ಗಣೇಶ ದ್ವಾದಶನಾಮ ಸ್ತೋತ್ರಂ / Ganesha dwadashanama stotram

ಗಣೇಶ ದ್ವಾದಶನಾಮ ಸ್ತೋತ್ರಂ

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇಃ ॥ 1 ॥

ಅಭೀಪ್ಸಿತಾರ್ಥ ಸಿಧ್ಯರ್ಥಂ ಪೂಜಿತೋ ಯಃ ಸುರಾಸುರೈಃ ।
ಸರ್ವವಿಘ್ನಹರಸ್ ತಸ್ಮೈ ಗಣಾಧಿಪತಯೇ ನಮಃ ॥ 2 ॥

ಗಣಾನಾಮಧಿಪಶ್ಚಂಡೋ ಗಜವಕ್ತ್ರಸ್ತ್ರಿಲೋಚನಃ ।
ಪ್ರಸನ್ನೋ ಭವ ಮೇ ನಿತ್ಯಂ ವರದಾತರ್ವಿನಾಯಕ ॥ 3 ॥

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ ।
ಲಂಬೋದರಶ್ಚ ವಿಕಟೋ ವಿಘ್ನನಾಶೋ ವಿನಾಯಕಃ ॥ 4 ॥

ಧೂಮ್ರಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ ।
ದ್ವಾದಶೈತಾನಿ ನಾಮಾನಿ ಗಣೇಶಸ್ಯ ತು ಯಃ ಪಠೇತ್ ॥ 5 ॥

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ವಿಪುಲಂ ಧನಮ್ ।
ಇಷ್ಟಕಾಮಂ ತು ಕಾಮಾರ್ಥೀ ಧರ್ಮಾರ್ಥೀ ಮೋಕ್ಷಮಕ್ಷಯಮ್ ॥ 6 ॥

ವಿಧ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ ।
ಸಂಗ್ರಾಮೇ ಸಂಕಟೇ ಚೈವ ವಿಘ್ನಸ್ತಸ್ಯ ನ ಜಾಯತೇ ॥ 7 ॥

॥ ಇತಿ ಮುದ್ಗಲಪುರಾಣೋಕ್ತಂ ಶ್ರೀಗಣೇಶ ದ್ವಾದಶ ನಾಮ ಸ್ತೋತ್ರಂ ಸಂಪೂರ್ಣಮ್ ॥

ವಿನಾಯಕ ಅಷ್ಟೋತ್ತರ ಶತ ನಾಮಾವಳಿ / Sri Vinayaka ashtottara shata namavali

ವಿನಾಯಕ ಅಷ್ಟೋತ್ತರ ಶತ ನಾಮಾವಳಿ

ಓಂ ವಿನಾಯಕಾಯ ನಮಃ ।
ಓಂ ವಿಘ್ನರಾಜಾಯ ನಮಃ ।
ಓಂ ಗೌರೀಪುತ್ರಾಯ ನಮಃ ।
ಓಂ ಗಣೇಶ್ವರಾಯ ನಮಃ ।
ಓಂ ಸ್ಕಂದಾಗ್ರಜಾಯ ನಮಃ ।
ಓಂ ಅವ್ಯಯಾಯ ನಮಃ ।
ಓಂ ಪೂತಾಯ ನಮಃ ।
ಓಂ ದಕ್ಷಾಯ ನಮಃ ।
ಓಂ ಅಧ್ಯಕ್ಷಾಯ ನಮಃ ।
ಓಂ ದ್ವಿಜಪ್ರಿಯಾಯ ನಮಃ । 10 ।

ಓಂ ಅಗ್ನಿಗರ್ವಚ್ಛಿದೇ ನಮಃ ।
ಓಂ ಇಂದ್ರಶ್ರೀಪ್ರದಾಯ ನಮಃ ।
ಓಂ ವಾಣೀಪ್ರದಾಯಕಾಯ ನಮಃ ।
ಓಂ ಸರ್ವಸಿದ್ಧಿಪ್ರದಾಯ ನಮಃ ।
ಓಂ ಶರ್ವತನಯಾಯ ನಮಃ ।
ಓಂ ಶರ್ವರೀಪ್ರಿಯಾಯ ನಮಃ ।
ಓಂ ಸರ್ವಾತ್ಮಕಾಯ ನಮಃ ।
ಓಂ ಸೃಷ್ಟಿಕರ್ತ್ರೇ ನಮಃ ।
ಓಂ ದೇವಾನೀಕಾರ್ಚಿತಾಯ ನಮಃ ।
ಓಂ ಶಿವಾಯ ನಮಃ । 20 ।

ಓಂ ಸಿದ್ಧಿಬುದ್ಧಿಪ್ರದಾಯ ನಮಃ ।
ಓಂ ಶಾಂತಾಯ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ಗಜಾನನಾಯ ನಮಃ ।
ಓಂ ದ್ವೈಮಾತುರಾಯ ನಮಃ ।
ಓಂ ಮುನಿಸ್ತುತ್ಯಾಯ ನಮಃ ।
ಓಂ ಭಕ್ತವಿಘ್ನವಿನಾಶನಾಯ ನಮಃ ।
ಓಂ ಏಕದಂತಾಯ ನಮಃ ।
ಓಂ ಚತುರ್ಬಾಹವೇ ನಮಃ ।
ಓಂ ಚತುರಾಯ ನಮಃ । 30 ।

ಓಂ ಶಕ್ತಿಸಂಯುತಾಯ ನಮಃ ।
ಓಂ ಲಂಬೋದರಾಯ ನಮಃ ।
ಓಂ ಶೂರ್ಪಕರ್ಣಾಯ ನಮಃ ।
ಓಂ ಹರಯೇ ನಮಃ ।
ಓಂ ಬ್ರಹ್ಮವಿದುತ್ತಮಾಯ ನಮಃ ।
ಓಂ ಕಾವ್ಯಾಯ ನಮಃ ।
ಓಂ ಗ್ರಹಪತಯೇ ನಮಃ ।
ಓಂ ಕಾಮಿನೇ ನಮಃ ।
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ ।
ಓಂ ಪಾಶಾಂಕುಶಧರಾಯ ನಮಃ । 40 ।

ಓಂ ಚಂಡಾಯ ನಮಃ ।
ಓಂ ಗುಣಾತೀತಾಯ ನಮಃ ।
ಓಂ ನಿರಂಜನಾಯ ನಮಃ ।
ಓಂ ಅಕಲ್ಮಷಾಯ ನಮಃ ।
ಓಂ ಸ್ವಯಂ ಸಿದ್ಧಾಯ ನಮಃ ।
ಓಂ ಸಿದ್ಧಾರ್ಚಿತಪದಾಂಬುಜಾಯ ನಮಃ ।
ಓಂ ಬೀಜಾಪೂರಫಲಾಸಕ್ತಾಯ ನಮಃ ।
ಓಂ ವರದಾಯ ನಮಃ ।
ಓಂ ಶಾಶ್ವತಾಯ ನಮಃ ।
ಓಂ ಕೃತಿನೇ ನಮಃ । 50 ।

ಓಂ ದ್ವಿಜಪ್ರಿಯಾಯ ನಮಃ ।
ಓಂ ವೀತಭಯಾಯ ನಮಃ ।
ಓಂ ಗದಿನೇ ನಮಃ ।
ಓಂ ಚಕ್ರಿಣೇ ನಮಃ ।
ಓಂ ಇಕ್ಷುಚಾಪಧೃತೇ ನಮಃ ।
ಓಂ ಶ್ರೀದಾಯ ನಮಃ ।
ಓಂ ಅಜಾಯ ನಮಃ ।
ಓಂ ಉತ್ಪಲಕರಾಯ ನಮಃ ।
ಓಂ ಶ್ರೀಪತಿಸ್ತುತಿಹರ್ಷಿತಾಯ ನಮಃ ।
ಓಂ ಕುಲಾದ್ರಿಭೇತ್ತ್ರೇ ನಮಃ । 60 ।

ಓಂ ಜಟಿಲಾಯ ನಮಃ ।
ಓಂ ಚಂದ್ರಚೂಡಾಯ ನಮಃ ।
ಓಂ ಅಮರೇಶ್ವರಾಯ ನಮಃ ।
ಓಂ ನಾಗಯಜ್ಞೋಪವೀತವತೇ ನಮಃ ।
ಓಂ ಕಲಿಕಲ್ಮಷನಾಶನಾಯ ನಮಃ ।
ಓಂ ಸ್ಥುಲಕಂಠಾಯ ನಮಃ ।
ಓಂ ಸ್ವಯಂಕರ್ತ್ರೇ ನಮಃ ।
ಓಂ ಸಾಮಘೋಷಪ್ರಿಯಾಯ ನಮಃ ।
ಓಂ ಪರಾಯ ನಮಃ ।
ಓಂ ಸ್ಥೂಲತುಂಡಾಯ ನಮಃ । 70 ।

ಓಂ ಅಗ್ರಣ್ಯಾಯ ನಮಃ ।
ಓಂ ಧೀರಾಯ ನಮಃ ।
ಓಂ ವಾಗೀಶಾಯ ನಮಃ ।
ಓಂ ಸಿದ್ಧಿದಾಯಕಾಯ ನಮಃ ।
ಓಂ ದೂರ್ವಾಬಿಲ್ವಪ್ರಿಯಾಯ ನಮಃ ।
ಓಂ ಕಾಂತಾಯ ನಮಃ ।
ಓಂ ಪಾಪಹಾರಿಣೇ ನಮಃ ।
ಓಂ ಸಮಾಹಿತಾಯ ನಮಃ ।
ಓಂ ಆಶ್ರಿತಶ್ರೀಕರಾಯ ನಮಃ ।
ಓಂ ಸೌಮ್ಯಾಯ ನಮಃ । 80 ।

ಓಂ ಭಕ್ತವಾಂಛಿತದಾಯಕಾಯ ನಮಃ ।
ಓಂ ಶಾಂತಾಯ ನಮಃ ।
ಓಂ ಅಚ್ಯುತಾರ್ಚ್ಯಾಯ ನಮಃ ।
ಓಂ ಕೈವಲ್ಯಾಯ ನಮಃ ।
ಓಂ ಸಚ್ಚಿದಾನಂದವಿಗ್ರಹಾಯ ನಮಃ ।
ಓಂ ಜ್ಞಾನಿನೇ ನಮಃ ।
ಓಂ ದಯಾಯುತಾಯ ನಮಃ ।
ಓಂ ದಾಂತಾಯ ನಮಃ ।
ಓಂ ಬ್ರಹ್ಮದ್ವೇಷವಿವರ್ಜಿತಾಯ ನಮಃ ।
ಓಂ ಪ್ರಮತ್ತದೈತ್ಯಭಯದಾಯ ನಮಃ । 90 ।

ಓಂ ವ್ಯಕ್ತಮೂರ್ತಯೇ ನಮಃ ।
ಓಂ ಅಮೂರ್ತಿಮತೇ ನಮಃ ।
ಓಂ ಶೈಲೇಂದ್ರತನುಜೋತ್ಸಂಗಖೇಲನೋತ್ಸುಕ ಮಾನಸಾಯ ನಮಃ ।
ಓಂ ಸ್ವಲಾವಣ್ಯಸುಧಾಸಾರಜಿತ ಮನ್ಮಥವಿಗ್ರಹಾಯ ನಮಃ ।
ಓಂ ಸಮಸ್ತಜಗದಾಧಾರಾಯ ನಮಃ ।
ಓಂ ಮಾಯಿನೇ ನಮಃ ।
ಓಂ ಮೂಷಕವಾಹನಾಯ ನಮಃ ।
ಓಂ ರಮಾರ್ಚಿತಾಯ ನಮಃ ।
ಓಂ ವಿಧಯೇ ನಮಃ ।
ಓಂ ಶ್ರೀಕಂಠಾಯ ನಮಃ । 100 ।

ಓಂ ವಿಬುಧೇಶ್ವರಾಯ ನಮಃ ।
ಓಂ ಚಿಂತಾಮಣಿದ್ವೀಪಪತಯೇ ನಮಃ ।
ಓಂ ಪರಮಾತ್ಮನೇ ನಮಃ ।
ಓಂ ಗಜಾನನಾಯ ನಮಃ ।
ಓಂ ಹೃಷ್ಟಾಯ ನಮಃ ।
ಓಂ ತುಷ್ಟಾಯ ನಮಃ ।
ಓಂ ಪ್ರಸನ್ನಾತ್ಮನೇ ನಮಃ ।
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ । 108 ।

ಇತಿ ಶ್ರೀ ವಿನಾಯಕ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್

ಬೆಳಗಾಗಿ ಮೊದಲು ಪ್ರಾರ್ಥಿಸು ಮನವೆ / Belagagi modalu prarthisuve manave

ಬೆಳಗಾಗಿ ಮೊದಲು ಪ್ರಾರ್ಥಿಸು ಮನವೆ
ಆದಿ ದೈವ ಗಣೇಶನ
ಗೋಕರ್ಣದಲಿ ಮಹಿಮೆ ತೋರಿದ
ಉರಗ ವಿಭೂಷಣ ಗಣೇಶನ ||ಬೆಳಗಾಗಿ||

ಆತ್ಮಲಿಂಗವ ಶಿವನಿಂದ ಪಡೆದು
ಬರುತಿರೆ ಲಂಕೇಶ ರಾವಣನು
ತನ್ನನು ಪೂಜೆಯ ಮಾಡದವನಿಗೆ
ಬುಧ್ಧಿಯ ಕಲಿಸಿದ ಗಣೇಶನು  ||ಆತ್ಮಲಿಂಗವ||
ವಟುವಿನ ರೂಪದಿ ರಾವಣನೆದುರು
ಬಂದನು ಸಂಜೆಗೆ ಗಣೇಶನು||ವಟುವಿನ||
ಸಂಧ್ಯಾ ವಂದನೆ ಮುಗಿಸಿ ಬರುವೆನೆಂದು
ಲಿಂಗವ ಇತ್ತನು ರಾವಣನು||ಸಂಧ್ಯಾ||   ||ಬೆಳಗಾಗಿ||

ಆತ್ಮಲಿಂಗವು ಅಸುರಗೆ ಸೇರಲು
ಹಾನಿ ಎಂದರಿತ ಗಣೇಶನು
ಭೂಮಿಗೆ ಲಿಂಗವ ಇಡಲು ಒಡನೆ
ದುಃಖಿತನಾದನು ರಾವಣನು   ||ಆತ್ಮಲಿಂಗವು||
ಅಂದಿನಿಂದ ಅದು ಗೋಕರ್ಣವೆನಿಸಿ
ಭೂಕೈಲಾಸವು ಆಗಿಹುದು||ಅಂದಿನಿಂದ||
ಗಣಪತಿ ಶಕ್ತಿಯ ಚಿಹ್ನೆ ಅದಾಗಿ
ಪುಣ್ಯ ಕ್ಷೇತ್ರವು ಎಣಿಸಿಹುದು||ಗಣಪತಿ||   ||ಬೆಳಗಾಗಿ||

Lyrics in English

Belagagi modalu prarthisu manave
aadi daiva ganeshana
gokarnadali mahime torida
uraga vibhushana ganeshana ||

Aatmalingava shivaninda padedu
barutire lankesha ravananu
tannanu poojeya madadavanige
buddhiya kalisida ganeshana ||
vatuvina roopadi ravananeduru
bandanu sanjege ganeshana |
Sandhya vandyane mugisi baruvenendu
lingava ittanu ravananu ||

Aatmalingava asurage seralu
Hani endarita ganeshanu
bhumige lingava idalu odane
dukhitanadanu ravananu |
andininda adu gokarnanenisi
bhukailasavu aagihudu |
ganapati shaktiya chinhe adagi
punya kshetravu enisihudu ||

ಏನು ಕರುಣಾ ಹೃದಯನೂ ಏಕದಂತನೇ / Enu Karuna hrudayano ekadantane

ಏನು ಕರುಣಾ ಹೃದಯನೂ
ಏಕದಂತನೇ
ಸಾಟಿ ಇಲ್ಲವು ನಿನ್ನ ಪ್ರೀತಿಗೆ
ಲಂಬೋದರನೇ    ||ಏನು||

ಪುಟ್ಟ ಇಲಿಯನು ನಿನ್ನ ವಾಹನ
ಮಾಡಿಕೊಂಡೆ ಬೆನಕನೇ
ಅದರ ಮೇಲೆ ನಿನ್ನ ಕರುಣೆ
ಮಳೆಯ ಕರೆದೆ ಗಣಪನೆ ||
ಒಂದು ಹುಲ್ಲು ಗರಿಕೆ
ನಿನಗೆ ಅರ್ಪಿಸಿದರೆ ಸಾಕು ||ಒಂದು||
ಮಂಜಿನಂತೆ ಕಷ್ಟ ಕರಗಿ
ಬಾಳು ಬೆಳಗಲೆ ಬೇಕು ||ಏನು||

ತಂದೆ ತಾಯಲಿ ಮೂರು ಲೋಕವ
ಕಂಡ ಪರಮ ಜ್ಞಾನಿಯೇ  ||ತಂದೆ||
ಜ್ಞಾನ ಫಲವನು ಪಡೆದ ಬಾಲನೇ
ಜ್ಞಾನವಾರಿದಿಯೆ       ||ಜ್ಞಾನ||
ಕಡಲೆ ಬೆಲ್ಲವ ಅರ್ಪಿಸಿದರು
ತೃಪ್ತಿ ಅದರಲೆ ಪಡುವೆ ನೀ ||ಕಡಲೆ||
ಮಂತ್ರ ತಂತ್ರವ ಅರಿಯದಿದ್ದರೂ
ಶುದ್ಧ ಮನಸಿಗೆ ಒಲಿವೆ ನೀ    ||ಏನು||

ಬಾಳು ಎನುವ ನೌಕೆಗೆ
ನೀನೇ ಎಂದು ಅಂಬಿಗ ||ಬಾಳು||
ಯಾವುದೇ ಬಿರುಗಾಳಿ ಬಂದರು
ತೀರ ಸೇರಿಸೋ ನಾವಿಕ ||ಯಾವುದೇ||
ತುಂಬಿದೆ ಈ ನನ್ನ ಮನದೆ
ಅಜ್ಞಾನದ ಕತ್ತಲೆ   ||ತುಂಬಿದೆ||
ಜ್ಞಾನ ಜ್ಯೋತಿ ಬೆಳಗಿ
ದಾರಿ ತೋರಿಸೋ ವಿನಾಯಕ  ||ಏನು||

Lyrics in English

Enu Karuna hrudayano
ekadantane
sati illavu Ninna preetige
lambodarane || Enu ||

Putta iliyanu Ninna vahana
madikonde benakane
adhara mele Ninna karune
maleya karedu ganapane ||
ondu gullu garike
ninage arpisidare saku |
manjinante kashta karagi
balu belagale beku ||

Tande tayali mooru lokava
kanda parama jnaniye |
jnana phalavanu padeda balane
jnanavaridhiye ||
kadale bellava arpisidaru
truptiyu adorable paduve nee
mantra tantrava ariyadiddaru
shuddha manassige olive nee ||

Balu ennuva noukege
Neene endu ambiga |
yavude birugali bandaru
teera seriso navika |
tumbide e nanna manade
ajanada kattale |
jnana Jyoti belagi
Dari toriso vinayaka || Enu ||

ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ / Shree swarna gowri ashtottara

ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ ‌   ‌      ‌   

                            ‌    ‌          ‌                                                                   
ಓಂ ಶಿವಾಯೈ  ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ  ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಕರುಣಾರಸಸಾಗರಾಯೈ  ನಮಃ ।
ಓಂ ಕಮಲಾರಾಧ್ಯಾಯೈ  ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ  ನಮಃ ।
ಓಂ ಕಮಲಾಸನಸಂಸ್ತುತಾಯೈ  ನಮಃ ।
ಓಂ ಅಂಬಿಕಾಯೈ  ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ  ನಮಃ ।               (೧೦)

ಓಂ ಆನಂದವಿಗ್ರಹಾಯೈ  ನಮಃ ।
ಓಂ ಈಷಣತ್ರಯನಿರ್ಮುಕ್ತಾಯೈ  ನಮಃ ।
ಓಂ ಹೃತ್ಸರೋರುವಾಸಿನ್ಯೈ  ನಮಃ ।
ಓಂ ಆದ್ಯಂತರಹಿತಾಯೈ  ನಮಃ ।
ಓಂ ಅನೇಕಕೋಟಿಭಾಸ್ಕರವಲ್ಲಭಾಯೈ ನಮಃ ।
ಓಂ ಈಶರೋತ್ಸಂಗನಿಲಯಾಯೈ  ನಮಃ ।
ಓಂ ಈತಿಭಾದಾವಿನಾಶಿನ್ಯೈ  ನಮಃ ।
ಓಂ ಇಂದಿರಾರತಿಸಂಸೇವ್ಯಾಯೈ  ನಮಃ ।
ಓಂ  ಈಶ್ವರಾರ್ಧಶರೀರಿಣ್ಯೈ ನಮಃ ।
ಓಂ ಲಕ್ಷ್ಯಾರ್ಥರೂಪಾಯೈ  ನಮಃ ।                        (೨೦)

ಓಂ ಲಕ್ಷ್ಮೀಶಬ್ರಹ್ಮೇಶಾಮರ  ಪೂಜಿತಾಯೈ  ನಮಃ ।
ಓಂ ಉತ್ಪತ್ಯಾದಿವಿನಿರ್ಮುಕ್ತಾಯೈ  ನಮಃ ।
ಓಂ ವಿದ್ಯಾಪ್ರತಿಪಾದಿನ್ಯೈ  ನಮಃ ।
ಓಂ ಊರ್ಧ್ವಲೋಕಪ್ರದಾತ್ರ್ಯೈ  ನಮಃ ।
ಓಂ ಹಾನಿವೃದ್ಧಿವಿವರ್ಜಿತಾಯೈ  ನಮಃ ।
ಓಂ ಸರ್ವೇಶ್ವರ್ಯೈ  ನಮಃ ।
ಓಂ ಸರ್ವಲಭ್ಯಾಯೈ  ನಮಃ ।
ಓಂ ಗುರುಮೂರ್ತಿಸ್ವರೂಪಿಣ್ಯೈ ನಮಃ ।
ಓಂ ಸಮಸ್ತಪ್ರಾಣಿನಿಲಯಾಯೈ ನಮಃ ।
ಓಂ ಸರ್ವಮಂಗಳಾಯೈ  ನಮಃ ।             (೩೦)

ಓಂ ಸರ್ವಲೋಕಸುಂದರ್ಯೈ  ನಮಃ ।
ಓಂ ಕಾಮಾಕ್ಷ್ಯೈ  ನಮಃ ।
ಓಂ ಕಾಮದಾತ್ರ್ಯೈ ನಮಃ ।
ಓಂ ಕಾಮೇಶಾಂಕನಿವಾಸಿನ್ಯೈ  ನಮಃ ।
ಓಂ ಹರಾರ್ಧದೇಹಾಯೈ  ನಮಃ ।
ಓಂ ಕಲ್ಹಾರಭೂಷಿತಾಯೈ  ನಮಃ ।
ಓಂ ಹರಿಲೋಚನಾಯೈ  ನಮಃ ।
ಓಂ ಲಲಿತಾಯೈ  ನಮಃ ।
ಓಂ ಲಾಕಿನೀಸೇವ್ಯಾಯೈ  ನಮಃ ।
ಓಂ ಲಬ್ಧೈಶ್ವರ್ಯಪ್ರವರ್ತಿನ್ಯೈ  ನಮಃ ।            (೪೦)

ಓಂ ಹ್ರೀಂಕಾರಪದ್ಮನಿಲಯಾಯೈ  ನಮಃ ।
ಓಂ ಹ್ರೀಂಕಾರಾರ್ಣವಕೌಸ್ತುಭಾಯೈ  ನಮಃ ।
ಓಂ ಸಮಸ್ತಲೋಕಜನನ್ಯೈ  ನಮಃ ।
ಓಂ ಸರ್ವಭೂತೇಶ್ವರ್ಯೈ  ನಮಃ ।
ಓಂ ಕರೀಂದ್ರರೂಢಸಂಸೇವ್ಯಾಯೈ  ನಮಃ ।
ಓಂ ಕಮಲೇಶಸಹೋದರ್ಯೈ  ನಮಃ ।
ಓಂ ಕಷ್ಟದಾರಿದ್ರ್ಯಶಮನ್ಯೈ  ನಮಃ ।
ಓಂ ಲಕ್ಷಗಾಘೋಷಾಂಬಾಯೈ  ನಮಃ ।
ಓಂ ಹ್ರೀಂಕಾರ ಬಿಂದುಲಕ್ಷಿತಾಯೈ  ನಮಃ ।
ಓಂ ಏಕಾಕ್ಷರ್ಯೈ  ನಮಃ ।                           (೫೦)

ಓಂ ಏಕರೂಪಾಯೈ  ನಮಃ ।
ಓಂ ಐಶ್ವರ್ಯಫಲದಾಯಿನ್ಯೈ  ನಮಃ ।
ಓಂ ಓಂಕಾರವರ್ಣನಿಲಯಾಯೈ  ನಮಃ ।
ಓಂ ಔದಾರ್ಯಾದಿಪ್ರದಾಯೈ  ನಮಃ ।
ಓಂ ಗಾಯತ್ರ್ಯೈ  ನಮಃ ।
ಓಂ ಗಿರಿಜಾಕನ್ಯಾಯೈ  ನಮಃ ।
ಓಂ ಗೂಢಾರ್ಥಬೋಧಿನ್ಯೈ  ನಮಃ ।
ಓಂ ಚಂದ್ರಶೇಕರರ್ಧಾಂಗ್ಯೈ  ನಮಃ ।
ಓಂ ಚೂಡಾಮಣಿವಿಭೂಷಿತಾಯೈ  ನಮಃ ।
ಓಂ ಜಾಜಿಚಂಪಕಪುನ್ನಾಗಕೇತಕೀಕುಸುಮಾರ್ಚಿತಾಯೈ  ನಮಃ ।          (೬೦)

ಓಂ ತನುಮಧ್ಯಾಯೈ  ನಮಃ ।
ಓಂ ದಾನವೇಂದ್ರಸಂಹೃತ್ಯೈ  ನಮಃ ।
ಓಂ ದೀನರಕ್ಷಿಣ್ಯೈ ನಮಃ ।
ಓಂ ಸ್ವಧರ್ಮಪರಸಂಸೇವ್ಯಾಯೈ  ನಮಃ ।
ಓಂ ಧನಧಾನ್ಯಾಭಿವೃದ್ಧಿದಾಯೈ  ನಮಃ ।
ಓಂ ನಾಮರೂಪವಿವರ್ಜಿತಾಯೈ  ನಮಃ ।
ಓಂ ಅಪರಾಜಿತಾಯೈ  ನಮಃ ।
ಓಂ ಪರಮಾನಂದರೂಪಾಯೈ  ನಮಃ ।       (೭೦)
ಓಂ ಪಾಶಾಂಕುಶಭಯಾವರವಿಲಸತ್ಕರಪಲ್ಲವಾಯೈ  ನಮಃ ।
ಓಂ ಪುರಾಣಪುರುಷಸೇವ್ಯಾಯೈ  ನಮಃ ।
ಓಂ ಪುಷ್ಪಮಾಲಾವಿರಾಜಿತಾಯೈ  ನಮಃ ।
ಓಂ ಫಣೀಂದ್ರರತ್ನಶೋಭಾಢ್ಯಾಯೈ  ನಮಃ ।
ಓಂ ಬದರೀವನವಾಸಿನ್ಯೈ  ನಮಃ ।
ಓಂ ಬಾಲಾಯೈ  ನಮಃ ।
ಓಂ ವಿಕ್ರಮಸಂಹೃಷ್ಟಾಯೈ  ನಮಃ ।
ಓಂ ಬಿಂಬೋಷ್ಟ್ಯೆೈ   ನಮಃ ।
ಓಂ ಬಿಲ್ವಪೂಜಿತಾಯೈ  ನಮಃ ।           (೮೦)

ಓಂ ಬಿಂದುಚಕ್ರೈಕನಿಲಯಾಯೈ  ನಮಃ ।
ಓಂ ಭವಾರಣ್ಯದವಾನಲಾಯೈ  ನಮಃ ।
ಓಂ ಭವಾನ್ಯೈ  ನಮಃ ।
ಓಂ ಭವರೋಗ್ಯೈ   ನಮಃ ।
ಓಂ ಭಾವದೇಹಾರ್ಧಧಾರಿಣ್ಯೈ  ನಮಃ ।
ಓಂ ಭಕ್ತಸೇವ್ಯಾಯೈ  ನಮಃ ।
ಓಂ ಭಕ್ತಗಣ್ಯಾಯೈ  ನಮಃ ।
ಓಂ ಭಾಗ್ಯವೃದ್ಧಿಪ್ರದಾಯಿನ್ಯೈ  ನಮಃ ।
ಓಂ ಭೂತಿದಾತ್ರ್ಯೈ  ನಮಃ ।
ಓಂ ಭೈರವಾದಿಸಂವೃತಾಯೈ  ನಮಃ ।
ಓಂ ಶ್ರೀ ಮಹೇಶ್ವರ್ಯೈ  ನಮಃ ।           (೯೦)

ಓಂ ಸರ್ವೇಷ್ಟಾಯೈ  ನಮಃ ।
ಓಂ ಶ್ರೀ ಮಹಾದೇವ್ಯೈ  ನಮಃ ।
ಓಂ ತ್ರಿಪುರಸೌಂದರ್ಯೈ  ನಮಃ ।
ಓಂ ಮುಕ್ತಿದಾತ್ರೇ  ನಮಃ ।
ಓಂ ರಾಜರಾಜೇಶ್ವರ್ಯೈ  ನಮಃ ।
ಓಂ ವಿದ್ಯಾಪ್ರದಾಯಿನ್ಯೈ  ನಮಃ ।
ಓಂ ಭಾವರೂಪಾಯೈ  ನಮಃ ।
ಓಂ ವಿಶ್ವಮೋಹಿನ್ಯೈ   ನಮಃ ।
ಓಂ ಶಾಂಕರ್ಯೈ  ನಮಃ ।
ಓಂ ಶತೃಸಂಹತ್ರ್ಯೈ  ನಮಃ ।                (೧೦೦)

ಓಂ ತ್ರಿಪುರಾಯೈ  ನಮಃ ।
ಓಂ ತ್ರಿಪುರೇಶ್ವರ್ಯೈ  ನಮಃ ।
ಓಂ ಶ್ರೀ ಶಾರದಾಸಂಸೇವ್ಯಾಯೈ  ನಮಃ ।
ಓಂ ಮದ್ಸಿಂಹಾಸನೇಶ್ವರ್ಯೈ  ನಮಃ ।
ಓಂ ಶ್ರೀ ಮನ್ಮುನೀಂದ್ರ  ಸಂಸೇವ್ಯಾಯೈ  ನಮಃ ।
ಓಂ ಮನ್ನಮರನಾಯಿಕಾಯೈ  ನಮಃ ।
ಓಂ ಶ್ರೀ ರಾಜರಾಜೇಶ್ವರ್ಯೈ  ನಮಃ ।
ಓಂ ಶ್ರೀ ಸ್ವರ್ಣಗೌರ್ಯೈ  ನಮಃ ।                    (೧೦೮)


।।ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ  ಶತನಾಮಾವಳಿ  ಸಂಪೂರ್ಣಂ।।

ಶ್ರೀ ಗೌರೀ ಅಷ್ಟೋತ್ತರ ಶತನಾಮಾವಲಿಃ / Shree gowri ashtottara shatanamavali

ಓಂ ಮಹಾಮನೋನ್ಮಣೀಶಕ್ತ್ಯೈ ನಮಃ ।
ಓಂ ಶಿವಶಕ್ತ್ಯೈ ನಮಃ ।
ಓಂ ಶಿವಂಕರ್ಯೈ ನಮಃ ।
ಓಂ ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಸ್ವರೂಪಿಣ್ಯೈ ನಮಃ ।
ಓಂ ಶಾನ್ತ್ಯತೀತ ಕಲಾನನ್ದಾಯೈ ನಮಃ ।
ಓಂ ಶಿವಮಾಯಾಯೈ ನಮಃ ।
ಓಂ ಶಿವಪ್ರಿಯಾಯೈ ನಮಃ ।
ಓಂ ಸರ್ವಜ್ಞಾಯೈ ನಮಃ ।
ಓಂ ಸುನ್ದರ್ಯೈ ನಮಃ ।
ಓಂ ಸೌಮ್ಯಾಯೈ ನಮಃ । 10 ।

ಓಂ ಸಚ್ಚಿದಾನನ್ದರೂಪಿಣ್ಯೈ ನಮಃ ।
ಓಂ ಪರಾಪರಾಮಯ್ಯೈ ನಮಃ ।
ಓಂ ಬಾಲಾಯೈ ನಮಃ ।
ಓಂ ತ್ರಿಪುರಾಯೈ ನಮಃ ।
ಓಂ ಕುಂಡಲ್ಯೈ ನಮಃ ।
ಓಂ ಶಿವಾಯೈ ನಮಃ ।
ಓಂ ರುದ್ರಾಣ್ಯೈ ನಮಃ ।
ಓಂ ವಿಜಯಾಯೈ ನಮಃ ।
ಓಂ ಸರ್ವಾಯೈ ನಮಃ ।
ಓಂ ಶರ್ವಾಣ್ಯೈ ನಮಃ । 20 ।

ಓಂ ಭುವನೇಶ್ವರ್ಯೈ ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಶೂಲಿನ್ಯೈ ನಮಃ ।
ಓಂ ಕಾನ್ತಾಯೈ ನಮಃ ।
ಓಂ ಮಹಾತ್ರಿಪುರಸುನ್ದರ್ಯೈ ನಮಃ ।
ಓಂ ಮಾಲಿನ್ಯೈ ನಮಃ ।
ಓಂ ಮಾನಿನ್ಯೈ ನಮಃ ।
ಓಂ ಮದನೋಲ್ಲಾಸ ಮೋಹಿನ್ಯೈ ನಮಃ ।
ಓಂ ಮಹೇಶ್ವರ್ಯೈ ನಮಃ ।
ಓಂ ಮಾತಂಗ್ಯೈ ನಮಃ । 30 ।

ಓಂ ಶಿವಕಾಮ್ಯೈ ನಮಃ ।
ಓಂ ಚಿದಾತ್ಮಿಕಾಯೈ ನಮಃ ।
ಓಂ ಕಾಮಾಕ್ಷ್ಯೈ ನಮಃ ।
ಓಂ ಕಮಲಾಕ್ಷ್ಯೈ ನಮಃ ।
ಓಂ ಮೀನಾಕ್ಷ್ಯೈ ನಮಃ ।
ಓಂ ಸರ್ವಸಾಕ್ಷಿಣ್ಯೈ ನಮಃ ।
ಓಂ ಉಮಾದೇವ್ಯೈ ನಮಃ ।
ಓಂ ಮಹಾಕಾಲ್ಯೈ ನಮಃ ।
ಓಂ ಸಾಮಾಯೈ ನಮಃ ।
ಓಂ ಸರ್ವಜನಪ್ರಿಯಾಯೈ ನಮಃ । 40 ।

ಓಂ ಚಿತ್ಪುರಾಯೈ ನಮಃ ।
ಓಂ ಚಿದ್ಘನಾನನ್ದಾಯೈ ನಮಃ ।
ಓಂ ಚಿನ್ಮಯ್ಯೈ ನಮಃ ।
ಓಂ ಚಿತ್ಸ್ವರೂಪಿಣ್ಯೈ ನಮಃ ।
ಓಂ ಮಹಾಸರಸ್ವತ್ಯೈ ನಮಃ ।
ಓಂ ದುರ್ಗಾಯೈ ನಮಃ ।
ಓಂ ಜ್ವಾಲಾದುರ್ಗಾದಿಮೋಹಿನ್ಯೈ ನಮಃ ।
ಓಂ ನಕುಲ್ಯೈ ನಮಃ ।
ಓಂ ಶುದ್ಧವಿದ್ಯಾಯೈ ನಮಃ ।
ಓಂ ಸಚ್ಚಿದಾನನ್ದವಿಗ್ರಹಾಯೈ ನಮಃ । 50 ।

ಓಂ ಸುಪ್ರಭಾಯೈ ನಮಃ ।
ಓಂ ಸುಪ್ರಭಾಜ್ವಾಲಾಯೈ ನಮಃ ।
ಓಂ ಇನ್ದ್ರಾಕ್ಷ್ಯೈ ನಮಃ ।
ಓಂ ಸರ್ವಮೋಹಿನ್ಯೈ ನಮಃ ।
ಓಂ ಮಹೇನ್ದ್ರಜಾಲಮಧ್ಯಸ್ಥಾಯೈ ನಮಃ ।
ಓಂ ಮಾಯಾಯೈ ನಮಃ ।
ಓಂ ಮಾಯಾವಿನೋದಿನ್ಯೈ ನಮಃ ।
ಓಂ ವಿಶ್ವೇಶ್ವರ್ಯೈ ನಮಃ ।
ಓಂ ವೃಷಾರೂಢಾಯೈ ನಮಃ ।
ಓಂ ವಿದ್ಯಾಜಾಲವಿನೋದಿನ್ಯೈ ನಮಃ । 60 ।

ಓಂ ಮನ್ತ್ರೇಶ್ವರ್ಯೈ ನಮಃ ।
ಓಂ ಮಹಾಲಕ್ಷ್ಮ್ಯೈ ನಮಃ ।
ಓಂ ಮಹಾಕಾಲೀಫಲಪ್ರದಾಯೈ ನಮಃ ।
ಓಂ ಚತುರ್ವೇದವಿಶೇಷಜ್ಞಾಯೈ ನಮಃ ।
ಓಂ ಸಾವಿತ್ರ್ಯೈ ನಮಃ ।
ಓಂ ಸರ್ವದೇವತಾಯೈ ನಮಃ ।
ಓಂ ಮಹೇನ್ದ್ರಾಣ್ಯೈ ನಮಃ ।
ಓಂ ಗಣಾಧ್ಯಕ್ಷಾಯೈ ನಮಃ ।
ಓಂ ಮಹಾಭೈರವಪೂಜಿತಾಯೈ ನಮಃ ।
ಓಂ ಮಹಾಮಾಯಾಯೈ ನಮಃ । 70 ।

ಓಂ ಮಹಾಘೋರಾಯೈ ನಮಃ ।
ಓಂ ಮಹಾದೇವ್ಯೈ ನಮಃ ।
ಓಂ ಮಲಾಪಹಾಯೈ ನಮಃ ।
ಓಂ ಮಹಿಷಾಸುರಸಂಹಾರ್ಯೈ ನಮಃ ।
ಓಂ ಚಂಡಮುಂಡಕುಲಾನ್ತಕಾಯೈ ನಮಃ ।
ಓಂ ಚಕ್ರೇಶ್ವರ್ಯೈ ನಮಃ ।
ಓಂ ಚತುರ್ವೇದ್ಯೈ ನಮಃ ।
ಓಂ ಸರ್ವದಾಯೈ ನಮಃ ।
ಓಂ ಸುರನಾಯಿಕ್ಯೈ ನಮಃ ।
ಓಂ ಷಟ್ಶಾಸ್ತ್ರನಿಪುಣಾಯೈ ನಮಃ । 80 ।

ಓಂ ನಿತ್ಯಾಯೈ ನಮಃ ।
ಓಂ ಷಡ್ದರ್ಶನವಿಚಕ್ಷಣಾಯೈ ನಮಃ ।
ಓಂ ಕಾಲರಾತ್ರ್ಯೈ ನಮಃ ।
ಓಂ ಕಲಾತೀತಾಯೈ ನಮಃ ।
ಓಂ ಕವಿರಾಜಮನೋಹರಾಯೈ ನಮಃ ।
ಓಂ ಶಾರದಾತಿಲಕಾಕಾರಾಯೈ ನಮಃ ।
ಓಂ ಧೀರಾಯೈ ನಮಃ ।
ಓಂ ಧೀರಜನಪ್ರಿಯಾಯೈ ನಮಃ ।
ಓಂ ಉಗ್ರಭಾರ್ಯೈ ನಮಃ ।
ಓಂ ಮಹಾಭಾರ್ಯೈ ನಮಃ । 90 ।

ಓಂ ಕ್ಷಿಪ್ರಮಾರ್ಯೈ ನಮಃ ।
ಓಂ ರಣಪ್ರಿಯಾಯೈ ನಮಃ ।
ಓಂ ಅನ್ನಪೂರ್ಣೇಶ್ವರ್ಯೈ ನಮಃ ।
ಓಂ ಮಾತ್ರೇ ನಮಃ ।
ಓಂ ಸ್ವರ್ಣಾಕಾರತಟಿತ್ಪ್ರಭಾಯೈ ನಮಃ ।
ಓಂ ಸ್ವರವ್ಯಂಜನವರ್ಣೋದಯಾಯೈ ನಮಃ ।
ಓಂ ಗದ್ಯಪದ್ಯಾದಿಕಾರಣಾಯೈ ನಮಃ ।
ಓಂ ಪದವಾಕ್ಯಾರ್ಥನಿಲಯಾಯೈ ನಮಃ ।
ಓಂ ಬಿನ್ದುನಾದಾದಿಕಾರಣಾಯೈ ನಮಃ ।
ಓಂ ಮೋಕ್ಷೇಶಮಹಿಷ್ಯೈ ನಮಃ । 100 ।

ಓಂ ಸತ್ಯಾಯೈ ನಮಃ ।
ಓಂ ಭುಕ್ತಿಮುಕ್ತಿಫಲಪ್ರದಾಯೈ ನಮಃ ।
ಓಂ ವಿಜ್ಞಾನದಾಯಿನ್ಯೈ ನಮಃ ।
ಓಂ ಪ್ರಜ್ಞಾಯೈ ನಮಃ ।
ಓಂ ಪ್ರಜ್ಞಾನಫಲದಾಯಿನ್ಯೈ ನಮಃ ।
ಓಂ ಅಹಂಕಾರಕಲಾತೀತಾಯೈ ನಮಃ ।
ಓಂ ಪರಾಶಕ್ತ್ಯೈ ನಮಃ ।
ಓಂ ಪರಾತ್ಪರಾಯೈ ನಮಃ । 108 ।

|। ಇತಿ ಶ್ರೀ ಗೌರೀ ಅಷ್ಟೋತ್ತರ ಶತನಾಮಾವಲಿಃ ॥

ಮುಸುರೆ ತೊಳೆಯಬೇಕು ಮನಸ್ಸಿನ / Musure toleyabeku manassina

ಮುಸುರೆ ತೊಳೆಯಬೇಕು, ಮನಸ್ಸಿನ
ಮುಸುರೆ ತೊಳೆಯಬೇಕು ||ಮುಸುರೆ||

ಮುಸುರೆ ತೊಳೆಯಬೇಕು
ಗುಸುಗುಸು ಬಿಡಬೇಕು ||ಮುಸುರೆ||
ಈಶ ಪ್ರೇರಣೆಯೆಂಬ
ಹಸಿಯ ಹುಲ್ಲನು ಹಾಕಿ ||ಮುಸುರೆ||

ಅಷ್ಟಮದದಿಂದ ಸುಟ್ಟ
ಈ ಪಾತ್ರೆಯ. ||ಅಷ್ಟ||
ವಿಷ್ಣು ನಾಮವೆಂಬ
ಕೃಷ್ಣಾ ನದಿಯಲ್ಲಿ   ||ಮುಸುರೆ||

ಕಾಮ ಕ್ರೋಧದಿಂದ ಬೆಂದ
ಈ ಪಾತ್ರೆಯ.   ||ಕಾಮ||
ರಾಮ ಕೃಷ್ಣರೆಂಬೊ
ಹೇಮಾ ನದಿಯಲ್ಲಿ ||ಮುಸುರೆ||

ವಿಷವೆಂಬೊ ಪಾತ್ರೆಯ
ಮುಸುರೆಯ ತೊಳದಿಟ್ಟು ||ವಿಷ||
ಬಿಸಜಾಕ್ಷ ಪುರಂದರ
ವಿಠಲಗರ್ಪಿಸೋ ನಿತ್ಯ ||ಮುಸುರೆ||

Lyrics in English

Musure toleyabeku, manassina
Musure toleyabeku ||Musure||

Musure toleyabeku
Gusugusu bidabeku ||Musure||
Eesha prerane yemba
Hasiya hullanu haaki ||Eesha||
||Musure||

Ashtamada dinda sutta
Ee paatreya ||Ashta||
Vishnu naamavemba
Krishna nadiyalli ||Vishnu||
||Musure||

Kaama krodhadinda benda
Ee paatreya ||Kaama||
Rama Krishnarembo
Hema nadiyalli ||Rama||
||Musure||

Vishavemb o paatreya
Musureya toladittu ||Visha||
Bisajaaksha Purandara
Vithalagar pso nitya ||Bisajaaksha||
||Musure||

ಮರಣ ಬಂದು ಒದಗುವುದೇ ಸತ್ಯ

ಮರಣ ಬಂದು ಒದಗುವುದೇ ಸತ್ಯ….
ಸಂಕರುಷಣನೇ ಕೇಳು ಎನ್ನ ಬಿನ್ನಪ
ನಿನ್ನ ಚರಣ ಸ್ಮರಣೆ ಎನಗಿರುವುದಿಲ್ಲವೋ….
ತಿಳಿಯೆ ಹರಿಯೇ
ಹರಿಯೇ ನಿನ್ನದಾಗಲಿ ಎಂಥಾದು ಕರುಣ
ಹರಣ ಮನಸು ಸ್ವಾಧೀನವಿದ್ದಾಗ ನೆರೆನಂಬಿ ಸ್ತೋತ್ರಗಳ 
ಮಾಳ್ಪೆನೆಯ್ಯಾ ….
ಕರುಣಾಂಬುಧಿ ಮರೆವು ಕಲೆಸದಿರು ಆ ಕಾಲಕ್ಕೆ ….
ನಿರ್ಯಾಣ ಸಮಯಕ್ಕೆ ನಿನ್ನ ನಾಮಂಗಳು ಉಚ್ಚರಣೆಯಾಗುವಂತೆ ಪ್ರೇರಿಸಬೇಕೊ…. 
ವರುಣಾಂತರ್ಯಾಮಿ ವಿಜಯವಿಠ್ಠಲರೇಯ….
ಶರಣರ ಆರಭಾರವೊಹಿಸುವ ದೇವ….ವಿಠ್ಠಲ ವಿಠ್ಠಲ ವಿಠ್ಠಲ

ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು / Dhanyanade pandurangana kannare kandu

ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು || ಪ ||

ತಂದೆತಾುಯ ಸೇವೆ ಮಾಡಿ ಪುಂಡಲೀಕನ ಭಕ್ತಿಗೊಲಿದು
ಚಂದ್ರಭಾಗಾ ತೀರದಲ್ಲಿ ಬಂದು ನಿಂತ ವಿಠ್ಠಲನ ಕಂಡು || 1 ||

ವೆಂಕಟೇಶ ಅಲ್ಲಿರುವ ಶಂಖಚಕ್ರ ಪಿಡಿದ ಕರವ
ಟೊಂಕದ ಮೇಲಿಟ್ಟುಕೊಂಡು ನಿಂತು ಇಲ್ಲಿ ವಿಠಲನಾದ || 2 ||

ಕಡಗೋಲಿಂದ ಗಡಿಗೆ ಒಡೆದು ತುಡುಗು ಮಾಡಿದ್ಹುಡುಗ
ಬಂದ ಉಡುಪಿಯಲ್ಲಿ ಕೃಷ್ಣನಾಗಿ ಓಡಿ ಬಂದಿಲ್ಲಿ ವಿಠಲನಾದ || 3 ||

ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ ವಿಠಲ ರೂಪದಿಂದ
ಭಕ್ತಜನರಿಗಾಲಿಂಗನ ಭೆಟ್ಟಿ ಕೊಡುತ ನಿಂತುಬಿಟ್ಟ || 4 ||

ಅನ್ನಬ್ರಹ್ಮ ಉಡುಪಿಯಲ್ಲಿ ಚಿನ್ನ ಬ್ರಹ್ಮ ಬೆಟ್ಟದಲ್ಲಿ
ಸಣ್ಣ ತುಳಸಿಮಾಲೆ ಸಾಕು ನಾದಬ್ರಹ್ಮ ಭೂಪತಿವಿಠಲಗೆ || 5 ||
ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ

ಈ ದಾಸರ ಪದದಲ್ಲಿ ಶ್ರೀ ಪಾಂಡುರಂಗ ವಿಠ್ಠಲನ ಮಹಿಮೆ, ಅವನ ವಿವಿಧ ಕ್ಷೇತ್ರಗಳಲ್ಲಿನ ರೂಪಗಳು ಮತ್ತು ಭಕ್ತರ ಮೇಲಿನ ಕರುಣೆಯನ್ನು ಬಹಳ ಸುಂದರವಾಗಿ ವರ್ಣಿಸಲಾಗಿದೆ.

ವೆಂಕಟೇಶ, ಕೃಷ್ಣ, ಉಡುಪಿಯ ಶ್ರೀಕೃಷ್ಣ ಮತ್ತು ಪಾಂಡುರಂಗ ವಿಠ್ಠಲ — ರೂಪಗಳು ಬೇರೆ ಇದ್ದರೂ ದೇವರು ಒಬ್ಬನೇ.
ತಂದೆ-ತಾಯಿಯ ಸೇವೆ, ನಿಷ್ಕಳಂಕ ಭಕ್ತಿ ಮತ್ತು ಸರಳವಾದ ಪ್ರೀತಿಯ ಅರ್ಪಣೆಯಿಂದ ದೇವರನ್ನು ಒಲಿಸಬಹುದು. ದೇವರ ದರ್ಶನ ಮತ್ತು ಭಕ್ತಿ ದೊರೆಯುವುದು ಅನೇಕ ಜನ್ಮಗಳ ಪುಣ್ಯದ ಫಲ ಎಂಬ ಭಾವವನ್ನು ಕವಿ ಅತ್ಯಂತ ಭಕ್ತಿಯಿಂದ ವ್ಯಕ್ತಪಡಿಸಿದ್ದಾನೆ.

Lyrics in English

Dhanyanāde Pāṇḍuraṅgana Kaṇṇāre Kaṇḍu || Pa ||

Tandeyāya Sēve Māḍi Puṇḍalīkana Bhaktigolidu
Candrab hāgā Tīradalli Bandu Ninta Viṭṭhalana Kaṇḍu || 1 ||

Veṅkaṭēśa Alliruva Śaṅkhacakra Piḍida Karava
Toṅkina Mēl iṭṭukoṇḍu Nintu Illi Viṭṭhalanāda || 2 ||

Kaḍagōlinda Gaḍige Oḍedu Tuḍugu Māḍida Huḍuga
Banda Uḍupiyalli Kṛṣṇanāgi Ōḍi Bandilli Viṭṭhalanāda || 3 ||

Eṣṭu Janmada Sukṛtavo Śrī-Kṛṣṇa Viṭṭhala Rūpadinda
Bhaktajanarig Āliṅgana Beṭṭi Koḍuta Nintubiṭṭa || 4 ||

Annabrahma Uḍupiyalli Cinnabrahma Beṭṭadalli
Saṇṇa Tuḷasimāle Sāku Nādabrahma Bhūpativiṭṭhalage || 5 ||

Galagali Vāsastha Śrī Pāṇḍuraṅga

ಉಗಾಭೋಗ / ಅರಿತವರನು ಕಾಣೆ ನಿನ್ನ ದೇವ ಅರವಿದೂರನೆ

ಉಗಾಭೋಗ


ಅರಿತವರನು ಕಾಣೆ ನಿನ್ನ ದೇವ ಅರವಿದೂರನೆ ತವ ಮಹಿಮೆಯು ಘನ್ನ ಭಂಡಿಕಾಲನು ಪಿಡಿದೆಯಂತೆ,
ಹತ್ತು ಭಂಡಿರಾಯನ ಸುತ ನೀನಾದೆಯಂತೆ ಭಂಡಿಸುರನ ಕೊಂದೆಯಂತೆ,
ಧುರದಿ ಭಂಡಿನಡಿಸಿ ನರನ ಸಲಿಹಿದೆಯಂತೆ ತಂದೆತಂದೆಗೆ ತಂದೆಯಂತೆ,
ಜಗದ ತಂದೆ ನಿನ್ನಗೆ ತಾಯಿತಂದೆಗಳಂತೆ ತಂದೆ ವಿಪ್ರಜರ ನೀನಂತೆ
ಸ್ವಾಮಿ ತಂದೆ ನೃಪಾಲನ ಸುತೆಗೀಶನಂತೆ ಸಿಂಧೂರದ್ವಯವರದನಂತೆ,
ಮಧ್ಯ ಸಿಂದೂರವದನವು ನಿನಗಿಹುದಂತೆ ಸಿಂಧುಮಂದಿರ ನೀನಂತೆ,
ಶ್ಯಾಮ-ಸುಂದರ ನಿನಗೆ ಭಕ್ತರ ಚಿಂತೆಯಂತೆ


– ಶ್ಯಾಮಸುಂದರದಾಸರು

Lyrics in english

Aravidūrane Tava Mahimeyu Ghanṇa
Bhandi Kaalanu Pidideyante,

Hattu Bhandiraayana Suta Neenaadeyante
Bhandi Surana Kondeyante,
Dhuradi Bhandi Nadisi Narana Salihideyante
Tande Tandeyege Tandeyante,

Jagada Tande Ninnage Taayi Tande Galante
Tande Viprajara Neenante
Swaami Tande Nrupaalaṇa Sutegīshanante
Sindhooradvaya Varadanante,

Madhya Sindhooravadanu Ninagihudante
Sindhu Mandira Neenante,
Shyaama-Sundara Ninage Bhaktara Chinteyante.