ಯಾಕೆ ಕಿರಿಕಿರಿ ಮಾಡುತಿ ನೀನ್ಯಾಕೆ ಕಿರಿಕಿರಿ / Yaake kirikiri maduti neenyake kirikiri

ಯಾಕೆ ಕಿರಿಕಿರಿ ಮಾಡುತಿ ನೀ –
ನ್ಯಾಕೆ ಕಿರಿಕಿರಿ ಮಾಡುತಿ ॥ ಪ ॥
ಭಕ್ತವತ್ಸಲ ಭಯನಿವಾರಣ ಬಟ್ಟಲು ಬಾರಿಸಲೇನೋ ॥ ಅ.ಪ ॥

ನೀರೊಳು ಮುಳುಗಿದೆ ಏನೋ ನಿನಗೆ ನೆಗಡಿಯಾಯಿತೇನೋ ।
ಭಾರವ ಪೊತ್ತು ನಿನ್ನ ಬೆನ್ನು ನೊಂದಾವೇನೋ ॥
ಧಾರುಣಿ ಬಗೆದು ನಿನ್ನ ದಾಡಿ ನೊಂದಾವೇನೋ ।
ದುರುಳ ಹಿರಣ್ಯಕನ ಬಗೆದು ಬೆರಳು ನೊಂದಾವೇನೋ ॥ ೧ ॥

ಭೂಮಿಯ ಅಳೆದು ನಿನ್ನ ಪಾದ ನೊಂದಾವೇನೋ ।
ರಾಯರಾಯರ ಗೆದ್ದು ಬಾಹು ನೊಂದಾವೇನೋ ॥
ಸೇತುವೆ ಕಟ್ಟಿ ನಿನ್ನ ರಟ್ಟೆ ನೊಂದಾವೇನೋ ।
ಅಷ್ಟಮ ಸ್ತ್ರೀಯರನ್ನಾಳಿ ತೋಳು ನೊಂದಾವೇನೋ ॥ ೨ ॥

ಬತ್ತಲೆ ನಿಂದು ನಿನಗೆ ಚಳಿಯಾಯಿತೇನೋ ।
ಉತ್ತಮ ತೇಜಿಯನೇರಿ ಪಿತ್ತ ಹತ್ತಿತೇನೋ ॥
ನಾರದ ಗುರುವಿಗೆ ನಾನು ಹೇಳಿ ಕಳಿಸಲೇನೋ ।
ಮಾಯದ ಕಪ್ಪು ನಿನ್ನ ಮೋರೆಗೆ ಹಚ್ಚಿಸಲೇನೋ ।
ಬಾಲ ಲಕುಮಿಲೋಲ ಪ್ರಸನ್ನವೆಂಕಟ ಕೃಷ್ಣ ॥ ೩ ॥

Lyrics in English

Yake kirikiri maduti
neenyake Kiri maduti ||pa||
bhaktavatsala bhaya nivarana battalu barisaleno || a.pa ||

Neerolu mulugide eno ninage nagadiyayiteno
bharava pottu Ninna bennu nondaveno |
dharuni bagedu Ninna dadi nondaveno
durula hiranyakana bagedu beralu nondaveno || 1 ||

Bhumiya aledu Ninna pada nondaveno
rayarayara geddu bahu nondaveno |
setuve katti Ninna ratte nondaveno |
ashtama streeyarannali tolu nondaveno || 2 ||

Battale mindu ninage chaliyayiteno |
uttamara tejiyaneri pitta hattiteno ||
narada guruvige Nanu heli kalisaleno |
mayada kappu Ninna morege hacchisaleno |
bala lakumilola prasannavenkata Krishna ||

ರಾಘವೇಂದ್ರ ರಾಯರ ಪಾದಾಂಬುಜ / Raghavendra rayara padambuja

ರಾಘವೇಂದ್ರ ರಾಯರ ಪಾದಾಂಬುಜ
ಆರಾಧಕರ ಕೊಂಡಾಡಿರೋ     ||ರಾಘವೇಂದ್ರ||

ನಾರಾಯಣ ನಾಮ ಪಾರಾಯಣರ||೨||
ಪಾದಾರವಿಂದ ಸುಧಾ ಸಾರವ ಬೀರುವಾ||೨||   ||ರಾಘವೇಂದ್ರ||

ಸಾರಿ ಭಕ್ತರ ಪಾದಾರವಿಂದಕೆ
ನಮಸ್ಕಾರ ಮಾಡಿರೋ ಸಾಷ್ಟಾಂಗದಿಂದಲಿ    ||ಸಾರಿ||
ಧೀರ ಶ್ರೀ ಕಮಲೇಶವಿಠ್ಠಲ ರಾಯನು ತನ್ನ ||೨||
ಸಾರೂಪ್ಯವ ಕೊಟ್ಟು ಸಲಹುವ ಸಂತತಾ   ||ರಾಘವೇಂದ್ರ||

Lyrics in English

Raghavendra rayara padambuja
aaradhakara kondadiro ||

Narayana nama parayanara |
padaravinda sudha sarva beeruva ||

Sari bhaktara padaravindake
namaskar madiro sashtangadindali |
dheera Shree kamalesha vittala rrayanu tanna
sarupyava kottu salahuva santata ||

**************************************************************

ಗುರುವೇ ನೀನು ಕಾರಣನಯ್ಯ / Guruve neenu karananayya

ಗುರುವೇ ನೀನು ಕಾರಣನಯ್ಯ
ನನ್ನ ಭವದ ಬಂಧನ ಬಿಡಿಸಲು||
ಗುರುವೇ ನೀನು ಕಾರಣನಯ್ಯ||
ಮಾಂಸ ಪಿಂಡ ಹೋಗಿ ಮಂತ್ರ ಪಿಂಡವಾಗಲು||

ಗುರುವೇ ನೀನು ಕಾರಣನಯ್ಯ
ಅಂಗ ರೂಢ ವು ಹೋಗಿ ಲಿಂಗ ರೂಢವು ಬರಲು||
ಗುರುವೇ ನೀನು ಕಾರಣನಯ್ಯ||
ಕಾಯ ಭಾವ ಹೋಗಿ ಕಾಯಕ ಭಾವ ಬರಲು||

ಗುರುವೇ ನೀನು ಕಾರಣನಯ್ಯ
ಪದಾರ್ಥ ಬುಧ್ಧಿ ಹೋಗಿ ಪ್ರಸಾದ ಭಾವ ಬರಲು||
ಹುಕ್ಕೇರೀಶ ನೀನೆ ಕಾರಣನಯ್ಯ||
ಅಜ್ಞಾನ ಹೋಗಿ ಸುಜ್ಞಾನ ಬರಲು||

Lyrics in English

Guruve neenu karananayya
nanna bhavada bandhana bidisalu |
guruve neenu karananayya
mamsa pinda hogi mantra pindavagalu ||

Guruve neenu karananayya
anga rrodhavu hogi linga roodhavu barali |
guruve neenu karananayya
jaya Bhava hogi kayaka Bhava baralu ||

Guruve neenu karananayya
padartha Buddhist hogi prasada Bhava baralu |
hukkerisha Neene karananayya
ajana hogi sujnana baralu ||

ದಾಸರಾಯ ಪುರಂದರ ದಾಸರಾಯ / Dasaraya Purandara dasaraya

ದಾಸರಾಯ ಪುರಂದರ ದಾಸರಾಯ ||ಪ||

ದಾಸರಾಯ ಪ್ರತಿವಾಸರದಲಿ ಶ್ರೀನಿ
ವಾಸನ್ನ ತೋರೋ ದಯಾಸಾಂದ್ರ ||ಅ.ಪ||

ವರದನಾಮಕ ಭೂಸುರನ ಮಡದಿ ಬ
ಸಿರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ||೧||

ಕುಲಿಶಧರಾಹ್ವಯ ಪೊಳಲೊಳು ಮಡದಿ ಮ
ಕ್ಕಳ ಕೂಡಿ ಸುಖದಿ ಕೆಲ ಕಾಲದಲಿದ್ಯೊ ||೨||

ವ್ಯಾಸರಾಯರಲಿ ಭಾಸುರ ಮಂತ್ರೋ ಪ
ದೇಶವ ಕೊಂಡು ರಮೇಶನ ಒಲಿಸಿದ್ಯೊ ||೩||

ಮನೆ ಧನ ಧಾನ್ಯ ವಾಹನ ವಸ್ತುಗಳನೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ ||೪||

ಪ್ರಾಕೃತ ಭಾಷೆಯೊಳ್ ನೀ ಕೃತಿ ಪೇಳಿ ಆ
ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ ||೫||

ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ||೬||

ಪಾತಕ ವನಧಿ ಪೋತನೆನಿಪ ಜಗ
ನ್ನಾಥ ವಿಠ್ಠಲನ
ಸುಪ್ರೀತಿಯಿಂದೊಲಿಸಿದೆ ||೭||

Lyrics in English

Dasaraaya purandara dasaraaya ||pa||
Dasaraya prativasaradali srini
Vasanna toro dayasandra ||a.pa||

Varadanamaka busurana madadi ba
Sirali janisi bandu merede dharaniyolu ||1||

Kulisadharahvaya polalolu madadi ma
Kkala kudi sukadi kela kaladalidyo ||2||

Vyasarayarali basura mantro pa
Desava kondu ramesana olisidyo ||3||

Mane dhana dhanya vahana vastugalanella
Trunake bagedu krushnarpanavende budharige ||4||

Prakruta basheyol ni kruti peli A
Prakruta hariyimda svikruta ninadyo ||5||

Tirthakshetragala murti mahimegala
Kirtisi jagadi krutarthanendeniside||6||

Pataka vanadhi potanenipa jagannatha
viththala
na supritiyindoliside ||7||

ನಿನ್ನ ಧ್ಯಾನದ ಶಕ್ತಿಯ ಕೊಡೊ ಅನ್ಯರಲಿ ವಿರಕ್ತಿಯ / ಉಗಾಭೋಗ / Ninna dhyanada shaktiya kodo

ನಿನ್ನ ಧ್ಯಾನದ ಶಕ್ತಿಯ ಕೊಡೊ ಅನ್ಯರಲಿ ವಿರಕ್ತಿಯ ಕೊಡೊ
ನಿನ್ನ ನೋಡುವ ಯುಕ್ತಿಯ ಕೊಡೊ ನಿನ್ನ ಪಾಡುವ ಭಕ್ತಿಯ ಕೊಡೊ-
ನಿನ್ನತ್ತೆ ಬರುವ ಸಂಪತ್ತಿಯ ಕೊಡೊ ಚಿತ್ತದಿ ತತ್ವದ ಕೃತ್ಯವ ತೋರೊ
ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ ಅತ್ತತ್ತ ಮಾಡೊ
ಭವ ಕತ್ತಲೆಯೆನಗೆ ಮುತ್ತಿದೆ ಹಯವದನ ||

Ninna dhyanada shaktiya kodo anyarali viraktiya kodo
Ninna noduva yuktiya kodo Ninna paduva bhaktiyante kodo
ninnati baruva sampattiya kodo chittadi tatwada krutyava toro
matte tudiyali enage mukutiya kodo attatta mado
Bhava kattaleyenage muttide hayavada ||

ಮುದ್ದು ರಾಮರ ಬಂಟ ಬುಧ್ಧಿಯುಳ್ಳ / Muddu ramara banta buddhiyulla

ಮುದ್ದು ರಾಮರ ಬಂಟ
ಬುದ್ಧಿಯುಳ್ಳ ಹನುಮಂತ
ಹದ್ದಾಗಿ ಹಾರಿದನೆ ಆಕಾಶಕೆ || pa ||

ನಿದ್ರೆಗೈವ ಸಮಯದಿ ಎದ್ದು ಬಾರೆಂದರೆ ಅ-
ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ || a.pa ||

ದಾರಿ ದೂರವೆಂದು ದಾರಿಯನೆ ನಿರ್ಮಿಸಿದ
ಧೀರ, ರಾಮರ ಬಂಟ ಹನುಮಂತನೆ | ನೋಡಿ-
ಬಾರೆಂದರೆ ಪೋಗಿ ಲಂಕೆಯ ಸುಟ್ಟು
ಬೇಗದಲಿ ಮರವನೇರಿ ಕುಳಿತಾತನೆ || 1 ||

ಅಶೋಕ ವನದಲ್ಲಿ ಸೀತೆಯನು ನೋಡಿದ
ಶ್ರೀರಾಮರ ಬಂಟ ಹನುಮಂತನೆ |
ಮಾತೆಯನು ಮಾತಾಡಿಸಿ ಕ್ಷೇಮ ಸುದ್ದಿ
ತಿಳಿಸಿದ ರಘುವೀರ ದೂತ ಜಾಣ ನಿವನೆ || 2 ||

ಆತನ ಮಾತಿಗೆ ಸೇತುವೆನೆ ಕಟ್ಟಿಸಿದ
ಸೀತಾರಾಮರ ಬಂಟ ಹನುಮಂತನೆ |
ಸೀತಾದೇವಿ ಅಮ್ಮನಿಗೆ ಪ್ರೀತಿಯ ಬಂಟನಾದ
ಮುಖ್ಯಪ್ರಾಣ ಹಯವದನನ ದೂತನೆ || 3 ||

Lyrics in English

Muddu ramara banta buddhiyulla hanumanta
haddagi haridane akasake || pa ||

Nidre gaiva samayadi eddu barendare
allidda rakkasaranella gelidatane || a pa ||

Dari duravendu dariyane nirmisida
dhira, ramara banta hanumantane |
nodi- barendare pogi lankeya suttu
begadali maravaneri kulitatane || 1 ||

Ashoka vanadalli siteyanu nodida
sriramara banta hanumantane |
mateyanu matadisi kshema suddi tilisida
raghuvira duta jana nivane || 2 ||

Atana matige setuvene kattisida
sitaramara banta hanumantane |
sitadevi ammanige pritiya bantanada
mukhyaprana hayavadanana dutane || 3 ||

ಏಳು ಬೆಟ್ಟದಮೇಲೆ ಏನಿಹುದೇನಿಹುದೊ / Elu bettada mele enihudenihudo

ಅಂಕಿತ :ಇಂದಿರೇಶ

ಏಳು ಬೆಟ್ಟದಮೇಲೆ ಏನಿಹುದೇನಿಹುದೊ
ತಿರುಮಲರಾಯನ ದೇವಳವಿಹುದೊ ಅಲ್ಲಿ
ವೇಂಕಟರಮಣನು ಎಂಥವನೆಂಥವನೊ
ಶರಣರ ಕಾಯುವ ಕರುಣಾಸಾಗರನೋ ||

ಸ್ವಾಮಿ ಪುಷ್ಕರಣಿಯ ಸ್ನಾನಗಳಿಂದಾ
ವರಾಹಮೂರ್ತಿಯಕಂದ ಆನಂದ
ತಿರುಮಲರಾಯನ ದರುಶನದಿಂದಾ
ಗುರುತರಕಲ್ಮಷವು ಗೋವಿಂದಾ ||

ಶಿರದಿ ಮುಕುಟವು ಧರಿಸಿದ ಚಂದಾ
ಮುಖದಿ ಕಸ್ತೂರಿಯ ತಿಲಕ ಶ್ರೀಗಂಧ
ಕರದಿ ಒಪ್ಪುವ ಶಂಖಚಕ್ರಗಳಿಂದ
ಭಕ್ತರ ದುರಿತಗಳು ಗೋವಿಂದಾ ||

ಬಂಗಾರ ಗೋಪುರವು ಹೊಳೆಯುತ್ತಿರಲು
ಶೖಂಗಾರವಾಗಿಹ ಹರಿಯು ನಿಂತಿರಲು
ಪಾಪ ವಿನಾಶಿನಿಯ ಸ್ನಾನ ಮಾಡುತ್ತಿರಲು
ಪಾಪಗಳೆಲ್ಲವು ಗೋವಿಂದಾ ||

ಅಪ್ಪವು ಅತಿರಸವುಬೂಂದೆ ಪಕ್ವಾನ್ನವು
ತಪ್ಪದೆ ಸಿಗುವುದು ಬುತ್ತಿ ಚಿತ್ರಾನ್ನವು
ವೇದ ವೇದ್ಯನು ವೇಂಕಟರಮಣನು
ಸಂಕಟ ಹರಿಸುವನು ಗೋವಿಂದಾ ||

ಮಂದಹಾಸದಿ ಮುದದಿ ಮುಕುಂದಾ
ವರದ ಹಸ್ತವು ಕೊಡುತಲಿ ನಿಂದಾ
ಇಂದಿರೇಶನ ಭಜಿಪ ಭಕ್ತವೖಂದ
ಬಂದ ದುರಿತಗಳು ಗೋವಿಂದಾ ||

Lyrics in English

Elu bettada mele enihudenihudo
tirumalarayana devalavihudo
venkataramananu enthavanenthavano
sharanara kayuva karunasagarano || Elu ||

Swami pushkaraniya snanagalinda
varahamurthiya kanda ananda
tirumalarayana darushanadinda
gurutara kalmashavu govindana ||

Shigradi mukutava dharisida chanda
mukhadi kasturiyu tilaka srigandha
karadali oppuva shankhachakragalinda
bhaktara duritagala govindana ||

Bangara gopuravu holeyuttaliralu
shrungaravagiha hariyu nintiralu
papa vinashiniya snana maduttiralu
papagalellavu govindana ||

Appavu atirasavu bondipakvannavu
tappade siguvudu butti chitrannavu
veda vedyanu venkataramanu
sankata harisuvanu govindana ||

andahasadi mudadi mukunda
varada hastavu kodutali ninda
indireshana bhajipara bhaktavrunda
Banda duritagalu govindana ||

ಕೇಶವನೊಲುಮೆಯು ಆಗುವ ತನಕ ಹರಿ / Keshavanolumeyu aguva Tanaka hari

ಕೇಶವನೊಲುಮೆಯು ಆಗುವ ತನಕ ಹರಿ
ದಾಸರೊಳಿರುತಿರು ಹೇ ಮನುಜ                   ||ಪ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು     ||ಅ.ಪ.||

ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ
ಕ್ಲೇಶವ ಗೊಳಿಸದೆ ಇದ್ದೀತೆ
ಭೂಸುರಸರ್ವಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ                        ||೧||

ಜೀವನ ವಶದೊಳು ನಾನಾ ದ್ರವ್ಯವಿರೆ
ದಾನ ಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಭೋಧಿಸೆ
ಹೀನ ವಿಷಯ ಅಳಿದ್ಹೋದೀತೆ
ಮಾನಿನಿ ಮನಸು ನಿಧಾನವಿರದಿರೆ
ಮಾನಾಭಿಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ                  ।।೨।।

ಸತ್ಯಧರ್ಮಗಳ ನಿತ್ಯವೂ ಬೋಧಿಸೆ
ತೊತ್ತಿನ ಮನಸಿಗೆ ಸೊಗಸೀತೆ
ತತ್ವದ ಅರ್ಥವ ವಿಚಿತ್ರದಿ ಪೇಳೆ
ಕತ್ತೆಯ ಚಿತ್ತಕೆ ಹತ್ತೀತೆ
ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ
ಮುತ್ತುಕೊಟ್ಟರೆ ಮಾತನಾಡೀತೆ
ಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ
ಅರ್ತಿಯ ತೋರದೆ ಇದ್ದೀತೆ                         ।।೩।।

ನ್ಯಾಯವ ಬಿಟ್ಟನ್ಯಾಯವ ಪೇಳಲು
ನಾಯಿಗೆ ನರಕವು ತಪ್ಪೀತೆ
ಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆ
ಘಾಯವಾಗದೆ ಬಿಟ್ಟೀತೆ
ತಾಯಿತಂದೆಗಳ ನೋಯಿಸಿದವನಿಗೆ
ಮಾಯದ ಮರಣವು ತಪ್ಪೀತೆ
ಮಾಯಾಜಾಲವ ಕಲಿತ ಮನುಜನಿಗೆ
ಕಾಯ ಕಷ್ಟವ ಬಿಟ್ಟೀತೆ                               ।।೪।।

ಸಾಧು ಸಜ್ಜನರ ನೋಯಿಸಿದ ಮಾಯಾ
ವಾದಿಗೆ ನರಕವು ತಪ್ಪೀತೆ
ಬಾಧಿಸಿ ಪರರರ್ಥವ ದೋಚುವವಗೆ
ವ್ಯಾಧಿಯು ಕಾಡದೆ ಬಿಟ್ಟೀತೆ
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ
ಮೋದವೆಂದಿಗು ಆದೀತೆ
ಕದ್ದು ಒಡಲ ಪೊರೆವವನ ಮನೆಯೊಳು
ಇದ್ದದ್ದು ಹೋಗದೆ ಉಳಿದೀತೆ                      ।।೫।।

ಅಂಗಜ ವಿಷಯಗಳನು ತೊರೆದಾತಗೆ
ಅಂಗನೆಯರ ಸುಖ ಸೊಗಸೀತೆ
ಸಂಗ ದುಃಖಗಳು ಹಿಂಗಿದ ಮನುಜಗೆ
ಶೃಂಗಾರದ ಬಗೆ ರುಚಿಸೀತೆ
ಇಂಗಿತವರಿತ ನಿಸ್ಸಂಗಿ ಶರೀರ ವ-
ಜ್ರಾಂಗಿಯಾಗದೆ ತಾನಿದ್ದೀತೆ
ಮಂಗಳ ಮಹಿಮನ ಅಂಘ್ರಿಯ ಕಾಣದ
ಮಂಗಗೆ ಮುಕುತಿಯು ದೊರಕೀತೆ               ।।೬।।

ಕರುಣಾಮೃತದಾಭರಣವ ಧರಿಸಿದ
ಶರಣಗೆ ಸಿರಿಯು ತಪ್ಪೀತೆ
ಶರಣ ಪಾಶದುರವಣೆ ಹರಿದಾತಗೆ
ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನಾಚರಿಪ ಯೋಗ್ಯಗೆ
ಗುರು ಉಪದೇಶವು ತಪ್ಪೀತೆ
ವರ ವೇಲಾಪುರದಾದಿಕೇಶವನ
ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ                ।।೭।।

Lyrics in English

Keshavanolumeyu Aguva tanaka hari
Dasarolirutiru he manuja ||pa||

Kleshapashangala haridu vilasadi
Srishana nutigala pogaluta manadolu ||a.pa.||

Mosadi jivara gasi madida papa
kasige hodare hodite
srishana Bakutara dushisida Pala
kasu kottare bittite
basheya kottu niraseya gaida pala
kleshava golisade iddite
busurasarvasvava hrasa madida pala
esesu janumaku bittite ||1||

Jivana vashadolu nana dravyavire
dana dharmake manasadite
hina manujanige jnanava bodhise
hina vishaya aliduhodite
manini manasu nidhanaviradire
maanabhimanagalu ulidite
banuprakashana bajaneya madada
hinage mukutiyu dorakite ||2||

Satyadharmagala nityavu bodhise
tottina manasige sogasite
tatvada arthava vichitradi pele
katteya chittake hattite
putthali bombeya chitradi bannisi
muttukottare matanadite
katturi tilakavanotti paneyolide
artiya torade iddite ||3||

Nyayava bittanyayava pelalu
nayige narakavu tappite
bayi kobbinali bayyuva manujage
gayavagade bittite
tayitandegala noyisidavanige
mayada maranavu tappite
mayajalava kalita manujanige
kaya kashtava bittite ||4||

Sadhu sajjanara noyisida maya
vadige narakavu tappite
badhisi parararthava dochuvavage
vyadhiyu kadade bittite
bedavenisi balu kshudrava kalitare
modavendigu adite
kaddu odala porevavana maneyolu
iddaddu hogade ulidite ||5||

Angaja vishayagalanu toredatage
anganeyara suka sogasite
sanga duhkagalu hingida manujage
shrungarada bage ruchisite
ingitavarita nissamgi sharira va-
jrangiyagade taniddite
mangala mahimana amgriya kanada
mangage mukutiyu dorakite ||6||

Karunamrutadabaranava dharisida
sharanage siriyu tappite
Sharana pasaduravane haridatage
Sharanara karunavu tappite
Aritu shastravanacharipa yogyage
Guru upadeshavu tappite
Vara velapuradadikeshavana
Smarisuvavanige moksha tappite ||7||

16th song in the album, sung by Putturu Narasimha Nayak

ಕಟ್ಟಿದ ಮಂಗಳಸೂತ್ರವ ದೇವ / Kattida mangalasutrava deva

ಕಟ್ಟಿದ ಮಂಗಳಸೂತ್ರವ ದೇವ || ಪ ||

ಗಟ್ಟಿ ಗಂಟು ಹಾಕಿದ ಚಿತ್ರವು
ಪರಮೇಷ್ಟಿ ರುದ್ರಾದ್ಯರ ಸ್ತೋತ್ರವು, ಮತ್ತೆ
ಶಿಷ್ಟ ಜನರ ದಿವ್ಯ ಗಾನವು, ತಾನು
ಅಷ್ಟು ಕೇಳುತ ಸಂತುಷ್ಟ ಮನಸಿನಿಂದ
ಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ ||

ತುಂಬುರು ನಾರದರ ಗಾನವು,
ದಿವ್ಯ ರಂಭೆ ಊರ್ವಶೀಯರ ನಾಟ್ಯವು
ಅಲ್ಲಿ ತುಂಬಿದ ಸುರಮುನಿ ಕೂಟವು
ಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆ
ಅಂಬರ ವಾಣಿಯು ಜಯ ಜಯ ಜಯವೆನೆ ||೨||

ಕ್ಷೋಣಿಯ ರಾಜಾದಿ ರಾಜರು ತಾವು
ಮಾಣಿಕ್ಯ ಮುತ್ತು ರತ್ನರಾಶಿಯ, ಪಾದ
ಕಾಣಿಕೆ ಕಪ್ಪ ತಂದೀವರು ಸಿರಿ
ವೇಣು ವಿನೋದನು ಜಾಣೆ ಪದ್ಮಾವತಿಯ
ಪಾಣಿಗ್ರಹಣ ಕೊಂಡು ಎಣಾಙ್ಕ ಕುಲ ತಿಲಕ ||೩||

ಅಷ್ಟ ಲಕುಮೀ ಪತಿ ತೋಷದಿ, ತನ್ನ
ಇಷ್ಟ ಸುಜನರ ಮಧ್ಯದಿ
ಮಾವ ಕೊಟ್ಟು ಕನ್ಯಾಮಣಿ ಕಂಠದಿ
ಅಂದು ಅಷ್ಟದಶ ವಾದ್ಯಗಳು
ಘಟ್ಟಿಯಾಗಿ ಮೊರೆಯಲು
ಶಿಷ್ಟ ಪ್ರಸನ್ನ ವೇಂಕಟ ವಿಠ್ಠಲ ರಾಯ ||೪||

Lyrics in English

Kattida mangalasutrava deva || pa ||

Gatti gantu hakida chitravu
parameshti rudradyara stotravu, matte
shishta janara divya ganavu,
ashtu keluta santushta manasininda
bettadodeya jagajatti venkataramana || 1 ||

Tumburu naradara ganavu,
divya rambhe urvashiyara natyavu
alli tumbida suramuni kootavu
mahasambhrama sabheyalli kambu kandharanige
ambara vaniyu jaya jaya jayavene || 2 ||

Kshoniyu rajadi rajaru tavu
manikya muttu ratnarashiya pada
kannike kappa tandivaru siri
venu vinodanu Jane padmavatiya
panigrahana kondu enanjka kula tilaka || 3 ||

Ashta lakumi Pati toshadi, tanna
ishta sujanara madhyadi
mava kottu kanyamani kantadi
andu ashtadasha vadyagalu
ghattiyagi moreyalu
shishta Prasanna venkata vittala Raya || 4 ||


ಕರುಣದಿ ಕಾಯಬೇಕಿನ್ನು ಪ್ರಾಣೇಶ / Karunadi kayabekinnu pranesha

ಕರುಣದಿ ಕಾಯಬೇಕಿನ್ನು ಪ್ರಾಣೇಶ
ಅರಿಯೆನೊ ಅನ್ಯರ ಜಗದ್ವಾಸ ||ಪ||

ಪರಿಪರಿ ಬವಣೆಯ ಪರಿಹಾರಗೈಸುತ
ತ್ವರಿತದಿ ಸಲಹೊ ಭಾರತಿಗೀಶ ||ಅ.ಪ.||

ಅನ್ನವಸನಗಳಿಗೆ ಅಲ್ಪರ ತೆರದೊಳು
ಬನ್ನಬಡುತಲಿರಲು
ನಿನ್ನ ಪಾದವ ನಂಬಿ ನೀ ಗತಿ ಎನುತಿರೆ
ಮನ್ನಿಸಿದ ಮಹಿಮ ನಿಸ್ಸೀಮ ||1||

ಮನದಿ ಬಹುನೊಂದು ನಿನ್ನ ಘನತೇನೆಂದು
ಅನುದಿನ ಕಾಯೊ ಎಂದು
ಎನುತಿರೆ ಸ್ವಪ್ನದಿ ಹನುಮ ನಿನ್ನಭಯ ಹಸ್ತ
ವನೆ ಶಿರದಿ ಇಟ್ಟೆ ಶ್ರೇಷ್ಠನೆ ||2||

ಉಭಯ ಹಸ್ತವು ಎನ್ನ ಶಿರದ ಮ್ಯಾಲಿಡುತಲಿ
ಅಭಯ ಕೊಡುತಲಿರಲು
ನಿರ್ಭಯದಿಂದ ನಾ ನಿನ್ನ ಭಜಿಪೆನಯ್ಯ
ಶುಭಗುಣನಿಲಯ ಜೀಯಾ ||3||

ಹನುಮ ಭೀಮಾನಂದ ಮುನಿಯಾಗಿ
ಜಗದಲಿ ಹನನಗೈಯುತ ದನುಜರ
ವನಜಾಕ್ಷ ಹರಿಯನು ಘನವಾಗಿ ಸೇವಿಸಿ
ಅನುದಿನದಲಿ ಕಾಯ್ವೆ ಸುಜನರ ||4||

ಶ್ವಾಸಜಪವ ಮಾಡಿ ರಾಶಿ ಜೀವರ ಕಾಯ್ವೆ
ಶ್ವಾಸ ನಿಯಾಮಕನೆ
ಶ್ರೀಶ ಶ್ರೀ ಗೋಪಾಲಕೃಷ್ಣವಿಠ್ಠಲನಿಗೆ
ಕೂಸು ಎಂದೆನಿಸಿರುವೆ ನೀ ಕಾವೆ ||5||

Lyrics in English

Karunadi kayabekinnu pranesha
ariyano anyara jagadwasa || pa ||

Paripari bavaneya pariharagaisuta |
twaritadi salaho bharatigesha || a.pa ||

Annavasanagalige alpara teradolu
bannabadutaliralu
Ninna padava nambi nee gati enutire
mannisida Mahima nissima || 1 ||

Manadi bahunondu Ninna ghanatenendu
anudina kayo endu
entire swaantadi januma ninnabhaya hastavane
shigradi itte shreshtana || 2 ||

Ubhaya hastavu Enna shirada myalidutali
abhaya kodutaliralu
nirbhayadinda naa Ninna bhajipenayya
shubhguna nilayana jeeya || 3 ||

Hanuma bhimananda muniyagi
jagadali hananagaiyuta danujara
vanajaksha hariyanu ghanavagi sevisi
anudinadali kayve sujanara || 4 ||

Shwasajapava Madi rashi jeevara kayve
shwasa niyamakane
shreesha Shree gopalakrishna vittalanige
koosu endenisiruve nee kaave || 5 ||