
ಇದುವೇ ಪಂಡರಾಪುರ |
ವಿಠ್ಠಲ ಇದುವೇ ಪಂಡರಾಪುರ||
ಇದ ನಾ ಅರಿಯದೆ ಪೊದೆ ಮುಕುತಿಯ ಧಾಮ ||
ಪಾಪವ ತೊಳೆವ ಪಾವನ ಚಂದ್ರಭಾಗ | ತಾಪವ ಹರಿಸಿ ಶಾಂತಿಯ ನೀವ |
ಈ ವರ ಕ್ಷೇತ್ರ ಭೂವೈಕುಂಠ | ಭವ ಭಯ ಪರಿಹಾರ ವಿಠಲ||
ಪುಣ್ಯದ ದಿವಸ ಏಕಾದಶಿಯಿಂದು | ಹಾಡುತ ನಲಿಯುತ ಭಕುತರು ಬಂದು||
ನೋಡುವ ಭಾಗ್ಯ ಎನಗೆ ಇಂದು| ಕರುಣಿಸಿ ವರಗೈವೇ ವಿಠಲ ||
ಸಂತಾಳಜನಿಯು ಯೋಗಮಿಳನು| ಶ್ರೀ ತುಕರಾಮನು ಜ್ಞಾನೇಶ್ವರನು ||
ಪುಂಡಲೀಕನು ವಾಮದೇವನು | ಮೋಕ್ಷವನೆ ಪಡೆದ ವಿಠಲ ||
Lyrics in English
Iduve Pandharapura
Iduvē Paṇḍharāpura | Viṭhṭhala iduvē Paṇḍharāpura ||
Ida nā ariyade hōde mukutiya dhāma ||
Pāpava toḷeva pāvana Chandrabhāga | Tāpava harisi śhāntiya nīva |
Ī vara kṣhētra bhūvaikuṇṭha | Bhava bhaya parihāra Viṭhala ||
Puṇyada divasa ēkādaśhiyindu | Hāḍuta naliyuta bhakutaru bandu ||
Nōḍuva bhāgya enage indu | Karuṇisi varagaivē Viṭhala ||
Santāḷajaniyu Yōgamiḷanu | Śrī Tukarāmanu Jñānēśvaranu ||
Puṇḍalīkanu Vāmadēvanu | Mōkṣhavane paḍeda Viṭhala ||


