ಬಾರೋ ಮನೆಗೆ ಗೋವಿಂದ / Baaro manege govinda

ಬಾರೋ ಮನೆಗೆ ಗೋವಿಂದ -ನಿನ್ನಂಘ್ರಿಕಮಲವ
ತೋರೋ ಎನಗೆ ಮುಕುಂದ ನಲಿದಾಡು ಮನದಲಿ
ಮಾರಪಿತ ಆನಂದನಂದನ್ನ ಕಂದ ||ಪ||

ಚಾರುತರ ಶರೀರ ಕರುಣಾ-
ವಾರಿನಿಧಿ ಭವ ಘೋರನಾಶನ
ವಾರಿಜಾಸನ ವಂದ್ಯ ನಿರಜ
ಸಾರ ಸದ್ಗುಣ ಹೇ ರಮಾಪತೆ ||ಅ.ಪ||

ನೋಡೋ ದಯದಿಂದೆನ್ನ, ಕರಪದುಮ ಶಿರದಲಿ
ನೀಡೋ ಭಕ್ತಪ್ರಸನ್ನ , ನಲಿದಾಡೊ ಮನದಲಿ
ಬೇಡಿಕೊಂಬೆನೊ ನಿನ್ನ , ಆನಂದ ಘನ್ನ
ಮಾಡದಿರು ಅನುಮಾನವ , ಕೊಂ-
ಡಾಡುವೆನು ತವ ಪಾದಮಹಿಮೆಗಳನು
ಜೋಡಿಸುವೆ ಕರಗಳನು ಚರಣಕೆ
ಕೂಡಿಸೊ ತವ ದಾಸಜನರೊಳು ||೧||

ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು
ಕ್ಲೇಶ ಪಡುವುದು ಬಲ್ಲಿ, ಘನ ಯುವತಿಯರ ಸುಖ
ಲೇಸು ಎಂಬುದನು ಕೊಲ್ಲಿ , ಆಸೆ ಬಿಡಿಸಿಲ್ಲಿ
ಏಸು ಜನುಮದ ದೋಷದಿಂದಲಿ
ಈಸುವೆನು ಇದರೊಳಗೆ, ಇಂದಿಗೆ
ಮೋಸವಾಯಿತು ಆದುದಾಗಲಿ
ಶ್ರೀಶ ನೀ ಕೈಪಿಡಿದು ರಕ್ಷಿಸು ||೨||

ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆ
ದೀನ ಜನರಿಗೆ ಬಂಧು ನಾ ನಿನ್ನ ಸೇವಕ
ಶ್ರೀನಿವಾಸ ಎಂದೆಂದು ಕಾರುಣ್ಯ ಸಿಂಧು
ಪ್ರಾಣಪತಿ ಹೃದಯಾಬ್ಜ ಮಂಟಪ –
ಸ್ಥಾನದೊಳಗಭಿವ್ಯಾಪ್ತ ಚಿನುಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುವೆ ಶ್ರೀರಂಗವಿಠಲ ||೩||

Lyrics in English

Baaro manege govinda | ninnanghri kamalava toro enage mukunda |
nalidaado manadali maarapita aananda | aananda kanda || pa ||

Chaarutara shaareera karunaa vaarinidhi bhava ghora naashana |
vaarijaasana vandya nirjara saara sadguna he ramaapate || a. Pa. ||

Nodo dayadinda enna karapaduma shiradali needu bhakta prasanna |
nalidaadu manadali bedikombuvenu ninna aananda ghanna ||
maadadiru anumaanavanu kondaaduvenu tava mahimegalanu |
jodisuve karagalanu charanake | koodi sotava daasa janarolu || 1 ||

Hesi vishayagalalli | tolalaadi naa balu | kleshapaduvadu balli |
dhana yuvatigala sukha leshavembuvadu kolli | aase bidisilli ||
Esu janmada doshadindali eesuvenu idarolage indige | mosavaayitu aadudaagali |
shreesha nee kaipididu rakshisu || 2 ||

Neene gatiyo enagindu | uddhariso devane, deena janarige bandhu |
naa ninna sevaka shreenivaasaa endendu kaarunyasindhu ||
praanapati hrudayaabja mantapa | sthaanadolagabhi vyaapta cinumaya |
dhyaana gocaranaagu kannili | kaanuvenu shreerangaviththala || 3 ||


ಬಾರೋ ಬಾರೋ ಪಾಂಡುರಂಗ/ Baaro baaro paanduranga

ಬಾರೋ ಬಾರೋ ಪಾಂಡುರಂಗ ನೀನೇ ಗತಿ|
ತೋರೋ ತೋರೋ ನಿನ್ನ ಮುಖವ ರುಕ್ಮಿಣಿಪತಿ||

ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |
ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ ||1||

ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ ?
ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ ?||2||

ಭಕ್ತರನೆಲ್ಲ ಉದ್ಧರಿಸುವ ನೀನೆ ದೊರೆ |
ಭಕ್ತವತ್ಸಲ ನರಸಿಂಹವಿಠ್ಠಲ ಹರೆ||3||

Lyrics in English

Baaro baaro paanduranga neene gati |
Toro toro ninna mogava rukmini pati || pa ||

Chandrabhaagaa teeradalli vaasavaagiruvi |
Mandaragiridhara sindhushayana andavaagiruvi ||1 ||

Shankha chakra gadhaa padma elli ittiruvi |
Tonkada mele kaiyanittu Eke nintiruvi || 2 ||

Bhaktarannella uddharisuve neene dore |
Bhaktavatsala naarasimha vithala hare || 3 ||


ಬಾರೆ ವೆಂಕಟರಮಣಿ ಶ್ರೀದೇವಿ / Baare venkataramani

ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ||ಪ||

ಬಾರೆ ವೆಂಕಟರಮಣಿ ನಾರಾಯಣಿ ಕೇಳುಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||ಅ.ಪ||

ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದು
ಹೀನ ಮಾನವನಿಗೆ ನೀನು ಬರುವಿ ಎಂಬೊe್ಞÁನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ ||

ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿ
ಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ ||

ಮಂಗಳಾಂಗಿಯೇ ನಿನ್ನ ನೋಡದೆ ಬಲುಭಂಗಪಡುವೆನಮ್ಮ
ಗಂಗಜನಕ ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ ||

ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆ
ಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ||

ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀ
ನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ||

Lyrics in English

Baare venkataramani | shreedevi nee | baare venkataramani || pa ||

Baare venkataramani paaraayana kele | charu vadane upahaara kaalake nitya || a. Pa.||

Enu punyave nandu paaraayana | neene keluvi bandu |
Heena maanavanige neene baruvi embo | j~jaanavillavo uccha sthaanadolu koode || 1 ||

Swapnadolage baruvi | shreedevi nee kshipradinadali poguvi |
Sarpashayana nammappa gokulabaalan- | appi kolluva sukha oppisu begane || 2 ||

Ella devategalanu tadediye | phulla vaarija nayane |
Golla baalana paada | pallava kaanade nillalollado mana | solla solla laalise taayi || 3 ||

Mangalaangiye ninna | nodade | bhanga paduvenamma |
Ganga janaka siri ranganankadi kulitu | bhrunga kuntale hrudayadangaladolu aade || 4 ||

Indireshana raani | nee enna  mana mandiradolu baa nee |
Nanda gokula baala nindu karadoletti | tandu torise aravinda nilaye lakshmi || 5 ||


ಆರು ಬದುಕಿದರಯ್ಯ ಹರಿ / Aru badukidarayya hari ninna

ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಈ ಜಗದೊಳಗೆ ಒಬ್ಬರನು ಕಾಣೆ ||pa||

ಕರಪತ್ರದಿಂದ ತಾಮ್ರಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ
ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ ||1||

ಕಲಹ ಬಾರದ ಮುನ್ನ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲವ ಬೇಡುತ ಹೋಗಿ ಬಲಿಯ ತನುವನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ ||2||

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡವಾಹನ ನಿನ್ನ ಚರಿಯವರಿಯೆ
ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ
ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ ||3||

Lyrics in English

Aru badukidarayya hari ninna nambi
Toru I jagadolage obbaranu kane ||pa||

Karapatradinda tamradhvajana tandeya
korala koyiside ninu kundillade
marulanandadi pogi brugumuniya kannodede
aritu tripurasurana hendiranu berede||1||

Kalaha barada munna karnananu ni konde
sulabadali kauravara maneya muride
nelava beduta hogi baliya tanuvanu tulide
moleyanunisalu banda putaniya konde ||2||

Tiridumba dasara kaili kappava kombe
garudavahana ninna chariyavariye
dore purandaravithala ninnannu nambidare
tirupeyu huttalolladu kelo hariye||3||


ಆರೇನು ಮಾಡುವರು ಅವನಿಯೊಳಗೆ/ Arenu maduvaru avaniyolage

ಆರೇನು ಮಾಡುವರು ಅವನಿಯೊಳಗೆ ||pa||

ಪೂರ್ವಜನ್ಮದ ಕರ್ಮ ಹಣೆಯಲ್ಲಿ ಬರೆದುದಕೆ ||a.pa||

ಮಾಡಿದಡುಗೆಯು ಕೆಡಲು ಮನೆಯ ಗಂಡನು ಬಿಡಲು
ಕೂಡಿದ್ದ ಸತಿ ತಾನು ಕುಣಿಸ್ಯಾಡಲು
ಗೋಡೆಗೆ ಬರೆದ ಹುಲಿ ಘುಡಿಘುಡಿಸಿ ತಿನಬರಲು
ಆಡದಾ ಮಾತುಗಳ ಅಖಿಳರೂ ನಿಜವೆನಲು ||1||

ಹೊಲ ಬೇಲಿ ಮೆದ್ದರೆ ಮೊಲವೆದ್ದು ಇರಿದರೆ
ತಲೆಗೆ ತನ್ ಕೈಪೆಟ್ಟು ತಾಕಿದರೆ
ಹೆಳಲು ಹಾವಾದರೆ ಗೆಳೆಯ ರಿಪುವಾದರೆ
ಕಲಸಿಟ್ಟ ಅವಲಕ್ಕಿ ಕಲಪರಟಿ ನುಂಗಿದರೆ ||2||

ಹೆತ್ತಾಯಿ ಮಕ್ಕಳಿಗೆ ಹಿಡಿದು ವಿಷ ಹಾಕಿದರೆ
ಮತ್ತೆ ತಂದೆಯು ಹೊರಗೆ ಮಾರಿದರೆ
ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ
ಕತ್ತಲೆಯು ಬೆನ್ನಟ್ಟಿ ಕರಡ್ಯಾಗಿ ಕಚ್ಚಿದರೆ ||3||

ಕಣ್ಣಿನೊಳಗಿನ ಬೊಂಬೆ ಕಚ್ಚಾಡ ಬಂದರೆ
ಹೆಣ್ಣಿನ ಹೋರಾಟ ಹೆಚ್ಚಾದರೆ
ಅನ್ನ ಉಣ್ಣದೆ ಬಹಳ ಅಜೀರ್ಣವಾದರೆ
ಪುಣ್ಯ ತೀರ್ಥಗಳಲ್ಲಿ ಪಾಪ ಘಟಿಸಿದರೆ ||4||

ಏರಿ ಕುಳಿತ ಕೊಂಬೆ ಎರಡಾಗಿ ಮುರಿದರೆ
ಮೇರೆ ತಪ್ಪಿ ಉದಧಿ ಮೆರೆದರೆ
ಆರಿದ್ದ ಇದ್ದಲಿಯು ಅಗ್ನಿಯಾಗುರಿದರೆ
ಧೀರ ಪುರಂದರವಿಠಲ ನಿನ್ನ ದಯ ತಪ್ಪಿದರೆ ||5||

Lyrics in English


Arenu maduvaru avaniyolage ||pa||

Purvajanmada karma haneyalli baredudake ||a.pa||

Madidadugeyu kedalu maneya gandanu bidalu
kudidda sati tanu kunisyadalu
godege bareda huli gudigudisi tinabaralu
adada matugala akilaru nijavenalu ||1||

Hola beli meddare molaveddu iridare
talege tan kaipettu takidare
helalu havadare geleya ripuvadare
kalasitta avalakki kalaparati nungidare ||2||

Hettayi makkalige hididu visha hakidarem matte tandeyu horage maridare
tottu arasige prati uttaravanadidare
kattaleyu bennatti karadyagi kaccidare||3||

Kanninolagina bombe kaccada bandare
hennina horata heccadare
anna unnade bahala ajirnavadare
punya tirthagalalli papa gatisidare||4||

Eri kulita kombe eradagi muridare
mere tappi udadhi meredare
aridda iddaliyu agniyaguridare
dhira purandaravithala ninna daya tappidare||5||


ಆರತಿ ಬೆಳಗಿರೆ ನಾರಿಯರು / Arati belagire naariyaru

ಆರತಿ ಬೆಳಗಿರೆ ನಾರಿಯರು ಬೇಗ
ಆದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ
ಹಾಡುತ ಪಾಡುತ ಜಾಣೆಯರೆಲ್ಲರು
ಆದಿ ನಾರಾಯಣ ಪ್ರಿಯಳಿಗೆ ||ಪಲ್ಲವಿ||

ವಿಳ್ಳೆ ಕಾಲುಂಗುರ ಋಲ್ಲುರುಳಿ ಪೈಜಣ
ಘಲ್ಲುಘಲ್ಲೆಂದು ಹೆಜ್ಜೆಯನಿಡುತ
ಉಲ್ಲಾಸದಿಂದಲಿ ನಡುವಿಗೊಡ್ಯಾಣ ಫುಲ್ಲನಾಭನ ಪ್ರಿಯಳಿಗೆ ||

ಜರದ ಪೀತಾಂಬರ ನಿರಿಗೆಗಳೆಳೆಯುತ
ಝಗಝಗಿಸುತ ತಾ ಹೊಳೆಯುತಲಿ
ತೊಟ್ಟ ಕಂಚುಕವು ಇಟ್ಟ ವಂಕಿಯ ತೋಡೆ
ಬೆಟ್ಟದ ವೆಂಕೋಬನ ಪ್ರಿಯಳಿಗೆ ||

ಚೌರಿ ರಾಗುಟೆ ಗೊಂಡೆ ಹೆರಳು ಬಂಗಾರ
ಬುಗುಡಿ ಬಾವುಲಿ ಹೊಳೆಯುತಲಿ
ಸಡಗರದಿಂದಲಿ ತುಡಿಯ ಕುಂಕುಮ ಹಚ್ಚಿ
ಒಡೆಯ ವೆಂಕೋಬನ ಮಡದಿಗೆ||

Lyrics in English

Arati belagire naariyaru bega |
aadi kolhaapurada mahaalakshmige |
haaduta paaduta jaaneyarellaru |
aadinaaraayanana preeyalige || pa ||

Pille kaalungura lullu paijhana ruli |
ghallu ghillendhejjeyanidutaa |
ulhaasadindali naduvigodyaana |
phullanaabhana preeyalige || 1 ||

Jarada peetaambara nirigegalaleyuta |
jhaga jhagisuta taa holeyutali |
totta kanchukavu itta vankiya tode |
bettad venkobana madadige || 2 ||

Chouri raagati gonde heralu bhangaara |
bugudi baavligalu holeyutali |
sadagaradindali kudiya kumkuma hacchi |
odeya venkobana madadige. || 3 ||


ಆಂಜನೇಯನೆ ಅಮರವಂದಿತ / Anjaneyane amaravandita kanjanabana

ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ ||

ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆ||

ಆಂಜನೇಯನೆ ನಿನ್ನ ಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆ ಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ ||

ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆ ರಾಮ ಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ ||

ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ ||

ಜನಕ ತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆ ದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ ||

ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ ಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ ||

ಭರದಿ ಬಂದು ಶ್ರೀರಾಮ ಪಾದಕ್ಕೆರಗಿ ಬಿನ್ನಹ ಮಾಡಿದೆ ಉರಗಗಿರಿ ಹಯವದನನ ಪರಮ ಭಕ್ತನೆಂದೆನಿಸಿದೆ||

Lyrics in English

Anjaneyane amaravandita kanjanabana dutane ||pa.||

Manjinolagadante Saradhiya dantida mahadhirane ||a.pa.||

Anjaneyane ninnagunaparakrama pogalalalave prakyatanesanjivanava
Tandu kapigala nanju kaleda prakyatane ||1||

Kamanigrahanenisi surarabhimani devateyeniside rama padakkeragi
Nadedu nissima ninendeniside ||2||

Sindhu haride shigradindali bandu sitege namisidetandu mudreyanittu
Mateya manava santoshapadiside ||3||

Janakatanujeya manava harushisi vanava kittidadidedanu
Jarannu sadedu lankeya analagahuti madide ||4||

Sriramakaryava vahisi akshakumarananu samharisidegora
Rakkasarembuvaranu marivasavanu gaiside ||5||

Baradi bandu sriramapadakkeragi binnaha madide uragagiri
Hayavadanana paramabaktanendeniside ||6||


ಅಂಗಳದೊಳು ರಾಮನಾಡಿದ /Angaladolu raamanaadidaa

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ ॥೨॥

ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ
ಅಂಜಿದನು ಎನ್ನುತಿದ್ದಳು ॥೩॥

ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀ ರಾಮನ ಎತ್ತಿ ಮುದ್ದಾಡಿದ ॥೪॥

ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿ ಕೇಶವ
ರಘು ವಂಶವನ್ನೇ ಕೊಂಡಾಡಿದ ॥೫॥

Lyrics in English

Angaladolu raamanaadidaa |
Chandra bekendu taa hata maadidaa || pa ||

Taayiya karedu kai maadi toridaa |
Mugila kadegomme dittisi nodidaa |
Chinni kolu chendu buguri ellavaa |
Bedaa bedaa endu beesaadidaa || 1 ||

Kanda baa endu taayi karedalu |
Mammu unnendu bannisuttiddalu |
Taayi kousalyaa kalavalagondalu |
Kanda anjidanu ennuttiddalu || 2 ||

Aluva dhwani keli raajanu |
Mantri sahitaagi dhaavisi bandanu |
Niluva kannadi tandirisidaa |
Shreeraamana etti muddaadidaa || 3 ||

Kannadiyolu bimba nodidaa |
Chandra sikkidanendu kunidaadidaa |
Ee sambhrama nodi aadi keshava |
Raghuvamshavanne kondaadidaa || 4 ||


ಆನಂದ ಆನಂದ ಮತ್ತೆ / Ananda Ananda matte

ಆನಂದ ಆನಂದ ಮತ್ತೆ ಪರಮಾನಂದ      ।।ಪ।।
ಆ ನಂದನ ನಂದನೊಲಿಯೆ ಏನಂದದ್ದೆ ವೇದವೃಂದಾ    ।।ಅ.ಪ।।

ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ     ।।೧।।

ಪೋಪುದು ಬರುತಿಪ್ಪುದು ಕೋಪ ಮತ್ತೆ ಶಾಂತಿ ಮಾಡುವುದು
ರೂಪ ಲಾವಣ್ಯವು ಹರಿ ವ್ಯಾಪಾರವೆಂದರಿತವರಿಗೆ     ।।೨।।

ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು
ಫಲ ಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ       ।।೩।।

ತಾರೋ ಬಾರೋ ಬೀರೊ ಸಾರೊ ಮಾರೊ ತೋರೊ ಹಾರೊ ಹೋರೊ
ಸೇರೋ ತೋರೆಂಬುದೀಶಪ್ರೇರಣೆ ಎಂದವರಿಗೆ        ।।೪।।

ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಸಿದ್ಧ ವಿಜಯವಿಠಲನ್ನ ಪೊಂದಿ ಕೊಂಡಾಡುವವರಿಗೆ      ।।೫।।

Lyrics in English

Ananda Ananda matte paramananda ||pa||
A nandana nandanoliye enandadde vedavrunda ||a.pa||

A modalu ksha karanta I maha varnagalella
Svamiyada vishnuvina namavendu tilidavarige ||1||

Popudu barutippudu kopa matte shanthi maduvudu
Rupa lavanyavu harivyaparavendaritavarige ||2||

Jala kashtha Shaila gagana nela pavaka vayu taru
Phala pushpa ballili hari olage vyaptanendavage ||3||

Taro baro biro saro maro toro haro horo
Sero torembudishaprerane endavarige ||4||

Madhvashastra pravachana muddukrishnana darushana
Siddha vijayavithalanna pondi kondaduvavarige ||5||


ಅಮ್ಮಾ ಲಕುಮಿದೇವಿ / Amma lakumidevi nimmarasana

ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ||ಪ||

ಹೆತ್ತ ಬಾಲರು ಮಂದಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ || 1 ||

ನಿಮ್ಮ ಮಾತಿಗೆ ಹರಿ ಸಮ್ಮತನಾಗುವ
ಕುಮತಿಗಳೆಣಿಸದೆ ರಾಮ ಮೂರುತಿ ತೋರೆ || 2 ||

ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ
ನಂದ ಕಂದನ ಪಾದ ಪೊಂದಿರುವಂತೆ ಮಾಡೆ || 3 ||

ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ || 4 ||

ಎನ್ನಲಿರುವ ಹೀನರೋಡಿಸಿ ಬೇಗ
ಪನ್ನಗಾಚಲವಾಸ ಶ್ರೀ ನರಹರಿ ತೋರೆ || 5 ||

Lyrics in English

Amma lakumidevi nimmarasana tore summane
Biduvadu sammatave ninage ||pa||

Hetta baalaru mandamatigaladare tayi
Sattu hogali endu ettade biduvole ||1||

Nimma maatige hari sammatanaguva
Kumatigalenisade rama muruti tore ||2||

Sindhutanaye enna bandha bidisi bega
Nanda kandana pada pondiruvante made ||3||

Tatvesarellaru nityadhinaru nimage
Brutyage nija hari Bhakti koduvante pele ||4||

Ennaliruva hinarodisi bega
Pannagaachalavasa sri narahari tore ||5||