
ಆವನಾವನು ಕಾಯ್ದ ಅವನಿಯೊಳಗೆ
ದೇವ ದೇವೇಶ ಶ್ರೀ ಹರಿಯಲ್ಲದೆ ||ಪ||
ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಕಾಯ್ದಳು ಧ್ರುವರಾಯನ||
ಆವ ಮಗ ಸಲಹಿದನು ಆ ಉಗ್ರ ಸೇನನ
ಜೀವಂಗೆ ಪೋಷಕನು ಶ್ರೀ ಹರಿಯಲ್ಲದೆ ||೧||
ಆವ ಬಾಂಧವರು ಸಲಹಿದರು ಆ ಗಜರಾಜನ
ಆವ ಪತಿ ಕಾಯ್ದ ದ್ರೌಪದಿಯ ಮಾನ
ಆವ ಸೋದರ ಸಲಹಿದನು ಆ ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೇ ||೨||
ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕನು ಪಶು ಜಾತಿಗಳಿಗೆ
ಆವ ಪೋಷಕನು ಗರ್ಭದಲ್ಲಿಪ್ಪ ಶಿಶುವಿಗೆ
ದೇವ ಸಿರಿ ಪುರಂದರವಿಠಲನಲ್ಲದಲೆ ||೩||
Lyrics in English
Aavanavanu kayda avaniyolage
deva devesha Shree hariyallade || pa ||
Ava tandeya salahidanu prahladana
aava tayi kaydalu dhruvarayanu ||
aava maga salahidanu aa ugra senana
jeevange poshakanu Shree hariyallade || 1 ||
Aava bandhavaru salahidanu aa gajarajana
aava Pati kayda droupadiya maana
aava sodari salahidanu aa vibhishanana
jeevarige daatra Shree hariyallade || 2 ||
Aavanadhara adaviyolippa mrugagalige
aava rakshakanu pashu jatigalige
aava poshakanu garbhadallippa shishuvige
deva siri purandara vittalanalladale || 3 ||
