ಯಾಕೆ ಕಾಕುಲಾತಿ ಪಡುವೆ ಎಲೆ ಮರುಳೆ / Yaake kakulaati paduve ele marule

ರಚನೆ : ಪುರಂದರದಾಸರು

ಯಾಕೆ ಕಕ್ಕುಲಾತಿ ಪಡುವೆ ಎಲೆ ಮರುಳೆ |
ಲೋಕ ಮೂರನು ಆಳ್ವ ಶ್ರೀನಿವಾಸನು
ನಮ್ಮ ಸಾಕಲಾರದೆ ಬಿಡುವನೆ ಮರುಳೆ||

ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ
ಅಲ್ಲಿ ತಂದಿಡುವರಾರೋ|
ಎಲ್ಲವನು ತೊರೆದಿರುವ ಅರಣ್ಯವಾಸಿಯನು
ಅಲ್ಲೆ ಸಲಹದೆ ಬಿಡುವನೆ ಮರುಳೆ||

ಅಡವಿಯೊಳು ಹುಟ್ಟುವ ಮೃಗಜಾತಿಗಳಿಗೆಲ್ಲ
ಬಿಡದೆ ತಂದಿಡುವರಾರೋ|
ಗಿಡದಿಂದ ಗಿಡಗಳಿಗೆ ಹಾರುವ ಪಕ್ಷಿಗೆ
ಪಡಿಯನಳೆಯದೆ ಬಿಡುವನೇ ಮರುಳೆ||

ಎಂಭತ್ತನಾಲ್ಕು ಲಕ್ಷ ಜೀವರಾಶಿಗಳನ್ನು ಇಂಬಾಗಿ
ಸಲಹುತಿಹನು|
ನಂಬು ಶ್ರೀಪುರಂದರವಿಠ್ಠಲನ ಚರಣವನು
ನಂಬಿದರೆ ಸಲಹದಿಹನೇ ಮರುಳೆ||

ಈ ದಾಸರ ಪದದಲ್ಲಿ ಪುರಂದರದಾಸರು “ಓ ಮನವೇ, ಅನಾವಶ್ಯಕವಾಗಿ ಏಕೆ ಚಿಂತೆಪಡುತ್ತೀಯ? ಶ್ರೀನಿವಾಸನನ್ನು ನಂಬು” ಎಂದು ಹೇಳುತ್ತಾರೆ. ಕಾಡಿನ ಪ್ರಾಣಿಗಳು, ಪಕ್ಷಿಗಳು, ಕಪ್ಪೆ ಮುಂತಾದ ಎಲ್ಲಾ ಜೀವಿಗಳಿಗೂ ಭಗವಂತನೇ ಆಹಾರ ಮತ್ತು ಬದುಕನ್ನು ಒದಗಿಸುತ್ತಾನೆ. ಹಾಗೆಯೇ ಶ್ರೀ ಪುರಂದರವಿಠ್ಠಲನನ್ನು ನಂಬಿದ ಭಕ್ತನನ್ನೂ ಅವನು ಎಂದಿಗೂ ಕೈಬಿಡುವುದಿಲ್ಲ. ಆದ್ದರಿಂದ ಭಗವಂತನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು, ಚಿಂತೆಯನ್ನು ಬಿಟ್ಟು ಶರಣಾಗಬೇಕು ಎಂಬುದು ಈ ಹಾಡಿನ ಮುಖ್ಯ ಸಂದೇಶ.

Lyrics in English

Composer : Sri Purandara dasaru

Yaake kakulaati paduve ele marule |
loka mooranu alva srinivasanu namma
saakalaarade biduvane marule || yaake ||

Kallu padeyalli huttiruva mandukake
alli tandiduvaryaro |
ellavanu torediruva aranyavasiyanu
alle salahade biduvane marule ||yaake||

Adaviyolu huttuva mrugajaatigaligella
bidade tandiduvararo |
gidadinda gidagalige haaruva
pakshige padiyanaleyade biduvane marule || yaake||

Embattulaksha jeevaraashigalannu
embaagi salahutihanu |
nambu sri purandara vittalanna charanavanu
nambidare salahadihane marble || yaake||

Click the link to listen the song

Leave a Reply