ಏನಿದು ಕೌತುಕ ಪಂಡರಿಯನೇ ಬಿಟ್ಟು / Enidu koutuka pandariyane bittu

ಏನಿದು ಕೌತುಕ ಪಂಡರಿಯನೇ ಬಿಟ್ಟು ||
ನೀನಿಲ್ಲಿಗೆ ಬಂದ್ಯಾ ವಿಠ್ಠಲಾ || ಪ ||

ಮಿಥ್ಯವಾದಿಗಳು ನಿನ್ನನು || ಸುತ್ತುಮುತ್ತಿಕೊಂಡಿಹರು ||
ಅತ್ತು ಕರೆದು ಕೂಗುತ್ತಿರೆ ಬಹು ||
ಬ್ಯಾಸತ್ತು ಬಂದೆಯಾ ವಿಠ್ಠಲ ||೧||

ಮಧ್ವದ್ವೇಷಿಗಳು ಮಾಡುವ| ಪದ್ಧತಿಯನು ಕಂಡು ||
ಹೃದ್ಯವಾಗದೆ ಕದ್ದ ಕಳ್ಳನಂತೆದ್ದು ||
ಎದ್ದು ಓಡಿ ಬಂದಿಯಾ ವಿಠ್ಠಲಾ || ೨ ||

ಶ್ರೀರಾ ವಿಠ್ಠಲಾ ನಿಮ್ಮ ಸುಗುಣವೇದ ಶಾಸ್ತ್ರದಲ್ಲಿ
ಶೋಧಿಸಿ ನೋಡಲು ಭೂ ದೇವರಿಗೊಲಿದು
ಆದರಿಸ ಬಂದೆಯಾ ವಿಠ್ಠಲ ವಿಠಲ||೩||

Lyrics I English

Enidu koutuka pandariyane bittu |
neenillige vandya vittala || pa ||

Mithyavadigalu ninnane | suttumuttikondiharu ||
attu karedu kooguttire bahu |
byasattu bandeya vittala || 1 ||

Madhwadweshigalu maduva | paddhatiyanu kandu ||
hrudyavagade kadda kallananteddu
eddu odi bandiya vittala || 2 ||

Shreeraa vittala nimma sugunaveda shastradalli
shodhisi nodale Bhu- devarigolidu
adarisa bandeya vittala vitala || 3 ||

Leave a Reply