
ವೈದ್ಯ ಬಂದ ನೋಡಿ
ಶ್ರೀ ವೆಂಕಟನೆಂಬ ವೈದ್ಯ ಬಂದ ನೋಡಿ ||ವೈದ್ಯ ಬಂದ||
ವೈದ್ಯ ಬಂದನು ವೇದವೇದ್ಯ ನೋಡೀಗಲೇ..
ಶ್ರೀದೇವಿರಮಣನು ಶ್ರೀನಿವಾಸನೆಂಬ.. ||ವೈದ್ಯ ಬಂದ||
ಎಷ್ಟು ದಿನದ ರೋಗಗಳೆಂಬುದ ತಾ ಬಲ್ಲ
ಗಟ್ಟಿಯಾಗಿ ಧಾತು ರಸಗಳನು ಬಲ್ಲ.
ಕಷ್ಟ ಬಡಿಸದೆ ಎಮ್ಮ ಭವರೋಗ ಕಲೆಯುವ
ಶಿಷ್ಟವಾದ ದೇಹ ಕೊಟ್ಟು ಕಾಯುವನೀತ ||ವೈದ್ಯ ಬಂದ||
ಹೊನ್ನು ,ಹಣಂಗಳ ಅನ್ನವನನುಸರಿಸಿ
ತನ್ನ ದಾಸನೆಂಬ ನಿಜವ ನೋಡಿ
ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ..
ತನ್ನ ನಾಮಾಮೃತ ದಿವ್ಯ ಔಷಧವೀವ ||ವೈದ್ಯ ಬಂದ||
ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ
ಈ ತನುವಿಗೆಂದೆಂದು ರೋಗಬರಲರಿಯದು
ಈತ ಅನಂತರೂಪದಿ ಜೀವರಿಗೆ ಮುನ್ನ..
ಪ್ರೀತಿಯಿಂದಲಿ ಭವರೋಗ ಬಿಡಿಸುವ ||ವೈದ್ಯ ಬಂದ||
ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ
ಮರ್ಮಬಲ್ಲ ಜೀವರ ರೋಗಂಗಳ
ನಿರ್ಮಲವಾಗಿಹ ತನ್ನ ನಾಮಸ್ಮರಣೆ..
ಒಮ್ಮೆ ಮಾಡಲು ಭವರೋಗ ಬಿಡಿಸುವ ||ವೈದ್ಯ ಬಂದ||
ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ
ಅನ್ನ ಮಂತ್ರ , ತಂತ್ರ ,ಜಪವೇತಕೆ
ಚೆನ್ನ ಶ್ರೀ ಪುರಂದರವಿಠಲನ್ನ ನೆನೆದರೆ..
ಮನ್ನಿಸಿ ಸಲಹುವ ವೈದ್ಯ ಶಿರೋಮಣಿ ||ವೈದ್ಯ ಬಂದ||
Lyrics in English
Vaidya Banda Nodi
Vaidya banda nodi
Shri Venkatanemba vaidya banda nodi || Vaidya banda ||
Vaidya bandanu Vedavedya nodigale
Shri Devi Ramananu Srinivasanemba || Vaidya banda ||
Eshtu dinada rogagalembudata balla
Gattiyagi dhatu rasagalanu balla
Kashta badisade emma bhavaroga kaleyuva
Shishtavada deha kottu kayuvaneeta || Vaidya banda ||
Honnu, hanangala annavan anusarisi
Tanna dasanemba nijava nodi
Chennagi jihvege swadavagiruvamtha
Tanna namamruta divya aushadhaviva || Vaidya banda ||
Eeta dittisi node ellashtu rogavilla
Ee tanuvigendendu roga baralar iyadu
Eeta anantarupadi jeevige munna
Preetiyindali bhavaroga bidisuva || Vaidya banda ||
Dharmavaidyaneeva jagakkella obbane
Marmaballa jeevara rogangala
Nirmalavagiha tanna namasmarane
Omme madalu bhavaroga bidisuva || Vaidya banda ||
Anya vaidy aneke anya aushadhavake
Anna mantra, tantra, japavethake
Chenna Shri Purandara Vittalanna nenedare
Mannisi salahuva vaidya shiromani || Vaidya banda ||
