ಉಗಾಭೋಗ / ಕಮಲಜನು ನಿನ್ನ ಪಾದಕಮಲವನು

ಕಮಲಜನು ನಿನ್ನ ಪಾದಕಮಲವನು ತೊಳೆದಿಹನು
ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು
ಯಮಜ ಮಾಡುವ ರಾಜಸೂಯಾಗದಲ್ಲಿ ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ ?
ಮಮಪ್ರಾಣಾ ಹಿ ಪಾಂಡವಾಃ ಎಂಬ ಬಿರುದಿಗಾಗಿ ನಮೋ ನಮೋ ಎಂಬೆ ಪುರಂದರವಿಠಲ

ಸಾರಾಂಶ :

ಕಮಲಜನು ನಿನ್ನ ಪಾದಕಮಲವನು ತೊಳೆದಿಹನು
ಕಮಲದಿಂದ ಹುಟ್ಟಿದ ಬ್ರಹ್ಮನು ನಿನ್ನ ಪಾದಕಮಲಗಳನ್ನು ತೊಳೆದಿದ್ದಾನೆ.

ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು
ಉಮಾಪತಿ (ಪಾರ್ವತಿಯ ಪತಿ ಶಿವನು) ನಿನ್ನ ಪಾದತೀರ್ಥವನ್ನು ತನ್ನ ಮೇಲೆ ಧರಿಸಿದ್ದಾನೆ.

ಯಮಜ ಮಾಡುವ ರಾಜಸೂಯಾಗದಲ್ಲಿ ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ ?
ಯುಧಿಷ್ಠಿರನು ಮಾಡಿದ ರಾಜಸೂಯ ಯಾಗದಲ್ಲಿ ನೀನು ಪ್ರೀತಿಯಿಂದ ಪಾದಪ್ರಕ್ಷಾಳನೆ ಸೇವೆ ಮಾಡಿದೆಯಲ್ಲ — ಇಂತಹ ಸೇವೆಯನ್ನು ಎಷ್ಟು ಕಾಲದಿಂದ ಮಾಡುತ್ತಿದ್ದೀಯೋ?

ಮಮಪ್ರಾಣಾ ಹಿ ಪಾಂಡವಾಃ ಎಂಬ ಬಿರುದಿಗಾಗಿ
“ಪಾಂಡವರು ನನ್ನ ಪ್ರಾಣ” ಎಂಬ ನಿನ್ನ ಬಿರುದನ್ನು ಕಾಯ್ದುಕೊಳ್ಳಲು.

ನಮೋ ನಮೋ ಎಂಬೆ ಪುರಂದರವಿಠಲ
ಹೀಗೆ, ಪುರಂದರ ವಿಠಲನೇ, ನಿನಗೆ ನಾನು ಮರುಮರು ನಮಸ್ಕಾರ ಮಾಡುತ್ತೇನೆ.


Lyrics in English

Kamalajanu ninna paada kamalavanu toledihanu
Umaapatiyu ninna paada jalava pottihanu
Yamaja maaduva Raajasooyaagadalalli mamakaraside ento kaala toleva ooligava?
Mama praanaa hi Paandavaah emba birudigaagi
Namo namo embe Purandara Vitthala


ಉಗಾಭೋಗ / ಶೇಷನಾಗಿ ಶ್ರೀಶನ ಶಯನಕೆ ದಿವ್ಯ / Ugabhoga – sheshanagi shreeshane shayanake

ಉಗಾಭೋಗ

ಶೇಷನಾಗಿ ಶ್ರೀಶನ ಶಯನಕೆ ದಿವ್ಯಮಂಚವಾದೆ
ಶೇಷನಾಗಿ ಅಶೇಷಜೀವರಿಗೆ ಅಭಿಮಾನಿಯಾದೆ
ಶೇಷನಾಗಿ ಈ ಸರಸಿಜಜಾಂಡಕ್ಕೆ ಆಧಾರನಾದೆ
ಶೇಷನಾಗಿ ರುದ್ರನ ಸರ್ವಾಂಗಕ್ಕೆ ಭೂಷಣನಾದೆ
ಶೇಷನಾಗಿ ಕೃಷ್ಣಗೆ ಹಿರಿಯನಾಗಿ ಮನ್ನಿಸಿಕೊಂಡೆ
ಶೇಷನಾಗಿ ಸಾಸಿರ ಜಿಹ್ವೆ ಯಲಿ ಹರಿಯ ಕೊಂಡಾಡಿದೆ
ವಾಸವಾದ್ಯರ ನಿನ್ನುದರದಲ್ಲಿ ತಾಳಿದೆ ಪ್ರಳಯಕಾಲದಲ್ಲಿ
ವಿಶೇಷಮಹಿಮ *ರಘುಪತಿವಿಠಲನ್ನ* ಪ್ರ. ವೇಶಿಸುವೆ ಬೊಮ್ಮನನುಸರಿಸಿ ||

Lyrics in English

Sheshanagi shreeshana shayanake divyamannchavade
sheshanagi asheshajeevarige abhimaniyade
sheshanagi e sarasijajandakke adharanade
sheshanagi rudrana sarvangakke bhushananade
sheshanagi krishnage hiriyanagi mannisikonde
sheshanagi sasira jihveyali hariya kondadide
vasavadyara ninnudaradalli talide pralayakaladalli
visheshamahima raghupativittalanna praveshisuve bommananusarisi ||

***********************************************************************************************************

ನಿನ್ನ ಧ್ಯಾನದ ಶಕ್ತಿಯ ಕೊಡೊ ಅನ್ಯರಲಿ ವಿರಕ್ತಿಯ / ಉಗಾಭೋಗ / Ninna dhyanada shaktiya kodo

ನಿನ್ನ ಧ್ಯಾನದ ಶಕ್ತಿಯ ಕೊಡೊ ಅನ್ಯರಲಿ ವಿರಕ್ತಿಯ ಕೊಡೊ
ನಿನ್ನ ನೋಡುವ ಯುಕ್ತಿಯ ಕೊಡೊ ನಿನ್ನ ಪಾಡುವ ಭಕ್ತಿಯ ಕೊಡೊ-
ನಿನ್ನತ್ತೆ ಬರುವ ಸಂಪತ್ತಿಯ ಕೊಡೊ ಚಿತ್ತದಿ ತತ್ವದ ಕೃತ್ಯವ ತೋರೊ
ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ ಅತ್ತತ್ತ ಮಾಡೊ
ಭವ ಕತ್ತಲೆಯೆನಗೆ ಮುತ್ತಿದೆ ಹಯವದನ ||

Ninna dhyanada shaktiya kodo anyarali viraktiya kodo
Ninna noduva yuktiya kodo Ninna paduva bhaktiyante kodo
ninnati baruva sampattiya kodo chittadi tatwada krutyava toro
matte tudiyali enage mukutiya kodo attatta mado
Bhava kattaleyenage muttide hayavada ||