಸುತಲೀ,
ಸಿರಿದೇವಿ ಇರುವ ವಕ್ಷ ಸ್ಥಳವನ್ನು ಕಣ್ಣಾರೆ ಕಂಡೆ||೩||

ವಾಸವಾಗರ್ಜುನನ ರಥದ ಮುಂದೆ ನಿಲ್ಲುವನ,
ಏಸು ಮಮತೆಯಿಂದ ಕುಣಿವ
ಹರಿಯ ಹಸ್ತಂಗಳ ಕಂಡೆ || ೪ ||

ಮಂದಗಮನ ಗೋಪಿ ಕಂದ ಬಾರೆಂದೆನ್ನಲು
ಮಂದಹಾಸದಿಂದ ನಗುವ ಸುಂದರ ವದನನ್ನ್ನ ಕಂಡೆ ||೫||

ಕುಕ್ಷಿಯೊಳಗೀರೇಳು ಜಗವ ರಕ್ಷಿಸುವನ,
ಪಕ್ಷಿಯ ಮೇಲೇರಿ ಬರುವ ಲಕ್ಷ್ಮೀರಮಣನ್ನಾ ಕಂಡೆ ||೬||

ಮಂಡೂಕಾರಿ ಪರ್ವತದಲ್ಲಿ ನೆಲೆಯಾಗಿಪ್ಪವನ,
ಪುಂಡರಿಕಾಕ್ಷ  ಶ್ರೀ ವೆಂಕಟವಿಠಲನ ಕಂಡೆ ||೭||

Lyrics in English

Sheshagiri namma shreenivasàna kande|
kande shreenivasàna||pa||

Shreenivasàna kande shreenivasàna jnanaguru
madhwa muni manusha hamsana kande ||a.pa||

Garuda shesha girija ramaana surarella |
niruta sevisuva pada sarasija yugalava kande||1||

Manini ramadevi varnissutali |
danavantakana padajanu janghegalanu kande ||2||

Paramatmanna gunagalannu varnissutali
siridevi iruva vaksha stalavannu kannare kande||3||

Vasavagarjunana rathada munde nilluvana
esu mamateyinda kuniva hariya hastangala kande ||4||

Mandagamana gopi kanda barendennalu
mandahasadinda naguva sundara vadananna kande  ||5||

Kukshiyolageerelu jagava rakshisuvana
pakshiya meleri baruva lakshmiramananna kande ||6||

Mandukari parvatadalli neleyagippavana
pundarikaaksha sree venkatavittalana kande ||7||

ಏಳು ಬೆಟ್ಟದಮೇಲೆ ಏನಿಹುದೇನಿಹುದೊ / Elu bettada mele enihudenihudo

ಅಂಕಿತ :ಇಂದಿರೇಶ

ಏಳು ಬೆಟ್ಟದಮೇಲೆ ಏನಿಹುದೇನಿಹುದೊ
ತಿರುಮಲರಾಯನ ದೇವಳವಿಹುದೊ ಅಲ್ಲಿ
ವೇಂಕಟರಮಣನು ಎಂಥವನೆಂಥವನೊ
ಶರಣರ ಕಾಯುವ ಕರುಣಾಸಾಗರನೋ ||

ಸ್ವಾಮಿ ಪುಷ್ಕರಣಿಯ ಸ್ನಾನಗಳಿಂದಾ
ವರಾಹಮೂರ್ತಿಯಕಂದ ಆನಂದ
ತಿರುಮಲರಾಯನ ದರುಶನದಿಂದಾ
ಗುರುತರಕಲ್ಮಷವು ಗೋವಿಂದಾ ||

ಶಿರದಿ ಮುಕುಟವು ಧರಿಸಿದ ಚಂದಾ
ಮುಖದಿ ಕಸ್ತೂರಿಯ ತಿಲಕ ಶ್ರೀಗಂಧ
ಕರದಿ ಒಪ್ಪುವ ಶಂಖಚಕ್ರಗಳಿಂದ
ಭಕ್ತರ ದುರಿತಗಳು ಗೋವಿಂದಾ ||

ಬಂಗಾರ ಗೋಪುರವು ಹೊಳೆಯುತ್ತಿರಲು
ಶೖಂಗಾರವಾಗಿಹ ಹರಿಯು ನಿಂತಿರಲು
ಪಾಪ ವಿನಾಶಿನಿಯ ಸ್ನಾನ ಮಾಡುತ್ತಿರಲು
ಪಾಪಗಳೆಲ್ಲವು ಗೋವಿಂದಾ ||

ಅಪ್ಪವು ಅತಿರಸವುಬೂಂದೆ ಪಕ್ವಾನ್ನವು
ತಪ್ಪದೆ ಸಿಗುವುದು ಬುತ್ತಿ ಚಿತ್ರಾನ್ನವು
ವೇದ ವೇದ್ಯನು ವೇಂಕಟರಮಣನು
ಸಂಕಟ ಹರಿಸುವನು ಗೋವಿಂದಾ ||

ಮಂದಹಾಸದಿ ಮುದದಿ ಮುಕುಂದಾ
ವರದ ಹಸ್ತವು ಕೊಡುತಲಿ ನಿಂದಾ
ಇಂದಿರೇಶನ ಭಜಿಪ ಭಕ್ತವೖಂದ
ಬಂದ ದುರಿತಗಳು ಗೋವಿಂದಾ ||

Lyrics in English

Elu bettada mele enihudenihudo
tirumalarayana devalavihudo
venkataramananu enthavanenthavano
sharanara kayuva karunasagarano || Elu ||

Swami pushkaraniya snanagalinda
varahamurthiya kanda ananda
tirumalarayana darushanadinda
gurutara kalmashavu govindana ||

Shigradi mukutava dharisida chanda
mukhadi kasturiyu tilaka srigandha
karadali oppuva shankhachakragalinda
bhaktara duritagala govindana ||

Bangara gopuravu holeyuttaliralu
shrungaravagiha hariyu nintiralu
papa vinashiniya snana maduttiralu
papagalellavu govindana ||

Appavu atirasavu bondipakvannavu
tappade siguvudu butti chitrannavu
veda vedyanu venkataramanu
sankata harisuvanu govindana ||

andahasadi mudadi mukunda
varada hastavu kodutali ninda
indireshana bhajipara bhaktavrunda
Banda duritagalu govindana ||

ಕಟ್ಟಿದ ಮಂಗಳಸೂತ್ರವ ದೇವ / Kattida mangalasutrava deva

ಕಟ್ಟಿದ ಮಂಗಳಸೂತ್ರವ ದೇವ || ಪ ||

ಗಟ್ಟಿ ಗಂಟು ಹಾಕಿದ ಚಿತ್ರವು
ಪರಮೇಷ್ಟಿ ರುದ್ರಾದ್ಯರ ಸ್ತೋತ್ರವು, ಮತ್ತೆ
ಶಿಷ್ಟ ಜನರ ದಿವ್ಯ ಗಾನವು, ತಾನು
ಅಷ್ಟು ಕೇಳುತ ಸಂತುಷ್ಟ ಮನಸಿನಿಂದ
ಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ ||

ತುಂಬುರು ನಾರದರ ಗಾನವು,
ದಿವ್ಯ ರಂಭೆ ಊರ್ವಶೀಯರ ನಾಟ್ಯವು
ಅಲ್ಲಿ ತುಂಬಿದ ಸುರಮುನಿ ಕೂಟವು
ಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆ
ಅಂಬರ ವಾಣಿಯು ಜಯ ಜಯ ಜಯವೆನೆ ||೨||

ಕ್ಷೋಣಿಯ ರಾಜಾದಿ ರಾಜರು ತಾವು
ಮಾಣಿಕ್ಯ ಮುತ್ತು ರತ್ನರಾಶಿಯ, ಪಾದ
ಕಾಣಿಕೆ ಕಪ್ಪ ತಂದೀವರು ಸಿರಿ
ವೇಣು ವಿನೋದನು ಜಾಣೆ ಪದ್ಮಾವತಿಯ
ಪಾಣಿಗ್ರಹಣ ಕೊಂಡು ಎಣಾಙ್ಕ ಕುಲ ತಿಲಕ ||೩||

ಅಷ್ಟ ಲಕುಮೀ ಪತಿ ತೋಷದಿ, ತನ್ನ
ಇಷ್ಟ ಸುಜನರ ಮಧ್ಯದಿ
ಮಾವ ಕೊಟ್ಟು ಕನ್ಯಾಮಣಿ ಕಂಠದಿ
ಅಂದು ಅಷ್ಟದಶ ವಾದ್ಯಗಳು
ಘಟ್ಟಿಯಾಗಿ ಮೊರೆಯಲು
ಶಿಷ್ಟ ಪ್ರಸನ್ನ ವೇಂಕಟ ವಿಠ್ಠಲ ರಾಯ ||೪||

Lyrics in English

Kattida mangalasutrava deva || pa ||

Gatti gantu hakida chitravu
parameshti rudradyara stotravu, matte
shishta janara divya ganavu,
ashtu keluta santushta manasininda
bettadodeya jagajatti venkataramana || 1 ||

Tumburu naradara ganavu,
divya rambhe urvashiyara natyavu
alli tumbida suramuni kootavu
mahasambhrama sabheyalli kambu kandharanige
ambara vaniyu jaya jaya jayavene || 2 ||

Kshoniyu rajadi rajaru tavu
manikya muttu ratnarashiya pada
kannike kappa tandivaru siri
venu vinodanu Jane padmavatiya
panigrahana kondu enanjka kula tilaka || 3 ||

Ashta lakumi Pati toshadi, tanna
ishta sujanara madhyadi
mava kottu kanyamani kantadi
andu ashtadasha vadyagalu
ghattiyagi moreyalu
shishta Prasanna venkata vittala Raya || 4 ||


ಗೋವಿಂದ ನಮೋ ಗೋವಿಂದ ನಮೋ / Govinda namo Govinda namo

ಗೋವಿಂದ ನಮೋ ಗೋವಿಂದ ನಮೋ ಗೋವಿಂದ  ನಾರಾಯಣ |
ಗೋವರ್ಧನ ಗಿರಿಯೆತ್ತಿದ ಗೋವಿಂದ ನಮ್ಮ ರಕ್ಷಿಸೊ ||ಪ||

ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ |
ಕರ್ತು ಯಮನವರೆಳೆದು ಒಯ್ಯಲು ಅರ್ಥ ಪುತ್ರರು ಕಾಯ್ವರೆ ||೧||

ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು |
ಸಂಚಿತಾರ್ಥದದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ ||೨||

ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು |
ಬಿಡದೆ ಯಮನವರೆಳದು ಒಯ್ಯಲು ಎಡವಿ ಬಿದ್ದಿತು ನಾಲಗೆ ||೩||

ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು |
ಪ್ರಾಣ ಹೋಗಲು ಮುಟ್ಟಲಂಜುವಳು ಜಾಣೆ ಕರೆದರೆ ಬಾರಳು ||೪||

ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು |
ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು ||೫||

ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು |
ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು ||೬||

ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರ ಸೀಳಿದ |
ಮುಟ್ಟಿ ಭಜಿಸಿರೊ ಶ್ರೀ ಪುರಂದರ ವಿಟ್ಠಲೇಶನ ಚರಣವ ||೭||

ಕೃತಿಕಾರರು : ಶ್ರೀ ಪುರಂದದಾಸರು

Lyrics in English

Govinda namo Govinda namo Govinda narayana |
govardhana giriyettida Govinda namma rakshiso || pa ||

Arthavarige putrararige mitrabandhavararige |
karthru yamanavareledu oyyalu artha putraru kayvare || 1 ||

Mancha baradu madadi barali kanchugannadi baradu |
sanchitarthada dravya baradu munche madiri dharmave || 2 ||

Odaveyasege odala kicchige madadi bennalle bahalu |
bidade yamanavareledu oyyalu edavi bidditu nalage || 3 ||

Pranavallabhe Tanna purushana kanadeye nilalaralu |
prana hogaluve muttalanjuvalu Jane karedare barali || 4 ||

Tandu bandarenu Tanna purushage banni balalidireembalu |
ondu dinadali taradiddare handinayante kelevalu || 5 ||

Untukalakke nantarishtaru bantaragiye kayvare |
kantakaru yamanavaru elevaga nantarishtaru bararu || 6 ||

Dittatanadali pattavalida meṭṭi ditijara seelida |
mutti bhajisiro Sri Purandara vittaleshana charanava || 7 ||

ಶೇಷಾದ್ರಿವಾಸ ಶ್ರೀ ವೆಂಕಟೇಶ/ Sheshaadrivaasa shri venkatesh

ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯಂ

ಪ್ರಭುಜೀ.. ಬಾಲಾಜಿ..
ತಿರುಪತಿ ವಾಸ, ನಮೋ ಶ್ರೀನಿವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಅಂಜನಾದ್ರಿ ವಾಸ, ಆನಂದಾದ್ರಿ ವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಶೇಷಾದ್ರಿ ವಾಸ, ಗೋವಿಂದಾ ಗೋವಿಂದ
ಗರುಡಾದ್ರಿ ವಾಸ, ಗೋವಿಂದಾ ಗೋವಿಂದ
ಬಾಲಾಜಿ, ಗೋವಿಂದಾ ಗೋವಿಂದ, ಬಾಲಾಜಿ

ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ತೋರೋ ಪಾವನ ಚರಣ ಸ್ವಾಮೀ

ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ನೀಲಾದ್ರಿ ವಾಸ, ಗೋವಿಂದಾ ಗೋವಿಂದ
ವೆಂಕಟಾದ್ರಿ ವಾಸ, ಗೋವಿಂದಾ ಗೋವಿಂದ
ಬಾಲಾಜಿ, ಗೋವಿಂದಾ ಗೋವಿಂದ, ಬಾಲಾಜಿ

ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ನಿನ್ನನು ಕಾಣದ ಕಣ್ಣುಗಳೇಕೆ
ಪೂಜಿಸದ ಕೈಗಳೇಕೆ
ಶೋಕದ ಬಾಳಿನ್ನೇಕೆ
ವ್ಯರ್ಥದ ಜನುಮವಿದೇಕೆ, ಸ್ವಾಮೀ
ಸೇರುವೆ ನಾನಿನ್ನ ಪಾದಾರವಿಂದ
ಕರೆದುಕೊ ಕರುಣಾಳು ಹೇ ಗೋವಿಂದ
ಬಾಲಾಜಿ, ಬಾಲಾಜಿ, ಪ್ರಭೋ…

Lyrics in English

Prabhuji… balaji..
tirupati vasa
namo srinivasa
poreyo papa vinasha shrisha
jaya jaya jagadisha jaya govinda
japisalu ninna nama paramananda

Anjanadri vasa
anandadri vasa
poreyo papa vinasha shrisha
jaya jaya jagadisha jaya govinda
japisalu ninna nama paramananda
sheshadri vasa (govinda govinda)
garudadri vasa (govinda govinda)
balaji…(govinda govinda)

Tandeyu neene tayiyu neene
nambida bhakutara bhaddhuvu neene
tandeyu neene.. tayiyu neene
nambida bhakutara bhaddhuvu neene
sundara nayana chandira vadana
salaho venkataramana..
sundara nayana chandira vadana
salaho venkataramana..
thoro pavana charana swami..

jaya jaya jagadisha jaya govinda
japisalu ninna nama paramananda
neeladri vasa (govinda govinda)
venktadri vasa (govinda govinda)
balaji..(govinda govinda)
balaji..

Daasana mele enee kopa
karagade innu naa madidha papa
daasana mele enee kopa
karagade innu naa.. madidha papa
ninnanu kaanada kannugaleke
poojisada kaigale..ke
shokada baa..linneke
vyarthada janumavideke swami…
seruve naa ninna padaravinda
kareduko karunalu he govinda
balaji..balaji..prabho..o…


ಹರೇ ವೆಂಕಟ ಶೈಲ ವಲ್ಲಭ / Hare venkata shaila vallabha

ಹರೇ ವೆಂಕಟಾ ಶೈಲವಲ್ಲಭ
ಪಾಲಿಸು ನೀ ಎನ್ನಾ ||
ದುರಿತ ದೂರ ನೀನಲ್ಲದೆ ಧರೆಯೊಳು
ದೊರೆಗಳ ನಾ ಕಾಣೆ , ನಿನ್ನಾಣೆ ||ಹರೇವೆಂಕಟಾ||

ಇಂದಿರೇಶ ಅರವಿಂದ ನಯನ
ಎನ್ನ ತಂದೆ ತಾಯಿ ನೀನೆ||
ಹೊಂದಿದವರ ಅಘಂಗಳ ಕಳೆವ
ಶ್ರೀ ಮಂದರಾದ್ರಿ ಧರನೆ ಶ್ರೀಧರನೆ ||ಹರೇ ವೆಂಕಟಾ||

ಯಾರು ನಿನ್ನ ಹೊರತೆನ್ನನು ಕಾಯ್ವರು
ನೀರಜಾಕ್ಷ ಹರಿಯೇ|
ಘೋರ ದುರಿತಗಳ ದೂರ ಮಾಡಲಿಕೆ
ಬೇರೆ ದೈವ ಕಾಣೆ , ನಿನ್ನಾಣೆ|| ||ಹರೇ ವೆಂಕಟಾ||

ಮಂಗಳಾಂಗ ಮಹನೀಯ ಗುಣಾರ್ನವ
ಗಂಗೋಧಿತ ಪಾದ|
ಅಂಗಜಪಿತ ಅಹಿರಾಜ ಶಯನ
ಶ್ರೀರಂಗವಿಠ್ಠಲ ದೊರೆಯೆ ಶ್ರೀಹರಿಯೆ ||ಹರೇ ವೆಂಕಟಾ||

Lyrics in English

Composer : Sripadarajaru

Hare venkata shaila vallabha
palusu nee enna || pa ||
duritadoora nee nallade dhareyolu
porevara naa kaane ninnaane || hare ||

Indiresa aravinda nayana
enna tande tayi nine
pondidavara aghavrunda kaleva
mandaraadridharane Sreedharane || 2 ||

Aru ninna horetenna porevaru
neerajaaksha hariye
apaara mahima purana purusha
ghora duritagala doora maadiso || 1 ||

mangalanga mahaniya gunarnava
gangodita paada
anga japita ahirajasayya Sree
rangavithala
doreye Sreehariye || 3 ||