
ಇದು ಪ್ರಸಿದ್ಧವಾದ ಶ್ರೀಪಾದರಾಜರ ದೇವನಾಮವಾಗಿದೆ. ‘ರಂಗವಿಠಲ’ ಎಂಬುದು ಅವರ ಅಂಕಿತನಾಮ. ಭಗವಾನ್ ಶ್ರೀಹರಿಯ ದಿವ್ಯ ಸ್ವರೂಪದ ಪ್ರತಿಯೊಂದು ಅಂಗಾಂಗವನ್ನು ವರ್ಣಿಸುತ್ತಾ, ಅವನಿಗೆ ಶರಣಾಗತಿಯನ್ನು ಕೋರುವ ಸುಂದರವಾದ ಭಕ್ತಿಗೀತೆ ಇದಾಗಿದೆ.
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||
ಶಿರದಲ್ಲೊಪ್ಪುವ ನೀಲಕುಂತಳಕೆ ಶರಣು |
ಸಿರಿಸಹೋದರನರ್ಧದವಳಿಗೆ ಶರಣು ||ಅ.ಪ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು |
ಸಂಪಿಗೆಯ ಕುಸುಮ ಸಮನಾಸಿಕಕೆ ಶರಣು ||
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು |
ಇಂಪುದರ್ಪಣನಿಭ ಕಪೋಲಗಳಿಗೆ ಶರಣು ||೧||
ಕುಂದಕುಟ್ಮಲ ಪೋಲ್ವ ದಂತಪಂಕ್ತಿಗೆ ಶರಣು |
ಅಂದವಾಗಿರುವ ಬಿಂಬೋಷ್ಠಕೆ ಶರಣು ||
ಚಂದ್ರಿಕಾನಿಭ ಮುದ್ದುಮಂದಹಾಸಕೆ ಶರಣು |
ನಂದಗೋಪನ ಮುದ್ದು ಕಂದನಿಗೆ ಶರಣು ||೨||
ಅಬ್ಜನಾಭನ ದಿವ್ಯ ಕಂಬುಕಂಠಕೆ ಶರಣು |
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು ||
ಕುಬ್ಜೆಯನು ಡೊಂಕ ತಿದ್ದಿದ ಭುಜಗಳಿಗೆ ಶರಣು |
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು |
ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು ||
ಪುನ್ನಾಗಕರಗೆತ್ತ ದ್ವಯನಿತಂಬಕೆ ಶರಣು |
ಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು ||೪||
ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು |
ತುಂಗ ಕುಚಗಳ ಪಿಡಿದ ಕರಗಳಿಗೆ ಶರಣು ||
ಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು |
ರಂಗವಿಠಲನ ಸರ್ವಾಂಗಕೆ ಶರಣು ||೫||
Lyrics in English
Shreerangavithalana shree makutake sharanu ||Pa||
Shiradalloppuva neelakuntalake sharanu |
Sirisahodaranardhadavalige sharanu ||A.Pa||
Sompu notada cheluva sogegannige sharanu |
Sampigeya kusuma samanāsikake sharanu ||
Gumpuratnada karnakundalagalige sharanu |
Impudarpananibha kapolagalige sharanu ||1||
Kundakutmala polva dantapanktige sharanu |
Andavagiruva bimboshthake sharanu ||
Chandrikanibha muddumandahasake sharanu |
Nandagopana muddu kandanige sharanu ||2||
Abjanabhana divya kambukanthake sharanu |
Abjamukhiyiruva vakshasthalake sharanu ||
Kubjeyanu donka tiddida bhujagalige sharanu |
Abjajasanana petta nabhige sharanu ||3||
Rannagantegaliruva ninna katige sharanu |
Ponna kadali polva todegalige sharanu ||
Punnagakaragetta dvayanitambake sharanu |
Chennagi kuniva samajanuvige sharanu ||4||
Mangala vaibhogangala anghridvayake sharanu |
Tunga kuchagala pidida karagalige sharanu ||
Pongolalanooduva anguligalige sharanu |
Rangavithalana sarvangake sharanu ||5||
