ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ / Nindu Darshana needo aravinda madhyadali

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ
ಕಂದರ್ಪಜನಕ ದೇವ || ಪ ||

ನಂದಕಂದನೆ ನಿನ್ನ ಮಂದಮತಿ ನಾನೆಂತು
ವಂದಿಸಿ ಸ್ತುತಿಪೆನಯ್ಯ | ಜೀಯ || ಅ.ಪ. ||

ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ
ಉತ್ತಮ ಪಥವ ತೋರೋ
ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ
ಭೃತ್ಯಸಂಗದಲಾಡಿಸೊ | ಸತತ || 1 ||

ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ
ವಿಶ್ವೇಶ ದೇಹದೊಳಗೆ
ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ
ವಿಶ್ವಮಯ ಜೀವಕೀವೆ | ಕಾವೆ || 2 ||

ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ
ಮತ್ತೆಲ್ಲ ಕಾರ್ಯ ಮಾಳ್ಪೆ
ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ
ವ್ಯಾಪ್ತನಾಗಿರುವೆ ಜಗದಿ | ಮುದದಿ || 3 ||

ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ
ಇದ್ದೆನೆಗೆ ರೂಪ ತೋರೋ
ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು
ಒದ್ದು ತಾಪತ್ರಯವನು | ನೀನು || 4 ||

ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ
ಮಾನಸದಲೆನಗೆ ನೀಡೋ
ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ
ಸಾನುರಾಗದಲಿ ಸಲಹೋ ಎಲವೋ || 5 ||

Lyrics in English

Nindu Darshana needo aravinda madhyadali |
kandarpa janaka deva || pa ||

Nandakandane Ninna mandamatiye nanentu
vandisi stutipenayya | jeeya || a.pa ||

Satwagunavaridhiye tatwagala tilisenage
uttama pathava toro
Nitya samsaradalli suttisade ninnapada
bhrutya sangadaladiso | stata || 1 ||

Vishwataijasapranjturiya roopagalinda
vishwesha dehadolage
vishwavyapaka hariye Swapna jagrate sushupti
vishwamaya jeevakeeve | kaave || 2 ||

Tatwadhipatigalolu vyaptanagiruta nee
mattella karyava maple
chittabhimani Shree marutantaryami
vyaptanagiruve jagadi | mudadi || 3 ||

Madhyanadi hrudaya madhyapadmada madhye
iddenege roopa toro
oddaduveno bhavadi uddharisabekinnu
oddi tapatrayavanu | neenu || 4 ||

Shrinivasane Ninna dhyana anavaratadali
manasadalenage needo
shreenidhe gopalakrishna vittala Enna
sanuragadali salaho elavo || 5 ||

Leave a Reply