
ಅಂಕಿತ : ಹಯವದನ
ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ ||ಪ||
ಹಣವಿಲ್ಲದವನೊಬ್ಬ ಹೆಣವೆ ಸರಿ ಕಂಡ್ಯ ||ಅಪ||
ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ
ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ
ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ
ಹೊಲೆಯನಾದರೂ ತಂದೊಳಗಿರಿಸುವಿ ||೧||
ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ
ಶೃಂಗಾರಾಭರಣಂಗಳ ಬೇಗ ತರಿಸುವಿ
ಮಂಗನಾದರೂ ಅನಂಗನೆಂದೆನಿಸುವಿ
ಕಂಗಳಿಲ್ಲದವಗೆ ಮಗಳ ಕೊಡಿಸುವಿ ||೨||
ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ
ಸರುವರಿಗೆ ಶ್ರೇಷ್ಠನರನ ಮಾಡಿಸುವಿ
ಅರಿಯದ ಶುಂಠನ ಅರಿತವನೆನಿಸುವಿ
ಸಿರಿಹಯವದನನ ಸ್ಮರಣೆ ಮರೆಸುವಿ ||೩||
Lyrics in English
Hanave ninnaya gunavenu bannipeno || pa ||
Hanavilladavanobba henave sari kandya || a.pa ||
Beleyagadavanella beleya madisuvi
Ella vastugalaniddalle tarisuvi
kulagettavara satkulake serisuvi
holeyanadaru tandolagirisuvi || 1 ||
Anganeyara sanga atishayada madisuvi
shrungarabharanamgala bega tarisuvi
manganadaru ananganendenisuvi
kangalilladavage magala kodisuvi || 2 ||
Charanakke bandantha duritavanu bidisuvi
saruvarige shreshta narana madisuvi
ariyada shuntana aritavanenisuvi
sirihayavadanana smarane maresuvi || 3 ||
