ನೋಡಿದೆ ಗುರುಗಳ ನೋಡಿದೆ / Nodide gurugala nodide

ನೋಡಿದೆ ಗುರುಗಳ ನೋಡಿದೆ ||ಪ||

ನೋಡಿದೆನು ಗುರುಗಳ ಪಾದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದಣಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ ||ಪ.ಆ||

ಪಂಚಕೃಷ್ಣಾರಣ್ಯ ಕ್ಷೇತ್ರ ಪಿನಾಕಿನಿಯ ತೀರದಲ್ಲಿ ನಿಂತು
ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು||
ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ||
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ ||೧||

ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ||
ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ||
ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುವ ಯತಿಮೌಳಿ ರತುನರ ||೨||

ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ||
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆಣಿಸುತ್ತಾ ಮರೆಯುವ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ||೩||

Lyrics in English

Nodide gurugala nodide ||pa||

Nodidenu gurugala padabjava
Padidenu sanmahimegala na
Bedidenu manadaniye varagala
Idu illade koduva prabugala|| a.pa.||

Panchakrushnaranyakshetra pinakiya tiradalli nintu
minchutiha kashayadanda kamandalava dharisutta dhareyolu
Panchabanada pitana gunagala ancheyadi pogalutta harushadi
Sanchitagamigala kaledu prapanchadali merevantha gurugala ||1||

Alavabodhara bashyatika bavavanu sujanarige bodhisi
Kalushamatagiri samudayangala kulisadandali kandisutali
Mularama digvijayaramara padakamalake brunganenisuta
Silabakti viraktimatigala palisuta yatimauli ratunara ||2||

Kamadhenu sukalpataru chintamaniyavol kamitarthava
Premadali birutta adhyatmadi tapatraya kaleyuva
Svami srihari sridavithalana dasagraniyenisi marevara
Nemadindali sri raguttama maunivaryara karuna bayasuta ||3||

Leave a Reply