ಉಗಾಭೋಗ / ಅರಿತವರನು ಕಾಣೆ ನಿನ್ನ ದೇವ ಅರವಿದೂರನೆ

ಉಗಾಭೋಗ


ಅರಿತವರನು ಕಾಣೆ ನಿನ್ನ ದೇವ ಅರವಿದೂರನೆ ತವ ಮಹಿಮೆಯು ಘನ್ನ ಭಂಡಿಕಾಲನು ಪಿಡಿದೆಯಂತೆ,
ಹತ್ತು ಭಂಡಿರಾಯನ ಸುತ ನೀನಾದೆಯಂತೆ ಭಂಡಿಸುರನ ಕೊಂದೆಯಂತೆ,
ಧುರದಿ ಭಂಡಿನಡಿಸಿ ನರನ ಸಲಿಹಿದೆಯಂತೆ ತಂದೆತಂದೆಗೆ ತಂದೆಯಂತೆ,
ಜಗದ ತಂದೆ ನಿನ್ನಗೆ ತಾಯಿತಂದೆಗಳಂತೆ ತಂದೆ ವಿಪ್ರಜರ ನೀನಂತೆ
ಸ್ವಾಮಿ ತಂದೆ ನೃಪಾಲನ ಸುತೆಗೀಶನಂತೆ ಸಿಂಧೂರದ್ವಯವರದನಂತೆ,
ಮಧ್ಯ ಸಿಂದೂರವದನವು ನಿನಗಿಹುದಂತೆ ಸಿಂಧುಮಂದಿರ ನೀನಂತೆ,
ಶ್ಯಾಮ-ಸುಂದರ ನಿನಗೆ ಭಕ್ತರ ಚಿಂತೆಯಂತೆ


– ಶ್ಯಾಮಸುಂದರದಾಸರು

Lyrics in english

Aravidūrane Tava Mahimeyu Ghanṇa
Bhandi Kaalanu Pidideyante,

Hattu Bhandiraayana Suta Neenaadeyante
Bhandi Surana Kondeyante,
Dhuradi Bhandi Nadisi Narana Salihideyante
Tande Tandeyege Tandeyante,

Jagada Tande Ninnage Taayi Tande Galante
Tande Viprajara Neenante
Swaami Tande Nrupaalaṇa Sutegīshanante
Sindhooradvaya Varadanante,

Madhya Sindhooravadanu Ninagihudante
Sindhu Mandira Neenante,
Shyaama-Sundara Ninage Bhaktara Chinteyante.

ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ / Gati yavudenage shreepati pelo

ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ ||ಪ||

ಮತಿಗೆಟ್ಟು ಸತತ ಪರ ಸತಿಯರನು ಬಯಸುವೆನೊ ||ಅ.ಪ||

ಮರುಳು ಬುದ್ಧಿಗಳಿಂದ ಕರ ಸೂಚನೆಯ ಮಾಡಿ |
ತರುಣಿಯರ ತಕ್ಕೈಸಿ ಸರಸವಾಡಿ ||
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ |
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ||೧||

ನಾಚಿಕಿಲ್ಲದಲೆ ಬಲು ನೀಚರಲ್ಲಿಗೆ ಪೋಗಿ |
ಯಾಚಿಸುವೆ ಸನ್ಮಾರ್ಗ ಯೋಚಿಸದಲೆ ||
ಆ ಚತುರ್ದಶ ವರುಷರಾರಭ್ಯ ಈ ವಿಧದಿ |
ಅಚರಿಪೆನೈ ಸವ್ಯ ಸಾಚಿಸಖ ಶ್ರೀ ಕೃಷ್ಣ ||೨||

ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ |
ಜ್ಞಾನ ಶೂನ್ಯನು ಆದೆ ದೀನ ಬಂಧು ||
ಸಾನುರಾಗದಿ ಒಲಿದು ನಾನಾ ಪ್ರಕಾರದಲಿ |
ನೀನೆ ಕರುಣಿಸು ಹರಿಯೆ ಜ್ಞಾನಗುಣ ಪರಿಪೂರ್ಣ ||೩||

ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ |
ದಾಂಬುಜಕ್ಕೆರಗದಲೆ ಸಂಭ್ರಮದಲಿ ||
ತಂಬೂರಿಯನು ಪಿಡಿದು ಡಂಭತನದಲಿ ನಾನು |
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ ||೪||

ಪರಮೇಷ್ಟಿಯಾರಭ್ಯ ತ್ರಣಜೀವ ಪರ್ಯಂತ |
ತರತಮವ ತಿಳಿಸಿ ತರುವಾಯದಲ್ಲಿ ||
ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು |
ಸಿರಿಜಗನ್ನಾಥ ವಿಠಲ ನಿರುತ ನೀ ಪೊರೆಯದಿರೆ ||೫||

Lyrics in English

Gati Yudenage Shripatiye Pēlo || Pa ||

Matigettu Satata Para Satiyaranu Bayasuveno || A. Pa. ||

Marulu Buddhigalinda Kara Suchaney Maadi |
Taruniyara Takkaisi Sarasavaadi ||
Irulu Hagalu Heege Durulatanadali Tiriugi |
Dhareyolage Naanobba Haridaasanenisidenu || 1 ||

Naachikilladale Balu Neecharallige Pogi |
Yaachisuve Sanmaarga Yōchisadale ||
Aa Chaturdasha Varusharaarabhya Ee Vidhadi |
Acharipenai Savya Saachisakha Shri Krishna || 2 ||

Naanu Nannadu Emba Heena Buddhigalinda |
Jnaana Shoonyanu Aade Deena Bandhu ||
Saanuraagadi Olidu Naanaa Prakaaradali |
Neene Karunisu Hariye Jnaana Guna Paripoorna || 3 ||

Ambujaakshane Ninna Nambi Bhajisuvara Paa |
Daambujakkeragadale Sambhramadali ||
Tamburiyanu Pididu Dambhatanadali Naanu |
Shambaraarige Siluki Bembidade Chaalvaride || 4 ||

Parameshtiyaarabhya Trana Jeeva Paryanta |
Tarātamava Tilisi Taruvaayadalli ||
Guru Hiriyarali Bhakuti Vairaagyavane Kottu |
Sirijagannaatha Vithala Niruta Nee Poreyadire || 5 ||


ಶ್ರೀನಿವಾಸ ಸುಳಾದಿ / Shrinivasa suladi

ಶ್ರೀನಿವಾಸ ಸುಳಾದಿ

ಅಚ್ಚುತನ್ನ ನಾಮಾ ಅಚ್ಚು ಹೋಯಿದಂತೆ |
ಅನಂತನ ನಾಮಾ ಕೊನೆ ನಾಲಿಗೆಯಲ್ಲಿ |
ಪಚ್ಚಿಸಿಕೊಂಡು ಆ ಪರಮಾನಂದದಿಂದ |
ಕೆಚ್ಚೆದೆಯ ಯಮಭಟರ ಠಾವಿಗೆ |
ಕಿಚ್ಚುಬೀರುತಲಿ ವೈಷ್ಣವರ ಸುಮತವೆಂಬೋ |
ರಚ್ಚೆಯ ಬಿಡದೆ ಬಲು ಬಿಂಕಾದಲ್ಲೀ |
ವಾಚಸ್ಪತಿ ವಿಜಯವಿಟ್ಠಲನ ಭಕುತಿಗೆ |
ಚೊಚ್ಚಲಮಗನಾಗಿ ಚರಿಸು ಜಾಣನಾಗಿ

Lyrics in English

Achyutanna naamaa achchu hoyidante |
Anantana naamaa kone naaligeyalli |
Pachchisikondu aa Paramaanandadinda |
Kechchedeya Yamabhataru thaavige |
Kichchu beerutali Vaishnavara sumatavenbo |
Rachcheya bidade balu binkaadalli |
Vaachaspati Vijayavittalana bhakutige |
Chocchalamaganaagi charisu jaananaagi ||

ಸರಳ ಭಾವಾರ್ಥ

ಭಕ್ತನು ತನ್ನ ನಾಲಿಗೆಯಲ್ಲಿ ಸದಾ ಅಚ್ಯುತ, ಅನಂತನಂತಹ ಶ್ರೀಹರಿಯ ನಾಮಗಳನ್ನು ಜಪಿಸುತ್ತಾ, ಆ ನಾಮಸ್ಮರಣೆಯಿಂದ ಪರಮಾನಂದವನ್ನು ಅನುಭವಿಸಬೇಕು.

ಮರಣದ ಸಮಯದಲ್ಲಿ ಯಮಭಟರು ಎದುರಿಗೆ ಬಂದರೂ, ನಿಜವಾದ ವಿಷ್ಣುಭಕ್ತನಿಗೆ ಭಯಪಡಬೇಕಾಗಿಲ್ಲ. ಏಕೆಂದರೆ ಅವನ ಹೃದಯದಲ್ಲಿ ಶ್ರೀಹರಿಯ ನಾಮದ ಶಕ್ತಿ ಮತ್ತು ಭಕ್ತಿಯ ಧೈರ್ಯ ಇರುತ್ತದೆ.

ವೈಷ್ಣವರ ಸತ್ಸಂಗ, ಸದ್ಬುದ್ಧಿ ಮತ್ತು ಹರಿನಾಮಸ್ಮರಣೆಯನ್ನು ಎಂದಿಗೂ ಬಿಡದೆ, ದೃಢವಾದ ಭಕ್ತಿಯಿಂದ ಮುಂದುವರಿಯಬೇಕು.

ಹೀಗೆ ಶ್ರೀ ವಿಜಯವಿಠ್ಠಲನನ್ನು ನಿಷ್ಠೆಯಿಂದ ಭಜಿಸುವ ಭಕ್ತನು, ದೇವರಿಗೆ ಬಹಳ ಪ್ರಿಯನಾಗಿ, ಮನೆಯ ಮೊದಲ ಮಗನಂತೆ ಆತ್ಮೀಯನಾಗಿ ದೇವರ ಕೃಪೆಗೆ ಪಾತ್ರನಾಗುತ್ತಾನೆ.

ರಮಣನಿಲ್ಲದ ನಾರಿ ಪರರ ಕಣ್ಣಿಗೆ ಮಾರಿ / Ramananillada Naari Parara Kannige Maari

ರಮಣನಿಲ್ಲದ ನಾರಿ ಪರರ ಕಣ್ಣಿಗೆ ಮಾರಿ
ಹಡೆದವಳ ಎದೆ ಕೊರಳ ಕೊಯ್ಯುವಂತ ಚೂರಿ  ||ರಮಣ||

ಮಾತುಕಲಿತರೆ ಏನು ಮಹಾ ಜಾಣೆಯಾದರೇನು
ಚಾತುರ್ಯವಿದ್ದರೇನು ಚೆಲುವೆಯಾದರೇನು ||
ರಾಶಿಹಣವಿದ್ದರೇನು ಏನು ಪೇಳಿದರೇನು ||2||
ರೀತಿಕೆಟ್ಟ ಜನ್ಮ ಪೊರೆಯಬೇಕಲ್ಲ     ||ರಮಣ||

ಅತ್ತೆ ತನ್ನಯ ಮಗಗೆ ಮ್ರತ್ಯು ಎಂದೆನ್ನುವಳು
ಹುಟ್ಟಿದಾ ಮನೆಯವರು ದೂಷಿಸುವರು ||
ಎಷ್ಟು ಪೇಳಲಿ ಬಹಳ ತುಚ್ಛವನೆ ಮಾಡುವರು ||
ಅಕ್ಕತಂಗಿಯರಿಗೆ ಧಿಕ್ಕು ಎಂಬುವರು   ||ರಮಣ||

ಚಾಕರಿಯ ಮಾಡಿದರೆ ಅತಿ ಚೇಳಾಡುವರು
ರಾಶಿಅನ್ನ ಉಂಡಳೆಂದು ದೂರುವರು ||
ಈಸು ಸೈರಿಸಿಕೊಂಡು ಏಕಾಗ್ರದಲಿ ಕುಳಿತು ||2||
ಪುರಂದರವಿಠ್ಠಲನ ನೆನೆಯೆ ನೀ ನಾರಿ ||ರಮಣ||

Lyrics in English

Ramananillada Naari Parara Kannige Maari
Hadedavala Ede Korala Koyyuvanta Choori ||Ramana||

Maatu Kalitare Enu Maha Jaaneyaadarenu
Chaaturyaviddarenu Cheluveyadareno
Raashi Hanaviddarenu Enu Pelidarenu
Reetiketta Janma Poreyabekalla ||Ramana||

Atte Tannaya Magage Mrutyu Endennavalu
Huttida Maneyavaru Dooshisuvaru
Eshtu Pelali Bahala Tuchchhavane Maaduvaru
Akka Tangiyarige Dhikku Embuvaru ||Ramana||

Chaakariya Madidare Ati Cheladuvaru
Raashi Anna Undalendu Dooruvaru
Eesu Sairisikondu Ekaagradali Kulitu
Purandara Vittalana Neneye Nee Naari ||Ramana||

ಎದುರಾರೈ ಗುರುವೆ ನಿಮಗೆ ಸಮನಾರೈ / Edurarai Guruve Nimage Samanarai

ಎದುರಾರೈ ಗುರುವೆ ನಿಮಗೆ ಸಮನಾರೈ
ಮದನ ಗೋಪಾಲನ ಪ್ರಿಯ ಜಯರಾಯ ||ಪ||

ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ವಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ ||೧||

ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂಬ
ಚಟುಲತಾಪದಿಂದ ಖಂಡಿಸಿ ತೆಜೋ
ತ್ಕಡದಿ ಮೆರದ ಬುಧಕಟಕಾಬ್ಜ ಮಿತ್ರ ||೨||

ಅಮಿತ ದ್ವಿಜಾವಳಿ ಕುಮುದಗರಳಿಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹ್ರತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||೩||

ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸು
ಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ವ
ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು ||೪||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವರಾಶಿಯೊಳಿಟ್ಟು
ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾಯಸುಧಾ ಪಡೆದ ಯತೀಂದ್ರ ||೫||

ವನಜನಾಭನ ಗುಣಮನೇಗಳು ಸರ್ವಜ್ಞ
ಮುನಿಕೃತ ಗ್ರಂಥಗಳವನಿಯೊಳಗಡೆ ಸ
ಜ್ಜನರಿಗೆ ಬೇಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋಧೀರ ||೬||

ಅರ್ಥಿಮಂದಾರ ವೇದಾರ್ಥವಿಚಾರ ಸ
ಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ ಪ್ರ
ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ
ತೀರ್ಥ ಕರಜ ಜಯತೀರ್ಥ ಯತೀಂದ್ರ ||೭||

Lyrics in English

Edurarai Guruve Nimage Samanarai
Madana Gopalana Priya Jayaraya ||P||

Kadu Garjisuva Kesariyante Nimma Vaada
Vadaneya Keluta Nudi Mundodade
Gadagada Naduguta Maygo Maygalu
Adaviyoladagoru Nimma Bheetiyali ||1||

Kutila Matagalembo Chatulandhakarakke
Patutara Tattva Prakashikeyemba
Chatula Tapadinda Khandisi Tejo
Kadadi Mereda Budha Katakabja Mitra ||2||

Amita Dwijavali Kumuda Garalisi
Vimatara Mukha Kamalangal Badisi
Swamatara Hrit Santapagalodisi
Vimala Sukeertiya Padedeyo Chandra ||3||

Veda Shastragalembo Shrungagalinda Su
Dhadi Granthagalembo Stanadindopputa Tattva
Bodhaneyembo Dugdha Shishya Vatsangalige
Adaradali Kotta Yati Suradhenu ||4||

Vyasa Sutragalembo Mandaravanu Veda
Rashiyembo Varashiyolittu
Shri Sarvajnara Vakya Pashadi Sutti
Bhasura Nyaya Sudha Padeda Yateendra ||5||

Vanajanabhana Guna Manegalu Sarvajna
Munikruta Granthagalavaniyolagade
Sajjanarige Bekanjanadinda Torisi
Ghana Sukha Sadhana Madida Yodheera ||6||

Arthi Mandara Vedartha Vichara
Samartha Shri Krishna Padambuja Bhringa
Pratyarthi Mattebha Kantheerava Kshobhya
Teertha Karaja Jayateertha Yateendra ||7||

ಎಲೆ ಮನವೆ ನೀ ತಿಳಿ ಹರಿ ಸರ್ವೋತ್ತಮನೆಂದು / Ele manave nee tili Hari sarvottamanendu

ಎಲೆ ಮನವೆ ನೀ ತಿಳಿ ಹರಿ ಸರ್ವೋತ್ತಮನೆಂದು |
ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ||ಪ||

ಇಕ್ಷುದಂಡಗಳಿರಲು ಇಂಧನವ ಮೇಲೇಕೆ |
ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |
ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |
ಪಕ್ಷಿವಾಹನನಿರಲು ಪರದೈವವೇಕೆ ||೧||

ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |
ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||
ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |
ಮುರಹರನ ಪೂಜಿಸದೆ ಮುಂದುಗೆಡಲೇಕೇ ||೨||

ಭಾವಶುದ್ಧಿಗಳಿರಲು ಬಯಲಾಡಂಬರವೇಕೆ |
ದೇವತಾ ಸ್ತುತಿಯಿರದ ದೇಹವೇಕೆ ||
ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |
ದೇವ ಪುರಂದರವಿಠಲನಿರಲು ಭಯವೇಕೆ ||೩||

Ele manave nee tili Hari sarvottamanendu |
Sulalitaatmana bhajisi sukhiyaago manave ||Pa||

Ikshudandagaliralu indhanava meeleke |
Akshaya paatreyiralu hasiveyenaleke |
Nikshepa nidhiyiralu niruta daaridryaveke |
Pakshivahananiralu paradaivaveke ||1||

Suradhenu kaiseri sukhavillavenaleke |
Garuda mantrava japisi garalabhayaveke ||
Taranikiranagaliralu halavu jyotigaleke |
Muraharana poojisade mundugedaleke ||2||

Bhavashuddhigaliralu bayalaadambaraveke |
Devataa stutiyirada dehaveke ||
Aavagam Hariyenade anyachintegaleke |
Deva Purandaravithalaniralu bhayaveke ||3||

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು / Shri Rangavittala a Shree makutake sharanu

ಇದು ಪ್ರಸಿದ್ಧವಾದ ಶ್ರೀಪಾದರಾಜರ ದೇವನಾಮವಾಗಿದೆ. ‘ರಂಗವಿಠಲ’ ಎಂಬುದು ಅವರ ಅಂಕಿತನಾಮ. ಭಗವಾನ್ ಶ್ರೀಹರಿಯ ದಿವ್ಯ ಸ್ವರೂಪದ ಪ್ರತಿಯೊಂದು ಅಂಗಾಂಗವನ್ನು ವರ್ಣಿಸುತ್ತಾ, ಅವನಿಗೆ ಶರಣಾಗತಿಯನ್ನು ಕೋರುವ ಸುಂದರವಾದ ಭಕ್ತಿಗೀತೆ ಇದಾಗಿದೆ.

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||

ಶಿರದಲ್ಲೊಪ್ಪುವ ನೀಲಕುಂತಳಕೆ ಶರಣು |
ಸಿರಿಸಹೋದರನರ್ಧದವಳಿಗೆ ಶರಣು ||ಅ.ಪ||

ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು |
ಸಂಪಿಗೆಯ ಕುಸುಮ ಸಮನಾಸಿಕಕೆ ಶರಣು ||
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು |
ಇಂಪುದರ್ಪಣನಿಭ ಕಪೋಲಗಳಿಗೆ ಶರಣು ||೧||

ಕುಂದಕುಟ್ಮಲ ಪೋಲ್ವ ದಂತಪಂಕ್ತಿಗೆ ಶರಣು |
ಅಂದವಾಗಿರುವ ಬಿಂಬೋಷ್ಠಕೆ ಶರಣು ||
ಚಂದ್ರಿಕಾನಿಭ ಮುದ್ದುಮಂದಹಾಸಕೆ ಶರಣು |
ನಂದಗೋಪನ ಮುದ್ದು ಕಂದನಿಗೆ ಶರಣು ||೨||

ಅಬ್ಜನಾಭನ ದಿವ್ಯ ಕಂಬುಕಂಠಕೆ ಶರಣು |
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು ||
ಕುಬ್ಜೆಯನು ಡೊಂಕ ತಿದ್ದಿದ ಭುಜಗಳಿಗೆ ಶರಣು |
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||

ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು‌ |
ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು ||
ಪುನ್ನಾಗಕರಗೆತ್ತ ದ್ವಯನಿತಂಬಕೆ ಶರಣು |
ಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು ||೪||

ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು |
ತುಂಗ ಕುಚಗಳ ಪಿಡಿದ ಕರಗಳಿಗೆ ಶರಣು ||
ಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು |
ರಂಗವಿಠಲನ ಸರ್ವಾಂಗಕೆ ಶರಣು ||೫||

Lyrics in English

Shreerangavithalana shree makutake sharanu ||Pa||

Shiradalloppuva neelakuntalake sharanu |
Sirisahodaranardhadavalige sharanu ||A.Pa||

Sompu notada cheluva sogegannige sharanu |
Sampigeya kusuma samanāsikake sharanu ||
Gumpuratnada karnakundalagalige sharanu |
Impudarpananibha kapolagalige sharanu ||1||

Kundakutmala polva dantapanktige sharanu |
Andavagiruva bimboshthake sharanu ||
Chandrikanibha muddumandahasake sharanu |
Nandagopana muddu kandanige sharanu ||2||

Abjanabhana divya kambukanthake sharanu |
Abjamukhiyiruva vakshasthalake sharanu ||
Kubjeyanu donka tiddida bhujagalige sharanu |
Abjajasanana petta nabhige sharanu ||3||

Rannagantegaliruva ninna katige sharanu |
Ponna kadali polva todegalige sharanu ||
Punnagakaragetta dvayanitambake sharanu |
Chennagi kuniva samajanuvige sharanu ||4||

Mangala vaibhogangala anghridvayake sharanu |
Tunga kuchagala pidida karagalige sharanu ||
Pongolalanooduva anguligalige sharanu |
Rangavithalana sarvangake sharanu ||5||

ವಾಸುದೇವ ನಿನ್ನ ಮರ್ಮಕರ್ಮಂಗಳ ದೇಶದೇಶದಲ್ಲಿ / Vasudeva Ninna marmakarmangala

ಈ ಕೀರ್ತನೆಯಲ್ಲಿ ದಾಸರು ಗೋಪಾಲ ಕೃಷ್ಣನ ಬಾಲಲೀಲೆಗಳನ್ನು “ಮರ್ಮಕರ್ಮ” ಎಂದು ಪ್ರೀತಿಯಿಂದ ಪ್ರಶ್ನಿಸುತ್ತಾ, ಕೊನೆಯಲ್ಲಿ ಆತನೇ ದಯಾಳು ರಂಗವಿಠಲ ಎಂದು ಕೊಂಡಾಡುತ್ತಾರೆ.

ವಾಸುದೇವ ನಿನ್ನ ಮರ್ಮಕರ್ಮಂಗಳ |
ದೇಶದೇಶದಲ್ಲಿ ಪ್ರಕಟಿಸಲೊ ||
ಬೇಸರದೆ ಎನ್ನ ಹೃದಯಕಮಲದಲ್ಲಿ |
ವಾಸವಾಗಿ ಸುಮ್ಮನಿದ್ದೀಯೊ ||ಪ||

ತರಳತನದಲಿದ್ದು ದುರುಳನಾಗಿ ಬಂದು |
ಒರಳಿಗೆ ಕಟ್ಟಿಸಿಕೊಂಡುದನು ||
ತುರುವ ಕಾಯಲಿ ಹೋಗಿ ಕಲ್ಲಿಯೋ |
ಗರವನುಗೊಲ್ಲರ ಕೂಡೆ ನೀ ಉಂಡುದನು ||
ನೆರೆಮನೆ ಹೊರಮನೆಗಳ ಪೊಕ್ಕು ಬೆಣ್ಣೆಯ |
ಅರಿಯದಂತೆ ಕದ್ದು ಮೆದ್ದುದನು ||
ಕೆರಳಿಸಿದೆಯಾದರೆ ಒದರುವೆ ಎಲೊ ನರ |
ಹರಿ ಎನ್ನ ಬಾಯಿಗೆ ಬಂದುದನು ||೧||

ಕಟ್ಟಿ ಕರೆವ ಏಳುದಿನದ ಮಳೆಗೆ ಪೋಗಿ |
ಬೆಟ್ಟವ ಪೊತ್ತದ್ದು ಹೇಳಲೊ ||
ಅಟ್ಟಿಸಿಕೊಳ್ಳುತ ಯಾಗಶಾಲೆಗೆ ಪೋಗಿ |
ಹೊಟ್ಟೆಯ ಹೊರೆದದ್ದು ಹೇಳಲೊ ||
ದುಷ್ಟ ಹಾವಿನ ಹೆಡೆಯನು ತುಳಿದಾಡಿದ |
ದುಷ್ಟತನವನು ಹೇಳಲೊ ||
ನೆಟ್ಟನೆ ಅಂಬರಕೆತ್ತಿದನ ಹೊಯ್ದು |
ಹಿಟ್ಟುಕಟ್ಟಿಟ್ಟುದ ಹೇಳಲೊ ||೨||

ಪಿಡಿಯವಲಿಗೆ ಮೆಚ್ಚಿ ಸಂಪದವನು ಕೊಟ್ಟ |
ಬೆಡಗತನವನಿಲ್ಲಿ ಹೇಳಲೊ ||
ಹಿಡಿಯ ಬಂದ ಕಾಲಯವನಿಗಂಜಿ ಕಲ್ಲ |
ಪಡೆಯ ಹೊದ್ದುದ ಹೇಳಲೊ ||
ಮಡಿದ ಮಗನ ಗುರುವಿಗೆ ಕೊಡಬೇಕೆಂಬ |
ಸಡಗರತನವಿಲ್ಲಿ ಹೇಳೆಲೊ ||
ಮಡದಿ ಮಾತಿಗೆ ಪೋಗಿ ನೀ ಪಾರಿಜಾತವ |
ತಡೆಯದೆ ತಂದದ್ದು ಹೇಳಲೊ ||೩||

ಮೌನಗೌರಿಯ ನೋಡ ಬಂದ ಹೆಂಗಳನ್ನೆಲ್ಲ |
ಮಾನವ ಕೊಂಡದ್ದು ಹೇಳಲೊ ||
ತಾನಾಗಿ ಮೊಲೆಯನೂಡಿಸ ಬಂದವಳನ್ನು |
ಪ್ರಾಣವ ಕೊಂಡದ್ದು ಹೇಳಲೊ ||
ಕಾನನದೊಳು ತುರುವಿಂಡುಗಳನು ಕಾಯ್ದ |
ಹೀನತನವನಿಲ್ಲಿ ಹೇಳಲೊ ||
ಮಾನಿನಿಯರ ಮನೆಗಳ ಪೊಕ್ಕು ಬೆಣ್ಣೆಯ |
ಹಾನಿಯ ಮಾಡಿದ್ದು ಹೇಳಲೊ ||೪||

ಧರಣಿಮಗನ ಕೊಂದು ತರುಣಿಯರನು |
ದುರುಳತನವನಿಲ್ಲಿ ಹೇಳಲೊ ||
ಜರೆಯ ಮಗನಿಗಂಜಿ ಪುರವ ಬಿಟ್ಟು ಹೋಗಿ |
ಶರಧಿಯ ಪೊಕ್ಕದ್ದು ಹೇಳಲೊ ||
ಧರೆಯೊಳಧಿಕ ಶ್ರೀರಂಗಪಟ್ಟಣದಲ್ಲಿ |
ಸ್ಥಿರವಾಗಿ ನಿಂತದ್ದು ಹೇಳಲೊ ||
ಶರಣಾಗತರ ಕಾವ ರಂಗವಿಠಲನ್ನ |
ಪರಮ ದಯಾಳೆಂದು ಹೇಳಲೊ ||೫||

ಕೃತಿಕಾರರು : ಶ್ರೀ ಶ್ರೀಪಾದರಾಜರು

Lyrics in English

Vasudeva ninna marmakarmangala |
deshadeshadalli prakatisalo ||
besarade enna hrudayakamaladalli |
vasavagi summaniddiyo ||P||

Taralatanadaliddu durulanagi bandu |
oralige kattisikonddudanu ||
turuva kayali hogi kalliyo |
garavanugollara koode nee undudanu ||
neremane horamanegala pokku benneya |
ariyadante kaddu meddhudanu ||
keralisideyadare odaruve elo nara |
hari enna bayige bandudanu ||1||

Katti kareva elu dinada malege pogi |
bettava pottaddu helalo ||
attisikolluta yagashalege pogi |
hotteya horedaddu helalo ||
dushta havina hedeyanu tulidadida |
dushtatanavanu helalo ||
nettane ambarakettidana hoydu |
hittukattittuda helalo ||2||

Pidiyavalige mecci sampadavanu kotta |
bedagatanavanilli helalo ||
hidiya banda kalayavaniganji kalla |
padeya hodduda helalo ||
madida magana guruvige kodabekemba |
sadagaratanavilli helelo ||
madadi matige pogi nee parijatava |
tadeyade tandaddu helalo ||3||

Maunagauriya noda banda hengalannella |
manava kondaddu helalo ||
tanagi moleyanoodisa banda valannu |
pranava kondaddu helalo ||
kananadolu turuvindugalanu kayda |
heenatanavanilli helalo ||
maniniyara manegala pokku benneya |
haniya madiddu helalo ||4||

Dharanimagana kondu taruniyaranu |
durulatanavanilli helalo ||
jareya maganiganji purava bittu hogi |
sharadhiya pokkaddu helalo ||
dhareyoladhika srirangapattanadalli |
sthiravagi nintaddu helalo ||
sharanagatara kava rangavithalanna |
parama dayalendu helalo ||5||


ಶೂರ್ಪಾಲಿ ನೃಸಿಂಹ ದೇವರು / Shoorpali nrusimha devaru

Lion-headed deity sitting cross-legged on a golden throne with halo, holding lotus, conch, and discus, surrounded by devotees.

ಶೂರ್ಪಾಲಿ ನೃಸಿಂಹ ದೇವರು
ಕಂಜಾಕ್ಷ ಕಾಯಯ್ಯ ಕರುಣಾನಿಧಿಯೆ
ಬಲಭಂಜನನನುಜನೆ ನೋಡೆನ್ನ || ಪ ||

ಅಂಜದೆ ನಾ ನಿನ್ನ ಅಡಿಳಿಗೆರಗುವೆ
ಕುಂಜರವರದನೆ ಕೂಡೆನ್ನ
ನೀನೊಲಿದಾಗಲೆ ನಿಖಿಳ ಸಂಪದ ತನ್ನಿಂ-
ತಾನೆ ಬಹುದು ತಡವಿಲ್ಲಆ ನಳಿನಭವಾದ್ಯ
ಮರರಿದಕೆ ಸಾಕ್ಷಿಭಾನುಸನ್ನಿಭ ಬಾರೊ ನಲ್ಲ1

ಪುಂಡರೀಕಾಕ್ಷನ ಪೂಜಿಪ ಭಕ್ತರಮಂಡೆಯ[ಹೂವು]
ಬಾಡದೆಂದು ಕಂಡೆ ನಾ ರಣದಲ್ಲಿ
ಕಲಿಪಾರ್ಥನಿಗೊಲಿದು
ಬಂಡಿಯ ಬೋವ ನೀನಾದಂದು

ವೃಂದಾರಕೇಂದ್ರ ಶ್ರೀ ಹಯವದನ ಮುಕುಂದ
ಮಂದರೋದ್ಧಾರ ಮತ್ತೊಂದರಿಯೆ
ಇಂದಿರೆಯರಸ ಬಾ ಇಂದುವದನ
ದೀನ-ಬಂಧುವೆ ಭಕ್ತರ ಸಿರಿಯೆ

Meaning in kannada

✨🦁 ಶೂರ್ಪಾಲಿ ನೃಸಿಂಹ ದೇವರು 🦁✨

ಕರುಣಾನಿಧಿಯೇ, ಕಂಜಾಕ್ಷನೇ
ನಿನ್ನ ಅಡಿಗೆ ಶರಣಾಗುತ್ತೇನೆ…
ಅಂಜದೆ ನಿನ್ನನ್ನು ಆಶ್ರಯಿಸುತ್ತೇನೆ

ನೀನು ಒಲಿದಾಗಲೇ —
ಸಕಲ ಸಂಪತ್ತು, ಸೌಭಾಗ್ಯ, ಕೃಪೆ
ಸ್ವತಃ ಬರುತ್ತವೆ… ತಡವಿಲ್ಲ

ಭಕ್ತರ ಪೂಜೆಯ ಹೂವು ಎಂದಿಗೂ ಒಣಗದು
ನಿನ್ನ ಕೃಪೆಯಿಂದ ಅದು ಸದಾ ತಾಜಾ

ದೀನರ ಬಂಧುವೇ, ಭಕ್ತರ ಸಿರಿಯೇ
ಇಂದಿರೆಯರಸನೇ, ಹಯವದನನೇ
ನಿನ್ನ ಧ್ಯಾನವೇ ನಮ್ಮ ಬದುಕಿನ ಆಧಾರ

🕉️ ನೃಸಿಂಹ ದೇವಾ, ಕಾಪಾಡು… ರಕ್ಷಿಸು… 🕉️

Glowing lotus mandala with intricate patterns floating in a star-filled galaxy

ಏನೇನ ದಾನವ ಮಾಡಲು ಹರಿಯ / Enena danava madalu hariye

ಏನೇನ ದಾನವ ಮಾಡಲು ಹರಿಯ |
ಧ್ಯಾನಕೆ ಸಮವಾದ ದಾನಂಗಳುಂಟೆ ||ಪ||

ದಿನಕೊಂದು ಲಕ್ಷ ಗೋದಾನವ ಮಾಡಲು |
ಅನುದಿನ ಉದಕದಾನವ ಮಾಡಲು ||
ಮನಶುದ್ಧವಾದ ಭೂದಾನವ ಮಾಡಲು |
ವನಜನಾಭನ ಧ್ಯಾನಕೆ ಸಮವುಂಟೆ ||೧||

ಉತ್ತಮವಾದ ವಸ್ತ್ರವ ದಾನಮಾಡಲು |
ಮುತ್ತು ಮಾಣಿಕವ ದಾನವ ಮಾಡಲು ||
ಅತ್ಯಂತ ವಿದ್ಯಾಪ್ರದಾನವ ಮಾಡಲು |
ಚಿತ್ತಜಪಿತನ ಧ್ಯಾನಕೆ ಸಮವುಂಟೆ ||೨||

ಶತಕೋಟಿ ಕನ್ಯಾಪ್ರದಾನವ ಮಾಡಲು |
ಶತಶತ ಸುವರ್ಣ ದಾನವ ಮಾಡಲು ||
ಮಿತಿಯಿಲ್ಲದೆ ಅನ್ನದಾನವ ಮಾಡಲು |
ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ||೩||

ನಾನಾ ತೀರ್ಥದಲಿ ಸ್ನಾನವ ಮಾಡಲು |
ಕಾನನದೊಳಗೆ ತಪವ ಮಾಡಲು |
ಜ್ಞಾನಿಯಾಗಿ ಕಾಶೀಯಾತ್ರೆಯ ಮಾಡಲು |
ಜಾನಕೀಪತಿಯ ಧ್ಯಾನಕೆ ಸಮವುಂಟೆ ||೪||

ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |
ಹರುಷದಿ ವಿಷ್ಣುಪಂಚಕ ಮಾಡಲು ||
ಪರಮ ಕಠಿಣ ಚಾಂದ್ರಾಯಣ ಮಾಡಲು |
ಪುರಂದರವಿಠಲನ ಧ್ಯಾನಕೆ ಸಮವುಂಟೆ ||೫||

ಕೃತಿಕಾರರು : ಶ್ರೀ ಪುರಂದದಾಸರು

Lyrics in English

Enēna dānava māḍalu Hariya |
Dhyānake samavāda dānangaḷuṇṭe || Pa ||

Dinakondu laksha gōdānava māḍalu |
Anudina udakadānava māḍalu ||
Manaśuddhavāda bhūdānava māḍalu |
Vanajanābhana dhyānake samavuṇṭe || 1 ||

Uttamavāda vastrava dānamāḍalu |
Muttu māṇikava dānava māḍalu ||
Atyanta vidyāpradānava māḍalu |
Chittajapitana dhyānake samavuṇṭe || 2 ||

Shatakōṭi kanyāpradānava māḍalu |
Shatashata suvarṇa dānava māḍalu ||
Mitiyillade annadānava māḍalu |
Kṣitipatiya pādadhyānake samavuṇṭe || 3 ||

Nānā tīrthadali snānava māḍalu |
Kānanadoḷage tapava māḍalu ||
Jñāniyāgi Kāśiyātreya māḍalu |
Jānakīpatiya dhyānake samavuṇṭe || 4 ||

Dhāraṇi pāraṇi Bhīṣmapanchaka māḍi |
Haruṣadi Viṣṇupanchaka māḍalu ||
Parama kaṭhiṇa Chāndrāyaṇa māḍalu |
Purandara Viṭṭhalana dhyānake samavuṇṭe || 5 ||