ಈ ತನುವು ನಿನ್ನಾ ಗುಡಿ‌ ಪರಶಿವನೆ / Ee tanuvu Ninna gudi parashivane

ಈ ತನುವು ನಿನ್ನಾ ಗುಡಿ‌
ಪರಶಿವನೆ ಈ ಮನವು ನಿನ್ನಾ ನೆಲೆ
                       ||ಈ ತನುವು||

ನನ್ನುಸಿರ ಕಣಕಣಗಳು
ಶಿವ ನಿನ್ನ ನಾಮವನೆ ಕಣವರಿಸಿದೆ
ಜಯ ಜಯತು ಜಗಧೀಶ್ವರ ಪಾಹಿಮಾಂ
ಜಯ ಜಯತು ಗಂಗಾಧರ ||ಈ ತನುವು||

ನೀ ಸೂತ್ರಧಾರಿ ನಾ ಪಾತ್ರಧಾರಿ
ನಿನ್ನಿಚ್ಛೆ ನಾ ಅರಿಯೆನು
ನನ್ನಾತ್ಮ ಜ್ಯೋತಿ ಶಿವ ನೀನೆ ಎಂದು
ನಿನ್ನನ್ನೆ ನಂಬಿರುವೆನು
ಹೆತ್ತವಳ ಮನಸ್ಸು ಕಲ್ಲಾಗಿ ಹೋಯಿತೆ
ಶಂಕರಿಯೆ ಹೇಳು ಇದು ನ್ಯಾಯವೆ
ಸಿರಿತನವು ಬೇಡ ದೊರೆತನವು ಬೇಡ
ಸದ್ಗತಿಯು ನನಗಾಗಲಿ
ನನ್ನಾತ್ಮ ಶಿವಲೀಲೆಯನು ಹಾಡಲಿ
ಜಯ ಜಯತು ಜಗಧೀಶ್ವರ ಪಾಹಿಮಾಂ
ಜಯ ಜಯತು ಗಂಗಾಧರ

ಶಿವನಿತ್ತ ಜೀವ ಶಿವನಿಗರ್ಪಿಸಿದ
ಧನ್ಯತೆಯು ನನಗಾಗಲಿ
ನನ್ನ ತನುಮನವು ರೋಮ ರೋಮಗಳು
ನಿನ್ನ ರೂಪವ ನೆನೆಯಲಿ
ಮಂಗಳೆಯೆ ನಿನ್ನ ಮುನಿಸು ಕರಗಿರಲಿ
ಸತ್ಯಕ್ಕೆ ನ್ಯಾಯಕ್ಕೆ ಜಯ ದೊರಕಲಿ
ಶರಣರಿಗೆ ವಿಜಯ ಭಕುತರಿಗೆ ಅಭಯ
ಇದು ತಾನೆ ನಿಜ ನೀತಿಯು
ಭಕ್ತಿಯು ಪರಶಿವಗೆ ಬಲು ಪ್ರೀತಿಯು
ಜಯ ಜಯತು ಜಗಧೀಶ್ವರ ಪಾಹಿಮಾಂ
ಜಯ ಜಯತು ಗಂಗಾಧರ
                              ||ಈ ತನುವು||
ಸತ್ಯಂ ಶಿವಂ ಸುಂದರಂ||5||

Lyrics in English

Ee tanuvu ninna gudi
parashivane ee manavu ninna nele ||

Nannusira kanakanagalu shiva ninna namavane
kanavariside jaya jayatu jagadhishwara pahimam
jaya jayatu gangadhara ||

Nee sutradhari naa patradhari ninnicche naa ariyenu
nannatma Jyoti shiva neene Enduku ninnanne nambiruvenu |
hettavala manassu kallagi hoyite, shankariye helu idu
nyayave siritanavu beda doretanavu beda sadgatiyu
nanagagali nannatma shiva leeleyanu hadali
jaya jayatu jagadhishwara pahimam jaya jayatu gangadhara ||

Shivanitta jeeva shivanigarpisida dhanyateyu
nanagagali nanna tanumanavu roma romagalu
ninna roopava neneyali mangaleye ninna munisu
karagirali satyakke nyayakke jaya dorakali sharanarige
vijaya bhakurarige abhaya idu taane nija neetiyu
bhaktiyu parashivage balu preetiyu ||
jaya jayatu jagadhishwara pahimam jaya jayatu gangadhara || ee tanuvu ||

Satyam shiam sundaram||5||

*******************************************************************

ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವ / Sharaṇu Ninna Charana kamalagalige


ದಾಸರು : ಶ್ರೀ ಪ್ರಾಣೇಶ ದಾಸರು….
ಅಂಕಿತ : ಪ್ರಾಣೇಶ ವಿಠ್ಠಲ.

ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವ |
ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವಶಿವ ||ಪ||

ದಂತಿ ಚರ್ಮ ಹೊದ್ದ ಭಸ್ಮಭೂಷ ಶಿವಶಿವ |
ಚಿಂತಿರಹಿತ ಲಯಕೆ ಕರ್ತೃನಾದ ಶಿವಶಿವ ||
ಸಂತರಿಂದ ಸತತ ಸೇವೆಗೊಂಬ ಶಿವಶಿವ |
ಕಂತುಪಿತನ ಪೂರ್ಣ ಪ್ರೀತಿಪಾತ್ರ ಶಿವಶಿವ ||೧||

ಮಂದಮತಿಯ ತಪ್ಪನೆಣಿಸಬ್ಯಾಡ ಶಿವಶಿವ |
ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವಶಿವ ||
ಮಂದಗಮನೆ ನಿನ್ನ ಮನದೊಳಿಲ್ಲೆ ಶಿವಶಿವ |
ತಂದುಕೊಂಡ ದಕ್ಷ ವೃಥಾ ಕುವಾರ್ತಿ ಶಿವಶಿವ ||೨||

ಹೀನರಂತೆ ನಿನಗೆ ಕೋಪ ಸಲ್ಲ ಶಿವಶಿವ |
ಮಾಣು ಯಜ್ಞ ಸಹಯನಾಗು ದಯದಿ ಶಿವಶಿವ ||
ಏನುಪಾಯ ಇದಕೆ ಚಿಂತಿಸುವದು ಶಿವಶಿವ |
ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವಶಿವ ||೩||

Lyrics in English

Sharaṇu Ninna Charana kamalagalige shivashiva
karyava pididu sumatiyittu poreye shivashiva ||pa||

Danti charma hodda bhasmabhusha shivashiva |
chintirahita layake kartrunada shivashiva |
santarinda Satata sevegomba shivashiva |
kantupitana poorna preetipatra shivashiva ||

Mandamatiye tappanenisabyada shivashiva |
kundu ninage endigendigilla shivashiva |
mandagamane Ninna manadolille shivashiva |
tandukonda daksha vrutha kuvarti shivashiva ||

Heenarante ninage kopa salla shivashiva |
maanu yajna sahayanagu dayadi shivashiva |
enupaya idake chintisuvudu shivashiva |
pranesha vittala Ninna vashadolihanu shivashiva ||


ಸೋಜುಗದ ಸೂಜಿ ಮಲ್ಲಿಗೆ / Sojugada sooju mallige

ಸೋಜುಗದ ಸೂಜಿ ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ ||ಸೋಜುಗಾದ ||

ಅಂದಾವರೆ ಮುಂದಾವರೆ
ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ,ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿದಳವ
ಮಾದಪ್ಪ ಪೂಜೆಗೆ ಬಂದು, ಮಾದೇವ ನಿಮ್ಮ    ||ಸೋಜುಗಾದ||

ತಪ್ಪಾಳೆ ಬೆಳಗಿವ್ನಿ ತುಪ್ಪವ ಕಾಯ್ಸಿವ್ನಿ
ಕಿತ್ತಾಳೆ ಹಣ್ಣ ತಂದಿವ್ನಿ, ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದಿವ್ನಿ ಮಾದಪ್ಪ
ಕಿತ್ತಡಿ ಬರುವ ಪರಸೆಗೆ ಮಾದೇವ ನಿಮ್ಮ    ||ಸೋಜುಗಾದ ||

ಬೆಟ್ಟ್ಹತ್ಕೋಂಡ್  ಹೋಗೋರ್ಗೆ
ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿಯೆಂದು
ಮಾದೇವ ನೀವೆ  ||೩||  ||ಬೆಟ್ಟ್ಹತ್ಕೋಂಡ್||
ಬೆಟ್ಟದ್ಮಾದೇವ ಗತಿಯೆಂದು ಅವರಿಂದು
ಹಟ್ಟಿ ಹಂಬಲವ ಮರೆತಾರೋ
ಮಾದೇವ ನಿಮ್ಮ     ||ಸೋಜುಗಾದ ||

Lyrics in English

Sojugada sooju mallige
madeva nimma mande myale
dundu mallige || Sojugada ||

Andavare mundavare
matte tavare pushpa
chandakki male bilpatre madeva nimge
chandakki male bilpatre tulasidalava
madappa poojege bandu, madeva nimma || Sojugada ||

Tappale belagivni tuppava kaysivni
kittale Hanna tandivni, madeva nimge
kittale Hanna tandivni madappa
kittadi baruva parasege madeva nimma || Sojugada ||

Betthatkond hogorge
hatti hambalavyaka
bettadmadeva gatiyendu
madeva Neene ||
bettadmadeva gatiyendu varindu
hatti hambalava maretaro
madeva nimma || Sojugada ||


ಎಷ್ಟು ಬಾರಿ  ಮೊರೆ ಇಡಲಿ ಶಂಭೋ / Eshtu bari more idali shambha shankara

ಎಷ್ಟು ಬಾರಿ  ಮೊರೆ ಇಡಲಿ
ಶಂಭೋ ಶಂಕರಾ
ಕಷ್ಟಗಳ ನೀಗಿಸು ಬಾ ಹೇ ಮಹೇಶ್ವರ   ||ಎಷ್ಟು ||

ಅಜ್ಞಾನದ ಅಂಧಕಾರ ಮನಕೆ ಸುತ್ತಿದೆ
ಮುಂದೆ  ದಾರಿ ಕಾಣದಿದೆ
ಭಯವು ಮುತ್ತಿದೆ
ಪಾಪಗಳ ಹೊರೆಯನ್ನು ಹೊರಲಾರದೇ
ಭವಬಂಧದ ಜಾಲದಿಂದ ಬರಲಾರದೆ
ತತ್ತರಿಸಿದೆ ನೊಂದು ಬೆಂದು ನಿಂದಿರುವೆನು
ನಿನ್ನೊಲವಿನ ಸುದೆ ಹರಿಸಿ
ಕಾಪಾಡು ಬಂದೂ      ||ಎಷ್ಟು ||

ಪಶ್ಚಾತ್ತಾಪ ಎಂಬ ಬೆಂಕಿ ಸುಡುತಿದೆ ನನ್ನಾ
ಮಲಿನ ಕಳೆದು ಆಗಲಿ
ಮನ ಪುಟವಿಟ್ಟ ಚಿನ್ನ
ಕಂಬನಿಯಲಿ ಪಾದ ತೊಳೆವ
ಆಸೆ ಆಗಿದೆ
ನಿಂತಿರುವೆ ಮೌನದಲ್ಲಿ ಮಾತು ಬಾರದೆ
ಕರುಣಿಸಿ ಪ್ರಭು ನೀ
ಮನ ನೆಮ್ಮದಿ ತಾರಾಾ
ಕೈ ಹಿಡಿದು ನಡೆಸೆನ್ನಾ ಹೇ ದೀನ ಬಂಧು ||ಎಷ್ಟು ||

ಆತ್ಮವೆಂಬ ಪ್ರಣವದಿಂದ ಆರಾಧಿಸುವೆ
ವಿಶ್ವಾಸದಿ ನಿಶ್ವಾಸದಿ ಕೀರ್ತಿ ಹಾಡುವೆ
ಪ್ರಾಣ ಜ್ಯೋತಿ  ದೀಪದಿಂದ ಆರತಿ ಗೈವೆ
ಭಕ್ತಿ  ಕುಸುಮ ತವ ಪಾದಕೆ ಅರ್ಚನೆಗೈವೆ
ಮುಕ್ತಿದಾರಿ ತೋರೋ
ಹೇ ಕರುಣಾಮಯನೆ
ತವ ಪಾದ ಪೂಜೆ ನೀಡು ಪಾವನಾಂಗನೇ  ||ಎಷ್ಟು ||

Lyrics in English

Eshtu bari more idali shambha shankara
kashtagala neegisu baa he maheshwara || Eshtu ||

Ajanada andhakara manake suttide
munde Dari kanadide
bhayavu muttide
papagala horeyannu horalarade
Bhava bhandhana jaladinda baralarade
tattariside nondu bendu nindiruvenu
ninnolavina sude harisi
kapadu bandu || Eshtu ||

Pashchatapa emba benkki sudutide nanna
Malina kaledu aagali
mana putavitta chinna
kambaniyali pada toleva aase agide
nintiruve mounadalli mature barade
karunisu prabhu nee
mana nemmadi tara
kai hididu nadesenna he deena Bandhu || Eshtu ||

Aatmavemba pranavadinda aradhisuve
vishwasadi nishwasadi Keerthi haduve
prana Jyoti deepadinda arati gaive
bhakti kusuma tava padakke archanegaive
mukti Dari toro he karunamayane
tava pada pooje needu pavananga e || Eshtu ||

ಶಿವನೇ ಭಯಹರನೇ ಚಿದಂಬರನೇ / Shivane bhayaharane chidambarane

ಶಿವನೇ ಭಯಹರನೇ
ಚಿದಂಬರನೇ ಜಟಾಧರ ನೀಲಕಂಠ
ಗಜ ಚರ್ಮಾಂಬರನೇ
ಭವಾನಿ ವರ ಗಂಗಾಧರನೇ   ||ಶಿವನೇ||

ಮಹಾದೇವನ ವಿಶ್ವ ವಿಧಾತನ
ಸ್ಮರಣೆಯೇ ಆನಂದಕಾರೀ
ಸೇವೆಯೇ ಭವ ತಾಪ ಹಾರೀ
ಭಕ್ತರಾಧಾರೀ   ||ಮಹಾದೇವನ||
ಶಂಕರಾ ನಿನ್ನ ಪಾದಕಮಲಾ
ತಿಂಗಳಾ ಬೆಳಕಂತೆ ವಿಮಲಾ
ಕಂಗಳಾ ಚರಣಾ ಕಲಾ ..ಆ
ಗಜ ಚರ್ಮಾಂಬರನೇ
ಭವಾನಿ ವರ ಗಂಗಾಧರನೇ  ||ಶಿವನೇ||

ನಿನ್ನ ಪಾದವೂ ಶ್ರೀ ಪಾತಾಳದಿ
ಮಡಿಯದೇ ಸುರಲೋಕತಾಗಿ
ಜಟೆಯದೇ ಕಾರ್ಮೋಡಮಾಲೆ
ನಿನ್ನಯ ಲೀಲೆ   ||ನಿನ್ನ ಪಾದವೂ||
ಚಂದ್ರನು ರವಿ ನಿನ್ನ ನಯನಾ
ವಿಶ್ವದಾನಕೊ ನಿನ್ನ ವದನಾ
ನಾಮವೇ ಚಿರ ಪಾವನಾ .. ಆ
ಗಜ ಚರ್ಮಾಂಬರನೇ
ಭವಾನಿ ವರ ಗಂಗಾಧರನೇ .    ||ಶಿವನೇ||

Lyrics in English

Shivane bhayaharane
chidambarane jatadhara neelakanta
gaja charmambharane
Bhavani vara gangadharane || shivane ||

Mahadevana vishaya vidhatana smaraneye anandakari
seveye Bhava taapa hari bhaktadhari ||
shankara Ninna padakamala tingala belakante vimala
kangala Charana kala ….
gaja charmambharane Bhavani vara gangadharane ||

Ninna padavo Shree pataladi madiyade suralokatagi
jatiyade karmodamale ninnaya leele ||
chandirana Ravi Ninna nayanadi vishwadanako Ninna vadana
namave chira pavana ……..
gajacharmambharane Bhavani vara gangadharane || shivane ||


ನಮೋ ಭೂತನಾಥ ನಮೋ ದೇವ ದೇವ / Namo bhoothanaatha namo deva deva

ಹೇ, ಚಂದ್ರ ಚೂಡ ಮದನಾಂತಕ ಶೂಲಪಾಣೆ
ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ
ಹೇ, ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆ
ಭೂತದಿಪ ಪ್ರಮಥ ನಾಥ ಗಿರೀಶ ಚಾಪ

ನಮೋ ಭೂತನಾಥ ನಮೋ ದೇವ ದೇವ
ನಮೋ ಭಕ್ತಪಾಲ ನಮೋ ದಿವ್ಯ ತೇಜ ||

ಭವಾ ವೇಧಸಾರ ಸದಾ ನಿರ್ವಿಕಾರ
ನಮೋ ಲೋಕಪಾಲ ನಮೋ ನಾದಲೋಲ
ನಮೋ ಪಾರ್ವತಿ ವಲ್ಲಭ ನೀಲಕಂಠ ||ನಮೋ ಭೂತನಾಥ ||

ಸದಾ ಸುಪ್ರಕಾಶ ಮಹಾ ಪಾಪನಾಶ
ಕಾಶಿ ವಿಶ್ವನಾಥ ದಯಾ ಸಿಂಧು ದಾತ
ನಮೋ ಪಾರ್ವತಿ ವಲ್ಲಭ ನೀಲಕಂಠ || ನಮೋ ಭೂತನಾಥ ||

Lyrics in English

Hare chandhrchuda madhnaanthaka shulapaanae
sthaanoa gireesha girijaesha mahaesha shamboo
hae paarvathi hrudhayavallabha chandhrmaulaae
Buthaadheepa pramathanaatha gireeshachaapa

Namo buthanaatha namo dheva dheva
namo bakthapaala namo dhivyathejaa
namo buthanaatha namo dheva dheva
namo bakthapaala namo dhivyathejaa
namo buthanaatha

Bavavaedhsaara sadhaa nirvikaara
Bavavaedhsaara sadhaa nirvikaara
namo lokapaala namo naadha lola
namo paarvathi vallabaa neelakanta || namo buthanaatha ||

Sadhaa suprakaasha mahaa paapanaasha
sadhaa suprakaasha mahaa paapanaasha
kaashi vishvanaatha dhayaa sindhujaatha
namo paarvathi vallabaa neelkanta. || namo buthanatha ||


ನ್ಯಾಯ ನೀತಿ ಮೂರ್ತಿವೆತ್ತ / Nyaya neeti moortivetta

ವಂದೇ ಶಂಭು ಉಮಾಪತಿಮ್ ಸುರಗುರುಮ್
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಮ್ ಮೃಗಧರಮ್
ವಂದೇ ಪಶುನಾಮ್ ಪತಿಮ್
ವಂದೇ ಸೂರ್ಯ ಶಶಂಕ್ ವನ್ನಿ ನಯನಮ್
ವಂದೇ ಮುಕುಂದಪ್ರಿಯಮ್
ವಂದೇ ಭಕ್ತ ಜನಾಶ್ರಯನ್ಚ ವರದಮ್
ವಂದೇ ಶಿವಮ್ ಶಂಕರಮ್

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮಪಾಲಾ ದಯಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಅನ್ನಪ್ಪ ಗುರುವೆ ನಿನ್ನಗೆ ಶರಣು ಏನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲುವೆ
ನ್ಯಾಯ ಮಾರ್ಗದಲ್ಲಿ ನೆಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದ ಬೇಡುವೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮವನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೆ ಗೆಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು

Lyrics in English

Vandhe shambu umaapathim suragurum Vandhe jagath kaaranam Vandhe pannaga Bhushanam mrugadharam Vandhe pashunaam pathim Vandhe surya shashanka vanni nayanam Vandhe mukundhapriyam Vandhe Bhaktha janaashrayancha varadham Vandhe shivam shankaram

Nyaaya neethi moorthiveththa sathya daivave
mahaamahima manjunaatha namo enuve
Bhumigilidha kailaasa ninna sannidhi
nethraavathi nadhi idhuve aa suranadhi

Nyaaya neethi moorthiveththa sathya daivave
mahaamahima manjunaayha namo enuve

Dharmapaalaa dhayasheela manjunaathane
ninna charana seve namma guriya saadhane
Kaalaraathri Kaalaraahu kumaaraswaamige
nemadhindha namisuvevu hejjehejjege ||nyaya neeti ||

Annappa guruve ninnage sharanu enuve
ninna rakshe iralu naanu ella geluve
nyaaya maargadhalli nededhu dhanyanaaguve
dharma nanna kaayalendhu sadha beduve || nyaya neeti ||

Dharmavanu rakshisuva shakthi needu
ninna nambi baaluva bhakthi needu
sathyave geluva nyaaya needu
namma manadha gudiyalli vaasa maadu || nyaya neeti||


ಮಹಾಪ್ರಾಣ ದೀಪಮ್ ಶಿವಂ/ Mahaprana deepam shivam

ಗಾಯಕ : ಶಂಕರ್ ಮಹಾದೇವನ್

ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂ
ಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ
ಮಹಾಕಾಡ ತಿಮಿರಾಂತಕಂ ಸೌರಗಾತ್ರಂ
ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ
ಭವಾನೀ ಸಮೇತಂ ಭಜೆ ಮಂಜುನಾಥಂ
ಓಂ ಓಂ ಓಂ ನಮಃ ಶಂಕರಾಯಚ
ಮಯಸ್ಕರಾಯಚ ನಮಃ ಶಿವಾಯಚ
ಶಿವತರಾಯಚ ಭವಹರಾಯಚ

ಮಹಾ ಪ್ರಾಣ ದೀಪಂ ಶಿವಂ ಶಿವಂ
ಭಜೆ ಮಂಜುನಾಥಂ ಶಿವಂ ಶಿವಂ

ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ
ಹೃದಶಹೃದಯಂಗಮಂ ಚಥುರುದದಿ ಸಂಗಮಂ
ಪಂಚಭೂಥಾತ್ಮಕಂ ಶತ್ ಶತ್ರು ನಾಶಕಂ
ಸಪ್ತ ಸ್ವರೇಶ್ವರಂ ಅಷ್ಟ ಸಿದ್ಧೀಶ್ವರಂ
ನವರಸ ಮನೋಹರಂ ದಶ ದಿಷಾಸು ವಿಮಲಂ
ಏಕಾದಶೂಜ್ವಲಂ ಏಕನಾಥೇಶ್ವರಂ
ಪ್ರಸ್ತುತಿವ ಶಂಕರಂ ಪ್ರಣತ ಜನ ಕಿಂಕರಂ
ದುರ್ಜನ ಭಯಂಕರಂ ಸಜ್ಜನ ಶುಭಂಕರಂ

ಭಾಣಿ ಭವ ಥಾರಕಂ ಪ್ರಕೃತಿ ಹಿತಕಾರಕಂ
ಭುವನ ಭವ್ಯಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ

ಈಶಂ ಸುರೇಶಂ ಋಶೇಷಂ ಪರೇಶಂ
ನಟೇಶಂ ಗೌರೀಶಂ ಗಣೇಶಂ ಭೂತೇಶಂ
ಮಹಾ ಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ
ಮಹಾ ಹರ್ಷ ವರ್ಷಂ ಪ್ರವರ್ಷಂ ಸುಶೀರ್ಷಂ
ಓಂ ನಮೋಃ ಹರಾಯಚ ಸ್ಮರ ಹರಾಯಚ
ಪುರ ಹರಾಯಚ ರುದ್ರಾಯಚ ಭಧ್ರಾಯಚ
ಇಂದ್ರಾಯಚ ನಿತ್ಯಾಯಚ ನಿರ್ಮಿತ್ತಾಯಚ

ಮಹಾ ಪ್ರಾಣ ದೀಪಂ ಶಿವಂ ಶಿವಂ
ಭಜೆ ಮಂಜುನಾಥಂ ಶಿವಂ ಶಿವಂ

ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ
ಡಂಕಾದಿನಾಧನವ ತಾಂಡವ ಡಂಬರಂ
ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ ದಿಮಿದಿಮ್ಮಿ
ಸಂಗೀತ ಸಾಹಿತ್ಯ ಸುಮಕಮಲ ಬಂಭರಂ

ಓಂಕಾರ ಹ್ರೀಂಕಾರ ಶ್ರೀಂಕಾರ ಐಂಕಾರ
ಮಂತ್ರ ಬೀಜಾಕ್ಷರಂ ಮಂಜುನಾಥೇಶ್ವರಂ
ಋಗ್ ವೇದ ಮಾಧ್ಯಂ ಯಜುರ್ವೇದ ವೇಧ್ಯಂ
ಸಾಮ ಪ್ರತೀತಂ ಅಥರ್ವ ಪ್ರಸಾಸಂ
ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ
ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ
ಸುಸಿದ್ಧಂ ನಕಾರಂ ಮಕಾರಂ ಸಿಕಾರಂ
ವಕಾರಂ ಯಕಾರಂ ನಿರಾಕಾರ ಸಾಕಾರ ಸಾರಂ
ಮಹಾಕಾಲ ಕಾಲಂ ಮಹಾ ನೀಲ ಕಂಠಂ
ಮಹಾ ನಂದ ನಂದಂ ಮಹಾತ್ಕಾಟಹಾಸಂ
ಜಟಾಜೂಟ ರಂಗೈಕ ಗಂಗಾ ಸುಚಿತ್ರಂ
ಜ್ವಲ ಉಗ್ರ ನೇತ್ರಂ ಸುಮಿತ್ರಂ ಸುಗೋತ್ರಂ
ಮಹಾಕಾಷಭಾಸಂ ಮಹಾ ಭಾನುಲಿಂಗಂ
ಮಹಾ ವರ್ತ್ರು ವರ್ಣಂ ಸುವರ್ಣಂ ಪ್ರವರ್ಣಂ

ಸೌರಾಷ್ಟ್ರ ಸುಂದರಂ ಸೌಮನಾಥೇಶ್ವರಂ
ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ
ಉಜ್ಜೈನಿ ಪುರ ಮಹಾ ಕಾಳೇಶ್ವರಂ
ವೈದ್ಯನಾಥೇಶ್ವರಂ ಮಹಾಭೀಮೇಶ್ವರಂ
ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ
ಕಾಶಿ ವಿಶ್ವೇಷ್ವರಂ ಪರಂವಿಶ್ವೇಷ್ವರಂ
ತ್ರ್ಯಂಭಕಾದೀಶ್ವರಂ ನಾಗಲಿಂಗೇಶ್ವರಂ
ಶ್ರೀ ಕೇದಾರಲಿಂಗೇಶ್ವರಂ
ಅಗ್ನಿಲಿಂಗಾತ್ಮಕಂ ಜೋತಿ ಲಿಂಗಾತ್ಮಕಂ
ವಾಯುಲಿಂಗಾತ್ಮಕಂ ಆತ್ಮ ಲಿಂಗಾತ್ಮಕಂ
ಅಖಿಲ ಲಿಂಗಾತ್ಮಕಂ ಅಗ್ನಿ ಸೋಮಾತ್ಮಕಂ

ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ
ಅಮೋಘಂ ಅಪೂರ್ವಂ ಅನಂತಂ ಅಖಂಡಂ
ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ
ಅಮೋಘಂ ಅಪೂರ್ವಂ ಅನಂತಂ ಅಖಂಡಂ

ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ

ಓಂ ನಮಃ ಸೋಮಾಯಚ ಸೌಮ್ಯಾಯಚ
ಭವ್ಯಾಯಚ ಭಾಗ್ಯಾಯಚ ಶಾಂತಾಯಚ
ಶೌರ್ಯಾಯಚ ಯೋಗಾಯಚ ಭೋಗಾಯಚ
ಕಾಲಾಯಚ ಕಾಂತಾಯಚ ರಂಯಾಯಚ
ಘಂಯಾಯಚ ಈಶಾಯಚ ಶ್ರೀಶಾಯಚ
ಶರ್ವಾಯಚ ಸರ್ವಾಯಚ

Lyrics in English

Om… maha-praana deepam… shivam… shivam..
Mahonkaara roopam… shivam… shivam…
Maha-surya chandhradhi nethram pavithram
Maha-ghada thimiranthakam soura gathram
Maha-kanthi beejham… maha-divya tejam…
Bhavani sametham… bhaje manjunatham…
Om… Om… Om….
Namah shankaraycha… mayaskaraycha…
Namashivaycha… shivtharaycha… Bhavaharayacha..

Mahaprana deepam shivam shivam
Bhaje manju-natham shivam shivam

Adhvaitha-bhaskaram… artha-naareeshwaram…
Hrudhasha-hrudha-yangamam…
Chathuru-dhadhi-sangamam…
Pancha bhuthathmakam shat-shathru-naashakam…
Saptha swareshwaram… Ashtasiddhishwaram…
Navarasa manoharam.. Dasha-disha-su-vimalam…
Eka-dasho-jwalam eka-nadheshwaram..
Prasthuthiva shankaram… pranatha jana-kinkaram..
Durjana-bayankaram… sajjana-shubankaram..


Prani bhavatharakam prakriti hita karakam
Bhuvana bhavya bhavadayakam
Bhagyathmakam… rakshakam…

Eesham suresham rushesham pareshem
Natesham gowreesham ganesham bhutesham..
Maha-madhura pancha-kshari mantra-maarsham…
Maha harsha varsha pravarsham su-seer-sham

Om…..Namo-harayacha  swara-harayacha  pura-harayacha 
rudra-yacha   bhadra-yacha   indra-yacha   nithya-yacha   nir-nithya-yacha..

Mahaprana deepam shivam shivam…
Bhaje manjunatham shivam shivam…

Dam-damda dam-damda dam-damda dam-damda
Dan-kaadhi-naadha nava thandavaa dambaram
Tha-thimmi thaka-dhimmi dhi-dhimmi dhimi-dhimmi 
Sangeetha saahithya subha kamala bham-bharam..


Omkara ghrinkara shrinkara ayinkara
Manthra beejaksharam manju-natheshwaram
Rugveda maadhyam yajurveda vedhyam…
Sama prageetham adtharva prabhatham…
Puranethi-hasham prasidham vishudham…
Prapanchaika-suthram virudham susidham…
Nakaram makaram shikaram vakaram yakaram nirakara-saakara-saram…
Maha-kaala-kalam  maha-neela-kantam..  
maha-nanda-nandam  maha-ttatta-hasam…
Jhata-jhuta rangaika ganga suchithram..
Jwala-drudra-nethram sumithram sugothram..
Mahaakasha-basam maha-bhanu-lingam…
Maha-bhartru-varnam su-varnam pra-varnam…

Sourashtra sundaram soma-nadeesh-waram…
Sri-saila mandiram… sri mallika-arjunam…
Ujjaini pura maha kaleeshwaram… vaidhya-nathesh-waram
Maha-bheemesh-waram… amara-lingesh-waram… vaama-ligesh-waram
Kaashi vishweshwaram… param-grishmesh-waram…
Threyambakadeesh-waram… naaga-lingesh-waram…
Sri…. Kedara-lingesh-waram…Agni-lingathmakam… jyothi-lingathmakam…
Vaayu-lingathmakam… aathma-lingathmakam…
Akhila-lingathmakam… agni-somathmakam….

Anadhim… ameyam… ajeyam… achithyam…
Amogham… apoorvam… anantham… akhandam…

Dharmasthalakshethra vara-param-jyothim…  

Om….NamahSomayacha… soumyayachaBhavyayacha…
bhagyayacha…Shantayacha… shouryayachaYogayacha…
bhogayachaKalayacha… kaantayacha…Ramyayacha…
gamyayacha…Eeshayacha… sreeshayachaSharvayacha… sarvayacha ……..


ಚಂದ್ರಚೂಡ ಶಿವಶಂಕರ ಪಾರ್ವತಿ/ Chandrachooda shivashankara parvati


ರಚನೆ : ಪುರಂದರದಾಸರು

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ ||


ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರ
ಗಜಚರ್ಮಾಂಬರಧರ ನಮೋ ನಮೋ || ಅ ಪ ||

ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೇ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರನು ನೀನೇ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೊಗಳುವ ನೀನೇ || ೧ ||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೇ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೇ
ಕಾಲಕೂಟವ ಪಾನಮಾಡಿದ ನೀಲಕಂಠನು ನೀನೇ
ಜಾಲ ಮಾಡಿದ ಗೋಪಾಲನೆಂಬ ಹೆಣ್ಣಿಗೆ ಮರುಳಾದವ ನೀನೇ || ೨ ||

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೇ
ಕೊರಳೋಳು ಭಸ್ಮ ರುದ್ರಾಕ್ಷಿಯ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೇ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ || ೩||

Composed by – Sree Purandara Dasaru

Chandrachuda Sivasankara parvati ramanane ninage namo namo || pa ||

sundara mrugadhara pinaaka dhanukara ganga sira
gajacharmambaradhara namo namo || a pa ||

nandivahana nandadinda mujagadi merave nine
andu amruta ghatadindudisida visha tandu bhujisidava nine
kandarpana krodhadinda kanteredu konda ugranu nine
indiresa sree ramana paadava chandadi pogaluva neene || 1 ||

balamrukandajana kaalanu elevaaga paalisidava nine
valayadi kapala pididu bhikshe bedo digambara nine
kalakutava paanamadida nilakamthanu nine
jala madida gopalanemba hennige maruladava nine || 2 ||


dharege dakshina kaveri teera kumbhapuravasanu nine
koralolu bhasma rudrakshiya dharisida parama vaishnava nine
karadali veeneya nudisuva namma uragabhushananu neene
garudagamana shree purandara vithalage pranapriyanu neene || 3||

*********************

ಕೈಲಾಸವಾಸ ಗೌರೀಶ ಈಶ / Kailaasavasa gowrisha

ರಚನೆ : ವಿಜಯ ದಾಸರು

ಕೈಲಾಸ ವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ||ಪ||

ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ
ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
ವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ|೧|

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
ಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ|೨|

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಸರ್ವದೇವ
ಭಾಗವತಗಳ ಪ್ರಿಯ ವಿಜಯ ವಿಠಲನಂಘ್ರಿ
ಜಾಡು ಮಾಡದೆ ಭಜಿಪ ಭಾಗ್ಯವನುಕೊಡು ಶಂಭೋ|೩|

Composed by Vijaya dasaru.

Kailasavasa gaurisha isha
tailadhareyante manasu kodo hariyalli || pa ||

Ahoratriyali nanu anujaragraniyagi
mahiyolage charisideno mahadevane
ahibhudhanane enna avagunagala enisadale
vihita dharmadi vishnu bhakutiyanu kodo shambho || 1 ||

Manasu karanavalla papapunyakkella
analaksha ninna prerane yillade
danuja gajamada vairi danda pranama malpe
maniso I shirava sajjana charana kamaladali || 2 ||

Bhagirathidharane bhayava pariharisayya lesagi ni salaho satata sarvadeva
bhagavatajana priya vijaya vithalanghri
jagu madade bhajipa bhagyavanu kodo shambho || 3 ||


Sung by Pt.Bhimsen joshi