ಉಗಾಭೋಗ / ನಾ ಭ್ರಷ್ಟನಾದರೂ ನೀ ಎನ್ನ ಕೈಬಿಡದಾದೆ / Naa bheashtanadaru nee Enna kaibidadade

ಉಗಾಭೋಗ

ನಾ ಭ್ರಷ್ಟನಾದರೂ ನೀ ಎನ್ನ ಕೈಬಿಡದಾದೆ
ನಾ ನಿನ್ನ ಮರೆತರೂ ನೀ ಎನಗೆ ಕರುಣಿಸಿದೆ
ನಾ ಅಲ್ಪನಾದರೂ ನೀ ಎನಗೆ ಅತಿಯಾಗಿ ಕೀರ್ತಿ ಮಾಡಿಸಿದೆ
ಅರಿಯಲು ಆಳವಲ್ಲ ನಿನ್ನ ಮಹಿಮೆ
ಜನುಮ ಜನುಮಕು ನಿನ್ನ ಸೇವೆ ಎನಗಿತ್ತು ಸಲಹೋ
ಜಗಕಾಧಾರ *ಜಯರಾಮವಿಠಲ*

Lyrics in English

Naa bheashtanadaru nee Enna kaibidadade
naa Ninna maretaru nee enage karuniside
naa alpanadaru nee enage atiyagi keerthiya madiside
ariyalu alavalla Ninna mahime
januma janumaku Ninna seve enagittu salaho
janakadhara jayaramavittala

ಹಾಲಲ್ಲಾದರು ಹಾಕು /Haalalladaru haaku

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ |
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ ||

ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ |2|
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ

ಬಿಸಿಲಲ್ಲಿ ಒಣಗಿಸು, ನೆರಳಲ್ಲಿ ಮಲಗಿಸು ರಾಘವೇಂದ್ರ |
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ ನಗುನಗುತ ಇರುವೆ ರಾಘವೇಂದ್ರ ||ಹಾಲಲ್ಲಾದರು ಹಾಕು ||

ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ |2 times|
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು ನೀನೇ ಹೇಳು ರಾಘವೇಂದ್ರ ||

ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ ||ಹಾಲಲ್ಲಾದರು ಹಾಕು ||

Lyrics in English

Haalalladaru haaku, neeralladaru haaku raghavendra |
Haalalli keneyaagi, neeralli meenagi haayagiruve raghavendra ||

Mullallaadaru nooku, kallallaadaru nooku raghavendra |2 times|
Mullalli mullagi kallalli kallagi ondaagiruve Raghavendra ||

Bisilalli onagisu, neralalli malagisu raghavendra
bisilalli kempaagi, neralalli thampaagi nagu nagutha iruve Raghavendra ||haallaadaru haaku ||

Sukhavanne needendu endu kelenu naanu Raghavendra | 2 times|
Munna maadida paapa, yaara thaathana gantu |2 times|
Neene helu Raghavendra ||

Elliddarenu naa, hegiddarenu naa Raghavendra |
Ninnalli sharanaagi, nee nanna usiraagi baalidare saaku Raghavendra ||Haalalladaru haaku||

Haalalladaru haaku, Neeralladaru haaku Raghavendra…


ರಾಘವೇಂದ್ರ ರಾಘವೇಂದ್ರ /Raghavendra Raghavendra

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||ರಾಘವೇಂದ್ರ ರಾಘವೇಂದ್ರ || 2 times||

ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿ
ನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ||2 times||ಹೇಗೆ ಇರಲಿ ಎಲ್ಲೆ ಇರಲಿ…ಅವನ ಸ್ಮರಣೆ ಮಾಡಿರಿ….
ಧ್ಯಾನದಿಂದ ಮನವ ಸುಡುವ ಚಿಂತೆ ದೂರ ಮಾಡಿರಿ||ರಾಘವೇಂದ್ರ ||

ಮಾನ ಪ್ರಾಣ ಧನವು ಎಲ್ಲ ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ್ನ ಕರುಣೆಯೊಂದೆ ಸಾಕು ನನಗೆ ಎನ್ನಿರಿ||2 times||
ಕಲ್ಲು ಮುಳ್ಳೊ ಸಿಡಿಲೊ ಮಳೆಯೊ ಅವನ ಕರುಣೆಯೆನ್ನಿರಿ
ಏನೇ ಬರಲಿ ಅವನದೆಂದು ನಂಬಿ ಮುಂದೆ ನಡೆಯಿರಿ||ರಾಘವೇಂದ್ರ ||

ನಿಮ್ಮ ಮನೆಯ ನಿಮ್ಮ ಮನದ ವಿಷಯವೆಲ್ಲ ಬಲ್ಲನು |ಚಪಲದಿಂದ ಅಲೆವ ಮನದಲೆಂದು ಗುರುವು ನಿಲ್ಲನು||2 times||
ಕೊಡುವುದೆಲ್ಲ ಕೊಡುವನವನು ಇನ್ನು ಆಸೆಯೇತಕೆ
ಕಲ್ಪವೃಕ್ಷದಂತೆ ಗುರುವು ಇರಲು ಚಿಂತೆಯೇತಕೆ||ರಾಘವೇಂದ್ರ ||

“ಪೂಜ್ಯಾಯ ರಾಘವೇಂದ್ರಾಯ, ಸತ್ಯಧರ್ಮವ್ರತಾಯಚ
ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೆ…. ನಮತಾಂ ಕಾಮಧೇನುವೆ” ||

Lyrics in English

Raghavendra Raghavendra raghavendra yenniri |naama smaraneyinda nija nandvannu hondiri ||2 times||

Tande tayee bandhu balaga yella neene yenniri | Naanu yemba moha maretu yendhu avana nambiri ||2 times ||Hege irali yelli irali avana smarane maadiri dhyana dinda manava suduva chinte dura maadiri ||raghavendra||

Maana prana dhanavu ella swami ninnad yenniri |Guruve ninna karune yonde saku nanage yenniri ||2times|| Kallu mullu sidilu maleyu avane karune yenniri |Yene barali avanandu nambi munde nadiri ||raghavendra||

Nimma maneya nimma manada vishaya vella ballanu |chapala dinda aleva manadlendu guruva nillanu |2times|| Koduvu dalla koduvanavanu yendhu aase yetake kalpavruksha dante guru irali chinte yetake ||raghavendra||


ಕುಲ ಕುಲ ಕುಲವೆಂದು /Kula kula kulavendu

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರು ಬಲ್ಲಿರ || ಪ ||

ಹುಟ್ಟಿದ ಯೋನಿಗಳಿಲ್ಲ ಮೆಟ್ಟಿದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ || ೧ ||

ಜಲವೆ ಸಕಲ ಕುಲಕೆ ತಾಯಲ್ಲವೆ ಜಲದ ಕುಲವನೇನಾದರು ಬಲ್ಲಿರ ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ ನೆಲೆಯನರಿತು ನೀ ನೆನೆಕಂಡ್ಯ ಮನುಜ || ೨ ||

ಹರಿಯೆ ಸರ್ವೋತ್ತಮ ಹರಿಯೇ ಸರ್ವೇಶ್ವರ ಹರಿಮಯವೆಲ್ಲವೆನುತ ತಿಳಿದುಸಿರಿ ಕಾಗಿನೆಲೆಯಾದಿ ಕೇಶವರಾಯನ ಚರಣಕಮಲವ ಕೀರ್ತಿಸುವನೆ ಕುಲಜ || ೩ ||

Lyrics in English

Kula kula kulavendu hodedadiri nimma kulada nelayanenadaru ballira ||pa||

Huttida yonigalilla mettada bhumigalilla attu unnada vastugalilla
guttu kanisi bantu hiridenu kiridenu nettane sarvajnana nene kano manuja ||

Jalave sakala kulake tayiyallave a jalada kulavanenadru ballira | jalada
bobbuliyante sthiravalla i deha neleyanaritu ni hariya nene manuja||

Hariye sarvottama hariye sarveshavara harimayavellavenuta tilidu |
siri kageneleyadi keshavarayana charana kamalavanu kirtisuvane kulaja ||


ಮಂಗಳಾರತಿ ತಂದು ಬೆಳಗಿರೆ /Mangalarati tandu belagire

ಮಂಗಳಾರತಿ ತಂದು ಬೆಳಗಿರೆ
ಅಂಬುಜಾಸನ ರಾಣಿಗೆ
ಅಂಬೆಗೆ ಜಗದಾಂಬೆಗೆ ಮೂಕಾಂಬೆಗೆ
ಶಶಿ ಬಿಂಬೆಗೆ ||

ಶುದ್ಧ ಸ್ನಾನವ ಮಾಡಿ ನದಿಯಲಿ
ವಜ್ರಪೀಠದಿ ನೆಲೆಸಿರೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ || ೧ ||

ಎರೆದು ಪೀತಾಂಬರವನುಡಿಸಿ
ಸರ್ವಾಭರಣವ ರಚಿಸಿದ
ಹರಳಿನೋಲೆ ವಜ್ರಮೂಗುತಿ
ವರಮಹಾಲಕ್ಷ್ಮಿ ದೇವಿಗೆ || ೨ ||

ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಏನುತ
ಜಗದೊಡೆಯನ ಮಡದಿಗೆ ||೩||

ಹುಟ್ಟುಬಡವೆಯ ಕಷ್ಟಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುಮರನ ತೋರಿದಂಥ
ಶುಕ್ರವಾರದ ಲಕ್ಷ್ಮಿಗೆ ||೪||

Lyrics in English

Mangalarati tandu belagire
ambujasana ranige |
ambege jagadambege mukanbege
Shashi bimbege ||

Shuddha snaanava madi nadiyali
vajrapithadi nelesire
tiddi tilakava teedidantha
muddu mangala gaurige || 1 ||

Eredu peetambaravanudisi
sarvaabharanava rachisida
haralinole vajramooguti
varamahalakshmi devige || 2 ||

Nigama vedyale ninna gunagala
bagebageyali varnipe
tegedu bagyava needu enuta
jagadodeyana madadige || 3 ||

Huttubadaveya kashtakaledu
kottalarasana siriyanud
hetta kumarana toridantha
shukravarada lakshmige || 4 ||


ಹರಿಚಿತ್ತ ಸತ್ಯಾ /Harichitta satya

ಹರಿಚಿತ್ತ ಸತ್ಯಾ ಹರಿಚಿತ್ತ ಸತ್ಯಾ
ನರಚಿತ್ತಕ್ಕೆ ಬಂದದ್ದು, ಲವಲೇಶ ನಡೆಯದು

ಮಡದಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವುದು ಹರಿಚಿತ್ತವೋ

ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪದಚಾರಿಯಾಗೋದು ಹರಿಚಿತ್ತವಯ್ಯ

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿಚಿತ್ತವೋ

ಸದಾ ಅನ್ನದಾನವ ಬಯಸೋದು ನರಚಿತ್ತ
ಉದರಕ್ಕೆ ಅಳುವುದು ಹರಿಚಿತ್ತವೋ

ಧರಣಿಯನು ಆಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿಚಿತ್ತವೋ

ಪುರಂದರ ವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿಚಿತ್ತವೋ

Lyrics in English

Harichitta satya harichitta satya narachittakke bandaddu lavalesha nadeyadu ||

Madadi makkala bhagya bayasodu narachitta || maduvyaagadiruvudu harichittavo ||

Kudure andana aane bayasodu narachitta | padachaariyaagodu harichittavayya ||

Vidhavidha yaatreya bayasodu narachitta | odagi baruva roga harichittavo ||

Sadaa annadaanava bayasodu narachitta | udarakke aluvudu harichittavo ||

Dharaniyanu aalabekembudu narachitta |parara sevisuvudu harichittavo ||

Purandara vittalana bayasodu narachitta | duritava kalevude harichittavo ||


ಏನು ಮಾಡಿದರೇನು ಭವ ಹಿಂಗದು /Enu madidarenu bhava

ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ                      ।।ಪ।।

ಅರುಣೋದಯದಲೆದ್ದು ಅತಿಸ್ನಾನ ಮಾಡಿ 
ಬೆರಳನೆಣಿಸಿದೆ ಅದರ ನಿಜವರಿಯದೆ 
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ 
ಹರಿ ನಿನ್ನ ಕರುಣಾಕಟಾಕ್ಷವಾಗದನಕ                       ।।೧।।

ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿಶೀಲಗಳನೆಲ್ಲ ಮಾಡಿ ದಣಿದೆ 
ಗತಿಯ ಪಡೆವೆನೆಂದು ಕಾಯ ದಂಡಿದಿಸಿದೆನೊ 
ರತಿಪತಿಪಿತ ನಿನ್ನ ದಯವಾಗದನಕ                         ।।೨।।

ಧ್ಯಾನವನು ಮಾಡಿದೆನು ಮೌನವನು ತಾಳಿದೆನು 
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠಲನ 
ಧ್ಯಾನಿಸುವರೊಡಗೂಡಿ ನೆಲೆಗಾಣದನಕ                   ।।೩।।

Lyrics in English

Enu madidarenu bhava hingadu danavantaka ninna dayavagadanaka

Arunodayadaleddu ati snanagala madi beralaneniside adara nijavariyade|
charana sashtangavanu madi na tanideno hari ninna karuna katakshavagadanaka||


Shruti shastra puranagalanodi bendade ati shilagalanella danide
gatiya padevenendu kaya dandisideno ratipati pita ninna dayavagadanaka

Dhyanavanu madidenu maunavanu talide mahanu purusharthake manavanikki |
anatha bandhu shri purandara vittalana dhyanisuvarodagudi nelekaanadanaka ||

ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮಾ /Hannu ta benne ta

ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ
ಹಣ್ಣು ತಾ ಬೆಣ್ಣೆ ತಾ ||ಪ||

ಅಡವಿಯೊಳಗೆ ಅಸುರನ ಕೊಂದ ಕೈಗೆ
ಮಡುವಿನೊಳಗೆ ಮಕರನ ಸೀಳ್ದ ಕೈಗೆ
ಪೊಡವಿಯೊಳಗೆ ಚೆಂಡನಾಡಿದ ಕೈಗೆ
ಕಡುಬೇಗದಿಂದಲಿ ಬೇಡಿದ ಕೈಗೆ ||

ಶಂಖಚಕ್ರಗಳನು ಪಿಡಿದಂಥ ಕೈಗೆ
ಶಂಕೆಯಿಲ್ಲದೆ ಮಾವನ ಕೊಂದ ಕೈಗೆ
ಬಿಂಕದಿಂದಲಿ ಕೊಳಲೂದುವ ಕೈಗೆ
ಪಂಕಜ ಮುಖಿಯರ ಕುಣಿಸುವ ಕೈಗೆ ||

ದಿಟ್ಟತನದಿ ಬೆಟ್ಟವೆತ್ತಿದ ಕೈಗೆ
ಸೃಷ್ಟಿಯ ದಾನವ ಬೇಡಿದ ಕೈಗೆ
ದುಷ್ಟ ಭೂಪರನೆಲ್ಲ ಮಡುಹಿದ ಕೈಗೆ
ಕೆಟ್ಟ ದಾನವರನ್ನು ಬಡಿದಂಥ ಕೈಗೆ ||

ಕಾಳಿಯ ಮಡುವನು ಕಲಕಿದ ಕೈಗೆ
ಸೋಳ ಸಾಸಿರ ಗೋಪಿಯರಾಳಿದ ಕೈಗೆ
ಮೇಳದ ಭಕ್ತರುದ್ಧರಿಸುವ ಕೈಗೆ
ಏಳು ಗೂಳಿಯ ಗೆದ್ದ ಯದುಪತಿ ಕೈಗೆ ||

ಬಿಲ್ಲು ಬಾಣಗಳನ್ನು ಪಿಡಿದಂಥ ಕೈಗೆ
ಮಲ್ಲರ ಸಾಧನ ಮಾಡಿದ ಕೈಗೆ
ಎಲ್ಲ ದೇವರ ದೇವ ರಂಗನ ಕೈಗೆ
ಬಲ್ಲಿದ ಪುರಂದರವಿಠಲನ ಕೈಗೆ ||

Lyrics in English

Hannu ta benne ta gopamma hannu ta benne ta||pa||

Adaviyolage asurana konda kaige maduvinolage makarana silda kaige
podaviyolage chendanadida kaige kadu bhekadindali bedida kaige||



Shankha chakragalanu pididanta kaige shankeyillade mavana konda kaige
binkadindali kolaluduva kaige pankaja mukhiyara kunisuva kaige||



Dittatanadi bettavettida kaige shrushtiya danava bedida kaige
dushta bhuparanella maduhida kaige ketta danavarannu badidanda kaige||



Kaliya maduvanu kalakida kaige sola sasira gopiyaralida kaige
melada bhaktaruddharisuva kaige Elu guliya gedda yadupati kaige||



Billu banagalannu pididanta kaige mallara sadhana madida kaige
ella devara deva rangana kaige ballida purandara vittalana kaige||

~~~~~~~~~~~~~~~~~~~~~~~~~~~

Youtube link : https://youtu.be/XGhhmbKDFnk by S.Janaki

ಕೇಶವ ಮಾಧವ ಗೋವಿಂದ / Keshava madhava govinda

ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ||
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ||

ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ಇಳೆಯ ಕದ್ದಸುರನ ಕೋರೆದಾಡಿಲಿ ಕೊಂದ ದಾಸಯ್ಯ ಬಂದ ಕಾಣೆ ||

ಛಲದಿ ಕಂಭದಿ ಬಂದು ಅಸುರನ ಸೀಳಿದ ದಾಸಯ್ಯ ಬಂದ ಕಾಣೆ
ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ ದಾಸಯ್ಯ ಬಂದ ಕಾಣೆ
ಲಲನೆಯನೊಯ್ಯೆ ತಾ ತಲೆಹತ್ತನ ಕೊಂದ ದಾಸಯ್ಯ ಬಂದ ಕಾಣೆ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ ದಾಸಯ್ಯ ಬಂದ ಕಾಣೆ ||

ಪುಂಡತನದಿ ಪೋಗಿ ಪುರವನುರುಪಿ ಬಂದ ದಾಸಯ್ಯ ಬಂದ ಕಾಣೆ
ಲಂಡರ ಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದ ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರವಿಠಲ ದಾಸಯ್ಯ ಬಂದ ಕಾಣೆ ||

Lyrics in English

Keshava madhava govinda vittalemba dasayya banda kane||

Dosha rahita nara veshava dharisida dasayya banda kane||a.pa||

Khalanu vedavanoyye poleva kayanada dasayya banda kane
ghalilane kurma tanagi giriya potta dasayya banda kane
ileya kaddasurana koredadali konda dasayya banda kane
chaladi kambhadi bandu asurana silida dasayya banda kane||1||



Baliya danava bedi nelana aledu ninda dasayya banda kane
chaladi kshatriyara kula samharisida dasayya banda kane
lalaneyanoyye ta tale hattarana konda dasayya banda kane
nela kotti kamsana bala samharisida dasayya banda kane||2||



Punda tanadi pogi puravanu rupi banda dasayya banda kane
landara sadeyalu turagavanerida dasayya banda kane
hindu vedagalella arasi nodalu sigada dasayya banda kane
panduranga namma purandara vittala dasayya banda kane||3||


Youtube link : https://youtu.be/dtcGkvd_yf4

ರಾಜಬೀದಿಯೊಳಗಿಂದ ಕಸ್ತೂರಿರಂಗ /Rajabeediyolaginda kasturiranga

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ
ತೇಜನೇರಿ ಮೆರೆದು ಬಂದಾ | ಪ |

ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ
ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು
ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು
ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ |

ತಾಳ ಶಂಖ ಭೇರಿ ತಂಬೂರಿ ಮೊದಲಾದ
ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು
ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ
ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ | ೨ |

ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು
ಮೋದದಿಂದ ಗಾಯಕರು ಮೌರಿ ಪಾಡಲು
ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ
ಅದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ | ೩ |

ರಂಭಾ ಮೊದಲಾದ ಸುರರಮಣಿಯರು
ತುಂಬಿದಾರುತಿಯ ಪಿಡಿದು ಕೂಡಿ ಪಾಡಲು
ಶಂಭು ಮುಖ ನಿರ್ಜರನೇ ಪರಾಕೆನುತಲಿ
ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ | ೪ |

ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು
ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು
ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು
ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳಸವಿದು ಬೇಗ | ೫ |

ಮುತ್ತಿನ ತುರಾಯಿ ಮುಂಡಾಸನದಿ ತತ್ತಳಿಪ
ತಾಳಿ ವಜ್ರ ತಾಳಿ ಚೌಕಳಿ ಮುತ್ತಿನ ಕುಂಡಲನಿಟ್ಟು
ಮೋಹಿಸುತ್ತ ಬೀದಿಯಲ್ಲಿ ಕತ್ತಿಯ
ಕೈಯಲ್ಲಿ ಪಿಡಿದು ಮತ್ತಿಲ್ಲೆ ವಿರಾಜಿಸುತ್ತ | ೬ |

ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು
ಹೊನ್ನಹೊಸ ಜಾನ ಜಂಗುಳಿ ಹೊಳೆವಸೊಬಗಿನ
ಉನ್ನತ ಪಾರಾಯಣ ಉತ್ತಮರಾ ಜಶ್ವವೇರಿ
ಎನ್ನ ಹಯವದನರಂಗ ಎಲ್ಲರಿಗಷ್ಟಾರ್ಥಕೊಡುತ | ೭ |

Lyrics in English

Raajbeediyolaginda kasturi ranga
tejaneri meredu banda || pa ||

Sutta muttalu saaviraaru saalu deevige
hattu dikkalu belaguttidda hagalu batthiyu
vistaaradi bhoosuraru suttugatti nintiralu
matte nammolento teja mellane nadesuta jaana || 1 ||

Thaala shankha bheri tamboori modalaada
melu panchangagalella hogali hogalalu
gaali gopurada munde dhaaliyaaduta sutta
dhooliyannebbisi vaiyaarisi nikkuta jaana || 2 ||

Vedashaastra puraanagalu vandisi pogalalu
modadinda gaayakaru mauri paadalu
haadi beediyali nintu bhoosura janarigella
aadaradinda ashta amrataannava nikkuta jaana || 3 ||

Rambhaa modalaada surara maniyaru
tumbidaarutiya pididu koodi paadalu
shambhu mukha nirjarane paraakenutali
ambudi bhaavbdigala aalida Shree Ranganaatha || 4 ||

Hacchanage saaru bele haalu kenegalu
mucchi tanda kene mosaru veesalu benneyu
hacchi tuppa pakvavaada atirasa huggiyannu
mecchi undu paanaka neer majjigegalasavidu bega || 5 ||

Sanna muttu kettisida sakalaadhigalu
honnahosa jaana janguli holeva sobagina
unnata paarayana uttamaraajshvaveri
enna Hayavadana ranga ellarigishtaartha koduta || 6 ||


Youtube link : https://youtu.be/bSB7Z7D-CAA by Sri Putturu Narasimha Nayak