
ವರಕಂಬವನ್ನು ಒಡೆಯಲು ।
ನರಹರಿಯು ।
ಉಗ್ರಕೋಪವನ್ನು ತಾಳಿ ॥
ಕಟಕಟೆಂಬ ಧ್ವನಿಯ ಮಾಡಿ
ನಖಗಳಿಂದಪಿಡಿದು ಒತ್ತಿ ।
ಕರುಳ ಬಗೆದು ಮಾಲೆ ಹಾಕಿ
ಕಂದ ಭಕ್ತನಪ್ಪಿಕೊಂಡ ॥
ಅಂತರಿಕ್ಷದಲ್ಲಿ ಅಮರರು ।
ನೋಡಿ ಆಗ ।ಪುಷ್ಪವೃಷ್ಟಿಯನ್ನೆ
ಕರೆಯಲು ಅಜನ ಪಡೆದ ದೇವಿ
ಬಂದು ತೊಡೆಯ ಮೇಲೆ ಕುಳಿತುಕೊಂಡು ।
ಅಮರಪತಿಯರೆಲ್ಲ ನೋಡೆ
ಅಂಜಬೇಡೆಂದಭಯ ಕೊಟ್ಟ ||
ಲಕ್ಷ್ಮೀನಾರಸಿಂಹನ ಚರಿತೆಯ ।
ಉದಯಕಾಲ ।
ಪಠಿಸುವಂತ ನರರಿಗೆಲ್ಲ ॥
ಪುತ್ರಸಂತಾನಂಗಳಿತ್ತು ಮತ್ತು
ಬೇಡದ್ಹಾಂಗೆ ಕೊಟ್ಟು ।
ಭಕ್ತವತ್ಸಲ ಮುಕ್ತಿಕೊಡುವ
ಪುರಂದರವಿಠಲರೇಯ ||
Lyrics in English
Varakambavannu odeyalu |
narahariya |
ugra kopavannu tali ||
katakatemba dhwaniya Madi
nakhagalinda pididu otti |
karula bagedu male haki
kanda bhaktanappikonda ||
Antarikshadalli amararu |
nodi aaga | pushpavrushtiyanne
kareyalu ajana padeda Devi
bandu todeya mele kulitukondu |
amarapatiyarella node
anjabedendabhaya kotta ||
Lakshminarasimhana chariteya |
udayakala |
patisuvanta nararigella ||
putrasantanamgalittu mattu
bedadahnge kottu |
bhaktavatsala muktikoduva
purandaravittalareya ||

