
ಎದುರಾರೈ ಗುರುವೆ ನಿಮಗೆ ಸಮನಾರೈ
ಮದನ ಗೋಪಾಲನ ಪ್ರಿಯ ಜಯರಾಯ ||ಪ||
ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ವಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧||
ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂಬ
ಚಟುಲತಾಪದಿಂದ ಖಂಡಿಸಿ ತೆಜೋ
ತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨||
ಅಮಿತ ದ್ವಿಜಾವಳಿ ಕುಮುದಗರಳಿಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹ್ರತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩||
ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸು
ಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವ
ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು ||೪||
ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವರಾಶಿಯೊಳಿಟ್ಟು
ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫||
ವನಜನಾಭನ ಗುಣಮನೇಗಳು ಸರ್ವಜ್ಞ
ಮುನಿಕೃತ ಗ್ರಂಥಗಳವನಿಯೊಳಗಡೆ ಸ
ಜ್ಜನರಿಗೆ ಬೇಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋಧೀರ ||೬||
ಅರ್ಥಿಮಂದಾರ ವೇದಾರ್ಥವಿಚಾರ ಸ
ಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರ
ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ
ತೀರ್ಥ ಕರಜ ಜಯತೀರ್ಥ ಯತೀಂದ್ರ ||೭||
Lyrics in English
Edurarai Guruve Nimage Samanarai
Madana Gopalana Priya Jayaraya ||P||
Kadu Garjisuva Kesariyante Nimma Vaada
Vadaneya Keluta Nudi Mundodade
Gadagada Naduguta Maygo Maygalu
Adaviyoladagoru Nimma Bheetiyali ||1||
Kutila Matagalembo Chatulandhakarakke
Patutara Tattva Prakashikeyemba
Chatula Tapadinda Khandisi Tejo
Kadadi Mereda Budha Katakabja Mitra ||2||
Amita Dwijavali Kumuda Garalisi
Vimatara Mukha Kamalangal Badisi
Swamatara Hrit Santapagalodisi
Vimala Sukeertiya Padedeyo Chandra ||3||
Veda Shastragalembo Shrungagalinda Su
Dhadi Granthagalembo Stanadindopputa Tattva
Bodhaneyembo Dugdha Shishya Vatsangalige
Adaradali Kotta Yati Suradhenu ||4||
Vyasa Sutragalembo Mandaravanu Veda
Rashiyembo Varashiyolittu
Shri Sarvajnara Vakya Pashadi Sutti
Bhasura Nyaya Sudha Padeda Yateendra ||5||
Vanajanabhana Guna Manegalu Sarvajna
Munikruta Granthagalavaniyolagade
Sajjanarige Bekanjanadinda Torisi
Ghana Sukha Sadhana Madida Yodheera ||6||
Arthi Mandara Vedartha Vichara
Samartha Shri Krishna Padambuja Bhringa
Pratyarthi Mattebha Kantheerava Kshobhya
Teertha Karaja Jayateertha Yateendra ||7||





