
ಇಂಥಾ ಗುರುಗಳ ಕಾಣೆನಾ…
ಭೂತಳದೊಳು
ಇಂಥಾ ಯತಿಗಳ ಕಾಣೆನಾ… ||ಇಂಥಾ||
ಇಂಥ ಗುರುಗಳ ಕಾಣೆ
ಮಂತ್ರ ಮಂದಿರದಲ್ಲಿ
ನಿಂತು ಭಜಕರಿಗೆ ಚಿಂತೆ ಕಳೆವ ಕರುಣಿ ||ಇಂಥಾ||
ದೇವಸ್ವಭಾವನೀತನು ಸತತ ಪವನ
ದೇವನಾವೇಶಯುಕ್ತನೂ ||ದೇವ||
ಆವ ಸಂಶಯವ್ಯಾಕೆ ದೇವಾಧಿದೇವ ನರಮೃಗ
ದೇವನೀತನ ಭಕ್ತಿಗೆ ಧಾವಿಸಿ ಬಂದ ಸ್ತಂಭದಿ
ಭಾವ ಭಕ್ತಿಯಲಿ ಸೇವಿಪರಿಗೆ ಭವ ನೋವು ಕಳೆದು ಸುರ
ಗೋವಿನ ತೆರ ವರ ವೀವನು ಕರುಣದಿ
ಕಾವನು ಪರಮ ಪಾವನ ಚರಿತನು ಕೋವಿದರೊಡೆಯನು
||ಇಂಥಾ||
ವರಹಜ ತಟದಲ್ಲಿರುವ ಭಕ್ತರು ಕೂಗಿ
ಕರೆದಲ್ಲಿಗೋಡಿ ಬರುವ ||ವರಹಜ||
ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ
ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ ಗರೆದನು ಕರುಣದಿ
ಪೊರೆದನು ಪರಮತ ಮುರಿದನು ಜಗದೋಳ್
ಮೆರೆದನು ಹೊಸ ಹೊಸ ಪರಿ ಸುಮಹೋತ್ಸವ ಹರುಷದಿ
ಪ್ರತಿದಿನ ಗುರು ಸುಯಮೀಂದ್ರರ
ಕರದಿಂಗೊಂಬರು ||ಇಂಥಾ||
ಮಂದಜಾಸನ ಜನಕ
ಶ್ರೀ ಶಾಮಸುಂದರನಂಘ್ರಿ ಸೇವಕ ||ಮಂದ||
ಕಂದರ್ಪಶರಕರಿ ವೃಂದ ಕೇಸರಿ ಎನಿಸಿ
ಗಂಧವಾಹನ ಮತ ಸಿಂಧುವಿಗೆ
ಶಶಿಯಂದದಿ ರಾಜಿಸಿ ವೃಂದಾವನವನು
ಒಂದೆ ಮನದಲಿ ವಂದಿಸಿ ನಮಿಸುವ
ವಂದ್ಯಾಂಧಕರಿಗೆ ಕಂದರಕ್ಷಿಗಳ
ಕುಂದದಿ ಕೊಡುವ ಕರ್ಮಂದಿ ಕುಲಾಗ್ರಣಿ ||ಇಂಧಾ||
Lyrics in English
Intha gurugaLa kanena …. bhutaladolu
intha yatigala kanena …… || intha ||
Intha gurugaLa kane
mantra mandiradalli
nintu bhajakarige chinte kaleva karuni || intha ||
Devaswabhavaneetanu Satata pavana
devanaveshayukatanu || deva ||
aava samshayavyake devadideva naramruga
devaneetana bhaktige dhavisi Banda stambhadi
bhava bhaktiyali seviparige bhava novu kaledu sura
govina tera vara veevanu karunadi
kavanu parama pavana charitanu
kovidarodeyanu || intha ||
Varahaja tatadalliruva bhaktaru koogi
karedalligodi baruva || varahaja ||
maruta shastrada marma
bharitavadanta divya
parimala granthava virachisi
bhudharige garedanu karunadi
poredanu paramata muridanu jagadol
meredanu hosa hosa
pari sumahotsava harushadi pratidina
guru suyamindrara
karadimgombaru || intha ||
Mandajasana janaka
shri shamasundarananghri sevakana ||Manda||
kandarpasharakari vrunda kesari enisi
gandhavahana mata sindhuvige
shashiyandadi rajisi vrundavanavanu
onde manadalli vandisi namisuva
vandyandhakarige kandarakshigala
kundadi koduva karmandi kulagrani || intha ||
