ಇಂಥಾ ಗುರುಗಳ ಕಾಣೆನಾ… ಭೂತಳದೊಳು ಇಂಥಾ ಯತಿಗಳ ಕಾಣೆನಾ… ||ಇಂಥಾ||
ಇಂಥ ಗುರುಗಳ ಕಾಣೆ ಮಂತ್ರ ಮಂದಿರದಲ್ಲಿ ನಿಂತು ಭಜಕರಿಗೆ ಚಿಂತೆ ಕಳೆವ ಕರುಣಿ ||ಇಂಥಾ||
ದೇವಸ್ವಭಾವನೀತನು ಸತತ ಪವನ ದೇವನಾವೇಶಯುಕ್ತನೂ ||ದೇವ|| ಆವ ಸಂಶಯವ್ಯಾಕೆ ದೇವಾಧಿದೇವ ನರಮೃಗ ದೇವನೀತನ ಭಕ್ತಿಗೆ ಧಾವಿಸಿ ಬಂದ ಸ್ತಂಭದಿ ಭಾವ ಭಕ್ತಿಯಲಿ ಸೇವಿಪರಿಗೆ ಭವ ನೋವು ಕಳೆದು ಸುರ ಗೋವಿನ ತೆರ ವರ ವೀವನು ಕರುಣದಿ ಕಾವನು ಪರಮ ಪಾವನ ಚರಿತನು ಕೋವಿದರೊಡೆಯನು ||ಇಂಥಾ||
ವರಹಜ ತಟದಲ್ಲಿರುವ ಭಕ್ತರು ಕೂಗಿ ಕರೆದಲ್ಲಿಗೋಡಿ ಬರುವ ||ವರಹಜ|| ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ ಗರೆದನು ಕರುಣದಿ ಪೊರೆದನು ಪರಮತ ಮುರಿದನು ಜಗದೋಳ್ ಮೆರೆದನು ಹೊಸ ಹೊಸ ಪರಿ ಸುಮಹೋತ್ಸವ ಹರುಷದಿ ಪ್ರತಿದಿನ ಗುರು ಸುಯಮೀಂದ್ರರ ಕರದಿಂಗೊಂಬರು ||ಇಂಥಾ||
ಮಂದಜಾಸನ ಜನಕ ಶ್ರೀ ಶಾಮಸುಂದರನಂಘ್ರಿ ಸೇವಕ ||ಮಂದ|| ಕಂದರ್ಪಶರಕರಿ ವೃಂದ ಕೇಸರಿ ಎನಿಸಿ ಗಂಧವಾಹನ ಮತ ಸಿಂಧುವಿಗೆ ಶಶಿಯಂದದಿ ರಾಜಿಸಿ ವೃಂದಾವನವನು ಒಂದೆ ಮನದಲಿ ವಂದಿಸಿ ನಮಿಸುವ ವಂದ್ಯಾಂಧಕರಿಗೆ ಕಂದರಕ್ಷಿಗಳ ಕುಂದದಿ ಕೊಡುವ ಕರ್ಮಂದಿ ಕುಲಾಗ್ರಣಿ ||ಇಂಧಾ||
ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದ ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು ||5||
ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆ ಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಇಂದು ನಿನಗೆ ಈ ರಥವ ನಡೆಸುವುದು ಅಂದವಾಗಿಹುದೇನೊ ದೇವ||6||
ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾ- ರಂಗ ರಥಾಂಗ ಪಾಣಿ ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲ- ವಂಗ ನಾಯಕ ಪರಿಪಾಲ ಸಂಗೀತ ಲೋಲ ಗೋಪಾಂಗನೆಯರ ಅಂತ- ರಂಗ ಸಂತಾಪ ವಿದೂರ ||7||
ಹತ್ತು ಗೋದಾನಕೆ ಸಮ, ಹರಿಗೆ ವೃಷಭ ದಾನ ಹತ್ತು ವೃಷಭಕೆ ಸಮ, ಹಾರುವ ಕುದುರೆಕಾಣಿರೊ ಹತ್ತು ಕುದುರೆಗೆ ಸಮ, ಹಸ್ತಿದಾನಕಾಣಿರೊ ಹತ್ತು ಹಸ್ತಿಗೆ ಸಮ, ಒಂದು ಕ್ರತು ಹತ್ತು ಕ್ರತುವಿಗೆ ಸಮ, ಹರಿಭಕ್ತರಿಗೆ ಕನ್ಯಾದಾನಕಾಣಿರೊ ಹತ್ತು ಕನ್ಯಾದಾನಕೆ ಸಮ, ಹಸಿದವಗೆ ಅನ್ನದಾನಕಾಣಿರೊ ಹತ್ತು ಅನ್ನದಾನಕೆ ಸಮ, ಉದಕದಾನಕಾಣಿರೊ ನಿತ್ಯ ಪುರಂದರವಿಠಲನ ನೆನೆವ ಪುಣ್ಯಕೆಣೆಯಿಲ್ಲ ಎಣೆಯಿಲ್ಲಕಾಣಿರೊ ||
ವರಕಂಬವನ್ನು ಒಡೆಯಲು । ನರಹರಿಯು । ಉಗ್ರಕೋಪವನ್ನು ತಾಳಿ ॥ ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದಪಿಡಿದು ಒತ್ತಿ । ಕರುಳ ಬಗೆದು ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ ॥
ಅಂತರಿಕ್ಷದಲ್ಲಿ ಅಮರರು । ನೋಡಿ ಆಗ ।ಪುಷ್ಪವೃಷ್ಟಿಯನ್ನೆ ಕರೆಯಲು ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು । ಅಮರಪತಿಯರೆಲ್ಲ ನೋಡೆ ಅಂಜಬೇಡೆಂದಭಯ ಕೊಟ್ಟ ||
ಲಕ್ಷ್ಮೀನಾರಸಿಂಹನ ಚರಿತೆಯ । ಉದಯಕಾಲ । ಪಠಿಸುವಂತ ನರರಿಗೆಲ್ಲ ॥ ಪುತ್ರಸಂತಾನಂಗಳಿತ್ತು ಮತ್ತು ಬೇಡದ್ಹಾಂಗೆ ಕೊಟ್ಟು । ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರೇಯ ||
Lyrics in English
Varakambavannu odeyalu | narahariya | ugra kopavannu tali || katakatemba dhwaniya Madi nakhagalinda pididu otti | karula bagedu male haki kanda bhaktanappikonda ||