
ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ ||ಪ||
ಮತಿಗೆಟ್ಟು ಸತತ ಪರ ಸತಿಯರನು ಬಯಸುವೆನೊ ||ಅ.ಪ||
ಮರುಳು ಬುದ್ಧಿಗಳಿಂದ ಕರ ಸೂಚನೆಯ ಮಾಡಿ |
ತರುಣಿಯರ ತಕ್ಕೈಸಿ ಸರಸವಾಡಿ ||
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ |
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ||೧||
ನಾಚಿಕಿಲ್ಲದಲೆ ಬಲು ನೀಚರಲ್ಲಿಗೆ ಪೋಗಿ |
ಯಾಚಿಸುವೆ ಸನ್ಮಾರ್ಗ ಯೋಚಿಸದಲೆ ||
ಆ ಚತುರ್ದಶ ವರುಷರಾರಭ್ಯ ಈ ವಿಧದಿ |
ಅಚರಿಪೆನೈ ಸವ್ಯ ಸಾಚಿಸಖ ಶ್ರೀ ಕೃಷ್ಣ ||೨||
ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ |
ಜ್ಞಾನ ಶೂನ್ಯನು ಆದೆ ದೀನ ಬಂಧು ||
ಸಾನುರಾಗದಿ ಒಲಿದು ನಾನಾ ಪ್ರಕಾರದಲಿ |
ನೀನೆ ಕರುಣಿಸು ಹರಿಯೆ ಜ್ಞಾನಗುಣ ಪರಿಪೂರ್ಣ ||೩||
ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ |
ದಾಂಬುಜಕ್ಕೆರಗದಲೆ ಸಂಭ್ರಮದಲಿ ||
ತಂಬೂರಿಯನು ಪಿಡಿದು ಡಂಭತನದಲಿ ನಾನು |
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ ||೪||
ಪರಮೇಷ್ಟಿಯಾರಭ್ಯ ತ್ರಣಜೀವ ಪರ್ಯಂತ |
ತರತಮವ ತಿಳಿಸಿ ತರುವಾಯದಲ್ಲಿ ||
ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು |
ಸಿರಿಜಗನ್ನಾಥ ವಿಠಲ ನಿರುತ ನೀ ಪೊರೆಯದಿರೆ ||೫||
Lyrics in English
Gati Yudenage Shripatiye Pēlo || Pa ||
Matigettu Satata Para Satiyaranu Bayasuveno || A. Pa. ||
Marulu Buddhigalinda Kara Suchaney Maadi |
Taruniyara Takkaisi Sarasavaadi ||
Irulu Hagalu Heege Durulatanadali Tiriugi |
Dhareyolage Naanobba Haridaasanenisidenu || 1 ||
Naachikilladale Balu Neecharallige Pogi |
Yaachisuve Sanmaarga Yōchisadale ||
Aa Chaturdasha Varusharaarabhya Ee Vidhadi |
Acharipenai Savya Saachisakha Shri Krishna || 2 ||
Naanu Nannadu Emba Heena Buddhigalinda |
Jnaana Shoonyanu Aade Deena Bandhu ||
Saanuraagadi Olidu Naanaa Prakaaradali |
Neene Karunisu Hariye Jnaana Guna Paripoorna || 3 ||
Ambujaakshane Ninna Nambi Bhajisuvara Paa |
Daambujakkeragadale Sambhramadali ||
Tamburiyanu Pididu Dambhatanadali Naanu |
Shambaraarige Siluki Bembidade Chaalvaride || 4 ||
Parameshtiyaarabhya Trana Jeeva Paryanta |
Tarātamava Tilisi Taruvaayadalli ||
Guru Hiriyarali Bhakuti Vairaagyavane Kottu |
Sirijagannaatha Vithala Niruta Nee Poreyadire || 5 ||
