ಇತಿ ಶ್ರೀ ಸುಬ್ರಹ್ಮಣ್ಯ ಭುಜಂಗಂ ಪರಿಪೂರ್ಣ ||
ಆದಿ ಶಂಕರಾಚಾರ್ಯರ ಕೃತಿಯಿದು. ಸ್ತೋತ್ರಾರಾಧನೆಯಲ್ಲಿ ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಪಾರಾಯಣಕ್ಕೆ ವಿಶೇಷ ಮಹತ್ವವನ್ನು ಭಗವತ್ಪಾದ ಶ್ರೀ ಶಂಕರಾಚಾರ್ಯರು ಕೊಟ್ಟಿದ್ದಾರೆ. ಸುಬ್ರಹ್ಮಣ್ಯ ಭುಜಂಗದಲ್ಲಿ 33 ಶ್ಲೋಕಗಳಿವೆ. ಭುಜಂಗ ಎಂದರೆ ಸಂಸ್ಕೃತದಲ್ಲಿ ಸರ್ಪ ಎಂದರ್ಥ. ಭುಜಂಗ ಸ್ತೋತ್ರ ಪಾರಾಯಣ ಮಾಡುವುದರಿಂದ ಶರೀರದೊಳಗೆ ಮುಖ್ಯವಾಗಿ ಮೂಲಧಾರ ಚಕ್ರದಲ್ಲಿ ಸುಪ್ತವಾಗಿರುವ ಚೈತನ್ಯವು ಜಾಗೃತವಾಗುತ್ತದೆ. ಕುಂಡಲಿನಿ ಸಾಧಕರಿಗೆ ಭುಜಂಗ ಸ್ತೋತ್ರ ಪಾರಾಯಣ ಉತ್ತಮ ಸಾಧನ ಎಂದು ಸಾಧಕರು ಹೇಳುತ್ತಾರೆ. ಭುಜಂಗ ಸ್ತೋತ್ರಕ್ಕೆ ಅಪ್ರಮೇಯ ವೃತ್ತ ಎಂತಲೂ ಹೆಸರು.
ನಿಷ್ಠೆಯಿಂದಲಿ ಸ್ಮರಿಸೆ ಕಷ್ಟಗಳು ದೂರ ಮನೋ-ಭೀಷ್ಟಗಳ ಪೂರೈಪರೋ ಅಷ್ಟಸೌಭಾಗ್ಯವನೆ ಕೊಟ್ಟು ಸುಜನರಿಗೆ ಶ್ರೀ-ವಿಷ್ಣುದಾಸ್ಯವ ತೋರ್ಪರೋ ದೃಷ್ಟಿಯಿಂದಲಿ ನೋಡಲನೇಕ ಜನ್ಮದ ಪಾಪ-ಬಿಟ್ಟು ಪೋಪವೊ ಕ್ಷಣದಲಿ ಎಷ್ಟು ಹೇಳಲಿ ಇವರ ನಿಷ್ಠ ಮಹಾತ್ಮ್ಯೆಯನು-ದುಷ್ಟರಿಗೆ ದೊರೆಯದಿವರ ಸೇವಾ || ೧ ||
ಹಲವು ಕ್ಷೇತ್ರಗಳೇಕೆ ಹಲವು ತೀರ್ಥಗಳೇಕೆ-ಫಲ ಸುಲಭದಲ್ಲಿರಲು ಬಲವು ಇದ್ದದ್ದರೊಳು ಪ್ರದಕ್ಷಿಣೆ ಸುಪದಜಲ-ತಲೆಯಲ್ಲಿ ಧರಿಸಿ ನಿತ್ಯ ಮಲರಹಿತನು ಆಗಿ ದಂಡಪ್ರಣಾಮವ ಮಾಡೆ-ಒಲಿವರು ಕರುಣದಲಿ ಬೇಗ ಜಲಜನಾಭನು ನಾಲ್ಕುರೂಪದಿಂದಿವರಲ್ಲಿ-ಸಿಲುಕಿ ಪೂಜೆಯಗೊಂಬ ಸತತ – ಮೋಕ್ಷದಾತಾ || ೨ ||
ಹರಿದಾಸರಿದ್ದ ಸ್ಥಳ ವರಕಾಶಿ ಮೊದಲಾದ-ಕುರುಕ್ಷೇತ್ರಕಿಂತಧಿಕವೋ ಸುರ ಋಷಿ ಮುನಿಗಳು ಇಲ್ಲಿಹರು ವೈಕುಂಠ-ಸರಿಮಿಗಿಲು ಎಂದೆನಿಪುದೋ ಪರಮ ಸುಜ್ಞಾನಿಗಳಿಗೀ ಫಲವು ದೊರಕುವುದು-ತರತಮದಿ ಇತರ ಜನಕೆ ಗುರು ಶ್ರೀಶವಿಠ್ಠಲನು ಇವರ ರೂಪನಾಮದಲಿ-ಪರಿಪರಿಯ ವರವಗರೆವಾ – ಪೊರೆವಾ || ೩ ||