ಶಾರದಾಂಬಿಕೆ ನಿತ್ಯ ಶಾರದಾ ಕೊಡು / Sharadambike Nitya sharadambe kodu

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ |
ಸಾರುವೆ ನಾ ನಿನ್ನ ||ಪ||

ಪುಂಡರೀಕ ನಯನೆ ಪುಂಡರೀಕನ ರಾಣಿ
ಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ |
ಪುಂಡರೀಕನಾಥನುತೆ ಪುಂಡರೀಕವೆ ನಮಗೆ || 1 ||

ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ |
ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ |
ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ || 2 ||

ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ |
ಕೌಂಶಿಕವೇಣಿ ಕರುಣಿ |
ಕೌಂಶಿಕ ವಿಜಯವಿಠ್ಠಲನಲ್ಲಿ
ಕೌಂಶಿಕದವನ ಮಾಡು || 3 ||

Lyrics in English

Sharadaambike nitya Sharadaa kodu enage |
Saaruve naa ninna ||Pa||

Pundareeka nayane Pundareekana raani
Pundareeka gamane | Pundareeka charmaambara |
Pundareeka naathanute Pundareekave namage || 1 ||

Shuchi shareerale enna shuchiya maaduva ee |
Shuchiyolage ninna keerthi shuchiyaagi manadalli |
Shuchi jana pelutide | Shuchi maargavane torise || 2 ||

Kaumshika vaaniye Kaumshika bimbasadane |
Kaumshika veni karuni |
Kaumshika Vijaya Vitthalanalli
Kaumshikadavana maadu || 3 ||

****************************************************************************

ತಾಯಿ ಶಾರದೆ ಲೋಕಪೂಜಿತೆ / Taayi sharade loka poojite

ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಖಸ್ತುತೆ ||
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ || ತಾಯಿ ಶಾರದೆ ||

ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು |
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ಶಾಂತಿಯ ಉಳಿಸು ||

ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ |
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ, ನಮ್ಮ ಕೋರಿಕೆ ಆಲಿಸಮ್ಮ ||

ಒಳ್ಳೆ ಮಾತುಗಳಾಡಿಸು
ಒಳ್ಳೆ ಕೆಲಸವ ಮಾಡಿಸು |
ಒಳ್ಳೆ ದಾರಿಯಲೆಮ್ಮನಡೆಸು
ವಿದ್ಯೆಯ ಕಲಿಸು, ಆಸೆ ಪೂರೈಸು ||

Lyrics in English

Taayi Sharade Loka Poojite

Taayi Sharade loka poojite Jnaanadaate namostute ||
Premadindali salahu maate Needu sanmati soukhyadaate || Taayi Sharade ||

Andhakaarava oadisu Jnaanajyotiya belagisu |
Hridaya mandiradalli nelesu Chinteya alisu shaantiya ulisu ||

Ninna madilina makkalamma Ninna nambida kandaramma |
Ninna karuneya belakalemma Baalanu belagamma, namma korike aalisamma ||

Olle maatugalaadisu Olle kelasava maadisu |
Olle daariyalemmanadesu Vidyeya kalisu, aase pooreisu ||

ಭಾವದಲೆಯಲಿ ಶಾರದೆ ಗಾನ/ Bhaavadaleyali shaarade gaana

ಭಾವದಲೆಯಲಿ ಶಾರದೆಗಾನ
ರಾಗ ಹೊಮ್ಮಲು ಶಾರದೆ ನಾಮ
ಹ್ರದಯ ಹಾಡಿತು ,ಶಾರದೆ ಗಾನ||2||
ಶಾರದೆ ಗಾನ ಶ್ರಂಗೇರಿಯ ಧ್ಯಾನ||3||
||ಭಾವದಲೆಯಲಿ||

ನನ್ನಯ ಮನವಿಂದು ಶಾರದೆ ಸದನ||2||
ಹ್ರದಯ ಜ್ಯೋತಿ ಬೆಳಗಿಪೆನು
ಅವಳಿಗೆ ದಿನ ನಾ|
ರೋಮಾಂಚನ ತಾಯಿ ಶಾರದೆ ಧ್ಯಾನ||2||
ಶಾರದೆ ಗಾನ ಶ್ರಂಗೇರಿಯ ಧ್ಯಾನ||3||
||ಭಾವದಲೆಯಲಿ||

ತಾಯಿ ದರುಶನದಿಂದ ಅರಳಿತು ವದನ
ಅಂಧಕಾರದ ಚೆಲುವು ನೋಡಿತು ನಯನ
ಸುತ್ತಮುತ್ತಲು ಎಲ್ಲಾ ತಾಯಿ ದರುಶನ||2||
ಶಾರದೆ ಗಾನ ಶ್ರಂಗೇರಿಯ ಧ್ಯಾನ||3||
||ಭಾವದಲೆಯಲಿ||

ಕರುಣಾಮಯಿ ಸಿರಿದೇವಿ ತಾಯಿ ಶಾರದೆ||2||
ಕರಮುಗಿವೆ ತಾಯಿ ನಿನಗೆ ಶರಣನಾಗಿಹೆ||2||
ನಿನ್ನ ಚರಣ ಸೇವೆ ಭಾಗ್ಯ ಸತತ ಬೇಡುವೆ
ಶಾರದೆ ಗಾನ ಶ್ರಂಗೇರಿಯ ಧ್ಯಾನ||3||
||ಭಾವದಲೆಯಲಿ||

Lyrics in English

Bhavadaleyali sharade gaana |
raga hommalu sharade naama || bhavadale ||
hrudaya haaditu sharade gaana |
sharade gaana shrugeriya dhyana || bhavadale||

Nannaya manavindu sharade sadana
hrudaya jyoti belagipenu avalige dina naa |
romanchana taayi sharade dhyana |
sharade gaana shrungeriya dhyana || bhavadale ||

Taayi darushanadinda aralitu vadana
andhakarada cheluvu noditu nayana|
suttamuttalu ella tayi darushana |
sharade gaana shrugeriya dhyana || bhavadale||

Karunaamayi siridevi taayi sharade |
karamugive taayi ninage sharanaagihe |
ninna charana seve bhagya satata beduve |
sharade gaana shrugeriya dhyana || bhavadale||


ಎಂಥ ಅಂದ ಎಂಥ ಚಂದ / Entha anda entha chanda

ಗಾಯಕರು : ಡಾ. ರಾಜ್ ಕುಮಾರ್. ಸಾಹಿತ್ಯ : ಚಿ. ಉದಯ್ ಶಂಕರ್

ಎಂಥ ಅಂದ ಎಂಥ ಚಂದ ಶಾರದಮ್ಮ ನೀನು
ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ ||

ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ
ನೋಡಲೆರಡು ಕಣ್ಣು ನನಗೆ ಸಾಲದಮ್ಮ ||

ಇನ್ನು ಇನ್ನು ನೋಡುವಾಸೆ ತುಂಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ||ಇನ್ನು||
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ
ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ ||

ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ
ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ
ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ ||
ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ
ರತ್ನದಂಥ ಮಾತುಗಳನೆ ಆಡಿಸಮ್ಮ
ಒಳ್ಳೆ ರತ್ನದಂಥ ಮಾತುಗಳನೆ ಆಡಿಸಮ್ಮ ||
ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ
ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ ||

ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮಾ
ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ || ಅಲ್ಲಿ ||
ಬೇರೆ ಏನು ಬೇಕು ಎಂದು ಕೇಳೇನಮ್ಮ ನಿನ್ನ
ಬೇರೆ ಏನು ಬೇಕು ಎಂದು ಕೇಳೆನಮ್ಮ ನಿನ್ನ
ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ
ನನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ ||ನನ್ನ ||

This song is dedicated to Goddess Sharadamba sung by the veteran, Karnataka rathna Dr. Rajkumar, lyrics is by Shri.Chi Udayashankar… This song describes the beauty of Goddess Sharadamba, who is the goddess of wisdom and knowledge in Hinduism..

Lyrics in English:

Entha anda entha chanda Sharadamma neenu
Entha anda entha chanda Sharadamma ninna
ninna nodaleradu kannu nanage saaladamma||

Entha anda entha chanda Sharadamma ninna
ninna nodaleradu kannu nanage saaladamma||

Innu innu noduvaase tumbithamma
innu koti januma barali nanage saaladamma||Innu||
Abhaya hasta nodi jeeva kuniyitamma
Abhaya hasta nodi jeeva kuniyitamma
ninna paadakamaladalli shiravu baagitamma
ninna paadakamaladalli shiravu baagitamma

Entha anda entha chanda sharadamma neenu
Entha anda entha chanda Sharadamma ninna
ninna nodaleradu kannu nanage saaladamma

Entha shakti ninnalideyo Shaaradamma
ninna nodi haado aase banditamma
Entha shakti ninnalideyo Shaaradamma ||
ninna nodi haado aase banditamma
rathnadanta maatugalane aadisamma
olle rathnadanta maatugalane aadisamma ||
raaga bhaava bhakti tumbi haadisamma
olle raaga bhaava bhakti tumbi haadisamma||

Alli illi vodo manasu nannadamma
bega bandu nelesu alli sharadamma|| Alli ||
bere yenu beku endu kelenamma ninna
bere yenu beku endu kelenamma ninna
veene tanti maadi nudisu Sharadamma
nanna veene tanti maadi nudisu Sharadamma||nanna||


ವಂದಿಪೆ ನಮ್ಮ ಮುದ್ದು / vandipe namma muddu sharade

ವಂದಿಪೆ ನಮ್ಮ ಮುದ್ದು ಶಾರದೆ
ಶರಚಂದಿರ ವದನೆ ಶಾರದೆ |
ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ||2||
ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ||ವಂದಿಪೆ||

ಸಿತಾಬ್ಜಾಸನೆ ಸುಖದಾಯಕಿ
ಸುರ ನಾಥಾರಾಧಿತೆ ವಿಶ್ವನಾಯಕಿ |
ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆ
ವೇದೋಪನಿಷದ್ಗೀತೆ ವಾಗ್ದೇವಿ ಮಾತೆ|
||ವಂದಿಪೆ||

ಕೋಕಿಲವಾಣಿ ಕವಿಸೇವಿತೆ
ಎನ್ನ ವಾಕು ಲಾಲಿಸೆ ಮುನಿವಂದಿತೆ |
ತೋಕನೆಂದು ಸುವಿವೇಕ ಬುದ್ಧಿಯನಿತ್ತು ಸಾಕು ಸಜ್ಜನರನ್ನು
ವಾಕು ಮನ್ನಿಸು ತಾಯೆ ||ವಂದಿಪೆ||

ಪಾತಕಿಗಳ ಒಡನಾಡಿ ನಾ ನಿನ್ನ
ಪೋತಾಬ್ಜಪದ ಭಜಿಸದೆ ಹೋದೆ |
ಪಾತಕವೆಣಿಸದೆ ಸೀತಾರಮಣ
ಜಗನ್ನಾಥ ವಿಠ್ಠಲನಂಘ್ರಿ ಗೀತಾಮೃತವನುಣಿಸು
||ವಂದಿಪೆ||

Lyrics in English

Composer : Sri Jagannatha dasrau

Vandipe namma muddu sharade |
shara chandira vadane sharade || vandipe ||

Indeevarakshi shataanandana priye devi |
kundu Nodade | shruti vande jnanava neede || vandipe ||

Seetabjaasane sukhadaayaki |
suranaatharaadite vishwanaayaki |
veethadurite shivamaate sadgunamani vraate |
vedopanishadgeete vaagdevi master || vandipe ||

Kokilavaani kavisevite
enna vaaku laalise munivandite ||
kokila|| tokanendu suviveka buddiyanittu saadhu sajjanarannu

vaaku mannisu taaye || vandipe ||

Paatakigala odanaadi naa ninna
pottabjapada bhajisade hode ||
paatakavenisade seetaramana
jagannatha vittalananghri geetamrutavanunisu || vandipe ||