ಬಲ್ಲವಗಿಲ್ಲಿದೆ ವೈಕುಂಠಾ ವೈಕುಂಠಾ ವೈಕುಂಠಾ / Ballavagillide vaikunta vaikunta

ಬಲ್ಲವಗಿಲ್ಲಿದೆ ವೈಕುಂಠಾ
ವೈಕುಂಠಾ ವೈಕುಂಠಾ   ||ಬಲ್ಲವಗಿಲ್ಲಿ||
ಬಲ್ಲವಗೆಲ್ಲು ಶ್ರೀಹರಿ ಪೂಜೆ
ಹರಿ ಪೂಜೆ              ||ಬಲ್ಲವಗಿಲ್ಲಿದೆ||

ಶರೀರ ಹರಿಯ ಪಟ್ಟಣ
ಹೃದಯ ಸರೋಜ ಆತನ ಅರಮನೆ ||ಶರೀರ||
ಸೂರ್ಯಾದಿ ದೇವರು ಚಕ್ಷುರಾಧಿಗಳಲ್ಲಿ
ದ್ವಾರಪಾಲಕರಾಗಿ ಇಪ್ಪರೆಂದು
ಇಪ್ಪರೆಂದೂ           ||ಬಲ್ಲವಗಿಲ್ಲಿದೆ||

ಹರಿಚರಾಚರ  ಸರ್ವಜಗಧ್ಭರಿತ
ಮುರಹರನಿದ್ದುದೆ ವೈಕುಂಠ ||ಹರಿ||
ನರಹರಿಯಲಿ ನವ ವಿಧ ಭಕುತಿಯೆ
ಸರಿಸಮವೆಂದಿಗೆ ಇಲ್ಲವೆಂದು
ಇಲ್ಲವೆಂದೂ           ||ಬಲ್ಲವಗಿಲ್ಲಿದೆ||

ಜಾಗರಾಧಿಗಳಲ್ಲಿ ವಿಶ್ವಾಧಿ ಮೂರುತಿ
ಯೋಗಿ ಶ್ರೀಕೃಷ್ಣನೆ ವಿಷಯಂಗಳ ||
ಭೋಗಿಪನೆಂಬ ಯೋಗಿಗೆ ವಿಹಿತ
ಭೋಗಂಗಳೆಲ್ಲ ಯಾಗಂಗಳೆಂದು
ಯಾಗಂಗಳೆಂದೂ  ||ಬಲ್ಲವಗಿಲ್ಲಿದೆ||


Lyrics in English

Ballavagillide Vaikuntha
Vaikuntha Vaikuntha ||Ballavagilli||
Ballavage ellu Srihari pooje
Hari pooje ||Ballavagillide||

Shareera Hariya pattana
Hridaya saroja aatana aramane ||Shareera||
Sooryaadi devaru chakshuraadhigalalli
Dwaarapaalakaragi ippare endu
Ipparendu ||Ballavagillide||

Haricharaachara sarva jagad bharita
Muraharanu iddude Vaikuntha ||Hari||
Narahariyali nava vidha bhaktiye
Sarisamavendige illavendu
Illavendu ||Ballavagillide||

Jaagaraadhigalalli vishwaadhi mooruti
Yogi Shri Krishnane vishayagalu ||
Bhogipanemba yogige vihita
Bhogangale ella yaagangale endu
Yaagangale endu ||Ballavagillide||

“ವೈಕುಂಠವು ಎಲ್ಲೋ ದೂರದಲ್ಲಿಲ್ಲ… ಶ್ರೀ ಹರಿಯ ಭಕ್ತಿಯಿಂದ ತುಂಬಿದ ಹೃದಯದಲ್ಲೇ ಇದೆ.”

Leave a Reply