ಎಷ್ಟು ಬಾರಿ  ಮೊರೆ ಇಡಲಿ ಶಂಭೋ / Eshtu bari more idali shambha shankara

ಎಷ್ಟು ಬಾರಿ  ಮೊರೆ ಇಡಲಿ
ಶಂಭೋ ಶಂಕರಾ
ಕಷ್ಟಗಳ ನೀಗಿಸು ಬಾ ಹೇ ಮಹೇಶ್ವರ  ||ಎಷ್ಟು ||

ಅಜ್ಞಾನದ ಅಂಧಕಾರ ಮನಕೆ ಸುತ್ತಿದೆ
ಮುಂದೆ  ದಾರಿ ಕಾಣದಿದೆ
ಭಯವು ಮುತ್ತಿದೆ
ಪಾಪಗಳ ಹೊರೆಯನ್ನು ಹೊರಲಾರದೇ
ಭವಬಂಧದ ಜಾಲದಿಂದ ಬರಲಾರದೆ
ತತ್ತರಿಸಿದೆ ನೊಂದು ಬೆಂದು ನಿಂದಿರುವೆನು
ನಿನ್ನೊಲವಿನ ಸುದೆ ಹರಿಸಿ
ಕಾಪಾಡು ಬಂದೂ      ||ಎಷ್ಟು ||

ಪಶ್ಚಾತ್ತಾಪ ಎಂಬ ಬೆಂಕಿ ಸುಡುತಿದೆ ನನ್ನಾ
ಮಲಿನ ಕಳೆದು ಆಗಲಿ
ಮನ ಪುಟವಿಟ್ಟ ಚಿನ್ನ
ಕಂಬನಿಯಲಿ ಪಾದ ತೊಳೆವ
ಆಸೆ ಆಗಿದೆ
ನಿಂತಿರುವೆ ಮೌನದಲ್ಲಿ ಮಾತು ಬಾರದೆ
ಕರುಣಿಸಿ ಪ್ರಭು ನೀ
ಮನ ನೆಮ್ಮದಿ ತಾರಾಾ
ಕೈ ಹಿಡಿದು ನಡೆಸೆನ್ನಾ ಹೇ ದೀನ ಬಂಧು    ||ಎಷ್ಟು ||

ಆತ್ಮವೆಂಬ ಪ್ರಣವದಿಂದ ಆರಾಧಿಸುವೆ
ವಿಶ್ವಾಸದಿ ನಿಶ್ವಾಸದಿ ಕೀರ್ತಿ ಹಾಡುವೆ
ಪ್ರಾಣ ಜ್ಯೋತಿ  ದೀಪದಿಂದ ಆರತಿ ಗೈವೆ
ಭಕ್ತಿ  ಕುಸುಮ ತವ ಪಾದಕೆ ಅರ್ಚನೆಗೈವೆ
ಮುಕ್ತಿದಾರಿ ತೋರೋ
ಹೇ ಕರುಣಾಮಯನೆ
ತವ ಪಾದ ಪೂಜೆ ನೀಡು ಪಾವನಾಂಗನೇ    ||ಎಷ್ಟು ||

Lyrics in English

Eshtu bari more idali
shambha shankara
kashtagala neegisu baa he maheshwara ||Eshtu ||

Ajnanada andhakara manake suttide
munde daari kaanadide bhayavu muttide
papagala horeyannu horalarade
bhavabandhana jaladinda baralarade
ninnolavina sude harisi kapadu bandu || eshtu bari ||

Paahchattapa emba benki sudutide nanna
malina kaledu agali mana putavitta chinna ||
kambaniyali pada toleva aase agide ||
nintiruve mounadalli maatu barade karunisi
prabhu nee mana nemmadi taara kai hididu
nadesenna he deena bandhu || eshtu baari ||

Aatmavemba pranavadinda aradhisuve
vishwasadi nishwasadi keerti haduve
prana jyoti deepadinda aarati gaive
bhakti kusuma tava padake archane gaive
muktidari toro he karunamayane
tava pada pooje needu pavanangane || eshtu baari ||

Leave a Reply