ಮಾಡು ಸಿಕ್ಕದಲ್ಲಾ ಮಾಡಿನ/Maadu sikkadalla madina

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ
ಜೋಡು ಹೆಂಡಿರಿಗಂಜಿ ಓಡಿಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲಾ ||

ಎಚ್ಚರಗೊಳಲಿಲ್ಲಾ ಮನವೆ ಹುಚ್ಚನಾದೆನಲ್ಲಾ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲಾ ||

ಮುಪ್ಪು ಬಂದಿತಲ್ಲಾ ತಪ್ಪದೆ ಪಾಯಸ ಉಣಲಿಲ್ಲಾ
ತುಪ್ಪದ ಬಿಂದಿಗೆ ತಿಪ್ಪೆಯಮೇಲೆ ತೊಪ್ಪನೆ ಬಿತ್ತಲ್ಲಾ ||

ಯೋಗವು ಬಂತಲ್ಲಾ ಬದುಕು ವಿಭಾಗವಾಯಿತಲ್ಲಾ
ಭೋಗಿಶಯನ ಶ್ರೀ ಪುರಂದರ ವಿಠಲನ ಆಗ ನೆನೆಯಲಿಲ್ಲಾ ||

Lyrics in English

Maadu sikkadalla maadina goodu sikkadalla | jodu hendirigangi odihoguvaga gode biddu bayalaayitalla ||

Eccharagolalilla manave hucchnadenalla | acchinolage mecchu mecchinolage acchu kiccheddu hoyitalla ||

Muppu banditalla tappade paayasa unalilla | tuppada bindige tippeya mele toppane bittalla ||

Yogavu bantalla baduku vibhagavayitalla | bhogishayana sri purandara vittalana aga neneyalilla ||

Youtube link : https://youtu.be/jSSQKueaHaU by Sri Vidyabhushana Theertha SwamiJi

Leave a Reply