ಈ ತನುವು ನಿನ್ನಾ ಗುಡಿ‌ ಪರಶಿವನೆ / Ee tanuvu Ninna gudi parashivane

ಈ ತನುವು ನಿನ್ನಾ ಗುಡಿ‌
ಪರಶಿವನೆ ಈ ಮನವು ನಿನ್ನಾ ನೆಲೆ
                       ||ಈ ತನುವು||

ನನ್ನುಸಿರ ಕಣಕಣಗಳು
ಶಿವ ನಿನ್ನ ನಾಮವನೆ ಕಣವರಿಸಿದೆ
ಜಯ ಜಯತು ಜಗಧೀಶ್ವರ ಪಾಹಿಮಾಂ
ಜಯ ಜಯತು ಗಂಗಾಧರ ||ಈ ತನುವು||

ನೀ ಸೂತ್ರಧಾರಿ ನಾ ಪಾತ್ರಧಾರಿ
ನಿನ್ನಿಚ್ಛೆ ನಾ ಅರಿಯೆನು
ನನ್ನಾತ್ಮ ಜ್ಯೋತಿ ಶಿವ ನೀನೆ ಎಂದು
ನಿನ್ನನ್ನೆ ನಂಬಿರುವೆನು
ಹೆತ್ತವಳ ಮನಸ್ಸು ಕಲ್ಲಾಗಿ ಹೋಯಿತೆ
ಶಂಕರಿಯೆ ಹೇಳು ಇದು ನ್ಯಾಯವೆ
ಸಿರಿತನವು ಬೇಡ ದೊರೆತನವು ಬೇಡ
ಸದ್ಗತಿಯು ನನಗಾಗಲಿ
ನನ್ನಾತ್ಮ ಶಿವಲೀಲೆಯನು ಹಾಡಲಿ
ಜಯ ಜಯತು ಜಗಧೀಶ್ವರ ಪಾಹಿಮಾಂ
ಜಯ ಜಯತು ಗಂಗಾಧರ

ಶಿವನಿತ್ತ ಜೀವ ಶಿವನಿಗರ್ಪಿಸಿದ
ಧನ್ಯತೆಯು ನನಗಾಗಲಿ
ನನ್ನ ತನುಮನವು ರೋಮ ರೋಮಗಳು
ನಿನ್ನ ರೂಪವ ನೆನೆಯಲಿ
ಮಂಗಳೆಯೆ ನಿನ್ನ ಮುನಿಸು ಕರಗಿರಲಿ
ಸತ್ಯಕ್ಕೆ ನ್ಯಾಯಕ್ಕೆ ಜಯ ದೊರಕಲಿ
ಶರಣರಿಗೆ ವಿಜಯ ಭಕುತರಿಗೆ ಅಭಯ
ಇದು ತಾನೆ ನಿಜ ನೀತಿಯು
ಭಕ್ತಿಯು ಪರಶಿವಗೆ ಬಲು ಪ್ರೀತಿಯು
ಜಯ ಜಯತು ಜಗಧೀಶ್ವರ ಪಾಹಿಮಾಂ
ಜಯ ಜಯತು ಗಂಗಾಧರ
                              ||ಈ ತನುವು||
ಸತ್ಯಂ ಶಿವಂ ಸುಂದರಂ||5||

Lyrics in English

Ee tanuvu ninna gudi
parashivane ee manavu ninna nele ||

Nannusira kanakanagalu shiva ninna namavane
kanavariside jaya jayatu jagadhishwara pahimam
jaya jayatu gangadhara ||

Nee sutradhari naa patradhari ninnicche naa ariyenu
nannatma Jyoti shiva neene Enduku ninnanne nambiruvenu |
hettavala manassu kallagi hoyite, shankariye helu idu
nyayave siritanavu beda doretanavu beda sadgatiyu
nanagagali nannatma shiva leeleyanu hadali
jaya jayatu jagadhishwara pahimam jaya jayatu gangadhara ||

Shivanitta jeeva shivanigarpisida dhanyateyu
nanagagali nanna tanumanavu roma romagalu
ninna roopava neneyali mangaleye ninna munisu
karagirali satyakke nyayakke jaya dorakali sharanarige
vijaya bhakurarige abhaya idu taane nija neetiyu
bhaktiyu parashivage balu preetiyu ||
jaya jayatu jagadhishwara pahimam jaya jayatu gangadhara || ee tanuvu ||

Satyam shiam sundaram||5||

*******************************************************************

ನೋಡಿದೆ ಗುರುಗಳ ನೋಡಿದೆ / Nodide gurugala nodide

ನೋಡಿದೆ ಗುರುಗಳ ನೋಡಿದೆ ||ಪ||

ನೋಡಿದೆನು ಗುರುಗಳ ಪಾದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದಣಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ ||ಪ.ಆ||

ಪಂಚಕೃಷ್ಣಾರಣ್ಯ ಕ್ಷೇತ್ರ ಪಿನಾಕಿನಿಯ ತೀರದಲ್ಲಿ ನಿಂತು
ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು||
ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ||
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ ||೧||

ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ||
ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ||
ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುವ ಯತಿಮೌಳಿ ರತುನರ ||೨||

ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ||
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆಣಿಸುತ್ತಾ ಮರೆಯುವ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ||೩||

Lyrics in English

Nodide gurugala nodide ||pa||

Nodidenu gurugala padabjava
Padidenu sanmahimegala na
Bedidenu manadaniye varagala
Idu illade koduva prabugala|| a.pa.||

Panchakrushnaranyakshetra pinakiya tiradalli nintu
minchutiha kashayadanda kamandalava dharisutta dhareyolu
Panchabanada pitana gunagala ancheyadi pogalutta harushadi
Sanchitagamigala kaledu prapanchadali merevantha gurugala ||1||

Alavabodhara bashyatika bavavanu sujanarige bodhisi
Kalushamatagiri samudayangala kulisadandali kandisutali
Mularama digvijayaramara padakamalake brunganenisuta
Silabakti viraktimatigala palisuta yatimauli ratunara ||2||

Kamadhenu sukalpataru chintamaniyavol kamitarthava
Premadali birutta adhyatmadi tapatraya kaleyuva
Svami srihari sridavithalana dasagraniyenisi marevara
Nemadindali sri raguttama maunivaryara karuna bayasuta ||3||

ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ / Olideyatakamma lakumi vasudevage

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ |
ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! ||

ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು |
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ ||

ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ |
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ||

ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು |
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||

Lyrics in English

Olide yaatakammaa lakumi vaasudevage || pa ||

Halavangadavana havane tilidu tilidu tiliyada haage || a.pa ||

Kamalagandhi komalaangi sundaraabjavadane neenu |
Ramana matsya kathina kaaya sookaraasyanu ||
Ramaneeya swaroopi neenu amita gora roopanavanu |
Namiparishtadaani neenu daanava beduvavanige || 1 ||

Lalita chaaru sheele neenu kalki kalaha preeyanavanu |
Kulada kuruhu illaa gunada neleya kandillaa |
Halavu kaaladavanu avana balaga bandhu nishkinchananu|
Jaladhi aaladeleya mele malagi berala cheepuvavanige || 2 ||

Swarataana pekshakaami nidraaheena anashaniyu |
Sparsharoopa vaachya shabda amita bhoktanu ||
Guru gopaalaviththalanu niruta tanna vakshadolu |
Aramaneya maadi kottu maralu maadida maayaavige || 3||

ಬಂದ್ಯಾ ವಿಠ್ಠಲ ಬಡವನಲ್ಲಿ ವ್ರಂದಾವನದಲ್ಲಿ / Bandya vittala vrundavanadalli

ಬಂದ್ಯಾ ವಿಠ್ಠಲ ಬಡವನಲ್ಲಿ||2||
ವ್ರಂದಾವನದಲ್ಲಿ ಗೋವ್ರಂದಗಳ ಕಾಯ್ದವನೆ  || ಬಂದ್ಯಾ||

ಕೊರಳಲಿ ಸರಿಗೆ ಸರಪಳಿ, ಪಚ್ಚೆ ಪದಕವು
ಪರಿಪರಿಯ ಹಾರ ಶ್ರೀ ತುಳಸಿಮಾಲೆ || ಕೊರಳಲಿ ||
ಸಿರಿಗಂಧ ಲೇಪ ಶ್ರೀವತ್ಸವುರ ಕಿರಿಡೊಳ್ಳು ||2||
ವರಕಟಿಗೆ ಘಂಟೆ ಪರಿಪರಿಯಧಾಮವ ಸುತ್ತಿ ||ಬಂದ್ಯಾ||

ಸುಳಿಗುರುಳು ಮೇಲೆ ,ಅರಳೆಲೆಯು ಕಿರೀಟ
ಎಲೆತಳಿರು ಚೂತ ,ಮಳ್ಳಿಗೆಯು ,ಧೂರ್ವೆ  ||ಸುಳಿಗುರುಳು||
ತಳತಲಿಪ ಮುಖನಾಸ ನಯನ ಹಣೆಯಲಿ ತಿಲಕ       ||ತಳತಲಿಪ||
ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ  ||ಬಂದ್ಯಾ||

ಮುಂಗೈ ಕಡಗ ಸರಪಳಿ ತೋಳ ಬಾಪುರಿ
ಶ್ರಂಗಾರವಾದ ಗದೆ ,ಶಂಖ ,ಚಕ್ರ   ||ಮುಂಗೈ||
ಅಂಗೈಯ ಪದುಮ,ಅಂಗುಲಿ ವೇಣು ಮೀಟುತ   ||ಅಂಗೈಯ||
ಹಿಂಗದೆ ಎನ್ನ ಅಂತರಂಗದ ಮನೆಗಿನ್ನು ||ಬಂದ್ಯಾ||

ಈಸುಬಗೆಯ ಪೂಜೆಯು ಎನ್ನಿಂದಲಾಗದು
ಲೇಶವಾದರು ಇಲ್ಲ  ಎನಗೆ ಜ್ಞಾನ ||ಈಸುಬಗೆಯ||
ಶ್ರೀಶನೆ ನೀ ನಂತಲ್ಲಿ ಸಕಲವು ಉಂಟು ||ಶ್ರೀಶನೆ||
ಶ್ರೀ ಶ್ರೀನಿವಾಸ ಗೋಪಾಲವಿಜಯವಿಠ್ಠಲ   ||ಬಂದ್ಯಾ||

Lyrics in English

Bandya vittala badavanalli || 2 ||
vrundavanadalli govrundagala kaydavane || bandya ||

Koralali sarige sarapali pacche padakavu
paripariya haara Shree tulasimale ||
sirigandha lepa shrivatsavura kiridollu |
varakatige ghanatege paripariyadhamava sutti || bandya ||

Suligurulu mele araleleyu kireeta
eletaliru choota, malligeyu dhurve
talatalipa mukhanasa nayana haneyali tilaka |
chalisuva karnakundala prabheyu shobhisuta || bandya ||

Mungai kadagola sarapali tola bapuri |
shrungaravada gade, shankha chakra ||
angaiya paduma anguli venu meetuta |
hingade Enna antarangada maneginnu || bandya ||

Eesu bageyinda poojeyo ennindalagadu |
leshavadaru illa enage jnana ||
shreeshane nee nintalli sakalavu untu |
Shree shrinivasa gopalavijaya vittala || bandya ||

ಇಂಥಾ ಗುರುಗಳ ಕಾಣೆನಾ ಭೂತಳದೊಳು / Intha gurugaLa kanenayya bhutaladolu

ಇಂಥಾ ಗುರುಗಳ ಕಾಣೆನಾ…
ಭೂತಳದೊಳು
ಇಂಥಾ ಯತಿಗಳ ಕಾಣೆನಾ…  ||ಇಂಥಾ||

ಇಂಥ ಗುರುಗಳ ಕಾಣೆ
ಮಂತ್ರ ಮಂದಿರದಲ್ಲಿ
ನಿಂತು ಭಜಕರಿಗೆ  ಚಿಂತೆ ಕಳೆವ ಕರುಣಿ   ||ಇಂಥಾ||

ದೇವಸ್ವಭಾವನೀತನು ಸತತ ಪವನ
ದೇವನಾವೇಶಯುಕ್ತನೂ  ||ದೇವ||
ಆವ ಸಂಶಯವ್ಯಾಕೆ ದೇವಾಧಿದೇವ ನರಮೃಗ
ದೇವನೀತನ ಭಕ್ತಿಗೆ ಧಾವಿಸಿ ಬಂದ ಸ್ತಂಭದಿ
ಭಾವ ಭಕ್ತಿಯಲಿ ಸೇವಿಪರಿಗೆ ಭವ ನೋವು ಕಳೆದು ಸುರ
ಗೋವಿನ ತೆರ ವರ ವೀವನು ಕರುಣದಿ
ಕಾವನು ಪರಮ ಪಾವನ ಚರಿತನು ಕೋವಿದರೊಡೆಯನು 
                                ||ಇಂಥಾ||

ವರಹಜ ತಟದಲ್ಲಿರುವ ಭಕ್ತರು ಕೂಗಿ
ಕರೆದಲ್ಲಿಗೋಡಿ ಬರುವ   ||ವರಹಜ||
ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ
ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ ಗರೆದನು ಕರುಣದಿ
ಪೊರೆದನು ಪರಮತ ಮುರಿದನು ಜಗದೋಳ್
ಮೆರೆದನು ಹೊಸ ಹೊಸ ಪರಿ ಸುಮಹೋತ್ಸವ ಹರುಷದಿ
ಪ್ರತಿದಿನ ಗುರು ಸುಯಮೀಂದ್ರರ
ಕರದಿಂಗೊಂಬರು        ||ಇಂಥಾ||

ಮಂದಜಾಸನ  ಜನಕ
ಶ್ರೀ ಶಾಮಸುಂದರನಂಘ್ರಿ ಸೇವಕ ‌‌‌‌‌‌‌‌‌‌‌ ||ಮಂದ||
ಕಂದರ್ಪಶರಕರಿ ವೃಂದ ಕೇಸರಿ ಎನಿಸಿ
ಗಂಧವಾಹನ ಮತ  ಸಿಂಧುವಿಗೆ
ಶಶಿಯಂದದಿ ರಾಜಿಸಿ ವೃಂದಾವನವನು
ಒಂದೆ ಮನದಲಿ ವಂದಿಸಿ ನಮಿಸುವ
ವಂದ್ಯಾಂಧಕರಿಗೆ  ಕಂದರಕ್ಷಿಗಳ
ಕುಂದದಿ ಕೊಡುವ ಕರ್ಮಂದಿ ಕುಲಾಗ್ರಣಿ     ||ಇಂಧಾ||

Lyrics in English

Intha gurugaLa kanena …. bhutaladolu
intha yatigala kanena …… || intha ||

Intha gurugaLa kane
mantra mandiradalli
nintu bhajakarige chinte kaleva karuni || intha ||

Devaswabhavaneetanu Satata pavana
devanaveshayukatanu || deva ||
aava samshayavyake devadideva naramruga
devaneetana bhaktige dhavisi Banda stambhadi
bhava bhaktiyali seviparige bhava novu kaledu sura
govina tera vara veevanu karunadi
kavanu parama pavana charitanu
kovidarodeyanu || intha ||

Varahaja tatadalliruva bhaktaru koogi
karedalligodi baruva || varahaja ||
maruta shastrada marma
bharitavadanta divya
parimala granthava virachisi
bhudharige garedanu karunadi
poredanu paramata muridanu jagadol
meredanu hosa hosa
pari sumahotsava harushadi pratidina
guru suyamindrara
karadimgombaru || intha ||

Mandajasana janaka
shri shamasundarananghri sevakana ||Manda||
kandarpasharakari vrunda kesari enisi
gandhavahana mata sindhuvige
shashiyandadi rajisi vrundavanavanu
onde manadalli vandisi namisuva
vandyandhakarige kandarakshigala
kundadi koduva karmandi kulagrani || intha ||


ಪಾಲಿಸೆ ವರ ಮಾಲೆಯ ಭ್ರಾಮರಿ ಚರಣ / Palise vara maleya bhramarige charana

ಪಾಲಿಸೆ ವರ ಮಾಲೆಯ ಭ್ರಾಮರಿ | ಚರಣ ಪಲ್ಲವ ಕುಸುಮವ
ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ
ವರ ಪ್ರಸಾದದ ಮಾಲೆಯ ||ಪಾಲಿಸೆ||

ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|
ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾ
ಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ
ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ||

ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|
ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವ
ಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆ
ವರ ಪ್ರಸಾದದ ಮಾಲೆಯ||ಪಾಲಿಸೆ||

ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|
ಕಟೀಲ ಕಣ್ಮಣಿ ಮಧುಮನೋನ್ಮಣಿ| ನಿನ್ನ ಅಡಿಗಳ ಹೂಗಳ
ಘನ್ನ ಮಹಿಮನ ಪ್ರಸಾದವ| ಮುಡಿಯ ಸೇವಂತಿ ಕರದ
ನಂದಿನಿ ವರ ಪ್ರಸಾದದ ಮಾಲೆಯ ||ಪಾಲಿಸೆ||

Lyrics in English

Paalise vara maleya bhramari | charana pallava
kusumava varada hastada pushpava | udiya mallige
karada taavare vara prasadada maleya ||palise ||

Sharanarannu poreyalende dharege bandu ninteya |
kateela rani kusumaveni | ninna paadada pankaja
gandha ghama ghama hoo dandeya | mudiya sampige
karada kedage vara prasadada maleya || palise ||

Bedidavarige needalende bhuvige odi bandeya |
kateela ambe sundarambe | parama charanada
pushpava gandha sambhrama dandeya |
mudiya naidile karada ranje vara prasadada maleya ||palise ||

Dhareya bharava eluhalende dumbi roopadi bandeya |
kateela kanmani madhumanonmani | ninna adigala hoogala
ghanna mahimana prasadava | mudiya sevanti
karada nandini vara prasadada maleya ||palise ||

ಕ್ಷೀರಸಾಗರದಲಿ ಜನಿಸಿ ಬಂದಂತ ವರಮಹಲಕ್ಷ್ಮಿ / Ksheerasagaradali janisi bandantha varamahalakshmi

ಕ್ಷೀರಸಾಗರದಲಿ ಜನಿಸಿಬಂದಂತ
ವರಮಹಲಕ್ಷ್ಮಿ ಕರುಣವ ಮಾಡಮ್ಮ
ನಿನ್ನ ಕರುಣೆಯ ತೋರಮ್ಮ ||ಪ||

ಸರ್ವದೇವತೆಗಳ ತ್ವರದಲಿ ನೋಡುತಾ
ಹರಿಸರ್ವೋತ್ತಮನೆಂದು ತಿಳಿದು ನೀ
ಕರವೀರಮಾಲೆಯ ಹಾಕಿದೆಯಮ್ಮ ||ಅ.ಪ.||

ಜನಕರಾಯನ ಕುವರಿ ನಿನ್ನನು ಅನುದಿನ ‌ನೆನೆವನು ಅನುಗ್ರಹಮಾಡಮ್ಮ
ಪಿನಾಕಿಧನುವ ಮುರಿದು ಹಾಕಿದ
ಶ್ರೀರಾಮಚಂದ್ರಗೆ ವರಮಾಲೆ ಹಾಕಿದ
ಜಾನಕಿ ನೀನಮ್ಮ ||೧||

ಅಂದು ರುಕ್ಮಿಯು ಶಿಶುಪಾಲನ ನಿಲ್ಲಿಸಿ
ಮಾಲೆಯ ಹಾಕೆನಲು
ಹಿಂಡುದೈವದ ಗಂಡ ಪುಂಡರೀಕಾಕ್ಷನೆ
ವರನೆನುತಲಿ ಮಂದಾರಮಾಲೆಯ ಹಾಕಿದ ರುಕ್ಮಿಣಿ ||೨||

ಭೂವೈಕುಂಠದ ಶ್ರೀನಿವಾಸನ ಕೂಡಿ
ಶ್ರಾವಣಮಾಸದ ಭಾರ್ಗವ ದಿನದಲ್ಲಿ
ಶ್ರೀವಿಠಲನ ಸಹಿತದಿ ತವಕದಿ ಬಾರಮ್ಮ
ಸೇವೆಯ ಮಾಡುವ ಅವಕಾಶವ ನೀಡಮ್ಮ||೩||

Lyrics in English

Ksheera sagaradalli janisi bandana
varamahalakshmi karunava madamma
Ninna karuṇeya toramma || pa ||

Sarva devategalolage twaradali noduta
harisarvottamanendu tilidu nee
karaveeramaleya hakidenamma || a.pa ||

Janakarayana kuvarti ninnane anudina nenevanu anugraha madamma
pinaki dhanuva muridu hakida
Shree ramachandrage varamale hakida
Janaki neenemma || 1 ||

Andu rukmiya shishupalana nillisi
maleya hakenalu
Hindu daivada ganda pundarikakshane
varanenutali mandaramaleya hakida rukmini || 2 ||

Bhuvaikuntada shreenivasana koodi
shravana Masada bhargava dinadali
shree vittalana sahitadi tavakadi baramma
seveya maduva avakashava nidamma || 3 ||

ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲ / Ramanamavembo namava nenedare bhayavilla

ರಾಮನಾಮವೆಂಬೋ ನಾಮವ ನೆನೆದರೆ
ಭಯವಿಲ್ಲ ಮನಕೆ
ಮೂರು ಲೋಕಕೆ ಕಾರಣ ಕರ್ತಾ
ನಾರಾಯಣ ಜಾಗಕೆ          ||ರಾಮ||
ಶ್ರೀಮನ್ ನಾರಾಯಣ ಜಗಕೆ ||೨ ||  ||ರಾಮ||

ಮತ್ಸ್ಯಾವತಾರವ ತಾಳಿದ ರಾಮ
ವೇದವ ತರುವದಕೆ
ಬೆಟ್ಟವ ಬೆನ್ನಲಿ ಪೊತ್ತ ರಾಮ
ಕೂರ್ಮಾವತಾರಕ್ಕೆ      ||ರಾಮ ||

ಭೂಮಿಯ ಪೊತ್ತು ನೀರೊಳು ಮುಳುಗಿದ
ವರಾಹವತಾರಕ್ಕೆ
ಕರುಳನು ಬಗೆದು ಮಾಲೆಯ ಧರಿಸಿದ
ಪ್ರಹ್ಲಾದನ ಸಲಹುದಕೆ  || ರಾಮ||

ಭೂಮಿಯ ದಾನವ ಬೇಡಿದ ರಾಮ
ವಾಮನವತಾರಕ್ಕೆ
ತಾಯಿಯ ಶಿರವನು ಕಡಿದನು ರಾಮ
ಭಾರ್ಗವತಾರಕ್ಕೆ       || ರಾಮ ||

ವನವಾಸವ ಮಾಡಿದ ರಾಮ
ಜನಕನ ವಾಕ್ಯಕ್ಕೆ
ಮಾವ ಕಂಸನ ಕೊಂದನು ಕೃಷ್ಣ
ತಾಯಿಯ ಬಿಡಿಸಲಿಕ್ಕೆ || ರಾಮ ||

ಸತಿಯರ ವ್ರತಗಳ ಕೆಡಿಸಿದ ರಾಮ
ತ್ರಿಪುರರ ಸಲಹುದಕ್ಕೆ
ವಾಹನ ಬಿಟ್ಟು ತುರಗವ ನೇರಿದ
ಕಲ್ಯವತಾರಕ್ಕೆ ||ರಾಮ ||

ಶ್ಯಾಮಲ ವರ್ಣವ ತಾಳಿದ ರಾಮ
ಸಾಮರ್ಥ್ಯನು ಜಗಕೆ
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ
ಗೋವಿಂದನು ಜಗಕೆ || ರಾಮ ||

Lyrics in English

Ramanamavembo namava nenedare
bhayavilla manake
mooru lokakke karana karta
narayana jagake || Rama ||
shreeman narayana jagake

Matsyavatarava talida rama
vedava taruvadake
bettada bennali potta rama
koormavatarakke || Rama ||

Bhumiya pottu neerolu mulugida
varahavatarakke
karulanu bagedu maleya dharisida
prahladana salahudake || Rama ||

Bhumiya danava bedida rama
vamanavatarakke
tayiya shiravanu kadidanu rama
bhargavatarakke || Rama ||

Vanavasava maḍida rama
janakana vakyakke
mava kamsana kondana krishna
tayiya bidisalikke || Rama ||

Satiyara vrutagala kedisidane rama
tripurara salahudake
vahana bittu turagava nerida
kalkyavatarakke || rama ||

Shyamala varnana talida rama
samarthyanu jagake
swami Shree Purandara vittalanu rama
govindana jagake || Rama ||

ಜಗದೋಧ್ಧಾರಾ ಬಾಬಾ ಜಗದೋದ್ಧಾರಾ / Jagadoddhara baba jagadoddhara

ಬಾ ಬಾ ಭಕುತರ ಹೃದಯ ಮಂದಿರ
ಬಾ ಬಾ ಜಗದೋದ್ಧಾರ ||pa||

ಬಾ ಬಾ ವೇಂಕಟಾಚಲ ವಿಹಾರ
ಬಾ ಬಾನೇಕಾವತಾರ ಧೀರ-ಶೂರ||a.pa||

ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ
ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ
ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವ ಪಕ್ಷ
ಅಕ್ಷಯವಂತ ಸೂಕ್ಷ್ಮಾಂಬರ ಧರಾ-
ಧ್ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೇರ ತಕ್ಷಣದಲಿ ತಂದ
ಅಕ್ಷರ ಪುರುಷ ಗೋವಿಂದ ||1||

ಜಾಂಬೂನಾದಾಂಬರ ಸಾಂಬಜನಕ-ನೀ
ಲಾಂಬುದ ವರ್ಣಸುಪೂರ್ಣ
ಸಾಂಬವಿನುತ ಸುಗುಣಾಂಬುಧಿ ನಾನಾ ವಿ
ಡಂಬನ ತೋರಿದ ಮಹಿಮ
ಕಾಂಬುವೆ ನಿನ್ನ ಚರಣಾಂಬುಜ ಮನದೊಳು
ಜಾಂಬುವಂತನ ಪರಿಪಾಲಾ ವಿ-
ಶ್ವಂಭರಂಬರಗ್ಗಣಿಯ ಪಡೆದ ವೃ-
ತ್ತುಂಬರೇಶಾಂಬುಧಿ ಶಾಯಿ ||2||

ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ
ಕಾಳೆ ಹೆಗ್ಗಾಳೆ ತಮ್ಮಟಿ ನಿ-
ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ
ಕಂಬುಡಿಕ್ಕಿ ವಾದ್ಯ
ಸೂಳೈಸುತಲಿರೆ ಭಾಗವತರು ಸಂ
ಮೇಳದಿ ಕುಣಿದೊಲಿದಾಡೆ
ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ
ಢಾಲುಗಳು ಒಪ್ಪಿರಲು||3||

ಹಂಸವಾಹನ ಕ್ರತುಧ್ವಂಸಿ ಸುಮನಸೋ
ತ್ತಂಸ ಕೃಶಾನು ಪಾಪಿಗಳ
ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ
ಕೌಂಶಿಕಾಪತಿಯು ಧನವ
ಅಂಶಮಾಲಿ ಸೋಮಕಂಶಿಕಮುನಿ ಪರಮ
ಹಂಸರು ಅಲ್ಲಲ್ಲಿ ನಿಂದು
ಸಂಶಯ ಮಾಡದೆ ಸಮ್ಮೊಗರಾಗಿಹರು
ಕಂಸಾರಿ ತ್ರಿಗುಣಾತೀಶ ||4||

ಮೂರು ನಾಮಂಗಳ ಧರಿಸಿದ ದಾಸರು
ವೀರ ಮಾರುತಿ ಮತದವರು
ಸಾರುತ್ತ ಬೊಮ್ಮಾದಿ ಸುರರುಗಳನ್ನು
ತಾರತಮ್ಯದಿಂದ ತಿಳಿದು
ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದ
ವಾರಿಧಿಯಲಿ ಮಗ್ನರಾಗಿ
ತಾರರು ಮನಸಿಗೆ ಮುರಡು ದೇವತೆಗಳ
ಸಾರ ಹೃದಯರು ನಿಂದಿಹರು ||5||

ಅಂದು ಬಲೀಂದ್ರನ್ನ ದ್ವಾರದಿ ನೀನಿರೆ
ಮಂದಮತಿಯು ರಾವಣನು
ಬಂದು ಕೆಣಕೆ ನಗುತ ಮಹಾಲೀಲೆ
ಯಿಂದಲಿ ನೀನಾ ಖಳನ
ಒಂದು ಶತಯೋಜನ ತಡಮಾಡದಲೆ ನೀ
ಹಿಂದಕ್ಕೆ ಬೆರಳಲ್ಲಿ ಒಗೆದೆ
ಇಂದು ನಿನಗೆ ಈ ರಥವ ನಡೆಸುವುದು
ಅಂದವಾಗಿಹುದೇನೊ ದೇವ||6||

ಬಂಗಾರ ರಥದೊಳು ಶೃಂಗಾರವಾದ ಶ್ರೀ
ಮಂಗಳಾಂಗ ಕಳಿಂಗ
ಭಂಗ ನರಸಿಂಗÀ ಅಂಗಜ ಜನಕ ಸಾ-
ರಂಗ ರಥಾಂಗ ಪಾಣಿ
ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲ-
ವಂಗ ನಾಯಕ ಪರಿಪಾಲ
ಸಂಗೀತ ಲೋಲ ಗೋಪಾಂಗನೆಯರ ಅಂತ-
ರಂಗ ಸಂತಾಪ ವಿದೂರ ||7||

ತಡಮಾಡಲಾಗದೊ ಪೊಡವೀಶ ನೀನಿಂದು
ತಡೆಯದಲೆ ಪೊರಟರೆ
ತಡೆವರಿನ್ನಾರೈಯ ವಡೆಯ ವೇದವೇದ್ಯ
ಕಡೆಗಣ್ಣಿನಿಂದ ನೋಡಿದಲೆ
ನಡೆವುದು ನುಡಿವುದು ಅಡಿಗಡಿಗೆ ನೀನು
ಬಿಡದೆ ಒಳಗೆ ಹೊರಗಿದ್ದು
ಸಡಗರ ದೈವವೆ ನುಡಿಯ ಲಾಲಿಸುವುದು
ವಡನೊಡನೆ ಪಾಲಿಸುತ್ತ||8||

ಹತ್ತವತಾರದ ಹರಿಯೆ ಘನಸಿರಿಯೆ
ಮತ್ತೊಬ್ಬರನು ಹೀಗೆ ಕರೆಯೆ
ಭೃತ್ಯರ ಸಂಗಡೋಡ್ಯಾಡುವ ದೊರೆಯೆ
ಎನ್ಹತ್ತಿಲಿ ಆಡುವ ಮರಿಯೆ
ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ
ಎತ್ತನೋಡಲು ನಿನಗೆ ಸರಿಯೆ
ಅತ್ತಿತ್ತ ಪೋಗದೆ ಇತ್ತ ಬಾರೈಯ
ಎನ್ಹತ್ತಿಲಿ ವೆಂಕಟದೊರೆಯ ||9||

Lyrics in English

Baba Bakutara hrudayamandira |
baba jagadoddhara |
baba venkatachalavihara |
babanekavatara | pa |

Daksha kamalaksha rakshasakulashiksha
lakshmanagraja lakshmivaksha
pakshivahana purnalakshana sarvesha
mokshadayaka pandavapaksha |
akshayavanta sukshmambaravasa-
dhyaksha pratyakshadidaiva
akshatanarera tikshanadali tanda
aksharapurusha govinda | 1 |

Jambunadambara sambajanaka ni-
lambudavarna suvarna
sambavinuta gunambudhe nanavi-
dambana torida mahima
kambeno ninna charanambuja manadolu
jambavantara paripalavi-
svambara ambaramaniya padedaru –
tumbara sambarasayi | 2 |

Bangara rathadolu shrungaravada sri-
mangalanga kalinga-
brunga narasinganamgajanaka-
rathanga sangapani |
sanga nissanga vihanga matanga |
ranganayaka paripala
sangitalola gopanganeyara
antaranga santapavidura | 3 |

Tala jagate maddale dumdubi ri |
kale heggale tammate
nissale panava tamburi pataka
kamsale tammati kambu dakkavadya |
solaisuttalire bagavatara
sammelavu kunidolidade |
salu pancina gumpu Chatra chamara
dvajadalugalavaroppiharo| 4 |

Charunamangalu dharisida dasaru |
viramarutiya matavanu |
saruta santata bommadigalanna |
taratamyadinda tilidu
bari bari ninna haraisi Ananda-
varidhiyolu magnaragi |
uradevategala tararu manasige
sara hrudaya nindiharo | 5 |

Hinde balindranu Bakutili ire
mandamatiravananu |
bandu kenakalu naguta
mahalileyinda nine A kalana
andu tadamadade baluyojanavire |
hindakke beralalli ogade |
indu ninage I ratha tadavuvadu |
andavagihadeno hariye | 6 |

Tadamadalagadu podavisa ninagi-
tade edure poratare
tadevarinnarayya odeya vedantasidda
kadegannimda nodadale
nadivadu nudivadu adigadige nine
bidade horagolagiddu
sadagarada daivave nudipalisuvadu
adigadige lalisuta | 7 |

Hamsavahana kratudhvamsi sumanaso-
ttamsa krusanu papigala
himse badisuva pumsa rakkasagasi
hamsavahana vayu dhanapa |
amsumali soma
hamsamuni allallenimdu |
samsevya madutta sammovagiharu |
kamsari trigunatita | 8 |

Hattavatarada hariye ganasiriye |
mattobbaranu hige kareye |
brutyara sangada tiruguva mariye enna
hattili aduva doreye |
chittadollaba namma vijayavithalareya |
etta nodalu ninage sariye |
attitta pogade sagibaruvado ene
ttalu venkata doreye | 9 |

ಉಗಾಭೋಗ / ಹತ್ತು ಗೋದಾನಕೆ ಸಮ ಹರಿಗೆ ವೃಷಭ / Ugabhoga / hattu godanake sama harige

ಉಗಾಭೋಗ

ಹತ್ತು ಗೋದಾನಕೆ ಸಮ, ಹರಿಗೆ ವೃಷಭ ದಾನ
ಹತ್ತು ವೃಷಭಕೆ ಸಮ, ಹಾರುವ ಕುದುರೆಕಾಣಿರೊ
ಹತ್ತು ಕುದುರೆಗೆ ಸಮ, ಹಸ್ತಿದಾನಕಾಣಿರೊ
ಹತ್ತು ಹಸ್ತಿಗೆ ಸಮ, ಒಂದು ಕ್ರತು
ಹತ್ತು ಕ್ರತುವಿಗೆ ಸಮ, ಹರಿಭಕ್ತರಿಗೆ ಕನ್ಯಾದಾನಕಾಣಿರೊ
ಹತ್ತು ಕನ್ಯಾದಾನಕೆ ಸಮ, ಹಸಿದವಗೆ ಅನ್ನದಾನಕಾಣಿರೊ
ಹತ್ತು ಅನ್ನದಾನಕೆ ಸಮ, ಉದಕದಾನಕಾಣಿರೊ
ನಿತ್ಯ ಪುರಂದರವಿಠಲನ ನೆನೆವ ಪುಣ್ಯಕೆಣೆಯಿಲ್ಲ ಎಣೆಯಿಲ್ಲಕಾಣಿರೊ ||

Lyrics in English

Hattu godanake sama, hariye vrushabha dana
hattu vrushabhakke sama, haruva kudure kaniro
hattu kudurege sama, hastidana kaniro
hattu hastige sama, ondu kratu
hattu kratuvige sama, haribhaktarige kanyadana kaniro
hattu kanyadanake sama, hasidavanige Anna Dana kaniro
hattu annadanake sama, udakadana kaniro
Nitya purandaravittalana neneva punyakeneyilla eneyilla kaniro ||