
ಜೋ ಜೋ ಜೋ ಮುಖ್ಯಪ್ರಾಣ
ಜೋಜೋ ಮಲೆವರ ಗಂಟಲಗಾಣ ||ಪ||
ಜೋಜೋ ರಾಕ್ಷಸ ಶಿಕ್ಷ ಕಲ್ಯಾಣ
ಜೋಜೋ ಸಕಲ ವಿದ್ಯಾ ಪ್ರವೀಣ ಜೋ ಜೋ ||ಅ. ಪ||
ಆ ಜಗದಲಿ ನೀ ಬಾಲಬ್ರಹ್ಮಚಾರಿ
ಸೋಜಿಗದಲಿ ಕಪಿ ರಾಜ್ಯವನಾಳಿ
ತೇಜಮುತ್ತಿನ ಕವಚಕುಂಡಲಧಾರಿ
ಪೂಜಿಪರ ಪಾಲಿಪೇ ಸುಜನರುಪಕಾರಿ ||1||
ಭೂಮಿ ಭಾರವನಿಳಿಸಿದ ಭೀಮ
ಕಾಮಿ ಕೀಚಕನ ಕುಟ್ಟಿ ರಣಧಾಮ
ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ
ಕಾಮಿತಾರ್ಥವನೀವ ಕಲ್ಪತರು ಭೀಮ ||2||
ಸೌಂದರ್ಯರೂಪದ ಶ್ರೀಮದಾನಂದ
ತಂದೆ ಹಯವದನನ ಮೋಹದಕಂದ
ಬಂದು ಉಡುಪಿಯಲಿ ನೆಲೆಯಾಗಿ ನಿಂದ
ವಂದಿಸುವೆ ನಿದ್ರೆಗೈ ಹರಿಧ್ಯಾನದಿಂದ ||3||
Lyrics in english
Jo Jo Jo mukhyaprana
Jo Jo malevara gantalagana ||pa||
Jo Jo rakshana shiksha kalyana
Jo Jo sakala vidya pravina Jo Jo ||
Aa jagadali nee balabrahmachari
sojigadali kapi rajyavanali
tejamuttina kavacha kundaladhari
poojipara palipane sujanarupakari ||1||
Bhumi bharavanilisida bhima
kami keechakana kutti ranadhama
bhamini droupadi kashta nirdhuma
kamitarthavaneeva kalpataru bhima ||2||
Soundaryaroopada srimadananda
tandeya hayavadana modakakanda
bandu udupiyali neleyagi ninda
vandisuve nidregai haridhyanadinda ||3||
