
ಸಿಟ್ಟು ಮಾಡಿದರುಂಟೆ ಶ್ರೀ ಕೃಷ್ಣನಲ್ಲಿ ||ಪ||
ಕೊಟ್ಟು ಹುಟ್ಟದೆ ಮುನ್ನ ಈ ಸೃಷ್ಟಿಯಲ್ಲಿ ||ಅ||
ನೆಲವ ತೋಡಿದರಿಲ್ಲ ಛಲದಿ ಹೋರಿದರಿಲ್ಲ
ಕುಲಗೆಟ್ಟರಿಲ್ಲ ಕುಪ್ಪರಿಸಿದರು ಇಲ್ಲ
ಬಲವ ತೋರಿದರಿಲ್ಲ ಕೆಲಕೆ ಸಾರಿದರಿಲ್ಲ
ತಲೆಯ ಕಲ್ಲಿಗೆ ಹಾಯ್ದು ಒಡಕೊಂಡರಿಲ್ಲ ||
ಧರಣಿಯಾಳುವ ದೊರೆಯ ಓಲೈಸಿದರು ಇಲ್ಲ
ಉರಗನ ಬಿಲದೊಳಗೆ ಹೋದರು ಇಲ್ಲ
ಗಿರಿಗಹ್ವರಂಗಳಲಿ ತೊಳಲಿ ಬಳಲಿದರಿಲ್ಲ
ಬರಿದೆ ಹಲವರಿಗೆ ಬಾಯ್ದೆರೆದರಿಲ್ಲ ||
ದೊಂಬಲಾಗವ ಹಾಕಿ ಡಿಂಬ(/ದಿಂಡು) ತಿರುಗಿದರಿಲ್ಲ
ತುಂಬಿರುವ ಊರೊಳಗೆ ತಿರಿತಿಂದರಿಲ್ಲ
ಅಂಬುಜಾಕ್ಷ ಪುರಂದರವಿಠಲನ್ನ ಪಾ-
ದಾಂಬುಜವ ನೆನೆನೆನೆದು ಸುಖಿಯಾಗು ಮನವೆ ||
Lyrics in English
Sittu maadidarunte sri krishnanalli ||pa|| kottu huttade munna ee srushtiyalli ||a||
Nelava todidarilla chaladi horidarilla kulagettarilla kupparisidaru illa balava toridarilla kelake saaridarilla taleya kallige haaydu odakondarilla||
Dharaniyaaluva doreya olaisidaru illa uragana biladolage hodaroo illa girigahvaramgalali tolali balalidarilla baride halavaruge baayderedarilla ||
Dombalaagava haaki dimbatirugidarilla | tumbiruva orolage tiritindarilla |ambujaaksha purandara vittalanna paadambujava nenenenedu sukhiyaagu manave ||
