ಏನೇನ ದಾನವ ಮಾಡಲು ಹರಿಯ / Enena danava madalu hariye

ಏನೇನ ದಾನವ ಮಾಡಲು ಹರಿಯ |
ಧ್ಯಾನಕೆ ಸಮವಾದ ದಾನಂಗಳುಂಟೆ ||ಪ||

ದಿನಕೊಂದು ಲಕ್ಷ ಗೋದಾನವ ಮಾಡಲು |
ಅನುದಿನ ಉದಕದಾನವ ಮಾಡಲು ||
ಮನಶುದ್ಧವಾದ ಭೂದಾನವ ಮಾಡಲು |
ವನಜನಾಭನ ಧ್ಯಾನಕೆ ಸಮವುಂಟೆ ||೧||

ಉತ್ತಮವಾದ ವಸ್ತ್ರವ ದಾನಮಾಡಲು |
ಮುತ್ತು ಮಾಣಿಕವ ದಾನವ ಮಾಡಲು ||
ಅತ್ಯಂತ ವಿದ್ಯಾಪ್ರದಾನವ ಮಾಡಲು |
ಚಿತ್ತಜಪಿತನ ಧ್ಯಾನಕೆ ಸಮವುಂಟೆ ||೨||

ಶತಕೋಟಿ ಕನ್ಯಾಪ್ರದಾನವ ಮಾಡಲು |
ಶತಶತ ಸುವರ್ಣ ದಾನವ ಮಾಡಲು ||
ಮಿತಿಯಿಲ್ಲದೆ ಅನ್ನದಾನವ ಮಾಡಲು |
ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ||೩||

ನಾನಾ ತೀರ್ಥದಲಿ ಸ್ನಾನವ ಮಾಡಲು |
ಕಾನನದೊಳಗೆ ತಪವ ಮಾಡಲು |
ಜ್ಞಾನಿಯಾಗಿ ಕಾಶೀಯಾತ್ರೆಯ ಮಾಡಲು |
ಜಾನಕೀಪತಿಯ ಧ್ಯಾನಕೆ ಸಮವುಂಟೆ ||೪||

ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |
ಹರುಷದಿ ವಿಷ್ಣುಪಂಚಕ ಮಾಡಲು ||
ಪರಮ ಕಠಿಣ ಚಾಂದ್ರಾಯಣ ಮಾಡಲು |
ಪುರಂದರವಿಠಲನ ಧ್ಯಾನಕೆ ಸಮವುಂಟೆ ||೫||

ಕೃತಿಕಾರರು : ಶ್ರೀ ಪುರಂದದಾಸರು

Lyrics in English

Enēna dānava māḍalu Hariya |
Dhyānake samavāda dānangaḷuṇṭe || Pa ||

Dinakondu laksha gōdānava māḍalu |
Anudina udakadānava māḍalu ||
Manaśuddhavāda bhūdānava māḍalu |
Vanajanābhana dhyānake samavuṇṭe || 1 ||

Uttamavāda vastrava dānamāḍalu |
Muttu māṇikava dānava māḍalu ||
Atyanta vidyāpradānava māḍalu |
Chittajapitana dhyānake samavuṇṭe || 2 ||

Shatakōṭi kanyāpradānava māḍalu |
Shatashata suvarṇa dānava māḍalu ||
Mitiyillade annadānava māḍalu |
Kṣitipatiya pādadhyānake samavuṇṭe || 3 ||

Nānā tīrthadali snānava māḍalu |
Kānanadoḷage tapava māḍalu ||
Jñāniyāgi Kāśiyātreya māḍalu |
Jānakīpatiya dhyānake samavuṇṭe || 4 ||

Dhāraṇi pāraṇi Bhīṣmapanchaka māḍi |
Haruṣadi Viṣṇupanchaka māḍalu ||
Parama kaṭhiṇa Chāndrāyaṇa māḍalu |
Purandara Viṭṭhalana dhyānake samavuṇṭe || 5 ||

Leave a Reply