ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲ / Ramanamavembo namava nenedare bhayavilla

ರಾಮನಾಮವೆಂಬೋ ನಾಮವ ನೆನೆದರೆ
ಭಯವಿಲ್ಲ ಮನಕೆ
ಮೂರು ಲೋಕಕೆ ಕಾರಣ ಕರ್ತಾ
ನಾರಾಯಣ ಜಾಗಕೆ          ||ರಾಮ||
ಶ್ರೀಮನ್ ನಾರಾಯಣ ಜಗಕೆ ||೨ ||  ||ರಾಮ||

ಮತ್ಸ್ಯಾವತಾರವ ತಾಳಿದ ರಾಮ
ವೇದವ ತರುವದಕೆ
ಬೆಟ್ಟವ ಬೆನ್ನಲಿ ಪೊತ್ತ ರಾಮ
ಕೂರ್ಮಾವತಾರಕ್ಕೆ      ||ರಾಮ ||

ಭೂಮಿಯ ಪೊತ್ತು ನೀರೊಳು ಮುಳುಗಿದ
ವರಾಹವತಾರಕ್ಕೆ
ಕರುಳನು ಬಗೆದು ಮಾಲೆಯ ಧರಿಸಿದ
ಪ್ರಹ್ಲಾದನ ಸಲಹುದಕೆ  || ರಾಮ||

ಭೂಮಿಯ ದಾನವ ಬೇಡಿದ ರಾಮ
ವಾಮನವತಾರಕ್ಕೆ
ತಾಯಿಯ ಶಿರವನು ಕಡಿದನು ರಾಮ
ಭಾರ್ಗವತಾರಕ್ಕೆ       || ರಾಮ ||

ವನವಾಸವ ಮಾಡಿದ ರಾಮ
ಜನಕನ ವಾಕ್ಯಕ್ಕೆ
ಮಾವ ಕಂಸನ ಕೊಂದನು ಕೃಷ್ಣ
ತಾಯಿಯ ಬಿಡಿಸಲಿಕ್ಕೆ || ರಾಮ ||

ಸತಿಯರ ವ್ರತಗಳ ಕೆಡಿಸಿದ ರಾಮ
ತ್ರಿಪುರರ ಸಲಹುದಕ್ಕೆ
ವಾಹನ ಬಿಟ್ಟು ತುರಗವ ನೇರಿದ
ಕಲ್ಯವತಾರಕ್ಕೆ ||ರಾಮ ||

ಶ್ಯಾಮಲ ವರ್ಣವ ತಾಳಿದ ರಾಮ
ಸಾಮರ್ಥ್ಯನು ಜಗಕೆ
ಸ್ವಾಮಿ ಶ್ರೀ ಪುರಂದರ ವಿಠಲನು ರಾಮ
ಗೋವಿಂದನು ಜಗಕೆ || ರಾಮ ||

Lyrics in English

Ramanamavembo namava nenedare
bhayavilla manake
mooru lokakke karana karta
narayana jagake || Rama ||
shreeman narayana jagake

Matsyavatarava talida rama
vedava taruvadake
bettada bennali potta rama
koormavatarakke || Rama ||

Bhumiya pottu neerolu mulugida
varahavatarakke
karulanu bagedu maleya dharisida
prahladana salahudake || Rama ||

Bhumiya danava bedida rama
vamanavatarakke
tayiya shiravanu kadidanu rama
bhargavatarakke || Rama ||

Vanavasava maḍida rama
janakana vakyakke
mava kamsana kondana krishna
tayiya bidisalikke || Rama ||

Satiyara vrutagala kedisidane rama
tripurara salahudake
vahana bittu turagava nerida
kalkyavatarakke || rama ||

Shyamala varnana talida rama
samarthyanu jagake
swami Shree Purandara vittalanu rama
govindana jagake || Rama ||

ಅನುದಿನ ನೆನೆಯಲು ಹನುಮಗೆ ಅತಿ ಪ್ರಿಯ / Anudina neneyalu hanumage ati priya

ರಾಮ ರಾಮ ಜಯ ರಾಮ ರಾಮ ಜಯ ಸೀತಾರಾಮ್
ರಾಮ ರಾಮ ಜಯ ರಾಮ ರಾಮ ಜಯ ಸೀತಾರಾಮ್

ಅನುದಿನ ನೆನೆಯಲು ಹನುಮಗೆ ಅತಿ ಪ್ರಿಯ ಪರಮಪಾವನ ರಾಮ ನಾಮ||

ಇನಕುಲ ಭೂಷಣ ಮುನಿಜನ ತೋಷಣ||
ಜಾನಕಿ ರಮಣ ನ ನಾಮ||೧||

ಗೌತಮ ಸತಿಯ ಪುನೀತಳ ಮಾಡಿ ಪ್ರಖ್ಯಾತಿ ಪೊಂದಿದ ದಿವ್ಯ ನಾಮ
ಶೀತಲ‌ಕಿರಣ ಭೂಷಣ ನ ಧನುಷ ಮುರಿದು ಸೀತೆ ಯ ಪೊಂದಿದ ನಾಮ||೨||

ಜನಕ ನ ವಚನವ  ಉಳಿಸುವ ನೆವದಲಿ
ವನವಾಸ ಮಾಡಿದನ ರಾಮ
ವನದಲಿ ಕರದೂಷಣಮುಕಧನುಜರ  ಮನನ ಮಾಡಿದ ದಿವ್ಯ ನಾಮ||೩||

ಶರಭಂಗ ಮುನಿಗೆ ಪರಮಪದವನಿತ್ತ ಪರಮಪವಿತ್ರನ ನಾಮ
ವರಿಸಲು ಬಂದ ಶೂರ್ಪಣಿಕಿನ ನಾಸಿಕ ಕಣ್ಣ ಉರಿಸಿದ ನಾಮ||೪||

ಭೂಮಿಜೆಯ ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ
ಸ್ವಾಮಿ ಯ ಪ್ರೇಮಕೆ ಮಡಿದ ಜಠಾಯುಗೆ ಅಭಯಯಹಸ್ತವ ಇತ್ತ ನಾಮ||೫||

ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತ ನ‌ ಕೊಂದ ನಾಮ
ಕೋಮಲಕಮಲ ಸುಯುತತನಯಗೆ ಸಾಮ್ರಾಜ್ಯವನಿತ್ತ ನಾಮ||೬||

ಹರಿಪರಿವಾರದಿ ಶರದಿಯೊಳ್ ಸೇತುಬಂದನ ವ ಮಾಡಿದ ನಾಮ
ಧುರಳರಾವಣ ರಕ್ಕಸರನ್ನೆ ಕೊಂದು
ಧರಣಿಸುತೆಯ ತಂದ ನಾಮ||೭||

ಶರಣವ ಪೊಂದಿದ ಭಕುತ ವಿಭಿಷಣ ಗೆ ಕರುಣವ ತೋರಿದ ನಾಮ
ಕರುಣಿಸೀತೆ ಲಕ್ಷ್ಮಣನಿಂದ ಕೂಡಿ ಪುಷ್ಪಕವ ನೇರಿದ ಸಾದು ನಾಮ||೮||

ಗುರುತರ ತಪದಲಿ ನಿರತನಾಗಿ ತಮ್ಮ ಭರತ ನ ಉಳಿಸಿದ ನಾಮ
ದೊರೆತನ ಪೊಂದಿ ಸಕಲಸುಜನರಿಗೆ ಪರತರ ಸುಖವಿತ್ತ ನಾಮ||೯||

ತನ್ನ ಭಕುತರೊಳು ಉನ್ನತನೆಣಿಸಿದ ಘನ್ನ ಮಾರುತಿಗೊಲಿದ ನಾಮ
ಪ್ರಸನ್ನ ನಾಗಿ ಸಂತತ ಇವನಿಗೆ ತನ್ನ
ಸಹಬೋಗ ಸುಖವನ್ನಿತ್ತ ನಾಮ||೧೦||

Lyrics in English

Rama Rama jaya Rama rama jaya seetaram
Rama Rama jaya Rama rama jaya seetaram

Anudina neneyalu hanumage ati priya paramapavana Rama nama ||

Inakula bhushanana munijana toshana |
Janaki ramanana nama || 1 ||

Goutama satiya punitala Madi prakyata pondida divya nama
sheetalakirana bhushanana dhanusha muridu seeteya pondida nama || 2 ||

Janakana vachanava ulisuva nevadali
vanavasa madidanu rama
vanadali karadooshanamukha dhanujara manana maḍida divya nama || 3 ||

sharabhanga munige paramapadavanitta paramapavitra nama
varisalu Banda shurpanakhina nasika Kanna udisida nama || 4 ||

Bhumijeya mosadinda agalisida marichana konda nama
swamiya premade maḍida jatayuge abhayahastavanitta nama || 5 ||

Aa Maha hanumanta kamitadante Mahendra sutana konda nama
komalakamala suyuta tanayage samrajyavanitta nama || 6 ||

Hariparivaradi sharadhiyol setubandhanava maḍida nama
dhurula ravana rakkasranne kondu
dharanisuteya tanda nama || 7 ||

Sharanara pondida bhakuta vibhishanage karunava torida nama
karuniseete lakshmananinda koodi pushpakava nerida sadhu nama || 8 ||

Gurutara tapadali niratanagi tamma bharatana ulisida nama
doretana pondi sakalasujanarige paratara sukhavitta nama || 9 ||

Tanna bhakutarolu unnatanenisida Ghana marutigolida nama
prasannanagi santata ivanige tanna
sahabhoga sukhavanitta nama || 10 ||