
ಬಂದ್ಯಾ ವಿಠ್ಠಲ ಬಡವನಲ್ಲಿ||2||
ವ್ರಂದಾವನದಲ್ಲಿ ಗೋವ್ರಂದಗಳ ಕಾಯ್ದವನೆ || ಬಂದ್ಯಾ||
ಕೊರಳಲಿ ಸರಿಗೆ ಸರಪಳಿ, ಪಚ್ಚೆ ಪದಕವು
ಪರಿಪರಿಯ ಹಾರ ಶ್ರೀ ತುಳಸಿಮಾಲೆ || ಕೊರಳಲಿ ||
ಸಿರಿಗಂಧ ಲೇಪ ಶ್ರೀವತ್ಸವುರ ಕಿರಿಡೊಳ್ಳು ||2||
ವರಕಟಿಗೆ ಘಂಟೆ ಪರಿಪರಿಯಧಾಮವ ಸುತ್ತಿ ||ಬಂದ್ಯಾ||
ಸುಳಿಗುರುಳು ಮೇಲೆ ,ಅರಳೆಲೆಯು ಕಿರೀಟ
ಎಲೆತಳಿರು ಚೂತ ,ಮಳ್ಳಿಗೆಯು ,ಧೂರ್ವೆ ||ಸುಳಿಗುರುಳು||
ತಳತಲಿಪ ಮುಖನಾಸ ನಯನ ಹಣೆಯಲಿ ತಿಲಕ ||ತಳತಲಿಪ||
ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ ||ಬಂದ್ಯಾ||
ಮುಂಗೈ ಕಡಗ ಸರಪಳಿ ತೋಳ ಬಾಪುರಿ
ಶ್ರಂಗಾರವಾದ ಗದೆ ,ಶಂಖ ,ಚಕ್ರ ||ಮುಂಗೈ||
ಅಂಗೈಯ ಪದುಮ,ಅಂಗುಲಿ ವೇಣು ಮೀಟುತ ||ಅಂಗೈಯ||
ಹಿಂಗದೆ ಎನ್ನ ಅಂತರಂಗದ ಮನೆಗಿನ್ನು ||ಬಂದ್ಯಾ||
ಈಸುಬಗೆಯ ಪೂಜೆಯು ಎನ್ನಿಂದಲಾಗದು
ಲೇಶವಾದರು ಇಲ್ಲ ಎನಗೆ ಜ್ಞಾನ ||ಈಸುಬಗೆಯ||
ಶ್ರೀಶನೆ ನೀ ನಂತಲ್ಲಿ ಸಕಲವು ಉಂಟು ||ಶ್ರೀಶನೆ||
ಶ್ರೀ ಶ್ರೀನಿವಾಸ ಗೋಪಾಲವಿಜಯವಿಠ್ಠಲ ||ಬಂದ್ಯಾ||
Lyrics in English
Bandya vittala badavanalli || 2 ||
vrundavanadalli govrundagala kaydavane || bandya ||
Koralali sarige sarapali pacche padakavu
paripariya haara Shree tulasimale ||
sirigandha lepa shrivatsavura kiridollu |
varakatige ghanatege paripariyadhamava sutti || bandya ||
Suligurulu mele araleleyu kireeta
eletaliru choota, malligeyu dhurve
talatalipa mukhanasa nayana haneyali tilaka |
chalisuva karnakundala prabheyu shobhisuta || bandya ||
Mungai kadagola sarapali tola bapuri |
shrungaravada gade, shankha chakra ||
angaiya paduma anguli venu meetuta |
hingade Enna antarangada maneginnu || bandya ||
Eesu bageyinda poojeyo ennindalagadu |
leshavadaru illa enage jnana ||
shreeshane nee nintalli sakalavu untu |
Shree shrinivasa gopalavijaya vittala || bandya ||
