
ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ |
ಪರಿಪೂರ್ಣಕಳೆಯಿಂದ ಭಕುತರನು ಒಲಿಸಿ ||
ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ |
ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ ||೧||
ಹತ್ತು ಅವತಾರದಲಿ ಇದಿರಾಂತವರ ಗೆಲಿದು |
ಮತ್ತೆ ಪದವಿಯ ಕೊಟ್ಟುರಕ್ಷಿಸಿ ಕಾಯ್ದೆ ||
ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ |
ತೆತ್ತೀಸಕೋಟಿ ದೇವರ್ಕಳನು ರಕ್ಷಿಸಿದೆ ||೨||
ಉದಯ ಮದ್ಯಾಹ್ನ ಸಂಜೆಯಲಿ ಪೂಜೆಯನು |
ವಿಧವರಿತು ಸೇವೆಯನು ಅನುಸರಿಸಿಕೊಂಬೆ ||
ಸಹೃದಯ ಭಕ್ತರನು ಕಾಯ್ದು ಪಾಲಿಸುವೆ |
ಮುದದಿಂದ ಹೆಳವನಕಟ್ಟೆಯಲಿ ನೆಲಸಿರುವೆ ||೩||
ಕೃತಿಕಾರರು : ಹೆಳವನಕಟ್ಟೆ ಗಿರಿಯಮ್ಮ
Lyrics in English
Dhareyolage helavanakatteyali nelasi |
paripoornakaleyinda bhakutaranu olisi ||
stiranagi poojeyanu nelasi neeninde |
karuna drushtiyali bhakutaranu mannisuve || 1 ||
Hattu avataradali idirantavara gelidu |
matte padaviya kottu rakshiso Kayden ||
vistarisi poojeyanu madisikombe |
tettisakoti devarkalanu rakshiside || 2 ||
Udaya madhyanna sanjeyali poojeyanu |
vidhavaritu seveyanu anusarisikombe ||
sahrudaya bhakutaranu kaydu palisuve |
mudadinda helavanakatteyali nelasiruve || 3 ||
