
ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ |ಸ್ವಾಮಿ ಚಿನ್ಮಯನಿದ್ದಾನೆ | ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ ||
ಎಳ್ಳು ಕೊನೆಯು ಮುಳ್ಳುಮೊನೆಯು |ಪೊಳ್ಳು ಬಿಡದೆ ಒಳಗೆ ಹೊರಗೆ |ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ || ೧ ||
ಹಿಂದೆ ನಿನ್ನ ಸಲಹಿದರ‍್ಯಾರೋ ಮುಂದೆ ನಿನ್ನ ಸಲಹುವರ‍್ಯಾರೋ ಅಂದಿಗೂ ಇಂದಿಗೂ ಎಂದಿಗೂ ನಂದಿ ವಾಹನನಿದ್ದಾನೆ || ೨ ||
ನಾನು ನೀನು ಎಂಬುದು ಉಭಯ ಹೀನ ಗುಣಗಳೆಲ್ಲಾ ಕಳೆದು ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ || ೩ ||
Lyrics in English
Chintyake maadutiddi chinmayaniddaane | swami chinmayaniddaane | ninna chinteya bidisuva gowri kaantaniddane ||
Ellu koneyu mullu moneyu | pollu bidade olagehorage |ella taavinalli gowri vallabhaniddane ||1||
Hinde ninna salahidaryaro | munde ninna salahuvaryaro |2times|adindendendigoo nandi vaahaaniddane ||
Naanu neenu enba ubhaya heena gunagalella kaledu jnaani chidanand sukha sampoornaniddane ||
You can listen to the song here :
