
ರಮಾಸಮುದ್ರನ ಕುಮಾರಿ ನಿನ್ನ ಸರಿಸಮಾನರ್ಯಾರಮ್ಮ |
ಉಮೇಶ ಮೊದಲಾದ ಮಾರನಿಕರವು ರಮಿಸಿ ನಿನ್ನ ಪದಕಮಲ ಭಜಿಪರು ||
ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಾಡುವೆ ಜಗವ |
ಕೋಪರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಪೋಷಿಸಬೇಕಮ್ಮ ||
ಕರುಣವಾರಿಧಿ ಎಂದು ಶರಣಾಜನರು ನಿನ್ನ ಸ್ಮರಣೆಯಮಾಡುವರೆ |
ಹರಿಣಾಕ್ಷಿ ಕೇಳೆಲೆ ಹರುಷದಿಂದಲಿ ಹರಿಚರಣವ ತೋರಿ ಅಗಹರಣವ ಮಾಡಿಸೆ ||
ವಾಸವನುತ ಸಿರಿ ಶೇಷವಿಠಲನೊಳು ವಾಸವಮಾಡುವಳೆ |
ಘಾಸಿಗೊಳಿಸದಲೆ ಈ ಸಮಯದಲಿ ವಾಸುದೇವಗೆ ಪೇಳಿ ಪೋಷಿಸಬೇಕಮ್ಮ ||
Lyrics in English
Ramasamudrana kumari ninna sarisamanaryaramma | umesh modalada maaranikaravu ramisi ninna padakamala bhajiparu ||
Apaaramahimana vyaaparangala tilidu kapaduve jagava | koparahitalagi Sripatiyolu namma taapatrayava peli poshisabekamma ||
Karunavaaridhi endu sharanajanaru ninna smarane maduvare | harinaakshi kelele harushadindali haricharava tori agaharanava maadise |||
Vaasavanuta siri sheshavittalanolu vasavamaaduvale | ghasigolisadale ee samayadali vasudevage peli poshisabekamma ||
Youtube link : https://youtu.be/JZr864Iju3c by Sri Ananth kulkarni
https://youtu.be/mhcUh-x5dpI by Vidyabhushana theertha Swamiji
