
ಇವನ ಹಿಡಿದುಕೊಂಡು ಹೊಗೆಲೋ ಜೋಗಿ ।।ಪ।।
ಇವ ನಮ್ಮ ಮಾತ ಕೇಳದೆ ಪುಂಡನಾದ ।।ಅ.ಪ।।
ಆಡುತಾಡುತ ಹೋಗಿ ನೀರೊಳು ಮುಳುಗಿದ
ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಹೊತ್ತ
ದಾಡೆಯ ಮೇಲೆ ತಾ ಧಾರಿಣಿ ನೆಗಹಿದ
ಹಿಡಿಯ ಹೋದರೆ ಬಾಯ ತೆರೆದು ಅಂಜಿಸಿದ ।।೧।।
ಹುಲ್ಲಲಿ ವಿಪ್ರನ ಕಣ್ಣ ತಿವಿದ ಬುದ್ಧಿ
ಇಲ್ಲೆಂದರೆ ಕೈಲಿ ಕೊಡಲಿಯ ಪಿಡಿದ
ಬಿಲ್ಲು ಹಿಡಿದು ರಾಕ್ಷಸರನು ಸವರಿದ
ಬಲ್ಲಿದ ಮಾವನ ಶಿರವನ್ನು ತರಿದ ।।೨।।
ಬತ್ತಲೆ ಕುದುರೆಯ ಹತ್ತಬೇಡೆಂದರೆ
ಹತ್ತಿದನೋ ಇವ ಛಲದಿಂದ
ಭಕ್ತವತ್ಸಲ ಸಿರಿ ಪುರಂದರವಿಠಲ
ಎತ್ತಲಾದರೂ ಕೊಂಡು ಹೋಗೆಲೊ ಜೋಗಿ ।।೩।।
Lyrics in English
Ivana hididukondu hogelo jogi ||pa||
Iva namma mata kelade pundanada ||a.pa||
Adutaduta hogi nirolu mulugida
Bedavendare betta bennalli hotta
Dadeya mele ta dharini negahida
Hidiya hodare baya teredu anjisida ||1||
Hullali viprana kanna tivida buddhi
Illemdare kaili kodaliya pidida
Billu hididu rakshasaranu savarida
Ballida mavana Shiravannu tarida ||2||
Battale kudureya hattabedendare
Hattidano iva chaladinda
Baktavatsala siri purandaravithala
Ettaladaru kondu hogelo jogi ||3||
