
ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ ||
ಗಾಡಿಕಾರ ಶ್ರೀ ವೇಣುಗೋಪಾಲನ
ಕೂಡಿ ಕೊಂಡಾಡುವ ಸುಖದ ಸೊಬಗನು||
ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ|
ಅಂಗಜ ಜನಕ ಗೋಪಾಂಗನೇರೊಡನೆ ಬೆಳ-
ದಿಂಗಳೊಳಗೆ ಸುಳಿದಾಡೊ ರಂಗಯ್ಯನ||
ನವಿಲಂತೆ ಕುಣಿವ ಹಂಸೆಯಂತೆ ನಲಿವ
ಮರಿ ಕೋಗಿಲೆಯಂತೆ ಕೂಗುವ|
ಎರಳೆಯ ಮರಿಯಂತೆ ಜಿಗಿಜಿಗಿದಾಡುವ
ತುಂಬಿ ಝೇಂಕರಿಸುವಂದದಿ ಝೇಂಕರಿಪನ||
ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಬಿಡಿಸಿಕೊಂಬನ|
ಗರುಡಗಮನ ಸಿರಿ ಪುರಂದರವಿಠಲನ
ಶರಣಾಗತ ಸುರಧೇನು ರಂಗಯ್ಯನ||
Lyrics in English
Noduvude kannu keluvude kivi paduvude vadana||
Gadigara shri venugopalana kudi kondaduva sukhava sobaganu||a.p|
Pongolaluduta mruga pakshigalanella sangalisutalippana |angaja janaka gopanganerodane beladingalolage sulidado rangayyana ||1||
navilante kuniva hamseyante naliyuva | mari kokileyante kuguva
eraleya mariyante jigijigidaduva tumbi jhenkarisuvandadi jhenkaripana ||2||
Murudu kubjeya donku tiddi rupava madi sereya pidisi kombana
garuda gamana guru purandara vittalana sharanagata suradenu rangayyana ||3||
Click the link to listen song here: https://youtu.be/RGwgTmfutzU by Sri Maharajapuram Santhanam
