ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ / Olideyatakamma lakumi vasudevage

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ |
ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! ||

ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು |
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ ||

ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ |
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ||

ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು |
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||

Lyrics in English

Olide yaatakammaa lakumi vaasudevage || pa ||

Halavangadavana havane tilidu tilidu tiliyada haage || a.pa ||

Kamalagandhi komalaangi sundaraabjavadane neenu |
Ramana matsya kathina kaaya sookaraasyanu ||
Ramaneeya swaroopi neenu amita gora roopanavanu |
Namiparishtadaani neenu daanava beduvavanige || 1 ||

Lalita chaaru sheele neenu kalki kalaha preeyanavanu |
Kulada kuruhu illaa gunada neleya kandillaa |
Halavu kaaladavanu avana balaga bandhu nishkinchananu|
Jaladhi aaladeleya mele malagi berala cheepuvavanige || 2 ||

Swarataana pekshakaami nidraaheena anashaniyu |
Sparsharoopa vaachya shabda amita bhoktanu ||
Guru gopaalaviththalanu niruta tanna vakshadolu |
Aramaneya maadi kottu maralu maadida maayaavige || 3||

ಕ್ಷೀರಸಾಗರದಲಿ ಜನಿಸಿ ಬಂದಂತ ವರಮಹಲಕ್ಷ್ಮಿ / Ksheerasagaradali janisi bandantha varamahalakshmi

ಕ್ಷೀರಸಾಗರದಲಿ ಜನಿಸಿಬಂದಂತ
ವರಮಹಲಕ್ಷ್ಮಿ ಕರುಣವ ಮಾಡಮ್ಮ
ನಿನ್ನ ಕರುಣೆಯ ತೋರಮ್ಮ ||ಪ||

ಸರ್ವದೇವತೆಗಳ ತ್ವರದಲಿ ನೋಡುತಾ
ಹರಿಸರ್ವೋತ್ತಮನೆಂದು ತಿಳಿದು ನೀ
ಕರವೀರಮಾಲೆಯ ಹಾಕಿದೆಯಮ್ಮ ||ಅ.ಪ.||

ಜನಕರಾಯನ ಕುವರಿ ನಿನ್ನನು ಅನುದಿನ ‌ನೆನೆವನು ಅನುಗ್ರಹಮಾಡಮ್ಮ
ಪಿನಾಕಿಧನುವ ಮುರಿದು ಹಾಕಿದ
ಶ್ರೀರಾಮಚಂದ್ರಗೆ ವರಮಾಲೆ ಹಾಕಿದ
ಜಾನಕಿ ನೀನಮ್ಮ ||೧||

ಅಂದು ರುಕ್ಮಿಯು ಶಿಶುಪಾಲನ ನಿಲ್ಲಿಸಿ
ಮಾಲೆಯ ಹಾಕೆನಲು
ಹಿಂಡುದೈವದ ಗಂಡ ಪುಂಡರೀಕಾಕ್ಷನೆ
ವರನೆನುತಲಿ ಮಂದಾರಮಾಲೆಯ ಹಾಕಿದ ರುಕ್ಮಿಣಿ ||೨||

ಭೂವೈಕುಂಠದ ಶ್ರೀನಿವಾಸನ ಕೂಡಿ
ಶ್ರಾವಣಮಾಸದ ಭಾರ್ಗವ ದಿನದಲ್ಲಿ
ಶ್ರೀವಿಠಲನ ಸಹಿತದಿ ತವಕದಿ ಬಾರಮ್ಮ
ಸೇವೆಯ ಮಾಡುವ ಅವಕಾಶವ ನೀಡಮ್ಮ||೩||

Lyrics in English

Ksheera sagaradalli janisi bandana
varamahalakshmi karunava madamma
Ninna karuṇeya toramma || pa ||

Sarva devategalolage twaradali noduta
harisarvottamanendu tilidu nee
karaveeramaleya hakidenamma || a.pa ||

Janakarayana kuvarti ninnane anudina nenevanu anugraha madamma
pinaki dhanuva muridu hakida
Shree ramachandrage varamale hakida
Janaki neenemma || 1 ||

Andu rukmiya shishupalana nillisi
maleya hakenalu
Hindu daivada ganda pundarikakshane
varanenutali mandaramaleya hakida rukmini || 2 ||

Bhuvaikuntada shreenivasana koodi
shravana Masada bhargava dinadali
shree vittalana sahitadi tavakadi baramma
seveya maduva avakashava nidamma || 3 ||

ಕೇಳಿಪೇಳಮ್ಮ ನಮ್ಮಮ್ಮ ಲಕುಮೀ / Kelipelamma nammamma lakumi

ಕೇಳಿಪೇಳಮ್ಮ ನಮ್ಮಮ್ಮ ಲಕುಮೀ ||

ಕೇಳಿಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ
ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ ||

ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನುಒಲುಮಿಗಳ
ಒಲುಮಿಕಾಂತ ಲಲನೆ ನೀನು ಕಮಲಾದೇವಿ ||

ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆ
ಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ ||

ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮಸನ್ನುತಾಂಗಿ
ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ ||

ಎಲ್ಲ ದಿವಿಜರಲ್ಲಿ ಪೋಗೆ ಬಲುಬಗೆ ಪೇಳಿಕೊಂಡೆ
ಫುಲ್ಲನಾಭನಲ್ಲಿ ಒಂದು ಸೊಲ್ಲನಾಡೋ ಶಕ್ತಿಯಿಲ್ಲ ||

ವಾರಿಜಾಕ್ಷಿ ನಿನ್ನ ಪಾದ ಬಾಲ್ಯದಿಂದ ಸೇರಿದ್ದಕ್ಕೆ
ನೀರಜಾಕ್ಷನನ್ನು ತೋರೆ ಭಾರಿ ಫಲವಾಯಿತೆಂಬೆ ||

ನಿಮ್ಮ ಮಾತು ಮೀರ ಶೂರ ನಮ್ಮ ಮಾರಜನಕ ಕೃಷ್ಣಅಮರ
ತರುವ ಕಿತ್ತಿ ನಿಮ್ಮ ಮನೆಯೊಳ ಹಚ್ಚಿದನಂತೆ ||

ಸುಂದರಿ ಸೌಭಾಗ್ಯವಂತೆ ಮಂದಿರದೋಳಿಪ್ಪನನ್ನು
ಇಂದಿರೇಶನನ್ನು ತೋರೆ ನಂದ ಬಾಲ ಮಹಿಳೆ ಅಂಬಾ ||

Lyrics in English

Kelipelamma nammamma lakumi ||pa||

Kelipele hariyali pogi bahala sokinava gopibaliyarige
Mecchi bahu jalava madida krushnana ||a.pa.||

Pralaya kaladalli Aladele mele malagippanu olumigala
Olumikanta lalane ninu kamaladevi ||1||

Nityamukte nityatrupte nityaviyogini harige
Brutyanalle nanu svalpa chittavittu node tayi ||2||

Ninna horatu atanannu toruvara kanenamma sannutangi
Sarasakshi ennolu karunava made ||3||

Ella divijaralli poge balubage pelikonde
Pullanabanalli ondu sollanado Shaktiyilla ||4||

Pada balyadinda seriddakke nirajakshanannu
Tore bari palavayitembe||5||

Nimma matu mira sura namma marajanaka krushna
Amara taruva kitti nimma maneyola hacchidanante||6||

Sundari saubagyavante mandiradolippanannu
Indireshanannu tore nanda bala mahile amba ||7||