
ಧರ್ಮವೇ ಜಯವೆಂಬ ದಿವ್ಯಮಂತ್ರ
ಮರ್ಮವನ್ನರಿತು ಮಾಡಲುಬೇಕು ತಂತ್ರ ||ಧರ್ಮವೇ||
ವಿಷವಿಕ್ಕಿದವಗೆ ಷಡ್ರಸವನುಣಿಸಲಿಬೇಕು
ದ್ವೇಷ ಮಾಡಿದವನ ಪೋಷಿಸಲುಬೇಕು ||ವಿಷ||
ಹುಸಿ ಮಾಡಿ ಕೆಡಿಸುವನ
ಹಾಡಿ ಹರಸಲಿಬೇಕು ||ಹುಸಿ||
ಮೋಸ ಮಾಡುವನ ಹೆಸರು ಮಗನಿಗಿಡಬೇಕು ||ಧರ್ಮವೇ||
ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
ಬಂಧನದೊಳಿಟ್ಟವರ ಬೆರೆಯಬೇಕು ||ಹಿಂದೆ||
ಕೊಂದ ವೈರಿಯ ಮನೆಗೆ
ನಡೆದು ಹೋಗಲುಬೇಕು ||ಕೊಂದ||
ಕುಂದೆಣಿಸುವವರ ಗೆಳೆತನ ಮಾಡಬೇಕು ||ಧರ್ಮವೇ||
ಕೊಂಡೊಯ್ದು ಬಡಿಯುವರ
ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು ||ಕೊಂಡೊಯ್ದು||
ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ||೨||
ಕೊಂಡಾಡಿ ತಾ ಧನ್ಯನಾಗಬೇಕು ||ಧರ್ಮವೇ||
Lyrics in English
Dharmave jayavemba divyamantra
marmavannaritu madalubeku tantra || dharmave ||
Vishavikkidavage shadrasavanunisalibeku
dwesha madidavana poshisalubeku ||
husi Madi kedisuvana
hadi harasalibeku ||
mosa maduvara hesaru maganigidabeku || dharmave ||
Hinde nindiparannu vandisutalirabeku
bandhanadolittavara bereyabeku ||
konda vairiya manege
nadedu hogaluve beku ||
kundenisuvavara geletana madabeku || dharmave ||
Kondoydu badiyuvara
kondadutirabeku
kandu sahisadavara kareyabeku ||
pundarikaksha SrI purandaravittalana ||
kondadi taa dhanyanagabeku || dharmave ||
