ಗೋವಿಂದ ನಮೋ ಗೋವಿಂದ ನಮೋ / Govinda namo Govinda namo

ಗೋವಿಂದ ನಮೋ ಗೋವಿಂದ ನಮೋ ಗೋವಿಂದ  ನಾರಾಯಣ |
ಗೋವರ್ಧನ ಗಿರಿಯೆತ್ತಿದ ಗೋವಿಂದ ನಮ್ಮ ರಕ್ಷಿಸೊ ||ಪ||

ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ |
ಕರ್ತು ಯಮನವರೆಳೆದು ಒಯ್ಯಲು ಅರ್ಥ ಪುತ್ರರು ಕಾಯ್ವರೆ ||೧||

ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು |
ಸಂಚಿತಾರ್ಥದದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ ||೨||

ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು |
ಬಿಡದೆ ಯಮನವರೆಳದು ಒಯ್ಯಲು ಎಡವಿ ಬಿದ್ದಿತು ನಾಲಗೆ ||೩||

ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು |
ಪ್ರಾಣ ಹೋಗಲು ಮುಟ್ಟಲಂಜುವಳು ಜಾಣೆ ಕರೆದರೆ ಬಾರಳು ||೪||

ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು |
ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು ||೫||

ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು |
ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು ||೬||

ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರ ಸೀಳಿದ |
ಮುಟ್ಟಿ ಭಜಿಸಿರೊ ಶ್ರೀ ಪುರಂದರ ವಿಟ್ಠಲೇಶನ ಚರಣವ ||೭||

ಕೃತಿಕಾರರು : ಶ್ರೀ ಪುರಂದದಾಸರು

Lyrics in English

Govinda namo Govinda namo Govinda narayana |
govardhana giriyettida Govinda namma rakshiso || pa ||

Arthavarige putrararige mitrabandhavararige |
karthru yamanavareledu oyyalu artha putraru kayvare || 1 ||

Mancha baradu madadi barali kanchugannadi baradu |
sanchitarthada dravya baradu munche madiri dharmave || 2 ||

Odaveyasege odala kicchige madadi bennalle bahalu |
bidade yamanavareledu oyyalu edavi bidditu nalage || 3 ||

Pranavallabhe Tanna purushana kanadeye nilalaralu |
prana hogaluve muttalanjuvalu Jane karedare barali || 4 ||

Tandu bandarenu Tanna purushage banni balalidireembalu |
ondu dinadali taradiddare handinayante kelevalu || 5 ||

Untukalakke nantarishtaru bantaragiye kayvare |
kantakaru yamanavaru elevaga nantarishtaru bararu || 6 ||

Dittatanadali pattavalida meṭṭi ditijara seelida |
mutti bhajisiro Sri Purandara vittaleshana charanava || 7 ||

ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು

ಸೋಜೀಗ ರೊಳಗತಿ ಸೋಜೀಗ ರಾಘವೇಂದ್ರಾ ಗುರು |ಪ|

ಸೋಜೀಗ ವಲ್ಲವೆ ರಾಜಾ ಗುರುವು ನೀನು
ನೈಜ ರೂಪದಿ ಬಂದು ಮಾಜಾದೆ ಪೊರೆವುದು |ಅ.ಪ|

ಬೆಂಬಲ ನಿನಗೆಂದು ಸ್ತಂಭದಿ ಹರಿ ಬಂದ
ಇಂಬು ಪಾಲಿಸು ಗುರುವೇ
ನಂಬೀದ ಜನಗಣ ಡಿಂಭದಿ ನೀ ಮೂಡಿ
ಅಂಬಕ ದೊಳು ಕಂಡೇ ||1||

ಇಲ್ಲ ಹರಿಯು ಎಂಬ ಕ್ಷುಲ್ಲ ಸಂಶಯ ವೆಂಬ
ಹಲ್ಲು ಮುರಿದು ಭಕ್ತರಲ್ಲಿ ತುಂಬುವೆ ಭಕ್ತಿ
ಇಲ್ಲದಿರಲು ನೀನು ಕಳ್ಳ ಕಲಿಯು ಜಗ
ವೆಲ್ಲ ತುಂಬುತ ಶೃತಿ ಸುಳ್ಳು ಎನಿಸುತಿದ್ದಾ||2||

ನಿರುತ ನೀಡುತ ಹರಿಕೆ ಕರೆದು ಪೊರೆವೆ ಜನರ
ಸರಿಯು ಕಾಣೆನು ನಿನಗೆ ಹರಿಯ ಕಿಂಕರ ಶರಣು
ಮರುತ ದೇವನ ಮತ ಮೆರೆಸಿ ಕುಣಿಸುತ್ತಿರುವೆ
ಶರಣ ಜನರ ಪೊರೆವ ಪರಮಾಪ್ತ ಸಿದ್ಧವೋ ||3||

ಹುಣ್ಣು ಅಳಿಸಿ ಭಕ್ತಿ ಹಣ್ಣು ತಿನ್ನಿಸಿ ಜ್ಞಾನ
ಕಣ್ಣು ಪಾಲಿಪ ಗುರು ಮಣ್ಣು ಗೂಡಿಸೊ ಭವವ
ಸಣ್ಣವರೆಮ್ಮ ಶಂಕು ಕರ್ಣನೆ ಸಲಹೈಯ್ಯ
ಗಣ್ಯರೊಳಗೆ ಗಣ್ಯ ಪೂರ್ಣ ಪ್ರಜ್ಞರ ಪ್ರೀಯಾ ||4||

ಹಿಂದೆ ಹೋಯಿತು ಹೊತ್ತು ಮುಂದೆ ಕಾದಿದೆ ಮೃತ್ಯು
ಇಂದು ಭಾರವ ಪೊತ್ತು ಕಂದರೆಮ್ಮನು ಕಾಯೋ
ಇಂದ್ರ ತಾತನ ಹೃದಯ ಮಂದೀರದಲಿ ನಲಿವ
ಇಂದಿರೇಶ ಕೃಷ್ಣವಿಠಲ ರಾಯನ ತೋರು ||5||

Lyrics in English

Sojiga rolagati sojiga raghavendra guru ||

Pasojiga vallave raja guruvu ninu|
Naija rupadi bandu majade porevudu || a.pa||

Bembala ninagendu stambadi hari banda
Imbu palisu guruve
Nambida janagana dimbadi ni mudi
Ambaka dolu kande ||1||

Illa hariyu emba kshulla samsaya vemba
Hallu muridu Baktaralli tumbuve Bakti
Illadiralu ninu kalla kaliyu jaga
Vella tumbuta sruti sullu enisutidda ||2||

Niruta niduta harike karedu poreve janara
Sariyu kanenu ninage hariya kimkara saranu
Maruta devana mata meresi kunisuttiruve
Sarana janara poreva paramapta siddhavo ||3||

Hunnu alisi Bakti hannu tinnisi j~jana
Kannu palipa guru mannu gudiso Bavava
Sannavaremma samku karnane salahaiyya
Ganyarolage ganya purna praj~jara priya ||4||

Hinde hoyitu hottu munde kadide mrutyu
Indu barava pottu kandaremmanu kayo
Indra tatana hrudaya mandiradali naliva
Indiresa krushnavithala rayana toru ||5||


ಋಣವಿಮೋಚನ ಶ್ರೀಲಕ್ಷ್ಮೀನರಸಿಂಹ ಸ್ತೋತ್ರಂ

ಋಣವಿಮೋಚನ ಶ್ರೀಲಕ್ಷ್ಮೀನರಸಿಂಹ ಸ್ತೋತ್ರಂ

ದೇವತಾ ಕಾರ್ಯ ಸಿಧ್ಯರ್ಥಂ, ಸಭಾ ಸ್ಥಂಭ ಸಮುದ್ಭವಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||

ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||

ಆಂತ್ರಮಾಲಧರಂ ಶಂಖ ಚಕ್ರಾಬ್ಜಾಯುಧ ಧಾರಿಣಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||

ಸ್ಮರಣಾತ್ ಸರ್ವ ಪಾಪಘ್ನಂ ಖದ್ರೂಜ ವಿಷನಾಶನಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||

ಸಿಂಹನಾದೇನಾ ಮಹತ ದಿಗ್ಧಂತಿ ಭಯನಾಶನಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||

ಪ್ರಹ್ಲಾದ ವರದಾಂ  ಶ್ರೀಶಂ ದೈತ್ಯೇಶ್ವರ ವಿಧಾರಿಣಾಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ||

ಕ್ರೂರಗ್ರಹ ಪೀಡಿತಾನಾಂ ಭಕ್ತಾನಾಂ ಅಭಯಪ್ರದಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||

ವೇದ ವೇದಾಂತ ಯಜ್ಞೇಶಂ ಬ್ರಹ್ಮ ರುದ್ರಾದಿ ವಂದಿತಂ
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||

ಯ ಇದಮ್ ಪಠತೇ ನಿತ್ಯಂ ಋಣಮೋಚನ ಸಂಜ್ಞಿಕಂ
ಆನೃಣಿಂ ಜಾಯತೇ ಸತ್ಯೊ ಧನಂ ಶೀಘ್ರಮವಾಪ್ನುಯಾತ್ ||

ಇತಿ ಶ್ರೀ ವಾದಿರಾಜ ಯತಿರಾಜ ವಿರಚಿತ ಋಣ ವಿಮೋಚನಾ ಸ್ತೋತ್ರಂ ಸಂಪೂರ್ಣಂ


ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ /Haneve ninnaya gunavenu bannipeno

ಅಂಕಿತ : ಹಯವದನ

ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ  ||ಪ||

ಹಣವಿಲ್ಲದವನೊಬ್ಬ ಹೆಣವೆ ಸರಿ ಕಂಡ್ಯ ||ಅಪ||

ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ
ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ
ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ
ಹೊಲೆಯನಾದರೂ ತಂದೊಳಗಿರಿಸುವಿ   ||೧||

ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ
ಶೃಂಗಾರಾಭರಣಂಗಳ ಬೇಗ ತರಿಸುವಿ
ಮಂಗನಾದರೂ ಅನಂಗನೆಂದೆನಿಸುವಿ
ಕಂಗಳಿಲ್ಲದವಗೆ ಮಗಳ ಕೊಡಿಸುವಿ ||೨||

ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ
ಸರುವರಿಗೆ ಶ್ರೇಷ್ಠನರನ ಮಾಡಿಸುವಿ
ಅರಿಯದ ಶುಂಠನ ಅರಿತವನೆನಿಸುವಿ
ಸಿರಿಹಯವದನನ ಸ್ಮರಣೆ ಮರೆಸುವಿ ||೩||

Lyrics in English

Hanave ninnaya gunavenu bannipeno || pa ||

Hanavilladavanobba henave sari kandya || a.pa ||

Beleyagadavanella beleya madisuvi
Ella vastugalaniddalle tarisuvi
kulagettavara satkulake serisuvi
holeyanadaru tandolagirisuvi || 1 ||

Anganeyara sanga atishayada madisuvi
shrungarabharanamgala bega tarisuvi
manganadaru ananganendenisuvi
kangalilladavage magala kodisuvi || 2 ||

Charanakke bandantha duritavanu bidisuvi
saruvarige shreshta narana madisuvi
ariyada shuntana aritavanenisuvi
sirihayavadanana smarane maresuvi || 3 ||

ಜಯ ಜಯ ಶ್ರೀ ರಾಘವೇಂದ್ರ / Jaya jaya Shree raghavendra

ಜಯ ಜಯ ಶ್ರೀ ರಾಘವೇಂದ್ರ
ಜಯ ಜಯ ವರಗುಣಸಾಂದ್ರ || ಜಯ ||
ಜಯ ಜಯ ಶ್ರೀ ರಾಘವೇಂದ್ರ || 2 ||

ಪಾವನ ಮಂತ್ರಾಲಯ ಸದನಂ
ಪತಿತ ಪಾವನ ಜಿತ ಮದನಂ ||
ಗಜ ರಾಘವೇಂದ್ರ ಶ್ರೀ ಚರಣಂ ||2||
ಶರಣಾಗತ ಜನ ಭವತರಣಂ ||ಜಯ ಜಯ||

ಶ್ರೀ ರಘುರಾಮ ಪಾದಾಂಬುಜ ಭ್ರಂಗಂ
ಆರ್ತಜನಮನ ಕರುಣಾಪಾಂಗಂ ||ಶ್ರೀ ರಘು||
ಮಾರುತ ಮತಾಂಭುಧಿ ಪೂರ್ಣಚಂದ್ರಂ ||2||
ಭಜ ಭಜ ಮಾನಸ  ಶ್ರೀ ರಾಘವೇ೦ದ್ರ   ||ಜಯ ಜಯ||

Lyrics in English

Jaya jaya Shree raghavendra
jaya jaya varagunasandra ||
jaya jaya Shree Raghavendra || 2 ||

Pavana mantralaya sadanam
patita pavana jita Shree charanam ||
sharanagatam Jana bhavataranam || jaya jaya ||

Shree raghurama padambuja bhrangam
artajanamana karunapanga || Shree raghu ||
maruta matambudhi poornachandra |
bhajane bhajane manasanu Shree Raghavendra || Jaya jaya ||

ಉಗಾಭೋಗ / ಮುಂದೆ ಕೆಟ್ಟು ಬಂದವರ ಹಿಂದಕೆ ಹಾಕಿಕೊಂಡ / Munde kettu bandavara hindake hakikonda

ಉಗಾಭೋಗ / Ugabhoga

ಮುಂದೆ ಕೆಟ್ಟು ಬಂದವರ ಹಿಂದಕೆ ಹಾಕಿಕೊಂಡ ಬಳಿಕ
ಬಂದ ಗುಣದೋಷಗಳ ಎಣಿಸುವರೆ
ಎಲೆ ದೇವಾ !ಅಂದವಲ್ಲ ನಿನ್ನ ಘನತೆಗೆ ತಂದೆತಾಯಿಗಳು
ತಮ್ಮ ಕಂದನವಗುಣಗಳೆಣಿಸುವರೆ ?ಎಂದೆಂದಿಗೆನ್ನ ಉದ್ಧರಿಸಬೇಕೆಲೆ
ದೇವಸಂದೇಹವ್ಯಾತಕೆ ನಮೋ ರಂಗವಿಠಲಯ್ಯ

Munde kettu bandhavaru hindake hakikonda
balika Banda gunadoshagala enisuvare
ele deva ! andavall Ninna ghanatege tayi tandegalu
tamma kandanavagunagalenisuvare ? endendigenna
uddharisabekele deva sandehavyatake namo rangavittalayya ||


ಹರಿಯನ್ನದೆ ಮೋಸ ಹೋದೆನೊ ನರಹರಿ / Hariyannade mosa hodeno narahari

ಹರಿಯನ್ನದೆ ಮೋಸ ಹೋದೆನೊ ನರಹರಿ
ದುರಿತಾರಿ ಪಾಲಿಸೊ ದುರ್ಗತಿಯಲಿ ನೊಂದೆ ।

ತಂದೆ ತಾಯಿ ಗರ್ಭದಲಿ ನಾ ಬಂದೆ
ತಡೆಯದೆ ಈ ಕರ್ಮಭೂಮಿಯಲಿ ನಿಂದೆ ।
ಮಂದನಾಗಿಯೆ ಪಾಪ ಮಾಡಿದೆ
ತಂದೆ ಮಾಧವ! ಎನಗೇನುಪಾಯ ಮುಂದೆ ॥

ಪರರ ಸ್ತುತಿಸಿ ನಾಲಗೆ ಬರಡಾಯ್ತು
ಪರರ ಅನ್ನವನುಂಡು ಪೊಟ್ಟೆ ಬರಿದಾಯ್ತು ।
ಅರೆಕಾಗಿಫೆ ನೀಡಿ ಕರವೆಲ್ಲ ಬರಿದಾಯ್ತು
ಅಂಬುಜನಾಭ ಎನ್ನಂಗ ಇನಿತಾಯ್ತು ॥

ಸಾಧನಹೀನನಾದರೆ ಏನೊ
ಸಕಲ ಲೋಕಂಗಳ ಸಲಹುವೆ ನೀನು ॥
ಸಾಧನ ಮಾಡಿಸೊ ಅಡಿಗಡಿಗೆ ನೀನು
ಶರಣೆಂಬೆ ಸಿರಿಕೃಷ್ಣ ಸಲಹೊ ನೀ ಯನ್ನಾ ॥

( ಶ್ರೀ ವ್ಯಾಸತೀರ್ಥರು)

Lyrics in English

Hariyannade mosa hodeno narahari
duritari paliso durgatiyali nondeno ||

Tandeya taayi garbhadallippa naa bande
tadeyade ee karmabhumiyali Ninde |
mandanagiye papa madise |
tandeya madhava enagenupaya munde ||

Parara stutisi nalage baradaytu |
parara annavanundu potte baradaytu ||
arekagipe needi karavella baradaytu |
ambujanabha ennanga initaytu ||

Sadhanaheenanadare eno |
sakala lokangala salahuva neenu ||
sadhana Madison adigalige neenu |
sharanembe sirikrishna salaho nee yannaa ||


ಪಿತಾಂಬರಧರ ನಮೋ ನಮೋ / Peetambaradhara namo namo

ಪಿತಾಂಬರಧರ ನಮೋ ನಮೋ |
ವನಜಾತಾಂಬಕತೇ ನಮೋನಮೋ ||ಪ||

ಖ್ಯಾತಚರಿತ್ರ ವಿಧಾತೃಜನಕ ಪುರು |
ಹೂತ ಸಹೋದರ ನಮೋನಮೋ ||ಅ.ಪ||

ಜಾತರಹಿತ ಜಲಜಾತಭವಾರ್ಚಿತ |
ಪಾಥೋನಿಧಿಶಯ ನಮೋನಮೋ ||
ಪೀತದನುಜ ಭವಭೀತಿದರಾನತ |
ಶ್ರೀ ತರುಣೀಪ್ರಿಯ ನಮೋನಮೋ ||೧||

ಶಾಮಳ ನೀರದ ಕೋಮಳ ದೇಹನಿ |
ರಾಮಯ ನಿರ್ಮಲ ನಮೋನಮೋ ||
ಕಾಮಜನಕ ಬಲರಾಮ ಸಹಜ ಸಂ |
ಗ್ರಾಮಮುಜ್ವಲ ನಮೋನಮೋ ||೨||

ನಂದಗೋಪ ವರನಂದನ ಲಲನಾ |
ನಂದನ ಸುಂದರ ನಮೋನಮೋ ||
ಕುಂದರದನ ಶರದಿಂದುವದನ ಗೋ |
ವಿಂದಜನಾರ್ದನ ನಮೋ ನಮೋ ||೩||

ಹಂಸ ಡಿಬಿಕ ಬಕ ಕಂಸ ಪ್ರಮುಖ ನೃ |
ಶಂಸ ವಿಹಿಂಸಕ ನಮೋನಮೋ ||
ಸಂಸಾರದಘವಿಧ್ವಂಸಕ ಪರಮ |
ಹಂಸೋತ್ತಂಸಕ ನಮೋನಮೋ ||೪||

ಶರಣಜನಾವನ ಶಶಿಕುಲಪಾವನ |
ಗರುಡಗಮನತೇ ನಮೊನಮೋ ||
ತರುಗಣಸಂಕುಲ ವರವ್ಯಾಘ್ರಾಚಲ |
ವರದ ವಿಠಲತೇ ನಮೋನಮೋ ||೫||

ಕೃತಿಕಾರರು : ಶ್ರೀ ಸರಗೂರು ವೆಂಕಟವರದಾರ್ಯರು

Lyrics in English

Pitambaradhara namo namo |
vanajatambakate namo namo ||

Kyatacharitravidhatra janaka Puru |
hoota sahodara namo namo || a.pa||

Jatarahita jalajatabhavarchita |
pathonidhishaya namo namo ||
pitadanuja bhavabhitidaranata |
sree tarunipriya namo namo || 1 ||

Shamala nirada komaladehani |
ramaya Nirmala namo namo ||
kamajanaka balarama sahaja |
sangrama mujwala namo namo || 2 ||

Nandagopa varanandana lalana |
nandana sundara namo namo ||
kundaradana sharadindu vadana |
Govinda janardhana namo namo || 3 ||

Hamsa dibika kamsa pramukha |
nrushamsa vihimsaka namo namo ||
samsaradagha vidhwamsaka parama |
hamsottamsaka namo namo || 4 ||

Sharanajanavana shashikula pavana |
garudagamanate namo namo ||
taruganasankula varavyaghrachala |
varada vittalate namo namo || 5 ||

ಉಗಾಭೋಗ / ನಾ ಭ್ರಷ್ಟನಾದರೂ ನೀ ಎನ್ನ ಕೈಬಿಡದಾದೆ / Naa bheashtanadaru nee Enna kaibidadade

ಉಗಾಭೋಗ

ನಾ ಭ್ರಷ್ಟನಾದರೂ ನೀ ಎನ್ನ ಕೈಬಿಡದಾದೆ
ನಾ ನಿನ್ನ ಮರೆತರೂ ನೀ ಎನಗೆ ಕರುಣಿಸಿದೆ
ನಾ ಅಲ್ಪನಾದರೂ ನೀ ಎನಗೆ ಅತಿಯಾಗಿ ಕೀರ್ತಿ ಮಾಡಿಸಿದೆ
ಅರಿಯಲು ಆಳವಲ್ಲ ನಿನ್ನ ಮಹಿಮೆ
ಜನುಮ ಜನುಮಕು ನಿನ್ನ ಸೇವೆ ಎನಗಿತ್ತು ಸಲಹೋ
ಜಗಕಾಧಾರ *ಜಯರಾಮವಿಠಲ*

Lyrics in English

Naa bheashtanadaru nee Enna kaibidadade
naa Ninna maretaru nee enage karuniside
naa alpanadaru nee enage atiyagi keerthiya madiside
ariyalu alavalla Ninna mahime
januma janumaku Ninna seve enagittu salaho
janakadhara jayaramavittala

ಜೋ ಜೋ ಜೋ ಮುಖ್ಯಪ್ರಾಣ ಜೋಜೋ ಮಲೆವರ / Jo Jo mukhyaprana Jo Jo malevara

ಜೋ ಜೋ ಜೋ ಮುಖ್ಯಪ್ರಾಣ
ಜೋಜೋ ಮಲೆವರ  ಗಂಟಲಗಾಣ ||ಪ||

ಜೋಜೋ ರಾಕ್ಷಸ ಶಿಕ್ಷ ಕಲ್ಯಾಣ
ಜೋಜೋ  ಸಕಲ ವಿದ್ಯಾ ಪ್ರವೀಣ ಜೋ ಜೋ ||ಅ. ಪ||

ಆ ಜಗದಲಿ ನೀ ಬಾಲಬ್ರಹ್ಮಚಾರಿ
ಸೋಜಿಗದಲಿ  ಕಪಿ ರಾಜ್ಯವನಾಳಿ
ತೇಜಮುತ್ತಿನ  ಕವಚಕುಂಡಲಧಾರಿ
ಪೂಜಿಪರ ಪಾಲಿಪೇ  ಸುಜನರುಪಕಾರಿ ||1||

ಭೂಮಿ ಭಾರವನಿಳಿಸಿದ  ಭೀಮ
ಕಾಮಿ ಕೀಚಕನ ಕುಟ್ಟಿ ರಣಧಾಮ
ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ
ಕಾಮಿತಾರ್ಥವನೀವ  ಕಲ್ಪತರು ಭೀಮ ||2||

ಸೌಂದರ್ಯರೂಪದ  ಶ್ರೀಮದಾನಂದ
ತಂದೆ ಹಯವದನನ  ಮೋಹದಕಂದ
ಬಂದು ಉಡುಪಿಯಲಿ  ನೆಲೆಯಾಗಿ ನಿಂದ
ವಂದಿಸುವೆ ನಿದ್ರೆಗೈ  ಹರಿಧ್ಯಾನದಿಂದ ||3||

Lyrics in english

Jo Jo Jo mukhyaprana
Jo Jo malevara gantalagana ||pa||

Jo Jo rakshana shiksha kalyana
Jo Jo sakala vidya pravina Jo Jo ||

Aa jagadali nee balabrahmachari
sojigadali kapi rajyavanali
tejamuttina kavacha kundaladhari
poojipara palipane sujanarupakari ||1||

Bhumi bharavanilisida bhima
kami keechakana kutti ranadhama
bhamini droupadi kashta nirdhuma
kamitarthavaneeva kalpataru bhima ||2||

Soundaryaroopada srimadananda
tandeya hayavadana modakakanda
bandu udupiyali neleyagi ninda
vandisuve nidregai haridhyanadinda ||3||